Hero Motocorp ಅಧ್ಯಕ್ಷ ಪವನ್ ಮುಂಜಾಲ್ ವಿರುದ್ಧ ಕೇಸ್: ನಖಲಿ ಬಿಲ್ ನೀಡಿ ವಂಚನೆ ಆರೋಪ
ಭಾರತದ ಅತಿದೊಡ್ಡ ದ್ವಿಚಕ್ರ ವಾಹನ ತಯಾರಕ ಕಂಪನಿ ಮತ್ತು ಅದರ ಅಧ್ಯಕ್ಷ ಪವನ್ ಮುಂಜಾಲ್ ಸೇರಿದಂತೆ ಕೆಲ ಅಧಿಕಾರಿಗಳ ವಿರುದ್ಧ 'ಬ್ರೈನ್ಸ್ ಲಾಜಿಸ್ಟಿಕ್ಸ್' ಕಂಪನಿ ಫೋರ್ಜರಿ ಮತ್ತು ನಕಲಿ ಖಾತೆ ಪುಸ್ತಕಗಳ ಆರೋಪದ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ.
ದೆಹಲಿ ಪೊಲೀಸರು ಹೀರೋ ಮೋಟೋಕಾರ್ಪ್ ಮತ್ತು ಅದರ ಅಧ್ಯಕ್ಷ ಪವನ್ ಮುಂಜಾಲ್ ವಿರುದ್ಧ ನಕಲಿ ಮತ್ತು ವಂಚನೆ ಆರೋಪದ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಸೇವಾ ಪೂರೈಕೆದಾರರೊಂದಿಗಿನ ಒಪ್ಪಂದವನ್ನು ರದ್ದುಗೊಳಿಸಿದ ನಂತರವೂ ರೂ. 6 ಕೋಟಿ ಮೌಲ್ಯದ ನಕಲಿ ಬಿಲ್‌ಗಳನ್ನು ನೀಡಿ ಆದಾಯವನ್ನು ವಂಚಿಸಿದ ಆರೋಪದಡಿ ದೆಹಲಿ ಪೊಲೀಸರು ಈ ಎಫ್‌ಐಆರ್ ಅನ್ನು ದಾಖಲಿಸಿದ್ದಾರೆ.

ಈ ವಿಷಯವು 2009 - 10 ರಲ್ಲಿ ನಡೆದಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ, ಈ ಸಂಬಂಧ ಹೀರೋ ಮೋಟೋಕಾರ್ಪ್ ಮತ್ತು ಅದರ ಉನ್ನತ ಅಧಿಕಾರಿಗಳ ವಿರುದ್ಧ ಬ್ರೈನ್ಸ್ ಲಾಜಿಸ್ಟಿಕ್ಸ್ ಕಂಪನಿಯು ಎಫ್‌ಐಆರ್ ದಾಖಲಿಸಿದೆ. ಮತ್ತೊಂದೆಡೆ, ಹೀರೋ ಮೋಟೋಕಾರ್ಪ್ ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್‌ಗೆ ಅಧಿಕೃತ ಹೇಳಿಕೆಯನ್ನು ನೀಡಿದ್ದು, ಹೀರೋ ಮೋಟೋಕಾರ್ಪ್ ಕೂಡ ಬ್ರೈನ್ಸ್ ಲಾಜಿಸ್ಟಿಕ್ಸ್ ವಿರುದ್ಧ 2013 ರಲ್ಲಿ ಎಫ್‌ಐಆರ್ ದಾಖಲಿಸಿತ್ತು.
ಹೀರೋ ಮೋಟೋಕಾರ್ಪ್ ತನ್ನ ದೂರಿನಲ್ಲಿ, ಬ್ರೈನ್ಸ್ ಲಾಜಿಸ್ಟಿಕ್ಸ್ ಎಫ್‌ಐಆರ್‌ನಲ್ಲಿ ಯಾವುದೇ ಕಂಪನಿಯ ಅಧಿಕಾರಿಯ ಹೆಸರನ್ನು ಉಲ್ಲೇಖಿಸಿಲ್ಲ ಎಂದು ಹೇಳಿಕೊಂಡಿದೆ. "ದೂರುದಾರರು ಕಂಪನಿಯ ಅಧಿಕಾರಿಗಳನ್ನು ದೂರಿನಲ್ಲಿ ಉಲ್ಲೇಖಿಸಿದ್ದರೂ, ಎಫ್‌ಐಆರ್‌ನಲ್ಲಿ ಯಾವುದೇ ಅಧಿಕಾರಿಯನ್ನು ಹೆಸರಿಸಲಾಗಿಲ್ಲ" ಎಂದು ಹೀರೋ ಮೋಟೋಕಾರ್ಪ್ ನಿಯಂತ್ರಕ ಫೈಲಿಂಗ್‌ನಲ್ಲಿ ಹೇಳಿದೆ.

ಆದ್ರೆ ಬ್ರೈನ್ಸ್ ಲಾಜಿಸ್ಟಿಕ್ಸ್ ದೂರಿನಲ್ಲಿ ಹೀರೋ ಮೋಟೋಕಾರ್ಪ್‌ನ ಅಧ್ಯಕ್ಷ ಡಾ.ಪವನ್ ಮುಂಜಾಲ್ ಮತ್ತು ಹೀರೋ ಮೋಟೋಕಾರ್ಪ್‌ನ ಇತರ ಇಬ್ಬರು ಅಧಿಕಾರಿಗಳು, ವಿಕ್ರಮ್ ಕಸ್ಬೇಕರ್ ಮತ್ತು ಹರಿ ಗುಪ್ತಾ, ಹಾಗೆಯೇ ಮಂಜುಳಾ ಬ್ಯಾನರ್ಜಿ (2009 ಮತ್ತು 2010 ರಲ್ಲಿ ಕಂಪನಿಯ ಲೆಕ್ಕಪರಿಶೋಧಕರು) ಡೆಲಾಯ್ಟ್ ಹ್ಯಾಸ್ಕನ್ಸ್ ನಲ್ಲಿ ಪಾಲುದಾರ ಎಂದು ಉಲ್ಲೇಖಿಸಲಾಗಿದೆ.
ಬ್ರೈನ್ಸ್ ಲಾಜಿಸ್ಟಿಕ್ಸ್ ಎಫ್‌ಐಆರ್ ಪ್ರಕಾರ, ಹೀರೋ ಮೋಟೋಕಾರ್ಪ್ 2009-2010 ರಲ್ಲಿ ದೂರುದಾರರ ವಿರುದ್ಧ ಒಟ್ಟು ₹ 5,94,52,525 (₹ 5.95 ಕೋಟಿ) ಡೆಬಿಟ್ ಮಾಡಿದ ನಕಲಿ ಬಿಲ್‌ಗಳನ್ನು ತಯಾರಿಸಿದೆ. ಆದರೆ ಬ್ರೈನ್ಸ್ ಲಾಜಿಸ್ಟಿಕ್ಸ್ ಹೀರೋ ಮೋಟೋಕಾರ್ಪ್‌ನೊಂದಿಗಿನ ಒಪ್ಪಂದವು ಮಾರ್ಚ್ 31, 2009 ರಂದು ಕೊನೆಗೊಂಡಿದೆ. ಆ ನಂತರ ಅವರಿಗೆ ಡೆಬಿಟ್‌ಗಳನ್ನು ಕ್ಲೈಮ್ ಮಾಡಿರುವ ಬಿಲ್‌ಗಳು ಸುಳ್ಳು ಎಂದು ಆರೋಪಿಸಿರುವುದಾಗಿ ಲೈವ್ ಮಿಂಟ್‌ನಲ್ಲಿ ವರದಿಯಾಗಿದೆ.
ಇತ್ತೀಚಿನ ಎಫ್‌ಐಆರ್ ಕಳೆದ ಕೆಲವು ತಿಂಗಳುಗಳಿಂದ ಹೀರೋ ಮೋಟೋಕಾರ್ಪ್ ಎದುರಿಸುತ್ತಿರುವ ತೊಂದರೆಗಳ ಪಟ್ಟಿಗೆ ಅತಿದೊಡ್ಡ ಹೊಡೆತ ಎಂದೇ ಹೇಳಬಹುದು. ಏಕೆಂದರೆ ಇದಕ್ಕೂ ಮೊದಲು, ಈ ವರ್ಷದ ಆಗಸ್ಟ್‌ನಲ್ಲಿ, ಜಾರಿ ನಿರ್ದೇಶನಾಲಯವು (ಇಡಿ) ಮುಂಜಾಲ್ ಮತ್ತು ಇತರರನ್ನು ಒಳಗೊಂಡ ಮನಿ ಲಾಂಡರಿಂಗ್ ತನಿಖೆಗೆ ಸಂಬಂಧಿಸಿದ ಹುಡುಕಾಟಗಳನ್ನು ನಡೆಸಿತ್ತು ಎಂದು ಪಿಟಿಐ ವರದಿ ಮಾಡಿದೆ.
ದೆಹಲಿ ಮತ್ತು ನೆರೆಯ ಗುರುಗ್ರಾಮ್‌ನಲ್ಲಿರುವ ಪವನ್ ಮುಂಜಾಲ್ ಅವರ ವಸತಿ ಮತ್ತು ವ್ಯಾಪಾರ ಸ್ಥಳಗಳು ಮತ್ತು ಕೆಲವು ಸಂಬಂಧಿತ ಘಟಕಗಳಿಗೆ ಸಂಬಂಧಿಸಿದ ಸ್ಥಳಗಳಲ್ಲಿ ತೆರಿಗೆ ಅಧಿಕಾರಿಗಳು ಮತ್ತು ಜಾರಿ ನಿರ್ದೇಶನಾಲಯದಿಂದ ಸತತ ದಾಳಿಗಳನ್ನು ಮಾಡಲಾಗಿದೆ. ಅಕ್ರಮ ಹಣ ವರ್ಗಾವಣೆ, ತೆರಿಗೆ ವಂಚನೆ ಆರೋಪದ ಪ್ರಕರಣಗಳು ಕಳೆದ ಒಂದೂವರೆ ವರ್ಷಗಳಿಂದ ಹೀರೋ ಮೋಟೋಕಾರ್ಪ್ ತಯಾರಕರನ್ನು ಪೀಡಿಸುತ್ತಿವೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications