ನಟ ಸಲ್ಮಾನ್ ಖಾನ್ ಕಾಣಿಸಿಕೊಂಡಿದ್ದ ಹೀರೋ ಹೋಂಡಾ ಸಿಡಿ100 ಬೈಕಿನ ಅಪರೂಪದ ಜಾಹೀರಾತಿದು

ಬ್ರ್ಯಾಂಡ್‌ಗಳತ್ತ ಗ್ರಾಹಕರನ್ನು ಆಕರ್ಷಿಸಲು ಜಾಹೀರಾತು ಒಂದು ಉತ್ತಮ ವಿಧಾನವಾಗಿದೆ. ಭಾರತೀಯ ಮಾರುಕಟ್ಟೆಯ ದ್ವಿಚಕ್ರ ವಾಹನಗಳ ಇತಿಹಾಸದಲ್ಲಿ ಹಲವು ದ್ವಿಚಕ್ರ ವಾಹನಗಳು ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ. ಇದರ ಕೆಲವು ವಾಹನಗಳು ಜಾಹೀರಾತಿನಿಂದ ನಮ್ಮ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದುಕೊಂಡಿದೆ.

ನಟ ಸಲ್ಮಾನ್ ಖಾನ್ ಕಾಣಿಸಿಕೊಂಡಿದ್ದ ಹೀರೋ ಹೋಂಡಾ ಸಿಡಿ100 ಬೈಕಿನ ಅಪರೂಪದ ಜಾಹೀರಾತಿದು

ಇದಕ್ಕೆ ಒಂದು ಉದಾಹರಣೆ ಎಂದರೆ ಹಮರಾ ಬಜಾಜ್ ಜಾಹೀರಾತು ಆಗಿದೆ. ಹಮರಾ ಬಜಾಜ್ ಎಂದ ತಕ್ಷಣ ಹಲವರ ಮನಸ್ಸಿಗೆ ಐಕಾನಿಕ್ ಚೇತಕ್ ಸ್ಕೂಟರ್ ನೆನಪಾಗುತ್ತದೆ. ಇದೇ ರೀತಿ ಹಲವು ಜಾಹೀತಿರಾತಿಗಳಿವೆ. ಇನ್ನು ಬಾಲಿವುಡ್ ನಟ ಸಲ್ಮಾನ್ ಖಾನ್ ಅವರು ನಟಿಸಿರುವ ಹೋಂಡಾ ಸಿಡಿ100 ಜಾಹೀರಾತು ಕೂಡ ಸಾಕಷ್ಟು ಜನಪ್ರಿಯತೆಯನ್ನು ಗಳಿಸಿಕೊಂಡಿತು. ಈ ಹೀರೋ ಹೋಂಡಾ ಸಿಡಿ100 ಬೈಕ್ ಭಾರತದಲ್ಲಿ ಕೈಗೆಟುಕುವ ದರದಲ್ಲಿ ಲಭ್ಯವಾದ ಮೊದಲ 4-ಸ್ಟ್ರೋಕ್ ಬೈಕ್ ಆಗಿದೆ.

ನಟ ಸಲ್ಮಾನ್ ಖಾನ್ ಕಾಣಿಸಿಕೊಂಡಿದ್ದ ಹೀರೋ ಹೋಂಡಾ ಸಿಡಿ100 ಬೈಕಿನ ಅಪರೂಪದ ಜಾಹೀರಾತಿದು

ಈ ಜಾಹೀರಾತು ಬಿಡುಗಡೆಯಾದ ವರ್ಷ 1985 ಆಗಿದೆ, ಹೀರೋ ಹೋಂಡಾ ಸಿಡಿ100 ಬೈಕಿನ ಜಾಹೀರಾತಿನಲ್ಲಿ ಸಲ್ಮಾನ್ ಖಾನ್ ನಟಿಸಿದಾಗ ಹೆಚ್ಚುವರಿ ಮಾರಾಟವಾಗಲು ಸಹಕಾರಿಯಾಗಿದೆ. ಜಾಹೀರಾತಿನಲ್ಲಿ ಭಾರತದ ಅತ್ಯಂತ ಇಂಧನ-ಸಮರ್ಥ ಬೈಕ್ ಎಂದು ಪ್ರಚಾರ ಮಾಡಲಾಯಿತು.

MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍‍ಮಾಸ್ಟರ್ ಬೈಕ್

ನಟ ಸಲ್ಮಾನ್ ಖಾನ್ ಕಾಣಿಸಿಕೊಂಡಿದ್ದ ಹೀರೋ ಹೋಂಡಾ ಸಿಡಿ100 ಬೈಕಿನ ಅಪರೂಪದ ಜಾಹೀರಾತಿದು

ಸಿಡಿ100 ಬೈಕಿನಲ್ಲಿ ಫುಲ್ ಟ್ಯಾಂಕ್ ಮಾಡಿದರೆ 400 ಕಿ.ಮೀ ಪ್ರಯಾಣಿಸುತ್ತದೆ ಮತ್ತು ಅದರಲ್ಲಿ ಇನ್ನೂ ಸ್ವಲ್ಪ ಇಂಧನ ಉಳಿದಿದೆ ಎಂದು ಜಾಹೀರಾತಿನಲ್ಲಿ ತಿಳಿಸಿದೆ. ಹೀರೋ ಹೋಂಡಾ ಸಿಡಿ100 ಬೈಕ್ ಗಾಗಿ ಸಲ್ಮಾನ್ ಖಾನ್ ಒಟ್ಟು 3 ಜಾಹೀರಾತುಗಳನ್ನು ಮಾಡಿದ್ದಾರೆ.

ನಟ ಸಲ್ಮಾನ್ ಖಾನ್ ಕಾಣಿಸಿಕೊಂಡಿದ್ದ ಹೀರೋ ಹೋಂಡಾ ಸಿಡಿ100 ಬೈಕಿನ ಅಪರೂಪದ ಜಾಹೀರಾತಿದು

ಸಿಡಿ100 ಪಟ್ಟಣದ ಅತ್ಯಂತ ಪರಿಣಾಮಕಾರಿ ಬೈಕ್ ಹೇಗೆ ಎಂಬುದರ ಕುರಿತು ಮಾತನಾಡುವ ಒಂದೇ ಹಾಡನ್ನು ಜಾಹೀರಾತಿನಲ್ಲಿ ಒಳಗೊಂಡಿದೆ. ಈ ಬೈಕ್ ಹೆಚ್ಚು ಮೈಲೇಜ್‌ಗೆ ಹೆಸರುವಾಸಿಯಾಗಿದೆ ಎಂಬುದು ನಿಜ. ಈ ಬೈಕ್ ಪ್ರತಿ ಲೀಟರ್‌ಗೆ 80 ಕಿ.ಮೀ ಮೈಲೇಜ್ ನೀಡುತ್ತದೆ.

MOST READ: ಹೊಸ ಹೀರೋ ಎಕ್ಸ್‌ಟ್ರಿಮ್ 160ಆರ್ 100 ಮಿಲಿಯನ್ ಎಡಿಷನ್ ಬಿಡುಗಡೆ

ನಟ ಸಲ್ಮಾನ್ ಖಾನ್ ಕಾಣಿಸಿಕೊಂಡಿದ್ದ ಹೀರೋ ಹೋಂಡಾ ಸಿಡಿ100 ಬೈಕಿನ ಅಪರೂಪದ ಜಾಹೀರಾತಿದು

ಭಾರತದಲ್ಲಿ ಹಲವರಿಗೆ ಇದು ತಮ್ಮ ಮೊದಲ ಬೈಕ್ ಆಗಿದೆ. ಏಕೆಂದರೆ ಇದು ಸ್ಪರ್ಧಿಗಳಿಗೆ ಹೋಲಿಸಿದರೆ ಕೈಗೆಟುಕುವ ದರದಲ್ಲಿ ಮಾರಾಟವಾಗುತ್ತಿತ್ತು. ಸಿಡಿ100 ಬೈಕ್ ವಿಶ್ವಾಸಾರ್ಹ ಎಂಜಿನ್, ಹೆಚ್ಚು ಮೈಲೇಜ್, ಉತ್ತಮ ಸವಾರಿ ಗುಣಮಟ್ಟ ಮತ್ತು ಕೈಗೆಡುಕುವ ದರಕ್ಕೆ ಹೆಚ್ಚು ಜನಪ್ರಿಯತೆಯನ್ನು ಗಳಿಸಿತು.

ನಟ ಸಲ್ಮಾನ್ ಖಾನ್ ಕಾಣಿಸಿಕೊಂಡಿದ್ದ ಹೀರೋ ಹೋಂಡಾ ಸಿಡಿ100 ಬೈಕಿನ ಅಪರೂಪದ ಜಾಹೀರಾತಿದು

ಹೀರೋ ಹೋಂಡಾ ಸಿಡಿ100 ಬೈಕ್ ಸರಳವಾದ ವಿನ್ಯಾಸವನ್ನು ಹೊಂದಿತ್ತು. ಈ ಬೈಕಿನಲ್ಲಿ 18 ಇಂಚಿನ ವ್ಹೀಲ್ ಗಳನ್ನು ಅಳವಡಿಸಲಾಗಿತ್ತು. ಇದರಲ್ಲಿ ಚದರ ಆಕಾರದ ಹ್ಯಾಲೊಜೆನ್ ಹೆಡ್‌ಲ್ಯಾಂಪ್ ಮತ್ತು ಅನಲಾಗ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಹೊಂದಿತ್ತು.

MOST READ: ಯೂನಿಕಾರ್ನ್ ಬೈಕಿನ ಬೆಲೆ ಹೆಚ್ಚಿಸಿದ ಹೋಂಡಾ ಮೋಟಾರ್‌ಸೈಕಲ್

ನಟ ಸಲ್ಮಾನ್ ಖಾನ್ ಕಾಣಿಸಿಕೊಂಡಿದ್ದ ಹೀರೋ ಹೋಂಡಾ ಸಿಡಿ100 ಬೈಕಿನ ಅಪರೂಪದ ಜಾಹೀರಾತಿದು

ಈ ಹೋಂಡಾ ಸಿಡಿ100 ಬೈಕಿನ ಬ್ರೇಕಿಂಗ್ ಸಿಸ್ಟಂ ಹೇಳುವುದಾದರೆ ಮುಂಭಾಗ ಮತ್ತು ಹಿಂಭಾಗದಲ್ಲಿ ಡ್ರಮ್ ಬ್ರೇಕ್ ಗಳನ್ನು ನೀಡಿದ್ದರು. ಸಿಡಿ100 ಬೈಕ್ ಒಟ್ಟು 116 ಕೆಜಿ ತೂಕವಿತ್ತು. ಇನ್ನು ಇದರ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ ಹೈಡ್ರಾಲಿಕ್ ಟೆಲಿಸ್ಕೋಪಿಕ್ ಫೋರ್ಕ್‌ಗಳು ಮತ್ತು ಹಿಂಭಾಗದಲ್ಲಿ ಹೈಡ್ರಾಲಿಕ್ ಡ್ಯಾಂಪರ್‌ಗಳನ್ನು ಒಳಗೊಂಡಿತ್ತು.

ಹೋಂಡಾ ಸಿಡಿ100 ಬೈಕಿನಲ್ಲಿ 97 ಸಿಸಿ, 4-ಸ್ಟ್ರೋಕ್, ಎಸ್‌ಒಹೆಚ್‌ಸಿ, ಸಿಂಗಲ್ ಸಿಲಿಂಡರ್ ಪೆಟ್ರೋಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಟ್ಟಿತು. ಎಂಜಿನ್ 8,000 ಆರ್‌ಪಿಎಂನಲ್ಲಿ 7.5 ಬಿಎಚ್‌ಪಿ ಪವರ್ ಮತ್ತು 5,000 ಆರ್‌ಪಿಎಂನಲ್ಲಿ 7.2 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 4-ಸ್ಪೀಡ್ ಕಾನ್ಸ್ಟಂಟ್ ಮೆಶ್ ಗೇರ್ ಬಾಕ್ಸ್ ಅನ್ನು ನೀಡಲಾಗಿತ್ತು.

ನಟ ಸಲ್ಮಾನ್ ಖಾನ್ ಕಾಣಿಸಿಕೊಂಡಿದ್ದ ಹೀರೋ ಹೋಂಡಾ ಸಿಡಿ100 ಬೈಕಿನ ಅಪರೂಪದ ಜಾಹೀರಾತಿದು

ಆದರೆ ಈಗ ಹೀರೋ ಹೋಂಡಾ ತಮ್ಮ ಪಾಲುದಾರಿಕೆಯನ್ನು ಹೊಂದಿಲ್ಲ. ಎರಡು ಸ್ವತಂತ್ರ ಸಂಸ್ಥೆಗಳಾಗಿ ಕಾರ್ಯನಿರ್ವಹಿಸುತ್ತಿದೆ. ಹೀರೋ ಮೊಟೊಕಾರ್ಪ್ ಮತ್ತು ಹೋಂಡಾ ಟೂ ವ್ಹೀಲರ್ಸ್ ಆಗಿದೆ. ಎರಡು ದ್ವಿಚಕ್ರ ವಾಹನ ತಯಾರಕ ಕಂಪನಿಗಳು ಭಾರತೀಯ ಮಾರುಕಟ್ಟೆಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

Most Read Articles

Kannada
English summary
Rare Hero Honda CD100 AD With Salman Khan. Read In Kannada.
Story first published: Saturday, May 1, 2021, 10:00 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X