Just In
- 1 hr ago
ಜನಪ್ರಿಯ ನಟನ ಮನೆಗೆ ಕಥೆ ಹೇಳಲು ಹೋಗಿ ಆತನ ದುಬಾರಿ ಕಾರ್ ಓಡಿಸಿಬಂದ ನಿರ್ದೇಶಕ...
- 1 hr ago
ಭಾರತದಲ್ಲಿ ಸುಜುಕಿಯ ಮೊದಲ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಯಾವಾಗ? ಅತಿ ಹೆಚ್ಚು ರೇಂಜ್ ಕೊಡಲಿದೆಯಂತೆ..!
- 1 hr ago
ಹೊಸ ಬೈಕ್ ಖರೀದಿಸಿ ಜಾಲಿ ರೈಡ್ ಮಾಡಿ ಖುಷಿ ಪಟ್ಟ ಜನಪ್ರಿಯ ಕಿರುತೆರೆ ನಟಿ
- 2 hrs ago
ಭಾರತದಲ್ಲಿ ಮೊದಲ ಬಾರಿಗೆ 2.5 ಕೋಟಿ ಕಾರುಗಳ ಮಾರಾಟ ಮೈಲಿಗಲ್ಲು ಸಾಧಿಸಿದ ಜನಪ್ರಿಯ ಕಂಪನಿ
Don't Miss!
- Sports
WPL Auction 2023: ದುಬಾರಿ ಮೊತ್ತಕ್ಕೆ ಹರಾಜಾಗಬಹುದಾದ ಐವರು ಆಟಗಾರರು
- News
ಬೆಂಗಳೂರಿನ ಜೆಪಿ ನಗರದಲ್ಲಿ ದುರಂತ: ಈಜುಕೊಳದಲ್ಲಿ ಮುಳುಗಿ ಮೃತಪಟ್ಟ ಬಾಲಕರು, ಕೋಚ್ ಬಂಧನ
- Technology
ನೀವು ಎಸ್ಬಿಐ ಗ್ರಾಹಕರೇ?... ಯುಪಿಐ ಪೇಮೆಂಟ್ ಮಾಡುವಾಗ ಈ ಅಂಶಗಳ ಬಗ್ಗೆ ಎಚ್ಚರವಹಿಸಿ!
- Finance
Economic Survey: ನವೆಂಬರ್ವರೆಗೆ 135.2 ಕೋಟಿ ಆಧಾರ್ ಸಂಖ್ಯೆ ಜನರೇಟ್, 12-ಡಿಜಿಟ್ ಪ್ರಾಮುಖ್ಯತೆ ತಿಳಿಯಿರಿ
- Movies
ಆದಿಯನ್ನು ಭೇಟಿಯಾದ ಪ್ರೀತಮ್ ನಡೆಗೆ ಕೆರಳಿದ ಅಖಿಲಾಂಡೇಶ್ವರಿ?
- Lifestyle
ಫೆ.1ಕ್ಕೆ ಜಯ ಏಕಾದಶಿ: ಈ ರೀತಿ ಮಾಡಿದರೆ ದಾರಿದ್ರ್ಯ ಹೋಗಿ ಸಂಪತ್ತು ವೃದ್ಧಿಸುವುದು
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ದುಬಾರಿ ಬೆಲೆಯ ಸೂಪರ್‌ಬೈಕ್‌ಗಳನ್ನು ಹೊಂದಿರುವ ಪೊಲೀಸ್ ಕಾನ್ಸ್‌ಟೇಬಲ್‌ಗಳು
ಪೊಲೀಸರು ಸೂಪರ್‌ಬೈಕ್‌ಗಳನ್ನು ತಡೆದು ನಿಲ್ಲಿಸುವ ವಿಡಿಯೋ ಚಿತ್ರಗಳು ಮತ್ತು ವೀಡಿಯೊಗಳನ್ನು ಸೋಷಿಯಲ್ ಮೀಡಿಯಾಗಳಲ್ಲಿ ಅಗಾಗ ನೋಡುತ್ತೇವೆ. ಸೂಪರ್‌ಬೈಕ್‌ಗಳು ಹೆಚ್ಚು ಶಬ್ದ ಮಾಡುವಎ ಕ್ಸಾಸ್ಟ್ ಅಥವಾ ಅತಿವೇಗದ ಚಾಲನೆಗಾಗಿ ಕ್ರಮ ತೆಗೆದುಕೊಳ್ಳುತ್ತಾರೆ. ಪೊಲೀಸರು ಸೂಪರ್‌ಬೈಕ್‌ಗಳನ್ನು ನಿಲ್ಲಿಸಿ ಪೋಟೋಗಳಿಗೆ ಪೋಸ್ ಕೊಡುವ ವೀಡಿಯೊಗಳನ್ನು ಸಹ ನಾವು ನೋಡುತ್ತೇವೆ.
ರಸ್ತೆಯಲ್ಲಿ ಸೂಪರ್‌ಬೈಕ್‌ಗಳು ಹೋಗುತ್ತಿದ್ದರೆ ಎಲ್ಲಾರ ಕಣ್ಣು ಅದರ ಮೇಲೆ ಇರುತ್ತದೆ. ಇಂತಹ ಬೈಕ್‌ಗಳು ರಸ್ತೆಯಲ್ಲಿ ಅಪರೂಪ. ಆದರೆ ನಗರ ಪ್ರದೇಶಗಳಲ್ಲಿ ಸೂಪರ್‌ಬೈಕ್‌ಗಳ ಸಂಖ್ಯೆ ಹೆಚ್ಚಾಗುತ್ತಿದೆ. ಕೇರಳದ ಇಬ್ಬರು ಪೊಲೀಸರು ಟ್ರಯಂಫ್ ಡೇಟೋನಾ 675 ಮತ್ತು ಕವಾಸಕಿ Z800 ನಂತಹ ಸೂಪರ್‌ಬೈಕ್‌ಗಳನ್ನು ಹೊಂದಿದ್ದಾರೆ. copsrider ಮತ್ತು cjogg ಅವರು ತಮ್ಮ ಸ್ವಂತ ಸೂಪರ್‌ಬೈಕ್‌ಗಳೊಂದಿಗೆ ಪೋಸ್ ಮಾಡುತ್ತಿರುವ ಚಿತ್ರವನ್ನು Instagram ನಲ್ಲಿ ಹಂಚಿಕೊಂಡಿದ್ದಾರೆ. ಪೊಲೀಸ್ ಅಧಿಕಾರಿಗಳು ಸೂಪರ್ ಬೈಕ್‌ಗಳೊಂದಿಗೆ ಚಿತ್ರಗಳಿಗೆ ಪೋಸ್ ನೀಡುತ್ತಿರುವ ಹಲವಾರು ಚಿತ್ರಗಳನ್ನು ಪೋಸ್ಟ್ ಮಾಡಿದ್ದಾರೆ.
ಕೇರಳ ಪೊಲೀಸ್ ಪಡೆಯ ಈ ಇಬ್ಬರೂ ಯುವ ಅಧಿಕಾರಿಗಳು ಕೇವಲ ಒಂದಲ್ಲ, ಬಹು ಕಾರ್ಯಕ್ಷಮತೆಯ ಬೈಕ್‌ಗಳನ್ನು ಹೊಂದಿದ್ದಾರೆ. ಅವರು ತಮ್ಮ ಸೋಷಿಯಲ್ ಮೀಡಿಯಾ ಪ್ರೊಫೈಲ್‌ಗಳಲ್ಲಿ ಈ ಮೋಟಾರ್‌ಸೈಕಲ್‌ಗಳ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಈಗ ಅಂತರ್ಜಾಲದಲ್ಲಿ ವೈರಲ್ ಆಗಿರುವ ಈ ಚಿತ್ರದಲ್ಲಿ ಇಬ್ಬರು ಅಧಿಕಾರಿಗಳು ಎರಡು ಟ್ರಯಂಫ್ ಡೇಟೋನಾ 675 ಮೋಟಾರ್‌ಸೈಕಲ್‌ನೊಂದಿಗೆ ಚಿತ್ರಗಳಿಗೆ ಪೋಸ್ ನೀಡಿದ್ದಾರೆ. ಬಿಳಿ ಬಣ್ಣದ ಬೈಕ್ ಡೇಟೋನಾ 675 ಆರ್ ಮತ್ತು ಕಪ್ಪು ಬಣ್ಣವು ಸಾಮಾನ್ಯ ಡೇಟೋನಾ ಆಗಿದೆ.
ಈ ಎರಡೂ ಮೋಟಾರ್‌ಸೈಕಲ್‌ಗಳ ಬೆಲೆ 10 ಲಕ್ಷಕ್ಕಿಂತ ಹೆಚ್ಚು, ಅತ್ಯಂತ ಶಕ್ತಿಶಾಲಿ ಎಂಜಿನ್ ಹೊಂದಿರುವ ಬೈಕ್ ಗಳಾಗಿವೆ. ಇನ್‌ಸ್ಟಾಗ್ರಾಮ್‌ನಲ್ಲಿ ಕಾಪ್ಸ್ರೈಡರ್ ಎಂಬ ಹೆಸರಿನ ಅಧಿಕಾರಿಯ ನಿಜವಾದ ಹೆಸರು ತಿಳಿದಿಲ್ಲ. ಅವರು ತಮ್ಮ Instagram ಪ್ರೊಫೈಲ್‌ನಲ್ಲಿ ಡೇಟೋನಾ 675 ಹೊರತುಪಡಿಸಿ, ಅವರು ಹೋಂಡಾ CB 600RR, ಯಮಹಾ R15 V3, ಹೋಂಡಾ CBR 650F ಮತ್ತು ಹೋಂಡಾ CBR 150F ಅನ್ನು ಹೊಂದಿದ್ದಾರೆ ಎಂದು ಉಲ್ಲೇಖಿಸಿದ್ದಾರೆ.
ಚಿತ್ರದಲ್ಲಿರುವ ಇತರ ಅಧಿಕಾರಿ ಸಿಜೋ ಜಾರ್ಜ್ ಮತ್ತು ಅವರು ಕವಾಸಕಿ Z800 ಮೋಟಾರ್ಸೈಕಲ್ ಅನ್ನು ಹೊಂದಿದ್ದಾರೆ. ಕವಾಸಕಿ Z800 ಮೋಟಾರ್ಸೈಕಲ್ ಅನ್ನು ಭಾರತೀಯ ಮಾರುಕಟ್ಟೆಯಿಂದ ಸ್ಥಗಿತಗೊಳಿಸಲಾಗಿದೆ ಮತ್ತು ಇನ್ನು ಮುಂದೆ ಲಭ್ಯವಿಲ್ಲ. ಈ ಮೋಟಾರ್‌ಸೈಕಲ್‌ನ ಕೊನೆಯ ದಾಖಲಾದ ಬೆಲೆ 7.68 ಲಕ್ಷ, ಎಕ್ಸ್ ಶೋರೂಂ ಆಗಿತ್ತು. ಎರಡೂ ಇನ್‌ಸ್ಟಾಗ್ರಾಮ್ ಪ್ರೊಫೈಲ್‌ನಲ್ಲಿ ಅವರ ಬೈಕ್‌ಗಳ ಹಲವಾರು ಚಿತ್ರಗಳು ಮತ್ತು ವೀಡಿಯೊಗಳಿವೆ ಆದರೆ, ಇಬ್ಬರು ಅಧಿಕಾರಿಗಳು ಸಮವಸ್ತ್ರವನ್ನು ಧರಿಸಿ ಮೋಟಾರ್‌ಸೈಕಲ್‌ನೊಂದಿಗೆ ಪೋಸ್ ಮಾಡುತ್ತಿರುವ ಒಂದೇ ಒಂದು ಚಿತ್ರ ಮಾತ್ರ ಇದೆ,
ಕವಾಸಕಿ Z800 ಬೈಕಿನಲ್ಲಿ 806 cc, ಇನ್-ಲೈನ್ ನಾಲ್ಕು ಸಿಲಿಂಡರ್, ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 111 Bhp ಪವರ್ ಮತ್ತು 83 Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಮೋಟಾರ್‌ಸೈಕಲ್ ಅನ್ನು 6-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ ಜೋಡಿಸಲಾಗಿದೆ ಮತ್ತು ಸ್ಪೋರ್ಟಿ ಎಕ್ಸಾಸ್ಟ್ ನೋಟ್‌ನೊಂದಿಗೆ ಬರುತ್ತದೆ. ಅಕ್ರೊಪೊವಿಕ್‌ನಿಂದ Z800 ನಂತರದ ಮಾರುಕಟ್ಟೆ ಎಕ್ಸಾಸ್ಟ್ ಅನ್ನು ಪಡೆಯುತ್ತದೆ ಎಂದು ಚಿತ್ರಗಳು ತೋರಿಸುತ್ತವೆ.
ಟ್ರಯಂಫ್ ಡೇಟೋನಾ 675s ಬೈಕ್ ಬಗ್ಗೆ ಹೇಳುವುದಾದರೆ, ಬ್ಲ್ಯಾಕ್ ಡೇಟೋನಾ 2018 ರಲ್ಲಿ ಮತ್ತೆ ಸ್ಥಗಿತಗೊಂಡ ಸಾಮಾನ್ಯ ಮಾದರಿಯಾಗಿದೆ. ಮೋಟಾರ್‌ಸೈಕಲ್ 67 5cc, 3-ಸಿಲಿಂಡರ್, ಎಂಜಿನ್‌ನಿಂದ ಚಾಲಿತವಾಗಿದ್ದು. ಈ ಎಂಜಿನ್ 118 ಬಿಹೆಚ್‍ಪಿ ಮತ್ತು 70 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಮೋಟಾರ್‌ಸೈಕಲ್‌ಗಳ ಕೊನೆಯ ದಾಖಲೆಯ ಬೆಲೆ 11.40 ಲಕ್ಷ, ಎಕ್ಸ್ ಶೋರೂಂ ಆಗಿತ್ತು. ಡೇಟೋನಾ ಆರ್ ಹೊಸ ಮಾದರಿಯಾಗಿದ್ದು ಅದು ಮಾರುಕಟ್ಟೆಯಿಂದ ಮೂಲ ಡೇಟೋನಾವನ್ನು ಬದಲಿಸಿದೆ.
ಇದು 675cc, ಮೂರು-ಸಿಲಿಂಡರ್ ಎಂಜಿನ್‌ನಿಂದ ಚಾಲಿತವಾಗಿದ್ದು, ಈ ಎಂಜಿನ್ 126 bhp ಮತ್ತು 74 Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಮೋಟಾರ್‌ಸೈಕಲ್ ಅನ್ನು ಎಕ್ಸ್ ಶೋರೂಂ ಬೆಲೆ 12.39 ಲಕ್ಷ ರೂಪಾಯಿಗಳಲ್ಲಿ ಮಾರಾಟ ಮಾಡಲಾಗಿದೆ. ಈ ಮೋಟಾರ್‌ಸೈಕಲ್ ಅನ್ನು ಸಹ ಮಾರುಕಟ್ಟೆಯಿಂದ ಸ್ಥಗಿತಗೊಳಿಸಲಾಗಿದೆ. copsrider ಮತ್ತು cjogg ಬೈಕ್ ಕ್ರೇಜ್ ಹೊಂದಿರುವ ಯುವ ಅಧಿಕಾರಿಗಳಾಗಿದ್ದಾರೆ. ಈ ಅಧಿಕಾರಿಗಳ ಸೂಪರ್‌ಬೈಕ್‌ಗಳ ಚಿತ್ರಗಳು ಸೋಷಿಯಲ್ ಮೀಡಿಯಾಗಳಲ್ಲಿ ಸಖತ್ ವೈರಲ್ ಆಗಿದೆ.