ಆಂಬ್ಯುಲೆನ್ಸ್‌ಗಳ ಕೊರತೆ ಹಿನ್ನೆಲೆ, ಎಸ್‌ಯುವಿ ಆಂಬ್ಯುಲೆನ್ಸ್‌ಗಳಿಗೆ ಚಾಲನೆ ನೀಡಿದ ಪೊಲೀಸರು

ಆಂಬ್ಯುಲೆನ್ಸ್‌ಗಳ ಕೊರತೆ ಹಾಗೂ ಆಂಬ್ಯುಲೆನ್ಸ್ ಚಾಲಕರು ಅಧಿಕ ಶುಲ್ಕ ವಿಧಿಸುತ್ತಿರುವ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ಕೋವಿಡ್ 19 ಸೋಂಕಿತರಿಗೆ ನೆರವಾಗಲು ಹರಿಯಾಣ ಪೊಲೀಸರು ಹೊಸ ಹೆಜ್ಜೆ ಇಟ್ಟಿದ್ದಾರೆ.

ಆಂಬ್ಯುಲೆನ್ಸ್‌ಗಳ ಕೊರತೆ ಹಿನ್ನೆಲೆ, ಎಸ್‌ಯುವಿ ಆಂಬ್ಯುಲೆನ್ಸ್‌ಗಳಿಗೆ ಚಾಲನೆ ನೀಡಿದ ಪೊಲೀಸರು

ಹರಿಯಾಣ ಪೊಲೀಸರು 440 ಎಸ್‌ಯುವಿಗಳನ್ನು ಆಂಬ್ಯುಲೆನ್ಸ್‌ನಂತೆ ಬಳಸುತ್ತಿದ್ದು, ಕೋವಿಡ್ 19 ಸೋಂಕಿತರನ್ನು ಉಚಿತವಾಗಿ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾರೆ. ಕೋವಿಡ್ -19 ಸಾರಿಗೆ ಸೇವೆಗಳನ್ನು ನೀಡುತ್ತಿರುವ ಈ ವಾಹನಗಳಿಗೆ ಕೋವ್ ಹಾಟ್ಸ್ ಎಂದು ಹೆಸರಿಡಲಾಗಿದೆ.

ಆಂಬ್ಯುಲೆನ್ಸ್‌ಗಳ ಕೊರತೆ ಹಿನ್ನೆಲೆ, ಎಸ್‌ಯುವಿ ಆಂಬ್ಯುಲೆನ್ಸ್‌ಗಳಿಗೆ ಚಾಲನೆ ನೀಡಿದ ಪೊಲೀಸರು

ಈ ಸೇವೆ ನೀಡಲು ಪ್ರತಿ ಜಿಲ್ಲೆಯ ಪೊಲೀಸರಿಗೆ 20 ಟೊಯೊಟಾ ಇನೋವಾ ಎಸ್‌ಯುವಿಗಳನ್ನು ನೀಡಲಾಗುವುದು ಎಂದು ಹರಿಯಾಣ ಪೊಲೀಸ್ ಮಹಾ ನಿರ್ದೇಶಕರಾದ ಮನೋಜ್ ಯಾದವ್ ತಿಳಿಸಿದ್ದಾರೆ.

MOST READ:ವಿಮಾನಗಳು ಹಾರಾಟ ನಡೆಸುವಾಗ, ಲ್ಯಾಂಡಿಂಗ್ ಆಗುವಾಗ ಉಂಟಾಗುವ ಶಬ್ದಗಳಿವು

ಆಂಬ್ಯುಲೆನ್ಸ್‌ಗಳ ಕೊರತೆ ಹಿನ್ನೆಲೆ, ಎಸ್‌ಯುವಿ ಆಂಬ್ಯುಲೆನ್ಸ್‌ಗಳಿಗೆ ಚಾಲನೆ ನೀಡಿದ ಪೊಲೀಸರು

ಈ ಸೇವೆ ನೀಡಲು ಸದ್ಯಕ್ಕೆ 126 ವಾಹನಗಳನ್ನು ಬಿಡುಗಡೆಗೊಳಿಸಲಾಗಿದೆ. 26 ಎಸ್‌ಯುವಿಗಳನ್ನು ಹಿಸಾರ್ ವ್ಯಾಪ್ತಿಯಲ್ಲಿ ಬಿಡುಗಡೆಗೊಳಿಸಲಾಗಿದೆ. ಗುರುಗ್ರಾಮ ಹಾಗೂ ರೋಹ್ಟಕ್ ವ್ಯಾಪ್ತಿಯಲ್ಲಿ 20 ಎಸ್‌ಯುವಿಗಳನ್ನು ಬಳಸಲಾಗುವುದು.

ಆಂಬ್ಯುಲೆನ್ಸ್‌ಗಳ ಕೊರತೆ ಹಿನ್ನೆಲೆ, ಎಸ್‌ಯುವಿ ಆಂಬ್ಯುಲೆನ್ಸ್‌ಗಳಿಗೆ ಚಾಲನೆ ನೀಡಿದ ಪೊಲೀಸರು

ಫರಿದಾಬಾದ್, ಪಂಚಕುಲದಲ್ಲಿ 10 ಎಸ್‌ಯುವಿಗಳನ್ನು, ಅಂಬಾಲಾ, ಕರ್ನಾಲ್ ವ್ಯಾಪ್ತಿಯಲ್ಲಿ 12 ಎಸ್‌ಯುವಿಗಳನ್ನು ಹಾಗೂ ರೇವಾರಿ ದಕ್ಷಿಣ ವ್ಯಾಪ್ತಿಯಲ್ಲಿ 16ಎಸ್‌ಯುವಿಗಳನ್ನು ಬಳಸಲಾಗುವುದು.

MOST READ:ಪ್ರವಾಸದ ಹುಚ್ಚಿಗಾಗಿ ವಾಹನ ಕದಿಯುತ್ತಿದ್ದ ಎಂಜಿನಿಯರಿಂಗ್ ಪದವೀಧರ ಕೊನೆಗೂ ಲಾಕ್

ಆಂಬ್ಯುಲೆನ್ಸ್‌ಗಳ ಕೊರತೆ ಹಿನ್ನೆಲೆ, ಎಸ್‌ಯುವಿ ಆಂಬ್ಯುಲೆನ್ಸ್‌ಗಳಿಗೆ ಚಾಲನೆ ನೀಡಿದ ಪೊಲೀಸರು

ಈ ಎಲ್ಲಾ ಎಸ್‌ಯುವಿಗಳನ್ನು ಕೋವಿಡ್ 19 ಸೋಂಕಿತರನ್ನು ಆಸ್ಪತ್ರೆಗೆ ಸಾಗಿಸಲು ಬಳಸಲಾಗುವುದು. 70 ಎಸ್‌ಯುವಿಗಳು ಗುರುವಾರ ಈ ಪ್ರದೇಶಗಳನ್ನು ತಲುಪಲಿದ್ದು, ಉಳಿದ 244 ಎಸ್‌ಯುವಿಗಳು ಭಾನುವಾರ ಸಂಜೆ ವೇಳೆಗೆ ತಲುಪಲಿವೆ.

ಆಂಬ್ಯುಲೆನ್ಸ್‌ಗಳ ಕೊರತೆ ಹಿನ್ನೆಲೆ, ಎಸ್‌ಯುವಿ ಆಂಬ್ಯುಲೆನ್ಸ್‌ಗಳಿಗೆ ಚಾಲನೆ ನೀಡಿದ ಪೊಲೀಸರು

ಈ ಆಂಬುಲೆನ್ಸ್‌ಗಳನ್ನು ಪಡೆಯಲು ಬಯಸುವವರು 108ಕ್ಕೆ ಕರೆ ಮಾಡಬಹುದು ಅಥವಾ ಪೊಲೀಸ್ ನಿಯಂತ್ರಣ ಕೊಠಡಿಯನ್ನು ಸಂಪರ್ಕಿಸಬಹುದು. ಈ ಆಂಬ್ಯುಲೆನ್ಸ್'ಗಳು ಸೋಂಕಿತರನ್ನು ಆಸ್ಪತ್ರೆಗೆ ಸೇರಿಸುವುದಲ್ಲದೆ, ಆಸ್ಪತ್ರೆಯಿಂದ ಮನೆಗೆ ಕರೆದೊಯ್ಯುತ್ತವೆ.

MOST READ:ಭಾರತದಲ್ಲಿ ಹೆಚ್ಚು ಕಾರು ಮಾರಾಟವಾಗುವ ಹತ್ತು ಪ್ರಮುಖ ನಗರಗಳಿವು

ಆಂಬ್ಯುಲೆನ್ಸ್‌ಗಳ ಕೊರತೆ ಹಿನ್ನೆಲೆ, ಎಸ್‌ಯುವಿ ಆಂಬ್ಯುಲೆನ್ಸ್‌ಗಳಿಗೆ ಚಾಲನೆ ನೀಡಿದ ಪೊಲೀಸರು

ಈ ವಾಹನಗಳನ್ನು ಪೊಲೀಸರೇ ಚಾಲನೆ ಮಾಡುತ್ತಾರೆ. ಪೊಲೀಸರನ್ನು ಸುರಕ್ಷಿತವಾಗಿಡಲು ಮತ್ತು ಅವರನ್ನು ಸೋಂಕುಗಳಿಂದ ರಕ್ಷಿಸಲು ಫೇಸ್‌ಮಾಸ್ಕ್, ಹ್ಯಾಂಡ್ ಗ್ಲೌಸ್, ಪಿಪಿಇ ಕಿಟ್‌ಗಳನ್ನು ನೀಡಲಾಗಿದೆ.

ಆಂಬ್ಯುಲೆನ್ಸ್‌ಗಳ ಕೊರತೆ ಹಿನ್ನೆಲೆ, ಎಸ್‌ಯುವಿ ಆಂಬ್ಯುಲೆನ್ಸ್‌ಗಳಿಗೆ ಚಾಲನೆ ನೀಡಿದ ಪೊಲೀಸರು

ಆಟೋ ಮೊಬೈಲ್ ಕಂಪನಿಗಳು ಕರೋನಾ ವೈರಸ್ ಎರಡನೇ ಅಲೆಯನ್ನು ಎದುರಿಸಲು ನೆರವಾಗುತ್ತಿವೆ. ಮಹೀಂದ್ರಾ ಅಂಡ್ ಮಹೀಂದ್ರಾ ಅಧ್ಯಕ್ಷರಾದ ಆನಂದ್ ಮಹೀಂದ್ರಾರವರು ಆಕ್ಸಿಜನ್ ಆನ್ ವ್ಹೀಲ್ಸ್ ಅಭಿಯಾನವನ್ನು ಆರಂಭಿಸಿದ್ದಾರೆ.

MOST READ:ಕರೋನಾ ಸೋಂಕಿತರ ಪಾಲಿಗೆ ದೇವರಾದ ಕರೋನಾ ಸೋಂಕಿನಿಂದ ಗುಣಮುಖರಾದ ವ್ಯಕ್ತಿ

ಆಂಬ್ಯುಲೆನ್ಸ್‌ಗಳ ಕೊರತೆ ಹಿನ್ನೆಲೆ, ಎಸ್‌ಯುವಿ ಆಂಬ್ಯುಲೆನ್ಸ್‌ಗಳಿಗೆ ಚಾಲನೆ ನೀಡಿದ ಪೊಲೀಸರು

ಮಹೀಂದ್ರಾ ಕಂಪನಿಯು ತನ್ನ 100 ಬೊಲೆರೊ ಟ್ರಕ್‌ಗಳ ಮೂಲಕ ಮುಂಬೈ, ಥಾಣೆ, ನಾಸಿಕ್ ಹಾಗೂ ನಾಗ್ಪುರದಲ್ಲಿ ಮೆಡಿಕಲ್ ಆಕ್ಸಿಜನ್ ಸಿಲಿಂಡರ್‌ಗಳನ್ನು ಪೂರೈಸುತ್ತಿದೆ. ಇನ್ನು ಹ್ಯುಂಡೈ ಮೋಟರ್ ಇಂಡಿಯಾ ಫೌಂಡೇಶನ್ ರೂ.20 ಕೋಟಿಗಳ ಪರಿಹಾರ ಪ್ಯಾಕೇಜ್ ಘೋಷಿಸಿದೆ.

ಆಂಬ್ಯುಲೆನ್ಸ್‌ಗಳ ಕೊರತೆ ಹಿನ್ನೆಲೆ, ಎಸ್‌ಯುವಿ ಆಂಬ್ಯುಲೆನ್ಸ್‌ಗಳಿಗೆ ಚಾಲನೆ ನೀಡಿದ ಪೊಲೀಸರು

ಕರೋನಾದ ಹೆಚ್ಚು ಸಂಕಷ್ಟಕ್ಕೆ ಒಳಗಾಗಿರುವ ಮಹಾರಾಷ್ಟ್ರ, ದೆಹಲಿ, ಹರಿಯಾಣ, ತೆಲಂಗಾಣ ಹಾಗೂ ತಮಿಳುನಾಡು ರಾಜ್ಯಗಳಿಗೆ ಹ್ಯುಂಡೈ ಮೋಟಾರ್ಸ್ ಇಂಡಿಯಾ ಆರೋಗ್ಯ ಮೂಲ ಸೌಕರ್ಯವನ್ನು ನೀಡಲಿದೆ.

Most Read Articles

Kannada
English summary
Haryana police deploys SUV ambulances to help Covid 19 patients. Read in Kannada.
Story first published: Friday, May 7, 2021, 12:32 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X