20 ವರ್ಷಗಳಿಂದ ಉಚಿತ ಆಂಬ್ಯುಲೆನ್ಸ್ ಸೇವೆ ನೀಡುತ್ತಿರುವ ದಂಪತಿ

ಅಪಘಾತಕ್ಕೊಳಗಾದವರಿಗೆ ಹಾಗೂ ಅನಾರೋಗ್ಯ ಪೀಡಿತರಿಗೆ ಸಕಾಲಕ್ಕೆ ಆಸ್ಪತ್ರೆಗೆ ತಲುಪಲು ಆಂಬ್ಯುಲೆನ್ಸ್‌ಗಳ ಅಗತ್ಯವಿರುತ್ತದೆ. ಆಂಬ್ಯುಲೆನ್ಸ್ ಚಾಲಕರು ತಮ್ಮ ಜೀವದ ಹಂಗು ತೊರೆದು ವೇಗವಾಗಿ ಆಂಬ್ಯುಲೆನ್ಸ್ ಚಾಲನೆ ಮಾಡಿ ಗಾಯಾಳುಗಳನ್ನು ಹಾಗೂ ಅನಾರೋಗ್ಯ ಪೀಡಿತರನ್ನು ಆಸ್ಪತ್ರೆಗೆ ಸೇರಿಸುತ್ತಾರೆ.

20 ವರ್ಷಗಳಿಂದ ಉಚಿತ ಆಂಬ್ಯುಲೆನ್ಸ್ ಸೇವೆ ನೀಡುತ್ತಿರುವ ದಂಪತಿ

ಈ ಕಾರಣಕ್ಕಾಗಿಯೇ ಆಂಬ್ಯುಲೆನ್ಸ್ ಸೇವೆ ಹಾಗೂ ಅದರ ಚಾಲನಾ ಕಾರ್ಯವನ್ನು ವಿಶ್ವದ ಅತ್ಯಂತ ಶ್ರೇಷ್ಠ ಸೇವೆಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ. ಹಿಮಾಂಶು ಎಂಬುವವರು ತಮ್ಮ ಜೀವನದ ಬಹುಭಾಗವನ್ನು ಆಂಬ್ಯುಲೆನ್ಸ್ ಸೇವೆಗಾಗಿಯೇ ಮುಡುಪಾಗಿಟ್ಟಿದ್ದಾರೆ. ಅವರು 20 ವರ್ಷಗಳಿಂದ ಉಚಿತ ಆಂಬ್ಯುಲೆನ್ಸ್ ಸೇವೆಯನ್ನು ನೀಡುತ್ತಿದ್ದಾರೆ.

20 ವರ್ಷಗಳಿಂದ ಉಚಿತ ಆಂಬ್ಯುಲೆನ್ಸ್ ಸೇವೆ ನೀಡುತ್ತಿರುವ ದಂಪತಿ

ಹಿಮಾಂಶು ಹಾಗೂ ಅವರ ಪತ್ನಿ ಟ್ವಿಂಕಲ್ ಈ ಉದಾತ್ತ ಕಾರ್ಯದಲ್ಲಿ ನಿರತರಾಗಿದ್ದಾರೆ. ಅವರ ಈ ಅತ್ಯುನ್ನತ ಸೇವೆಗಾಗಿ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ರವರು ಇವರಿಗೆ ಪ್ರಶಸ್ತಿ ಪತ್ರ ನೀಡಿ ಗೌರವಿಸಿದ್ದಾರೆ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

20 ವರ್ಷಗಳಿಂದ ಉಚಿತ ಆಂಬ್ಯುಲೆನ್ಸ್ ಸೇವೆ ನೀಡುತ್ತಿರುವ ದಂಪತಿ

ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸರ್ಕಾರದ ಹಿರಿಯ ಅಧಿಕಾರಿಗಳು ಹಿಮಾಂಶು ದಂಪತಿಗಳಿಗೆ ಹಲವು ಪುರಸ್ಕಾರ ಹಾಗೂ ಪ್ರಶಸ್ತಿಗಳನ್ನು ನೀಡಿ ಗೌರವಿಸಿದ್ದಾರೆ. ಈಗ ಮಹೀಂದ್ರಾ ಅಂಡ್ ಮಹೀಂದ್ರಾ ಕಂಪನಿಯು ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ವೀಡಿಯೊವೊಂದನ್ನು ಬಿಡುಗಡೆಗೊಳಿಸಿದೆ.

20 ವರ್ಷಗಳಿಂದ ಉಚಿತ ಆಂಬ್ಯುಲೆನ್ಸ್ ಸೇವೆ ನೀಡುತ್ತಿರುವ ದಂಪತಿ

ಬೊಲೆರೋ ಆಂಬ್ಯುಲೆನ್ಸ್ ಬಳಸುತ್ತಿರುವ ನಿಜವಾದ ಹೀರೋಗಳಿಗೆ ನಮಸ್ಕಾರ ಎಂದು ಮಹೀಂದ್ರಾ ಕಂಪನಿಯು ತಾನು ಬಿಡುಗಡೆಗೊಳಿಸಿರುವ ವೀಡಿಯೊದಲ್ಲಿ ತಿಳಿಸಿದೆ. 10 ಸಾವಿರಕ್ಕೂ ಹೆಚ್ಚು ಜೀವಗಳನ್ನು ಉಳಿಸಿದ ಆಂಬ್ಯುಲೆನ್ಸ್ ಪುರುಷ ಹಾಗೂ ಆಂಬ್ಯುಲೆನ್ಸ್ ಮಹಿಳೆಯ 20 ವರ್ಷಗಳ ಕಥೆ ಇದು ಎಂದು ಪೋಸ್ಟ್ ನಲ್ಲಿ ಹೇಳಲಾಗಿದೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

20 ವರ್ಷಗಳಿಂದ ಉಚಿತ ಆಂಬ್ಯುಲೆನ್ಸ್ ಸೇವೆ ನೀಡುತ್ತಿರುವ ದಂಪತಿ

ಕರೋನಾ ಅವಧಿಯಲ್ಲಿಯೂ ಪತಿ, ಪತ್ನಿ ಇಬ್ಬರೂ ದಣಿವರಿಯದೆ ಸಾರ್ವಜನಿಕ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಹಿಮಾಂಶು ಅವರ ಪತ್ನಿ ಟ್ವಿಂಕಲ್ ಕರೋನಾ ವೈರಸ್‌ಗೆ ತುತ್ತಾಗಿದ್ದರು.

20 ವರ್ಷಗಳಿಂದ ಉಚಿತ ಆಂಬ್ಯುಲೆನ್ಸ್ ಸೇವೆ ನೀಡುತ್ತಿರುವ ದಂಪತಿ

ಆದರೂ ಹಿಮಾಂಶುರವರು ಇನ್ನೂ ಸಹ ಉಚಿತ ಆಂಬ್ಯುಲೆನ್ಸ್ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಸೇವೆಗಾಗಿ ಹಲವು ಸರ್ಕಾರಿ ಅಧಿಕಾರಿಗಳು ಹಾಗೂ ಪ್ರಮುಖ ರಾಜಕೀಯ ಪಕ್ಷಗಳ ನಾಯಕರು ಇವರನ್ನು ಶ್ಲಾಘಿಸಿದ್ದಾರೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

20 ವರ್ಷಗಳಿಂದ ಉಚಿತ ಆಂಬ್ಯುಲೆನ್ಸ್ ಸೇವೆ ನೀಡುತ್ತಿರುವ ದಂಪತಿ

ಈ ಇಬ್ಬರ ಗೌರವಾರ್ಥವಾಗಿ ಮಹೀಂದ್ರಾ ಕಂಪನಿಯು ಈ ವೀಡಿಯೊವನ್ನು ಬಿಡುಗಡೆಗೊಳಿಸಿದೆ. ಹಿಮಾಂಶು ಹರಿಯಾಣ ರಾಜ್ಯದವರು. ಅವರು 2000ನೇ ಇಸವಿಯಿಂದ ಉಚಿತ ಆಂಬ್ಯುಲೆನ್ಸ್ ಸೇವೆಯನ್ನು ನೀಡುತ್ತಿದ್ದಾರೆ.

20 ವರ್ಷಗಳಿಂದ ಉಚಿತ ಆಂಬ್ಯುಲೆನ್ಸ್ ಸೇವೆ ನೀಡುತ್ತಿರುವ ದಂಪತಿ

ಹಿಮಾಂಶು ಅವರ ತಂದೆಯ ಆರೋಗ್ಯ ಸ್ಥಿತಿ ಗಂಭೀರವಾಗಿದ್ದಾಗ ಆಂಬ್ಯುಲೆನ್ಸ್ ಸಕಾಲಕ್ಕೆ ಬಾರದೇ ಅವರ ತಂದೆ ಕೋಮಾ ಸ್ಥಿತಿಗೆ ತಲುಪಿದರು. ಬೇರೆಯವರು ಈ ರೀತಿ ತೊಂದರೆ ಅನುಭವಿಸದೇ ಇರಲಿ ಎಂಬ ಕಾರಣಕ್ಕೆ ಹಿಮಾಂಶುರವರು ಉಚಿತ ಆಂಬ್ಯುಲೆನ್ಸ್ ಸೇವೆಯನ್ನು ಆರಂಭಿಸಿದರು.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

20 ವರ್ಷಗಳಿಂದ ಉಚಿತ ಆಂಬ್ಯುಲೆನ್ಸ್ ಸೇವೆ ನೀಡುತ್ತಿರುವ ದಂಪತಿ

ಅಂದಿನಿಂದ ಇದುವರೆಗೂ ಹತ್ತು ಸಾವಿರಕ್ಕೂ ಹೆಚ್ಚು ಜನರಿಗೆ ಅವರು ಸಹಾಯ ಮಾಡಿದ್ದಾರೆ. ಕರೋನಾ ವೈರಸ್ ಅವಧಿಯಲ್ಲಿ ಹಲವರು ಕರೋನಾ ವೈರಸ್ ಹರಡಬಹುದೆಂಬ ಭೀತಿಯಿಂದ ಮನೆಯಿಂದ ಹೊರ ಬರಲು ಹಿಂದೇಟು ಹಾಕಿದರು.

ಆದರೆ ಹಿಮಾಂಶು ಹಾಗೂ ಅವರ ಪತ್ನಿ ಜನರ ಸಹಾಯಕ್ಕೆ ಧಾವಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಮಹೀಂದ್ರಾ ಕಂಪನಿಯ ಬೊಲೆರೋ ವಾಹನವನ್ನು ಕೆಲವರು ಪ್ರಯಾಣಿಕರ ವಾಹನವಾಗಿ ಮಾತ್ರವಲ್ಲದೆ ಆಂಬ್ಯುಲೆನ್ಸ್‌ ಆಗಿಯೂ ಬಳಸುತ್ತಿದ್ದಾರೆ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

20 ವರ್ಷಗಳಿಂದ ಉಚಿತ ಆಂಬ್ಯುಲೆನ್ಸ್ ಸೇವೆ ನೀಡುತ್ತಿರುವ ದಂಪತಿ

ಅದರಂತೆ ಹಿಮಾಂಶುರವರು ಸಹ ಬೊಲೆರೋ ವಾಹನವನ್ನು ಆಂಬ್ಯುಲೆನ್ಸ್ ಆಗಿ ಬಳಸಿ ಎಲ್ಲರಿಂದ ಮೆಚ್ಚುಗೆ ಪಡೆದಿದ್ದಾರೆ.

Most Read Articles

Kannada
English summary
Haryana man Himanshu and his wife giving free ambulance service from past 20 years. Read in Kannada.
Story first published: Thursday, February 11, 2021, 14:00 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X