ರಾಜಕಾರಣಿಯ ವೇಷ ಧರಿಸಿದರೆ ಸೆಲೆಬ್ರಿಟಿಗಳ ಕಾರು ಚಿಕ್ಕದಾಗುತ್ತಾ?
ರಾಜಕಾರಣಿಗಳು ಸಾರ್ವಜನಿಕರ ಮುಂದೆ ತಮ್ಮ ಸರಳ ಸಜ್ಜನಿಕೆಯ ಜೀವನಶೈಲಿಯನ್ನು ತೋರಿಸಲು ಎಷ್ಟೇ ಸರಳ ವ್ಯಕ್ತಿತ್ವವನ್ನು ಮೈಗೂಡಿಸಲು ಹಿಂಜರಿಯುವುದಿಲ್ಲ. ಇನ್ನು ಈ ಸಾಲಿಗೆ ತಾರೆಯರು ಕಾಲಿಟ್ಟರೆ ಹೇಗಿರಬಹುದು? ಸಾಮಾನ್ಯವಾಗಿ ತಾರೆಯರು ವಿಲಾಸಿ ಜೀವನವನ್ನು ಹಿಂಬಾಲಿಸುತ್ತಾರೆ. ಆದರೆ ಇಲ್ಲಿ ರಾಜಕೀಯಕ್ಕೆ ಪ್ರವೇಶಿಸಿದ ತಾರೆಯರ ಪರಿಸ್ಥಿತಿ ಸ್ವಲ್ಪ ಭಿನ್ನವಾಗಿರುತ್ತದೆ.
Also Read: ಆಲ್ಟೊ 800 vs ನ್ಯಾನೋ; ಒಂದು ಸಿಂಪಲ್ ಗೈಡ್
ಸ್ತ್ರೀ ಸೌಂದರ್ಯಕ್ಕೆ ಹೆಸರು ಮಾಡಿರುವ ಬಾಲಿವುಡ್ ಚಿತ್ರರಂಗದ ಶ್ರೇಷ್ಠ ನಟಿ ಹಾಗೂ ಸಂಸದೆ ಹೇಮಾ ಮಾಲಿನಿ ತಮ್ಮ ದೈನಂದಿನ ಪಯಣದ ಅಗತ್ಯಗಳಿಗಾಗಿ ಅತಿ ನೂತನ ಟಾಟಾ ಜೆನ್ ಎಕ್ಸ್ ನ್ಯಾನೋ ಕಾರನ್ನು ಖರೀದಿಸಿದ್ದಾರೆ.

ಕಾಲ ಚಕ್ರವನ್ನು ಸ್ವಲ್ಪ ಹಿಂದಕ್ಕೆ ಸರಿಸಿ ನೋಡಿದಾಗ ರಾಜಸ್ತಾನದಲ್ಲಿ ಮರ್ಸಿಡಿಸ್ ಬೆಂಝ್ ಸಿ ಕ್ಲಾಸ್ ನಲ್ಲಿ ಸಂಚರಿಸುತ್ತಿದ್ದ ಹೇಮಾ ಮಾಲಿನಿ, ಮಾರುತಿ ಆಲ್ಟೊ ಕಾರಿಗೆ ಢಿಕ್ಕಿಯಾದ ಪ್ರಕರಣ ನಡೆದಿತ್ತು. ಘಟನೆಯಲ್ಲಿ ಹೇಮಾ ಮಾಲಿನಿ ಗಂಭೀರವಾಗಿ ಗಾಯಗೊಂಡಿದ್ದರೆ ಎರಡು ವರ್ಷದ ಬಾಲಕಿ ಸಾವಿಗೀಡಾಗಿದ್ದರು.

ಈಗ ಬದಲಾದ ಪರಿಸ್ಥಿತಿಯಲ್ಲಿ ಉತ್ತರ ಪ್ರದೇಶದ ಮಥುರಾ ಜಿಲ್ಲೆಯನ್ನು ಜನಪ್ರತಿನಿಧಿಯಾಗಿರುವ ಹೇಮಾ ಮಾಲಿನಿ, ವೃಂದಾವನ ನಗರದಲ್ಲಿ ತಮ್ಮ ದೈನಂದಿನ ಬಳಕೆಗಾಗಿ ನ್ಯಾನೋ ಕಾರನ್ನು ಖರೀದಿಸಿರುವುದಾಗಿ ತಿಳಿಸಿದ್ದಾರೆ.

ಕಡಿದಾರ ರಸ್ತೆ ಹಾಗೂ ವಿಪರೀತ ಟ್ರಾಫಿಕ್ ಪರಿಸ್ಥಿತಿಯನ್ನು ನಿಭಾಯಿಸುವ ಸಲುವಾಗಿ ಚೊಕ್ಕದಾದ ನ್ಯಾನೋ ಕಾರನ್ನೇ ಆಯ್ಕೆ ಮಾಡಿರುವುದಾಗಿ ಹೇಮಾ ಮಾಲಿನಿ ತಿಳಿಸುತ್ತಾರೆ.

ನಿಮ್ಮ ಮಾಹಿತಿಗಾಗಿ, ಜೆನ್ ಎಕ್ಸ್ ನ್ಯಾನೋದಲ್ಲಿ ಈಸಿ ಶಿಫ್ಟ್ ಎಂದರಿಯಲ್ಪಡುವ 5 ಸ್ಪೀಡ್ ಆಟೋಮ್ಯಾಟಡ್ ಮ್ಯಾನುವಲ್ ಟ್ರಾನ್ಸ್ ಮಿಷನ್ ಗೇರ್ ಬಾಕ್ಸ್ ಗಳನ್ನು ಆಳವಡಿಸಲಾಗಿದೆ.

624 ಸಿಸಿ ಪೆಟ್ರೋಲ್ ಎಂಜಿನ್ ನಿಂದ ನಿಯಂತ್ರಿಸಲ್ಪಡುವ ಈ ಕಾರು 51 ಎನ್ ಎಂ ತಿರುಗುಬಲದಲ್ಲಿ 38 ಅಶ್ವಶಕ್ತಿಯನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿರುತ್ತದೆ.

ಅಂದ ಹಾಗೆ ನ್ಯಾನೋ ಜೆನ್ ಎಕ್ಸ್ ಟಾಪ್ ಎಂಡ್ ಎಕ್ಸ್ ಟಿಎ ಕಾರನ್ನು ಹೇಮಾ ಮಾಲಿನಿ ತಮ್ಮದಾಗಿಸಿಕೊಂಡಿದ್ದಾರೆ. ಇದರ ಬಲೆ ದೆಹಲಿ ಎಕ್ಸ್ ಶೋ ರೂಂ ಪ್ರಕಾರ 3.01 ಲಕ್ಷ ರು.ಗಳಷ್ಟು ದುಬಾರಿಯೆನಿಸುತ್ತದೆ.

ಈ ಬಗ್ಗೆ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲೂ ಚಿತ್ರವನ್ನು ಹಂಚಿಕೊಂಡಿರುವ ಹೇಮಾ ಮಾಲಿನಿ, ವೃಂದಾವನದಲ್ಲಿ ಸ್ವತ: ತಾವೇ ನ್ಯಾನೋ ಕಾರನ್ನು ಓಡಿಸುವ ಬಗ್ಗೆ ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಒಟ್ಟಿನಲ್ಲಿ ಹೇಮಾ ಮಾಲಿನಿ ನ್ಯಾನೋ ಖರೀದಿಸುವುದರೊಂದಿಗೆ ದೇಶದ ಅತಿ ದೊಡ್ಡ ಟಾಟಾ ಸಂಸ್ಥೆಗೆ ಭಾರಿ ಪ್ರಚಾರ ಲಭಿಸಿದಂತಾಗಿದೆ. ಇದು ಮತ್ತಷ್ಟು ಮಾರಾಟ ಗುರಿ ಸಾಧಿಸಲು ಟಾಟಾಗೆ ನೆರವಾಗಲಿದೆ.

ಅಷ್ಟಕ್ಕೂ ಜೆನ್ ಎಕ್ಸ್ ನ್ಯಾನೋದಲ್ಲಿ ಅಂಥದೇನಿದೆ? ಸಂಪೂರ್ಣ ಚಾಲನಾ ವಿಮರ್ಶೆ ಓದಲು ಮರೆಯದಿರಿ


Click it and Unblock the Notifications








