ಹೆಲ್ಮೆಟ್ ಸತ್ಯಾಸತ್ಯತೆ; ಇತಿಹಾಸದತ್ತ ಒಂದು ಪಯಣ
ಸರಿ ಸುಮಾರು ಒಂದು ಶತಮಾನದ ಹಿಂದೆ ನಡೆದ ರಸ್ತೆ ಅಪಘಾತವೊಂದರಲ್ಲಿ ಟಿ.ಇ ಲಾರೆನ್ಸ್ ಎಂಬವರು ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದರು. ಈ ದುರ್ಘಟನೆಯ ಮೊದಲು ಅಥವಾ ಬಳಿಕ ವೈದ್ಯರು ಸಹ ಬಹುಶ: ಅಂದುಕೊಂಡಿರಲಿಲ್ಲ ಮುಂದೆ ಇದೇ ದುರ್ಘಟನೆಯು ಭವಿಷ್ಯದಲ್ಲಿ ಲಕ್ಷಾಂತರ ಮಂದಿಯ ಜೀವ ರಕ್ಷಣೆಗೆ ಕಾರಣವಾದಿತೆಂದು!.
ತಲೆ ಇದ್ದವರಿಗೆ ಮಾತ್ರ ಸರಿಯಾದ ಶಿರಸ್ತ್ರಾಣ..!
ಹೆಲ್ಮೆಟ್ ಧರಿಸದೆ ರಸ್ತೆ ಅಪಘಾತದಲ್ಲಿ ಭಾಗಿಯಾದ್ದಲ್ಲಿ ತಲೆಗೆ ಪೆಟ್ಟಾಗುವ ಸಾಧ್ಯತೆ ಜಾಸ್ತಿಯಾಗಿರುತ್ತದೆ. ಹೀಗೆ ಶಿರಸ್ತ್ರಾಣ ನೀವು ಧರಿಸಬೇಕಾಗಿರುವ ಅಗತ್ಯದ ಜೊತೆಗೆ ಇತಿಹಾಸದ ಒಂದು ಪಯಣವೇ ಈ ಲೇಖನ...

ಹೆಲ್ಮೆಟ್ ಸತ್ಯಾಸತ್ಯತೆ; ಇತಿಹಾಸದತ್ತ ಒಂದು ಪಯಣ
ಹೆಲ್ಮೆಟ್ ಧರಿಸುವುದರಿಂದ ಅಪಘಾತದ ವೇಳೆ ತಲೆಗೆ ತೀವ್ರತರಹದ ಗಾಯಗಳಾಗುವ ಸಂಭವವನ್ನು ತಪ್ಪಿಸಬಹುದಾಗಿದೆ. ಅಧ್ಯಯನ ವರದಿಯ ಪ್ರಕಾರ ಹೆಲ್ಮೆಟ್ ಧರಿಸುವುದರಿಂದ ತಲೆಗೆ ಪೆಟ್ಟಾಗುವ ಸಾಧ್ಯತೆಯನ್ನು ಶೇಕಡಾ 69ರಷ್ಟು ಹಾಗೂ ಪ್ರಾಣಪಾಯವನ್ನು ಶೇಕಡಾ 42ರಷ್ಟು ತಪ್ಪಿಸಬಹುದಾಗಿದೆ.

ಹೆಲ್ಮೆಟ್ ಗಳ ಉಗಮ
ಇದಕ್ಕೆ ನಾವು ಒಂದನೇ ಮಹಾಯುದ್ಧದ ಕಾಲಘಟ್ಟದತ್ತ ತೆರಳಬೇಕಾಗಿದ್ದು, 1914ರಲ್ಲಿ ಬ್ರೂಕ್ ಲ್ಯಾಂಡ್ ರೇ ಟ್ರ್ಯಾಕ್ ನಲ್ಲಿ ನಡೆದ ಎಲ್ಲ ಮೋಟಾರುಸೈಕಲ್ ಅಪಘಾತಗಳಲ್ಲಿ ತಲೆಗೆ ಭಾರಿ ಪೆಟ್ಟಾಗುವುದನ್ನು ಗಮನಿಸಿಕೊಂಡ ಡಾ. ಎರಿಕ್ ಗಾರ್ಡ್ನರ್, ಮೋಸ್ ಎಂಬವರಿಗೆ ಕಾನ್ವಾಸ್ ಹಾಗೂ ಶೆಲ್ಲಾಕ್ ನಿಂದ ವಿನ್ಯಾಸ ರಚಿಸುವಂತೆ ಕೋರಿದರು. ಇದು ತಲೆಗಾಗುವ ಗಂಭೀರ ಗಾಯಗಳನ್ನು ತಡೆಯಲು ಸಮರ್ಥವಾಗಿದ್ದರೂ ತುಂಬಾನೇ ಮೆದುವಾಗಿತ್ತು.

ಹೇಗೆ ಅಸ್ತಿತ್ವಕ್ಕೆ ಬಂತು?
ಬಳಿಕ ಆಟೋ ಸೈಕಲ್ ಯೂನಿಯನ್ ನಲ್ಲಿ ಗಾರ್ಡ್ನರ್ ತಮ್ಮ ವಿನ್ಯಾಸವನ್ನು ಪರಿಚಿಯಿಸಿದರು. ಆದರೆ ಆರಂಭದಲ್ಲಿ ರೇಸರ್ ಗಳಿಂದ ಭಾರಿ ವಿರೋಧ ವ್ಯಕ್ತವಾಯಿತು. ಬಳಿಕ 1914 ಇಸ್ಲೆ ಆಫ್ ಮ್ಯಾನ್ ಟಿಟಿ ರೇಸ್ ನಲ್ಲಿ ಕಡ್ಡಾಯವಾಗಿ ಜಾರಿಗೆ ತರಲಾಯಿತು. ಗಾರ್ಡ್ನರ್ ತಮ್ಮ ಬಳಿ ಇಂತಹ 94 ಹೆಲ್ಮೆಟ್ ಗಳನ್ನು ಇಟ್ಟುಕೊಂಡಿದ್ದರು. ಅದೃಷ್ಟವಶಾತ್ ಇಲ್ಲಿ ನಡೆದ ಅಪಘಾತವೊಂದರಲ್ಲಿ ಸವಾರ ಹೆಲ್ಮೆಟ್ ಧರಿಸಿದ್ದರಿಂದ ಪ್ರಾಣಪಾಯದಿಂದ ಪಾರಾಗಿದ್ದರು.

ಲಾರೆನ್ಸ್ ಆಫ್ ಅರೇಬಿಯಾ
ನಾವು ಮುನ್ನುಡಿಯಲ್ಲಿ ಸೂಚಿಸಿರುವಂತೆಯೇ 1935 ಮೇ 19ರಂದು ಲಾರೆನ್ಸ್ ಆಫ್ ಅರೇಬಿಯಾ ಅವರು ಮರಣಕ್ಕೆ ಶರಣಾಗಿದ್ದರು. ಮೊದಲ ಮಹಾ ಯುದ್ಧದ ನಾಯಕಲ್ಲಿ ಒರ್ವರಾಗಿದ್ದ ಲಾರೆನ್ಸ್ ಅವರನ್ನು ಲಾರೆನ್ಸ್ ಆಫ್ ಅರೇಬಿಯಾ ಎಂಬ ಹೆಸರಿನಿದ ಕರೆಯಲಾಗುತ್ತಿದೆ. ಮೊದಲ ಮಹಾಯುದ್ಧದ ಸಂದರ್ಭದಲ್ಲಿ ಉಂಟಾಗಿರುವ ಅರಬ್ ಕ್ರಾಂತಿ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ. ಲಾರನ್ಸ್ ಅಪಘಾತ ಇಂದಿಗೂ ನಿಗೂಢ. ಬ್ರೌ ಸುಪೀರಿಯರ್ 100 ಮೋಟಾರುಸೈಕಲ್ ನಿಂದ ಮನೆಯಿಂದ ತೆರಳಿದ್ದ ಲಾರನ್ಸ್ ಇಬ್ಬರು ಸೈಕಲ್ ಸವಾರರನ್ನು ಬಚಾವ್ ಮಾಡುವ ಎಡವಟ್ಟಿನಲ್ಲಿ ತಮ್ಮ ಜೀವವನ್ನೇ ಕಳೆದುಕೊಂಡಿದ್ದರು. ತಲೆಗೆ ಗಂಭೀರ ಪೆಟ್ಟು ಮಾಡಿಕೊಂಡ ಲಾರನ್ಸ್ ಬಳಿಕ ಕೋಮಾವಾಸ್ಥೆಗೆ ಜಾರಿದ ಆರು ದಿನಗಳ ಬಳಿಕ ಸಾವನ್ನಿಪ್ಪಿದ್ದರು. ಬಳಿಕ ನಡೆದ ವಿಚಾರಣೆಯಲ್ಲಿ ಲಾರನ್ಸ್ ಹೆಲ್ಮೆಟ್ ಧರಿಸಿರಲಿಲ್ಲವೆಂಬುದು ತಿಳಿದು ಬಂತು. ಇದಾದ ಬಳಿಕ ಹೆಲ್ಮೆಟ್ ಬಳಕೆ ಜಾರಿಗೆ ಬಂದಿತು.

ನಾಗರಿಕ ಹಾಗೂ ಮಿಲಿಟರಿ ಬಳಕೆ
ಲಾರನ್ಸ್ ಮರಣದ ಬಳಿಕ ಹೆಲ್ಮೆಟ್ ಬಗೆಗಿನ ಅಧ್ಯಯನಕ್ಕೆ ಚುರುಕು ಮುಟ್ಟಿತು. ಅಲ್ಲದೆ ನಾಗರಿಕ ಸೇರಿದಂತೆ ಮಿಲಿಟರಿ ಅಗತ್ಯಗಳಿಗಾಗಿ ಸವಾರರು ಹೆಲ್ಮೆಟ್ ಧರಿಸುವುದು ಅನಿವಾರ್ಯ ಎಂಬುದು ಕಂಡುಬಂತು. 1950ರ ವೇಳೆಯಾಗುವಾಗ ಮೋಟಾರು ರೇಸಿಂಗ್ ನಲ್ಲಿ ಸವಾರರು ಫುಲ್ ಫೇಸ್ ಹೆಲ್ಮೆಟ್ ಧರಿಸುವುದು ಕಡ್ಡಾಯವಾಗಿತ್ತು. ಅಂತೆಯೇ 1954ರಲ್ಲಿ ಬೆಲ್ ತನ್ನ ಮೊದಲ ಆಟೋ ರೇಸಿಂಗ್ ಹೆಲ್ಮೆಟ್ ಗಳನ್ನು ನಿರ್ಮಿಸಿತ್ತು.

ಹೆಲ್ಮೆಟ್ ಗಳ ವಿಧಗಳೆಷ್ಟು?
ಮಾರುಕಟ್ಟೆಯಲ್ಲಿ ಹಲವು ವಿಧದ ಹೆಲ್ಮೆಟ್ ಗಳು ಲಭ್ಯವಿದೆ. ಇದರಲ್ಲಿ ಫುಲ್ ಫೇಸ್, ಆಫ್ ರೋಡ್ ಅಥವಾ ಮೊಟೊ ಕ್ರಾಸ್, ಪ್ಲಿಪ್ ಆನ್, ಓಪನ್ ಫೇಸ್ ಮತ್ತು ಹಾಲ್ಪ್ ಹೆಲ್ಮೆಟ್ ಗಳೆಂಬ ವಿಧಗಳು ಸಾಮಾನ್ಯವಾಗಿದೆ. ಫುಲ್ ಫೇಸ್ ಹೆಲ್ಮೆಟ್ ಗಳು ಗರಿಷ್ಠ ಸುರಕ್ಷತೆಯನ್ನು ನೀಡುವುದರಿಂದ ನಾವಿದನ್ನೇ ಧರಿಸುವಂತೆ ಸಲಹೆ ಮಾಡಲಿದ್ದೇವೆ.
ಹೆಲ್ಮೆಟ್ ಆಯ್ಕೆ ಕಷ್ಟವೇ? ಬನ್ನಿ ನಮ್ಮ ಸಲಹೆ ಪಡೆಯಿರಿ
ಆಧುನಿಕ ಹೆಲ್ಮೆಟ್ ಗಳು
ಹೀಗೆ ದಶಕಗಳ ನಿರಂತರ ಅಧ್ಯಯನದ ಬಳಿಕ ಹೆಚ್ಚು ಹಗುರವಾದ ಹೆಲ್ಮೆಟ್ ಗಳನ್ನು ಆಧುನಿಕ ಕಾಲದಲ್ಲಿ ಅಭಿವೃದ್ದಿಪಡಿಸಲಾಗಿದೆ. ಇದನ್ನು ಪ್ರಮುಖವಾಗಿಯೂ ಪ್ಲಾಸ್ಟಿಕ್, ಫೈಬರ್ ಗ್ಲಾಸ್ ಹಾಗೂ ಕಾರ್ಬರ್ ಫೈಬರ್ ನಿಂದ ನಿರ್ಮಿಸಲಾಗಿದೆ.

ಹೆಲ್ಮೆಟ್ ಆಯ್ಕೆ ಮಾಡುವುದು ಹೇಗೆ ?
ಸರಿಯಾದ ಆಕಾರದ ಹೆಲ್ಮೆಟ್ ಆಯ್ಕೆ ಮಾಡುವುದು ತುಂಬಾನೇ ಸುಲಭವಾಗಿದೆ. ಇದು ತಲೆಯ ನೆತ್ತಿಗೆ ಸರಿಯಾಗಿ ಹೊಂದಿಕೆಯಾಗಬೇಕಾಗಿದೆ. ಯಾವತ್ತೂ ಹೊಂದಿಕೆಯಾಗದ ಹೆಲ್ಮೆಟ್ ಗಳನ್ನು ಧರಿಸಲು ಹೋಗದಿರಿ. ಯಾಕೆಂದರೆ ಇದುವೇ ನಿಮ್ಮ ಅವಘಡಕ್ಕೆ ಕಾರಣವಾಗಬಲ್ಲದು.

ಗುಣಮಟ್ಟ ಅಗತ್ಯ
ರಸ್ತೆ ಬದಿಯಲ್ಲಿ ಸಿಗುವ ಕಡಿಮೆ ಬೆಲೆಯ ಹೆಲ್ಮೆಟ್ ಗಳ ಖರೀದಿಯ ಗೋಜಿಗೆ ಹೋಗದೆ ನಿಮ್ಮ ತಲೆಯ ಮೌಲ್ಯಕ್ಕೂ ಸ್ವಲ್ಪ ಆದ್ಯತೆ ಕೊಡಿ. ಅನೇಕ ದೇಶಗಳು ತನ್ನದೇ ಹೆಲ್ಮೆಟ್ ಗುಣಮಟ್ಟ ದರ್ಜೆಯನ್ನು ಹೊಂದಿದೆ. ಭಾರತದಲ್ಲೂ ಇದನ್ನು ಬ್ಯುರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (ಬಿಐಎಸ್) ನೋಡಿಕೊಳ್ಳುತ್ತದೆ. ಇದಕ್ಕೆ ಐಎಎಸ್ ಮಾನ್ಯತೆಯು ಕಡ್ಡಾಯವಾಗಿದೆ.

ಎಷ್ಟು ಕಾಲ ಬಾಳ್ವಿಕೆ ಬರುತ್ತದೆ?
ನೀವು ಉತ್ತಮ ಖಾಳಜಿ ವಹಿಸಿದರೆ ಗುಣಮಟ್ಟದ ಹೆಲ್ಮೆಟ್ ವೊಂದು ಐದು ವರ್ಷಗಳಷ್ಟು ಬಾಳ್ವಿಕೆ ಬರುತ್ತದೆ. ಸಾಕಾಲ್ಲವೇ? ಇವೆಲ್ಲಕ್ಕಿಂತ ಮಿಗಿಲಾಗಿ ತಲೆಗೆ ರಕ್ಷಣೆ ನೀಡುವುದರಿಂದ ಒಮ್ಮೆ ಹೂಡಿಕೆ ಮಾಡುವುದರಲ್ಲಿ ತಪ್ಪೇನಿದೆ?

ಕಾನೂನು ಕಟ್ಟುನಿಟ್ಟಾಗಿಲ್ಲವೇ?
ವಿದೇಶಗಳಲ್ಲಿ ಹೆಲ್ಮೆಟ್ ಬಳಕೆಗೆ ಸಂಬಂಧಪಟ್ಟಂತೆ ಕಟ್ಟುನಿಟ್ಟಿನ ಕಾನೂನು ಜಾರಿಗೆ ತರಲಾಗಿದೆ. ಆದರೆ ನಮ್ಮ ದೇಶದಲ್ಲಿ ನೀರಿನಲ್ಲಿಟ್ಟ ಹೋಮದಂತೆ ಟ್ರಾಫಿಕ್ ನಿಯಮಗಳಿಂದ ಪಾರಾಗಲು ಒಮ್ಮೆ ಹೆಲ್ಮೆಟ್ ಧರಿಸುವ ಸವಾರರು ಸಿಗ್ನಲ್ ದಾಟಿದ ಕೂಡಲೇ ತೆಗೆಯುವುದು ತುಂಬಾ ಬೇಸರದ ಸಂಗತಿ.

ಹೆಲ್ಮೆಟ್ ಬ್ರಾಂಡ್
ದೇಶದಲ್ಲಿ ಲಭ್ಯವಿರುವ (ಚಿತ್ರದಲ್ಲಿ ತೋರಿಸಿರುವಂತೆಯೇ) ಕೆಲವು ಜನಪ್ರಿಯ ಹೆಲ್ಮೆಟ್ ಬ್ರಾಂಡ್ ಗಳಾಗಿವೆ. ಈ ಪೈಕಿ ಸ್ಟುಡೋಸ್ ಹಾಗೂ ವೇಗಾ ಹೆಚ್ಚು ಹೆಸರು ಮಾಡಿದೆ.

ಸ್ಟೈಲ್ ಗೆ ಅಲ್ಲ ರಕ್ಷಣೆಗೆ
ನಮ್ಮ ಅಂತಿಮ ಮಾತು ಏನೆಂದರೆ ಹೆಲ್ಮೆಟ್ ಇರುವುದೇ ತಲೆಗಳ ರಕ್ಷಣೆಗೆ. ಹಾಗಾಗಿ ಯಾವತ್ತೂ ಸ್ಟೈಲ್ ಗಾಗಿ ಹೆಲ್ಮೆಟ್ ಬಳಕೆ ಬೇಡ. ಬದಲಾಗಿ ನಿಮ್ಮ ಜೀವನ ಶೈಲಿಯ ಭಾಗವಾಗಿಸಿ. ಹ್ಯಾಪಿ ಡ್ರೈವಿಂಗ್.

ಇವನ್ನೂ ಓದಿ
ಹೆಣ್ಮಕ್ಕಳಿಗಾಗಿ, ಡ್ರೈವಿಂಗ್ ಸಂದರ್ಭದಲ್ಲಿ ಕೇಶ ರಕ್ಷಣೆ!


Click it and Unblock the Notifications








