ಹಲವು ಕಾರುಗಳನ್ನು ಖರೀದಿಸ ಬಯಸುವವರಿಗೆ ಶಾಕ್ ನೀಡಿದ ಹೈ ಕೋರ್ಟ್ ಆದೇಶ

ಮಹಾರಾಷ್ಟ್ರ ರಾಜ್ಯದಲ್ಲಿ ವಾಹನಗಳ ನಿಲುಗಡೆಗೆ ಸಂಬಂಧಿಸಿದಂತೆ ಸರಿಯಾದ ನಿಯಮಗಳು ಇಲ್ಲದಿರುವ ಬಗ್ಗೆ ಮುಂಬೈ ಹೈಕೋರ್ಟ್ ಕಳವಳ ವ್ಯಕ್ತಪಡಿಸಿದೆ. ಮನೆಗಳಲ್ಲಿ ಸಾಕಷ್ಟು ಪಾರ್ಕಿಂಗ್ ಸ್ಥಳಾವಕಾಶವಿಲ್ಲದ ಜನರು ಹೆಚ್ಚಿನ ಸಂಖ್ಯೆಯಲ್ಲಿ ವಾಹನಗಳನ್ನು ಖರೀದಿಸಲು ಅಧಿಕಾರಿಗಳು ಅವಕಾಶ ನೀಡಬಾರದು ಎಂದು ಮುಂಬೈ ಹೈಕೋರ್ಟ್ ಹೇಳಿದೆ.

ಹಲವು ಕಾರುಗಳನ್ನು ಖರೀದಿಸ ಬಯಸುವವರಿಗೆ ಶಾಕ್ ನೀಡಿದ ಹೈ ಕೋರ್ಟ್ ಆದೇಶ

ಒಂದೇ ಒಂದು ಫ್ಲ್ಯಾಟ್ ಹೊಂದಿರುವವರು ಸಾಕಷ್ಟು ಪಾರ್ಕಿಂಗ್ ಸ್ಥಳಾವಕಾಶವಿಲ್ಲದಿದ್ದರೆ 4 ರಿಂದ 5 ಕಾರುಗಳನ್ನು ಖರೀದಿಸಲು ಅಧಿಕಾರಿಗಳು ಅನುಮತಿ ನೀಡಬಾರದು ಎಂದು ಮುಂಬೈ ಹೈಕೋರ್ಟ್ ಹೇಳಿದೆ. ಮುಖ್ಯ ನ್ಯಾಯಮೂರ್ತಿ ದೀಪ್ ನಗರ ದತ್ತ ಹಾಗೂ ನ್ಯಾಯಮೂರ್ತಿ ಕುಲಕರ್ಣಿ ಅವರನ್ನೊಳಗೊಂಡ ವಿಭಾಗೀಯ ಪೀಠವು ಈ ಆದೇಶ ನೀಡಿದೆ.

ಹಲವು ಕಾರುಗಳನ್ನು ಖರೀದಿಸ ಬಯಸುವವರಿಗೆ ಶಾಕ್ ನೀಡಿದ ಹೈ ಕೋರ್ಟ್ ಆದೇಶ

ನವಿ ಮುಂಬೈನ ಸಾಮಾಜಿಕ ಕಾರ್ಯಕರ್ತ ಸಂದೀಪ್ ಠಾಕೂರ್ ಎಂಬುವವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ವೇಳೆ ಮುಂಬೈ ಹೈಕೋರ್ಟ್ ಈ ರೀತಿ ಆದೇಶ ನೀಡಿದೆ. ಸಂದೀಪ್ ಠಾಕೂರ್ ತಮ್ಮ ಅರ್ಜಿಯಲ್ಲಿ ಗೃಹ ನಿರ್ಮಾಣ ಕಂಪನಿಗಳು ಹೊಸ ಫ್ಲಾಟ್ ಗಳಲ್ಲಿ ಸಾಕಷ್ಟು ಪಾರ್ಕಿಂಗ್ ಸ್ಥಳವನ್ನು ಒದಗಿಸುತ್ತಿಲ್ಲ ಎಂದು ತಿಳಿಸಿದ್ದಾರೆ.

ಹಲವು ಕಾರುಗಳನ್ನು ಖರೀದಿಸ ಬಯಸುವವರಿಗೆ ಶಾಕ್ ನೀಡಿದ ಹೈ ಕೋರ್ಟ್ ಆದೇಶ

ಈ ಕಾರಣದಿಂದಾಗಿ ಫ್ಲಾಟ್ ಗಳನ್ನು ಖರೀದಿಸಿದ ನಂತರವೂ ಅನೇಕ ಜನರು ತಮ್ಮ ವಾಹನಗಳನ್ನು ಮನೆಯ ಆವರಣದ ಹೊರಗೆ ನಿಲ್ಲಿಸಬೇಕಾಗಿದೆ ಎಂದು ಸಂದೀಪ್ ಠಾಕೂರ್ ತಮ್ಮ ಅರ್ಜಿಯಲ್ಲಿ ಹೇಳಿದ್ದಾರೆ.

ಹಲವು ಕಾರುಗಳನ್ನು ಖರೀದಿಸ ಬಯಸುವವರಿಗೆ ಶಾಕ್ ನೀಡಿದ ಹೈ ಕೋರ್ಟ್ ಆದೇಶ

ಅರ್ಜಿಯ ವಿಚಾರಣೆ ನಡೆಸಿದ ಮುಂಬೈ ಹೈಕೋರ್ಟ್, ಹೊಸ ಕಾರುಗಳ ಖರೀದಿಯನ್ನು ಕಡಿಮೆ ಮಾಡುವ ಅವಶ್ಯಕತೆ ಇದೆ. ಕಾರು ಖರೀದಿಸುವುದು ಅವಶ್ಯಕವಾದರೆ ಒಂದು ಕುಟುಂಬಕ್ಕೆ 4 ರಿಂದ 5 ಕಾರುಗಳನ್ನು ಖರೀದಿಸಲು ಅವಕಾಶ ನೀಡಬಾರದು ಎಂದು ಹೇಳಿದೆ.

ಹಲವು ಕಾರುಗಳನ್ನು ಖರೀದಿಸ ಬಯಸುವವರಿಗೆ ಶಾಕ್ ನೀಡಿದ ಹೈ ಕೋರ್ಟ್ ಆದೇಶ

ಕಾರು ಖರೀದಿಸುವವರಿಗೆ ಸಾಕಷ್ಟು ಪಾರ್ಕಿಂಗ್ ಸ್ಥಳವಿದೆಯೇ ಎಂಬುದನ್ನು ನಾವು ಮೊದಲು ಪರೀಕ್ಷಿಸಬೇಕಾಗಿದೆ ಎಂದು ನ್ಯಾಯ ಪೀಠ ಹೇಳಿದೆ. ಮಳೆಯಿಂದಾಗಿ ಮುಂಬೈನ ಬಹುತೇಕ ಎಲ್ಲಾ ರಸ್ತೆಗಳು ಜಲಾವೃತವಾಗುತ್ತಿವೆ. ಇದರ ಜೊತೆಗೆ ರಸ್ತೆಯ ಎರಡೂ ಬದಿಗಳಲ್ಲಿ ವಾಹನಗಳನ್ನು ಪಾರ್ಕಿಂಗ್ ಮಾಡುವುದು ಈಗ ಸಾಮಾನ್ಯವಾಗಿದೆ.

ಹಲವು ಕಾರುಗಳನ್ನು ಖರೀದಿಸ ಬಯಸುವವರಿಗೆ ಶಾಕ್ ನೀಡಿದ ಹೈ ಕೋರ್ಟ್ ಆದೇಶ

ರಸ್ತೆಯ 30% ನಷ್ಟು ಭಾಗವು ಎರಡೂ ಬದಿಗಳಲ್ಲಿ ಪಾರ್ಕಿಂಗ್‌ನಿಂದ ಆಕ್ರಮಿತವಾಗಿದೆ ಎಂದು ಮುಂಬೈ ಹೈಕೋರ್ಟ್ ಹೇಳಿದೆ. ಪಾರ್ಕಿಂಗ್ ಬಗ್ಗೆ ಸ್ಪಷ್ಟ ನೀತಿಯ ಅವಶ್ಯಕತೆ ಇದೆ ಎಂದು ಇದೇ ವೇಳೆ ಮುಂಬೈ ಹೈಕೋರ್ಟ್ ಹೇಳಿದೆ. ಮುಂಬೈ ಹೈಕೋರ್ಟ್ ಹೇಳಿರುವಂತೆ ವಾಸ್ತವವಾಗಿ ಭಾರತೀಯ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಉಂಟಾಗುತ್ತಿದೆ.

ಹಲವು ಕಾರುಗಳನ್ನು ಖರೀದಿಸ ಬಯಸುವವರಿಗೆ ಶಾಕ್ ನೀಡಿದ ಹೈ ಕೋರ್ಟ್ ಆದೇಶ

ವಾಹನ ಸವಾರರು ಎಲ್ಲೆಂದರಲ್ಲಿ ವಾಹನಗಳನ್ನು ಪಾರ್ಕಿಂಗ್ ಮಾಡುತ್ತಿರುವುದರಿಂದ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಸಮಸ್ಯೆ ಹೆಚ್ಚುತ್ತಿದೆ. ವಾಹನಗಳ ಸಂಖ್ಯೆಗೆ ಅನುಗುಣವಾಗಿ ರಸ್ತೆಗಳನ್ನು ಅಗಲಗೊಳಿಸದಿರುವುದು ಸಹ ಸಂಚಾರ ದಟ್ಟಣೆಗೆ ಪ್ರಮುಖ ಕಾರಣವಾಗಿದೆ.

ಹಲವು ಕಾರುಗಳನ್ನು ಖರೀದಿಸ ಬಯಸುವವರಿಗೆ ಶಾಕ್ ನೀಡಿದ ಹೈ ಕೋರ್ಟ್ ಆದೇಶ

ಜೊತೆಗೆ ಜನರು ಸಿಕ್ಕ ಸಿಕ್ಕ ಕಡೆಯಲ್ಲೆಲ್ಲಾ ರಸ್ತೆಗಳನ್ನು ಆಕ್ರಮಿಸಿಕೊಳ್ಳುತ್ತಿರುವುದು ಸಹ ಸಂಚಾರ ದಟ್ಟಣೆಗೆ ಕಾರಣವಾಗಿದೆ. ಮುಂಬೈ ಹೈಕೋರ್ಟ್ ಹೇಳಿರುವ ಪ್ರಕಾರ ಬಹುತೇಕ ಜನರು ತಮ್ಮ ವಾಹನಗಳನ್ನು ರಸ್ತೆಯ ಎರಡೂ ಬದಿಗಳಲ್ಲಿ ಪಾರ್ಕಿಂಗ್ ಮಾಡುತ್ತಿದ್ದಾರೆ.

ಹಲವು ಕಾರುಗಳನ್ನು ಖರೀದಿಸ ಬಯಸುವವರಿಗೆ ಶಾಕ್ ನೀಡಿದ ಹೈ ಕೋರ್ಟ್ ಆದೇಶ

ಇದು ವಾಹನಗಳ ಸಂಚಾರ ನಿರ್ಬಂಧಕ್ಕೆ ಹಾಗೂ ಸಂಚಾರ ದಟ್ಟಣೆಗೆ ಕಾರಣವಾಗುತ್ತದೆ. ಕೆಲವೊಮ್ಮೆ ಆಂಬ್ಯುಲೆನ್ಸ್‌ಗಳು ಹಾಗೂ ಅಗ್ನಿಶಾಮಕ ವಾಹನಗಳು ಕೂಡ ಈ ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿ ಕೊಳ್ಳುತ್ತವೆ. ಈ ಕಾರಣಕ್ಕೆ ಭಾರತದ ರಸ್ತೆಗಳಲ್ಲಿ ಉಂಟಾಗುತ್ತಿರುವ ಸಂಚಾರ ದಟ್ಟಣೆಯ ಸಮಸ್ಯೆಯನ್ನು ಕಡಿಮೆ ಮಾಡುವ ಅವಶ್ಯಕತೆ ಇದೆ.

ಹಲವು ಕಾರುಗಳನ್ನು ಖರೀದಿಸ ಬಯಸುವವರಿಗೆ ಶಾಕ್ ನೀಡಿದ ಹೈ ಕೋರ್ಟ್ ಆದೇಶ

ಸಂಚಾರ ದಟ್ಟಣೆಯ ಸಮಸ್ಯೆ ಕಡಿಮೆಯಾಗಬೇಕಾದರೆ ಇರುವ ರಸ್ತೆಗಳನ್ನು ಅಗಲಗೊಳಿಸಬೇಕು ಹಾಗೂ ಪಾರ್ಕಿಂಗ್ ಸಮಸ್ಯೆಯನ್ನು ಬಗೆ ಹರಿಸಬೇಕು. ಜೊತೆಗೆ ಪ್ರತಿಯೊಬ್ಬರೂ ಸಾಧ್ಯವಾದಷ್ಟು ಪ್ರತ್ಯೇಕ ವಾಹನಗಳನ್ನು ಬಳಸುವ ಬದಲು ಸಾರ್ವಜನಿಕ ಸಾರಿಗೆಯನ್ನು ಬಳಸಿದರೆ ಸಂಚಾರ ದಟ್ಟಣೆ ಸಮಸ್ಯೆಯನ್ನು ಕಡಿಮೆ ಮಾಡಬಹುದು.

ಹಲವು ಕಾರುಗಳನ್ನು ಖರೀದಿಸ ಬಯಸುವವರಿಗೆ ಶಾಕ್ ನೀಡಿದ ಹೈ ಕೋರ್ಟ್ ಆದೇಶ

ಆದರೆ ಕರೋನಾ ಸಾಂಕ್ರಾಮಿಕದ ಕಾರಣ ಜನರು ಸಾರ್ವಜನಿಕ ಸಾರಿಗೆಯನ್ನು ಬಳಸಲು ಹಿಂಜರಿಯುತ್ತಿದ್ದಾರೆ. ಕರೋನಾ ವೈರಸ್ ಹರಡ ಬಹುದೆಂಬ ಭೀತಿಯಿಂದ ಜನರು ತಮ್ಮ ಸ್ವಂತ ದ್ವಿ ಚಕ್ರ ವಾಹನ ಅಥವಾ ಕಾರುಗಳಲ್ಲಿ ಪ್ರಯಾಣಿಸಲು ಆದ್ಯತೆ ನೀಡುತ್ತಿದ್ದಾರೆ. ಇದು ಸಹ ಸಂಚಾರ ದಟ್ಟಣೆ ಸಮಸ್ಯೆಗೆ ಒಂದು ಕಾರಣವಾಗಿದೆ.

ಹಲವು ಕಾರುಗಳನ್ನು ಖರೀದಿಸ ಬಯಸುವವರಿಗೆ ಶಾಕ್ ನೀಡಿದ ಹೈ ಕೋರ್ಟ್ ಆದೇಶ

ಕರೋನಾ ವೈರಸ್ ಸಮಸ್ಯೆ ಕಡಿಮೆಯಾದ ನಂತರ ಜನರು ಸಾರ್ವಜನಿಕ ಸಾರಿಗೆಗೆ ಹೆಚ್ಚಿನ ಆದ್ಯತೆ ನೀಡಬಹುದು ಎಂದು ನಿರೀಕ್ಷಿಸಲಾಗಿದೆ. ಭಾರತದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಗಗನಕ್ಕೇರಿರುವುದೇ ಇದಕ್ಕೆ ಪ್ರಮುಖ ಕಾರಣವಾಗಿದೆ. ಆರ್ಥಿಕ ಮಿತ ವ್ಯಯದ ಕಾರಣಕ್ಕೆ ಜನರು ಸ್ವಂತ ವಾಹನದಲ್ಲಿ ಪ್ರಯಾಣಿಸುವುದಕ್ಕಿಂತ ಸಾರ್ವಜನಿಕ ಸಾರಿಗೆಯನ್ನು ಹೆಚ್ಚು ಬಳಸುವ ಸಾಧ್ಯತೆಗಳಿವೆ. ಭಾರತೀಯ ಆಟೋಮೊಬೈಲ್ ಅಸೋಸಿಯೇಷನ್ ಅಂಕಿ ಅಂಶಗಳ ಪ್ರಕಾರ ಕರೋನಾ ಸಾಂಕ್ರಾಮಿಕದ ನಂತರ ಪ್ಯಾಸೆಂಜರ್ ವಾಹನಗಳ ಮಾರಾಟದಲ್ಲಿ ಏರಿಕೆ ಕಂಡು ಬಂದಿದೆ. ಅದರಲ್ಲೂ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಎಲೆಕ್ಟ್ರಿಕ್ ವಾಹನಗಳು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುತ್ತಿವೆ.

Most Read Articles

Kannada
English summary
Hc asks authorities not to permit people to own 4 5 vehicles if parking facility not available
Story first published: Tuesday, August 17, 2021, 10:16 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X