4 ಸೆಕೆಂಡುಗಳಲ್ಲಿ 100 ಕೀ.ಮೀ ವೇಗ ಪಡೆದುಕೊಂಡ ಜೀಪ್
ನಾವಿಂದು ಜೀಪ್‌ವೊಂದನ್ನು ಪರಿಚಯಿಸಿಕೊಡಲಿದ್ದು, ಕೇವಲ 4 ಸೆಕೆಂಡುಗಳಲ್ಲಿ 100 ಕೀ.ಮೀ. ವೇಗವರ್ಧಿಸಿಕೊಳ್ಳುವ ಸಾಮರ್ಥ್ಯ ಹೊಂದಿದೆ. ಹೌದು, ಸಾಮಾನ್ಯವಾಗಿ ಆಫ್ ರೋಡ್ ಗಾಡಿಗಳು ಅಷ್ಟು ವೇಗವಾಗಿ ಚಲಿಸುವುದಿಲ್ಲ. ಆದರೆ ಜೀಪ್ ಗ್ರಾಂಡ್ ಕೆರೊಕೆ ಕೇವಲ ನಾಲ್ಕು ಸೆಕೆಂಡುಗಳಲ್ಲಿ 100 ಕೀ.ಮೀ. ವೇಗವರ್ಧಿಸುವ ಮೂಲಕ ಗಮನ ಸೆಳೆದಿದೆ.
ಡ್ರಾಗ್ ರೇಸ್‌ನಲ್ಲಿ ಈ ಸಾಧನೆ ದಾಖಲಾಗಿದ್ದರೂ ಸಹ ಉತ್ತಮ ವೇಗತೆ ಕಾಪಾಡಿಕೊಳ್ಳಲು ಜೀಪ್‌ಗೆ ಸಾಧ್ಯವಾಗಿದೆ. ನಿಮಗೆಲ್ಲರಿಗೂ ತಿಳಿದಿದ್ದ ಹಾಗೆ 2014ರಲ್ಲಿ ಜೀಪ್ ಗ್ರಾಂಡ್ ಕೆರೊಕೆ ಎಸ್‌ಆರ್‌ಟಿ ಆಗಮನವಾಗಲಿದೆ. ಈ 6.4 ಲೀಟರ್ ಹೆಮಿ ವಿ8 ಎಸ್‌ಯುವಿ ವಾಹನ 470 ಹಾರ್ಸ್ ಪವರ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.
ಆದರೆ ಜೀಪ್ ಗ್ರಾಂಡ್ ಕೆರೊಕೆಯಲ್ಲಿ ಹೆನ್ನೆಸ್ಸೆ ಎಚ್‌ಪಿಇ650 ಪ್ಯಾಕೇಜ್ ಆಳವಡಿಸಿದ ಬಳಿಕ ಜೀಪ್‌ಗೆ ಇನ್ನಷ್ಟು ಸೂಪರ್ ಪವರ್ ಬಂದಂತಾಗಿದೆ. ಇದರೊಂದಿಗೆ ಜೀಪ್ 390 ಎಸ್‌ಆರ್‌ಟಿ8 ನಾಲ್ಕು ಸೆಕೆಂಡುಗಳಲ್ಲಿ ಗುರಿ ತಲುಪಿದೆ.

4 ಸೆಕೆಂಡುಗಳಲ್ಲಿ 100 ಕೀ.ಮೀ ವೇಗ ಪಡೆದುಕೊಂಡ ಜೀಪ್








ವೀಡಿಯೋ ವೀಕ್ಷಿಸಿ


Click it and Unblock the Notifications