ಭಾರತದ ರಸ್ತೆಗಳಲ್ಲಿ ನಿತ್ಯ ನಡೆಯುವ ಸಾಮಾನ್ಯ ಘಟನೆಗಳಿವು..!

ಭಾರತದ ರಸ್ತೆಗಳಲ್ಲಿ ಪ್ರಪಂಚದ ಬೇರೆ ಯಾವುದೇ ದೇಶಗಳಲ್ಲಿ ನಡೆಯುವುದಕ್ಕಿಂತ ಹೆಚ್ಚಿನ ಸಂಖ್ಯೆಯ ಅಪಘಾತಗಳು ನಡೆಯುತ್ತವೆ. ಅಂಕಿ ಅಂಶಗಳ ಪ್ರಕಾರ ಪ್ರತಿ ವರ್ಷ ಭಾರತದಲ್ಲಿ ಸಂಭವಿಸುವ ರಸ್ತೆ ಅಪಘಾತಗಳಲ್ಲಿ 1.50 ಲಕ್ಷಕ್ಕೂ ಹೆಚ್ಚಿನ ಜನರು ಸಾವನ್ನಪ್ಪುತ್ತಿದ್ದಾರೆ.

ಭಾರತದ ರಸ್ತೆಗಳಲ್ಲಿ ನಿತ್ಯ ನಡೆಯುವ ಸಾಮಾನ್ಯ ಘಟನೆಗಳಿವು..!

ವಾಹನ ಸವಾರರು ಸಂಚಾರಿ ನಿಯಮಗಳನ್ನು ಉಲ್ಲಂಘಿಸುವುದು ಇದಕ್ಕೆ ಪ್ರಮುಖ ಕಾರಣ. ಬೇರೆ ದೇಶಗಳಲ್ಲಿ ವಾಹನ ಸವಾರರು ಸಂಚಾರಿ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುತ್ತಾರೆ. ಆದರೆ ಭಾರತದಲ್ಲಿನ ವಾಹನ ಸವಾರರು ಇದರ ಬಗ್ಗೆ ತಲೆ ಕೆಡಿಸಿಕೊಳ್ಳುವುದೇ ಇಲ್ಲ. ವಾಹನ ಸವಾರರು ಮಾತ್ರವಲ್ಲದೇ ಪಾದಚಾರಿಗಳೂ ಸಹ ನಿಯಮಗಳನ್ನು ಉಲ್ಲಂಘಿಸುತ್ತಾರೆ.

ಭಾರತದ ರಸ್ತೆಗಳಲ್ಲಿ ನಿತ್ಯ ನಡೆಯುವ ಸಾಮಾನ್ಯ ಘಟನೆಗಳಿವು..!

ಈ ರೀತಿಯ ದೃಶ್ಯಗಳನ್ನು ಭಾರತದ ರಸ್ತೆಗಳಲ್ಲಿ ಕಾಣಬಹುದು. ಯಾವ ರೀತಿಯ ಘಟನೆಗಳನ್ನು ಭಾರತದ ರಸ್ತೆಗಳಲ್ಲಿ ಕಾಣಬಹುದು ಎಂಬುದನ್ನು ಈ ಲೇಖನದಲ್ಲಿ ನೋಡೋಣ. ನೀವೂ ಸಹ ಈ ರೀತಿಯ ದೃಶ್ಯಗಳನ್ನು ನೋಡಿರಬಹುದು.

ಭಾರತದ ರಸ್ತೆಗಳಲ್ಲಿ ನಿತ್ಯ ನಡೆಯುವ ಸಾಮಾನ್ಯ ಘಟನೆಗಳಿವು..!

ವಾಹನಗಳು ಬರುತ್ತಿರುವಾಗಲೇ ಕೆಲವು ಪಾದಚಾರಿಗಳು ರಸ್ತೆ ಮಧ್ಯೆದಲ್ಲಿಯೇ ನಡೆದುಕೊಂಡು ಹೋಗುತ್ತಾರೆ. ವೇಗವಾಗಿ ಬರುತ್ತಿರುವ ವಾಹನಗಳಿಗೆ ಕೈತೋರಿಸಿ ನಿಲ್ಲಿಸುವಂತೆ ಅಥವಾ ನಿಧಾನ ಮಾಡುವಂತೆ ಹೇಳುತ್ತಾರೆ. ಯಾರೋ ವಿ‍ಐ‍‍ಪಿ ರಸ್ತೆಯಲ್ಲಿ ಹೋಗುತ್ತಿರುವಂತಹ ದೃಶ್ಯವನ್ನು ಸೃಷ್ಟಿಸುತ್ತಾರೆ.

ಭಾರತದ ರಸ್ತೆಗಳಲ್ಲಿ ನಿತ್ಯ ನಡೆಯುವ ಸಾಮಾನ್ಯ ಘಟನೆಗಳಿವು..!

ಈ ಜನರು ರಸ್ತೆ ಬದಿಯಲ್ಲಿರುವ ಫುಟ್‍‍ಪಾತ್‍‍ಗಳನ್ನು ಪರಿಗಣಿಸುವುದೇ ಇಲ್ಲ. ರಸ್ತೆ ಇರುವುದು ನಡೆದಾಡುವುದಕ್ಕೋಸ್ಕರ ಎಂಬಂತೆ ನಡೆದುಕೊಳ್ಳುತ್ತಾರೆ. ಇನ್ನು ಕೆಲವು ವಾಹನ ಸವಾರರು ಟ್ರಾಫಿಕ್ ಜಾಮ್‍‍ನಲ್ಲಿ ಸಿಲುಕಿಕೊಂಡಾಗ ಫುಟ್‍‍ಪಾತ್‍‍ಗಳ ಮೇಲೆಯೇ ವಾಹನ ಚಾಲನೆ ಮಾಡಿಕೊಂಡು ಹೋಗುತ್ತಾರೆ.

ಭಾರತದ ರಸ್ತೆಗಳಲ್ಲಿ ನಿತ್ಯ ನಡೆಯುವ ಸಾಮಾನ್ಯ ಘಟನೆಗಳಿವು..!

ಫುಟ್‍‍ಪಾತ್ ಇರುವುದು ವಾಹನ ಚಾಲನೆ ಮಾಡಲು ಎಂಬುದು ಅವರ ಭಾವನೆಯಾಗಿರುವಂತಿದೆ. ಈ ರೀತಿಯ ಜನರಿಂದಾಗಿ ಫುಟ್‍‍ಪಾತ್ ಯಾವುದು, ರಸ್ತೆ ಯಾವುದು ಎಂಬುದು ತಿಳಿಯದಂತಾಗುತ್ತದೆ. ಇದರ ಜೊತೆಗೆ ವ್ಯಾಪಾರಿಗಳು ಫುಟ್‍‍ಪಾತ್ ಜೊತೆಗೆ ಕೆಲವೊಮ್ಮೆ ಅರ್ಧ ರಸ್ತೆಯನ್ನೇ ಆಕ್ರಮಿಸಿಕೊಂಡಿರುತ್ತಾರೆ.

ಭಾರತದ ರಸ್ತೆಗಳಲ್ಲಿ ನಿತ್ಯ ನಡೆಯುವ ಸಾಮಾನ್ಯ ಘಟನೆಗಳಿವು..!

ಇನ್ನು ರಸ್ತೆ ದಾಟುವ ಪಾದಚಾರಿಗಳ ಬಗ್ಗೆ ಹೇಳುವುದಾದರೆ, 4ರಿಂದ 5 ಜನರು ಒಟ್ಟೊಟ್ಟಿಗೆ ರಸ್ತೆ ದಾಟುತ್ತಾರೆ. ಒಬ್ಬರಾದ ನಂತರ ಒಬ್ಬರು ರಸ್ತೆ ದಾಟುವುದಿಲ್ಲ. ಬದಲಿಗೆ ಗುಂಪಾಗಿ ಯಾರನ್ನೋ ಹೊಡೆಯಲು ಹೋಗುವವರಂತೆ ಹೋಗುತ್ತಾರೆ.

ಭಾರತದ ರಸ್ತೆಗಳಲ್ಲಿ ನಿತ್ಯ ನಡೆಯುವ ಸಾಮಾನ್ಯ ಘಟನೆಗಳಿವು..!

ಎಡಭಾಗದ ಇಂಡಿಕೇಟರ್ ಅನ್ನು ಆನ್ ಮಾಡಿ, ಬಲಭಾಗಕ್ಕೆ ವಾಹನವನ್ನು ತಿರುಗಿಸುವಂತಹ ಘಟನೆಗಳು ಕೇವಲ ಭಾರತದಲ್ಲಿ ಮಾತ್ರ ನಡೆಯಲು ಸಾಧ್ಯ. ಏನಾದರೂ ಅವಘಡ ಸಂಭವಿಸಿದರೆ, ತಕ್ಷಣವೇ ಸರಿಯಾದ ಕಡೆಗೆ ಇಂಡಿಕೇಟರ್ ತಿರುಗಿಸುತ್ತಾರೆ.

ಭಾರತದ ರಸ್ತೆಗಳಲ್ಲಿ ನಿತ್ಯ ನಡೆಯುವ ಸಾಮಾನ್ಯ ಘಟನೆಗಳಿವು..!

ಸಿಗ್ನಲ್ ಟೈಮರ್‍‍ನಲ್ಲಿ ಗ್ರೀನ್ ಲೈಟ್ ಬರಲು ಕೆಲವೇ ಸೆಕೆಂಡುಗಳಿರುವಾಗ ಸಿಗ್ನಲ್‍‍ನಲ್ಲಿ ನಿಂತಿರುವವರು ಪ್ರತಿಯೊಬ್ಬರೂ ಫಾರ್ಮುಲಾ 1 ರೇಸಿಗೆ ಹೊರಟವರಂತೆ ಎಂಜಿನ್ ಆನ್ ಮಾಡಿ ತಮ್ಮ ವಾಹನಗಳನ್ನು ಉರ್... ಉರ್ ಎಂದು ಶಬ್ದ ಮಾಡುತ್ತಾರೆ.

ಭಾರತದ ರಸ್ತೆಗಳಲ್ಲಿ ನಿತ್ಯ ನಡೆಯುವ ಸಾಮಾನ್ಯ ಘಟನೆಗಳಿವು..!

ಈ ಶಬ್ದದಿಂದ ರಸ್ತೆಯಲ್ಲಿರುವವರ ಕಿವಿ ತಮಟೆ ಹೊಡೆದು ಹೋಗುವುದು ಗ್ಯಾರಂಟಿ. ಗ್ರೀನ್ ಲೈಟ್ ಬಿದ್ದ ತಕ್ಷಣ ಜೋರಾಗಿ ಹಾರ್ನ್ ಮಾಡಬೇಕೆಂಬ ಅಲಿಖಿತ ನಿಯಮವಿದೆ ಎಂಬಂತೆ ಪ್ರತಿಯೊಬ್ಬರೂ ಹಾರ್ನ್ ಮಾಡುತ್ತಲೇ ವಾಹನ ಚಲಾಯಿಸುತ್ತಾರೆ.

ಭಾರತದ ರಸ್ತೆಗಳಲ್ಲಿ ನಿತ್ಯ ನಡೆಯುವ ಸಾಮಾನ್ಯ ಘಟನೆಗಳಿವು..!

ಯಾವುದಾದರೂ ವಾಹನಕ್ಕೆ ಗುದ್ದಿದರೆ, ಗುದ್ದಿದವರೇ ಬೇರೆ ವಾಹನದವರ ಮೇಲೆ ಜಗಳಕ್ಕೆ ಹೋಗುತ್ತಾರೆ. ತಪ್ಪು ತಮ್ಮದೇ ಆಗಿದ್ದರೂ ಸಹ ಮತ್ತೊಬ್ಬರ ಮೇಲೆ ಜಗಳಕ್ಕೆ ಹೋಗುವುದು ಭಾರತದಲ್ಲಿ ಮಾತ್ರ ನಡೆಯಲು ಸಾಧ್ಯ.

ಭಾರತದ ರಸ್ತೆಗಳಲ್ಲಿ ನಿತ್ಯ ನಡೆಯುವ ಸಾಮಾನ್ಯ ಘಟನೆಗಳಿವು..!

ಈ ಘಟನೆಗಳನ್ನು ಕಾಮಿಡಿಯಾಗಿ ನೋಡದೇ ಸರಿಯಾದ ಸಂಚಾರಿ ನಿಯಮಗಳನ್ನು ಪಾಲಿಸಿದರೆ, ಅಪಘಾತಗಳನ್ನು ತಡೆಗಟ್ಟಬಹುದು. ಸಂಚಾರಿ ನಿಯಮಗಳ ಉಲ್ಲಂಘನೆಗಾಗಿ ಕೇಂದ್ರ ಸರ್ಕಾರವು ಭಾರೀ ಪ್ರಮಾಣದ ದಂಡವನ್ನು ವಿಧಿಸುತ್ತಿದೆ. ಜನರ ಮನಸ್ಥಿತಿ ಬದಲಾಗುವವರೆಗೂ ಯಾವುದೇ ಕಾನೂನು ಪರಿಣಾಮ ಬೀರುವುದಿಲ್ಲ.

ಸೂಚನೆ: ಈ ಚಿತ್ರಗಳನ್ನು ರೆಫೆರೆನ್ಸ್ ಗಾಗಿ ಬಳಸಲಾಗಿದೆ.

Most Read Articles

Kannada
English summary
Things happen on Indian Roads. Read in Kannada.
Story first published: Friday, January 31, 2020, 11:20 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X