ಬೆಂಗಳೂರು ಟ್ರಾಫಿಕ್‌ ಸಮಸ್ಯೆಗೆ ಪರಿಹಾರ ಇಲ್ವಾ? ಊರಿಗೆ ಹೋಗುವ ಟೈಮ್ ಬೇಕು ಆಫೀಸ್‌ನಿಂದ ಮನೆ ತಲುಪುದಕ್ಕೆ!

ಸಿಲಿಕಾನ್ ಸಿಟಿ ಬೆಂಗಳೂರನ್ನು (Bengaluru) ನೆನಪಿಸಿಕೊಂಡರೆ, ಹತ್ತು ಹಲವು ಸಂಗತಿಗಳು ಕಣ್ಣ ಮುಂದೆ ಬಂದರೂ, ಬೆಂಗಳೂರಿನಲ್ಲಿ ನೆಲೆಸಿರುವ ಬಹುತೇಕರ ಕಣ್ಣಿಗೆ ಮೊದಲು ಬರುವುದು ಟ್ರಾಫಿಕ್ ಜಾಮ್. ವಿಶ್ವದಲ್ಲಿಯೇ ಅತಿದಟ್ಟಣೆ ಇರುವ ನಗರಗಳಲ್ಲಿ ಬೆಂಗಳೂರು ಕೂಡ ಒಂದಾಗಿದೆ. ಬೆಂಗಳೂರಿನಲ್ಲಿ ಟ್ರಾಫಿಕ್ (Bengaluru traffic) ಸಮಸ್ಯೆಯ ಬಗ್ಗೆ ಸೋಷಿಯಲ್ ಮೀಡಿಯಾಗಳಲ್ಲಿ ಸಾಕಷ್ಟು ಟ್ರೋಲ್ ಗಳನ್ನು ನೋಡುತ್ತೇವೆ. ಬೆಂಗಳೂರಿನಲ್ಲಿ ವಾಹನ ಪ್ರಯಾಣ ಮಾಡುವುದದರಲ್ಲಿ ಸುಸ್ತಾಗಿಬಿಡುತ್ತೆ. ಬೆಂಗಳೂರಿನ ಟ್ರಾಫಿಕ್​ನಲ್ಲಿ ಸಿಲುಕಿಕೊಂಡರೆ ಅಷ್ಟೇ ಕಥೆ. ಮೊದಲೇ ಟ್ರಾಫಿಕ್ ಸಮಸ್ಯೆಯಿರುವ ಬೆಂಗಳೂರಿನಲ್ಲಿ ಮಳೆ ಬಂದರೆ ಹೇಳುವುದೇ ಬೇಡ.

ಬೆಂಗಳೂರು ಮಳೆನಾಡಿನ ರೀತಿ ಬಿಡುವೇ ಕೊಡದಂತೆ ವರುಣ ರುದ್ರನರ್ತನ ತೋರುತ್ತಿದ್ದಾನೆ. ನಗರದಲ್ಲಿ ಧಾರಾಕಾರ ಮಳೆ ಆಗಿದ್ದು, ಮತ್ತೆ ಅವಾಂತರಗಳು ಸೃಷ್ಟಿಯಾಗಿವೆ. ಹಲವೆಡೆ ಸುರಿಯುತ್ತಿರುವ ಭಾರೀ ಮಳೆಗೆ ರಸ್ತೆಗಳು ಜಲಾವೃತವಾಗಿದ್ದು, ವಾಹನ ಸವಾರರು ಪರದಾಡಿದ್ದಾರೆ. ಬೃಹದಾಕಾರ ಮರ ಧರೆಗುರುಳಿ ಅನಾಹುತಗಳು ಸಂಭವಿಸುತ್ತಿದೆ. ಹೀಗಾಗಿ ಜನರು ಓಡಾಡಲು ಕೂಡ ಕಷ್ಟಕರವಾಗಿದೆ.

Bengaluru Rain

ಆಫೀಸ್‌ನಿಂದ ಮನೆಗೆ ಮನೆಯಿಂದ ಕಚೇರಿಗೆ ಹೋಗುವವರ ಪರದಾಟ ಅಂತು ಹೇಳತೀರದಾಗಿದೆ. ಮಾರ್ಗಮಧ್ಯೆಯೇ ಗಂಟೆಗಳ ಕಾಲ ಸಮಯ ಕಳೆಯುವಂತಹ ದುಸ್ಥಿತಿ ನಿರ್ಮಾಣವಾಗಿದೆ. ಕಿಲೋ ಮೀಟರ್ ಪ್ರಯಾಣಿಸಲು ಬರೋಬ್ಬರಿ ಗಂಟೆಗಳಾಗುತ್ತಿದೆ ಎಂದರೆ ನೀವೇ ಊಹೆ ಮಾಡಿ ಬೆಂಗಳೂರಿನ ಟ್ರಾಫಿಕ್ ಯಾವ ಕೆಟ್ಟ ಹಂತಕ್ಕೆ ತಲುಪಿದೆ ಎಂದು ನೀವು ಊಹೆ ಮಾಡಬಹುದು.

ಇನ್ನು ಐಟಿ ಬಿಟಿ ಕಂಪನಿಗಳು ಹೆಚ್ಚು ಇರುವ ವೈಟ್‌ಫೀಲ್ಡ್‌, ಮಾರತಹಳ್ಳಿ, ಬೆಳಂದೂರಿನಲ್ಲಿಯೂ ಟ್ರಾಫಿಕ್ ಸಿಕ್ಕಾಪಟ್ಟೆ ಹೆಚ್ಚಾಗಿದೆ. ಕ್ಷಿಣ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ನನ್ನ ಸಹೋದ್ಯೋಗಿಗಳು ಸಂಜೆ ಕಚೇರಿ ಬಿಟ್ರೆ ಗಂಟೆಗಳನ್ನು ರಸ್ತೆಯಲ್ಲಿ ಕಳೆದರು ಅರ್ಧ ಹಾದಿಯನ್ನು ಕೂಡ ಕ್ರಮಿಸಲು ಸಾಧ್ಯವಾಗುತ್ತಿಲ್ಲ ಎಂದು ಉದ್ಯೋಗಿಗಳು ಸೋಶಿಯಲ್ ಮೀಡಿಯಾಗಳಲ್ಲಿ ತಮ್ಮ ಅಳಲು ತೊಡಿಕೊಂಡಿದ್ದಾರೆ.

Bengaluru Rain

ಇನ್ನು ಪ್ರತಿ ನಿತ್ಯ ಬೆಂಗಳೂರು ಜನರಿಗೆ ಈ ಟ್ರಾಫಿಕ್‌ ಅನ್ನೋದು ದೊಡ್ಡ ತಲೆನೋವಾಗಿದೆ. ದಿನವಿಡೀ ಟ್ರಾಫಿಕ್‌ನಲ್ಲಿ ಸಿಲುಕಿ ಪರದಾಡುವಂತ ಪರಿಸ್ಥಿತಿ ಬೆಂಗಳೂರು ಮಂದಿಗೆ ಅನಿವಾರ್ಯವಾಗಿದೆ. ಇನ್ನು ವಿಮಾನ ನಿಲ್ದಾಣದ ಗ್ರಾಹಕರಿಗೆ ಟ್ರಾಫಿಕ್‌ ಸಮಸ್ಯೆಗೆ ಪರ್ಯಾಯ ಮಾರ್ಗವೊಂದು ದೊರೆತಿದೆ. ಏರ್‌ ಟ್ಯಾಕ್ಸಿ ಪ್ರಾರಂಭಿಸಲು ಬೆಂಗಳೂರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಅಧಿಕಾರಿಗಳು ಮುಂದಾಗಿದ್ದಾರೆ.

ಬೆಂಗಳೂರು ಜನರ ಅನುಕೂಲಕ್ಕಾಗಿ ಅತೀ ಕಡಿಮೆ ಸಮಯ ಹಾಗೂ ಕಡಿಮೆ ಬೆಲೆಯಲ್ಲಿ ಈ ಸೇವೆ ದೊರೆಯಲಿದೆ. ಈ ಉದ್ದೇಶದಿಂದ ಏರ್‌ ಟ್ಯಾಕ್ಸಿ ಪ್ರಾರಂಭಿಸಿಸಲು ಕೆಐಎ ರೆಡಿಯಾಗಿದೆ. ಇನ್ನು ಬೆಂಗಳೂರಿನಲ್ಲಿ ದ್ವಿಚಕ್ರ ವಾಹನಗಳ ಸಂಖ್ಯೆ ಭಾರೀ ಹೆಚ್ಚಳವಾಗಿದೆ. ಟ್ರಾಫಿಕ್ ನಲ್ಲಿ ದ್ವಿಚಕ್ರ ವಾಹನಗಳು ಸ್ವಲ್ಫ ಸುಲಭವಾಗಿ ಹೋಗಬಹುದು ಎಂದು ಹೆಚ್ಚು ಜನ ಬಳಸುತ್ತಿದ್ದಾರೆ.

Bengaluru Rain

ಇನ್ನು ಇತ್ತೀಚೆಗೆ, ಸಂಚಾರ ದಟ್ಟಣೆ, ಸಂಚಾರ ವಿಳಂಬ, ದಟ್ಟಣೆ ಮತ್ತು ಸಿಗ್ನಲ್ ನಿಲುಗಡೆಗಳಿಂದಾಗಿ ಸಮಯ ನಷ್ಟ, ಇಂಧನ ನಷ್ಟ ಮತ್ತು ಸಂಬಂಧಿತ ಅಂಶಗಳಿಂದಾಗಿ ಬೆಂಗಳೂರು (Bengaluru) ವರ್ಷ ಅಂದಾಜಿನ ಪ್ರಕಾರ ರೂ.19,725 ಕೋಟಿ ನಷ್ಟವನ್ನು ಅನುಭವಿಸುತ್ತಿದೆ ಎಂದು ಖ್ಯಾತ ಟ್ರಾಫಿಕ್ ಮತ್ತು ಮೊಬಿಲಿಟಿ ತಜ್ಞ ಎಂಎನ್ ಶ್ರೀಹರಿ ಮತ್ತು ಅವರ ತಂಡ ಲೆಕ್ಕಾಚಾರ ಹಾಕಿದ್ದಾರೆ.

Article Published On: Thursday, October 24, 2024, 17:05 [IST]
English summary
Heavy rainfall bengaluru traffic jam issue details
Read more on india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+