ವಾಹನ ಸವಾರರ ಅತಿ ವೇಗಕ್ಕೆ ಕಡಿವಾಣ ಹಾಕಲಿವೆ ಡಿಸ್ ಪ್ಲೇ ಬೋರ್ಡ್ ಹೊಂದಿರುವ ಈ ಸ್ಪೀಡ್ ಕ್ಯಾಮರಾಗಳು

ಕೋಲ್ಕತಾ ಟ್ರಾಫಿಕ್ ಪೊಲೀಸರು ಡಿಸ್ಪ್ಲೇ ಬೋರ್ಡ್ ಹೊಂದಿರುವ 11 ಸ್ಪೀಡ್ ಕ್ಯಾಮರಾಗಳನ್ನು ಅಳವಡಿಸಿದ್ದಾರೆ. ಈ ಸ್ಪೀಡ್ ಕ್ಯಾಮೆರಾಗಳನ್ನು ಕೋಲ್ಕತಾ ನಗರದ ಪ್ರಮುಖ ರಸ್ತೆಗಳಲ್ಲಿ ಅಳವಡಿಸಲಾಗಿದೆ. ವಾಹನ ಸವಾರರು ನಿಯಮಗಳನ್ನು ಪಾಲಿಸಿದರೆ ದಂಡ ಪಾವತಿಸುವುದರಿಂದ ಪಾರಾಗಬಹುದು.

ವಾಹನ ಸವಾರರ ಅತಿ ವೇಗಕ್ಕೆ ಕಡಿವಾಣ ಹಾಕಲಿವೆ ಡಿಸ್ ಪ್ಲೇ ಬೋರ್ಡ್ ಹೊಂದಿರುವ ಈ ಸ್ಪೀಡ್ ಕ್ಯಾಮರಾಗಳು

ಒಂದು ವೇಳೆ ವೇಗವಾಗಿ ವಾಹನಗಳನ್ನು ಚಾಲನೆ ಮಾಡಿದರೆ ಅವರ ವಾಹನಗಳ ನೋಂದಣಿ ಸಂಖ್ಯೆಯನ್ನು ಆಧರಿಸಿ ಅವರ ಮೊಬೈಲ್'ಗೆ ಎಸ್‌ಎಂಎಸ್ ಕಳುಹಿಸಲಾಗುತ್ತದೆ. ವಾಹನ ಸವಾರನು ಯಾವ ಸ್ಥಳದಲ್ಲಿ ಎಷ್ಟು ವೇಗದಲ್ಲಿ ವಾಹನ ಚಾಲನೆ ಮಾಡಿದ ಎಂಬ ವಿವರಗಳನ್ನು ಸಹ ವರದಿ ಮಾಡಲಾಗುತ್ತದೆ. ಇದರಿಂದ ಇನ್ನು ಮುಂದೆ ವೇಗವಾಗಿ ವಾಹನ ಚಾಲನೆ ಮಾಡುವ ವಾಹನ ಸವಾರರ ಸಂಖ್ಯೆ ಕಡಿಮೆಯಾಗುವ ನಿರೀಕ್ಷೆಗಳಿವೆ.

ವಾಹನ ಸವಾರರ ಅತಿ ವೇಗಕ್ಕೆ ಕಡಿವಾಣ ಹಾಕಲಿವೆ ಡಿಸ್ ಪ್ಲೇ ಬೋರ್ಡ್ ಹೊಂದಿರುವ ಈ ಸ್ಪೀಡ್ ಕ್ಯಾಮರಾಗಳು

ಈ ಮುನ್ನ ಅಳವಡಿಸಿದ್ದ ಬೋರ್ಡ್'ಗಳಲ್ಲಿ ವಾಹನ ಸವಾರರು ವೇಗವಾಗಿ ವಾಹನ ಚಾಲನೆ ಮಾಡಿದಾಗ ಬಿಳಿ ಬಣ್ಣದ ವಾರ್ನಿಂಗ್ ಲೈಟ್'ಗಳು ಬೆಳಗುತ್ತಿದ್ದವು. ಆದರೆ ಹೊಸ ಬೋರ್ಡ್'ಗಳು ಡೆಂಜರ್ ಹಾಗೂ ಸ್ಲೋ ಸಂಕೇತಗಳನ್ನು ತೋರಿಸುತ್ತವೆ.

ವಾಹನ ಸವಾರರ ಅತಿ ವೇಗಕ್ಕೆ ಕಡಿವಾಣ ಹಾಕಲಿವೆ ಡಿಸ್ ಪ್ಲೇ ಬೋರ್ಡ್ ಹೊಂದಿರುವ ಈ ಸ್ಪೀಡ್ ಕ್ಯಾಮರಾಗಳು

40 ಕಿ.ಮೀ ವೇಗದ ಮಿತಿಯನ್ನು ಹೊಂದಿರುವ ಪ್ರದೇಶದಲ್ಲಿ ವಾಹನ ಸವಾರನು 40 ಕಿ.ಮೀ ವೇಗದಲ್ಲಿ ಪ್ರಯಾಣಿಸಿದರೆ ಡಿಸ್ ಪ್ಲೇ ಬೋರ್ಡ್ ಧನ್ಯವಾದಗಳು ಎಂದು ತೋರಿಸುತ್ತದೆ. ಒಂದು ವೇಳೆ 40-50 ಕಿ.ಮೀ ವೇಗದಲ್ಲಿ ಪ್ರಯಾಣಿಸಿದರೆ ನಿಧಾನ ಎಂದು ತೋರಿಸುತ್ತದೆ.

ವಾಹನ ಸವಾರರ ಅತಿ ವೇಗಕ್ಕೆ ಕಡಿವಾಣ ಹಾಕಲಿವೆ ಡಿಸ್ ಪ್ಲೇ ಬೋರ್ಡ್ ಹೊಂದಿರುವ ಈ ಸ್ಪೀಡ್ ಕ್ಯಾಮರಾಗಳು

ವಾಹನದ ವೇಗವು 50 ಕಿ.ಮೀ ಮೀರಿದರೆ ಡಿಸ್ ಪ್ಲೇ ಬೋರ್ಡ್ ಡೇಂಜರ್ ಎಂದು ತೋರಿಸುತ್ತದೆ. ತಾವು ಸಾಗುತ್ತಿರುವ ರಸ್ತೆಯಲ್ಲಿ ಎಷ್ಟು ವೇಗದಲ್ಲಿ ಸಾಗಬೇಕು ಎಂಬುದು ತಿಳಿಯುವುದಿಲ್ಲವೆಂದು ಹಲವು ವಾಹನ ಸವಾರರು ದೂರುತ್ತಾರೆ.

ವಾಹನ ಸವಾರರ ಅತಿ ವೇಗಕ್ಕೆ ಕಡಿವಾಣ ಹಾಕಲಿವೆ ಡಿಸ್ ಪ್ಲೇ ಬೋರ್ಡ್ ಹೊಂದಿರುವ ಈ ಸ್ಪೀಡ್ ಕ್ಯಾಮರಾಗಳು

ಡಿಸ್ಪ್ಲೇ ಬೋರ್ಡ್ ಹೊಂದಿರುವ ಈ ಕ್ಯಾಮೆರಾಗಳು ವಾಹನ ಚಾಲಕರಿಗೆ ಸಹಕಾರಿಯಾಗಲಿವೆ. ಈ ಡಿಸ್ ಪ್ಲೇ ಬೋರ್ಡ್'ಗಳಿಂದ ವಾಹನ ಸವಾರರು ವಾಹನದ ವೇಗವನ್ನು ಗಮನಿಸಿ ಎಚ್ಚರಿಕೆಯಿಂದ ಸಾಗಬಹುದು.

ವಾಹನ ಸವಾರರ ಅತಿ ವೇಗಕ್ಕೆ ಕಡಿವಾಣ ಹಾಕಲಿವೆ ಡಿಸ್ ಪ್ಲೇ ಬೋರ್ಡ್ ಹೊಂದಿರುವ ಈ ಸ್ಪೀಡ್ ಕ್ಯಾಮರಾಗಳು

ಈ ಕ್ಯಾಮೆರಾಗಳು ವಿಭಿನ್ನ ಪಥಗಳಲ್ಲಿ ಪ್ರಯಾಣಿಸುವ ವಿವಿಧ ವಾಹನಗಳ ವೇಗವನ್ನು ಪತ್ತೆ ಹಚ್ಚುವ ಸಾಮರ್ಥ್ಯವನ್ನು ಹೊಂದಿವೆ. ಈ ಕ್ಯಾಮೆರಾಗಳು ರಾತ್ರಿಯೂ ಸೇರಿದಂತೆ ಎಲ್ಲಾ ಹವಾಮಾನ ಪರಿಸ್ಥಿತಿಗಳಲ್ಲಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತವೆ.

ವಾಹನ ಸವಾರರ ಅತಿ ವೇಗಕ್ಕೆ ಕಡಿವಾಣ ಹಾಕಲಿವೆ ಡಿಸ್ ಪ್ಲೇ ಬೋರ್ಡ್ ಹೊಂದಿರುವ ಈ ಸ್ಪೀಡ್ ಕ್ಯಾಮರಾಗಳು

ಭಾರತದಾದ್ಯಂತ ಸಂಚಾರ ನಿಯಮ ಉಲ್ಲಂಘನೆಗಳನ್ನು ಕಡಿಮೆ ಮಾಡಲು ಪೊಲೀಸರು ಈಗ ವಿವಿಧ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಬಳಸುತ್ತಿದ್ದಾರೆ. ಈ ತಂತ್ರಜ್ಞಾನಗಳು ಪೊಲೀಸರ ಹಾಗೂ ವಾಹನ ಸವಾರರ ನಡುವೆ ನಡೆಯುವ ವಾಗ್ವಾದವನ್ನು ತಪ್ಪಿಸುತ್ತವೆ.

ವಾಹನ ಸವಾರರ ಅತಿ ವೇಗಕ್ಕೆ ಕಡಿವಾಣ ಹಾಕಲಿವೆ ಡಿಸ್ ಪ್ಲೇ ಬೋರ್ಡ್ ಹೊಂದಿರುವ ಈ ಸ್ಪೀಡ್ ಕ್ಯಾಮರಾಗಳು

ಭಾರತದಲ್ಲಿ ರಸ್ತೆ ಅಪಘಾತಗಳ ಸಂಖ್ಯೆಯನ್ನು ಕಡಿಮೆ ಮಾಡಲು ಕೇಂದ್ರ ಸರ್ಕಾರವು ವಿವಿಧ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಆದರೆ ಸರ್ಕಾರ ಏನೇ ಕ್ರಮಗಳನ್ನು ತೆಗೆದುಕೊಂಡರೂ ವಾಹನ ಸವಾರರು ಅವುಗಳನ್ನು ಸರಿಯಾಗಿ ಪಾಲಿಸಿದರೆ ಮಾತ್ರ ರಸ್ತೆ ಅಪಘಾತಗಳನ್ನು ಕಡಿಮೆ ಮಾಡಬಹುದು. ಎಲ್ಲಾ ವಾಹನ ಸವಾರರು ಸಂಚಾರ ನಿಯಮಗಳನ್ನು ಪಾಲಿಸುವುದು ಒಳ್ಳೆಯದು.

ಗಮನಿಸಿ: ಈ ಚಿತ್ರಗಳನ್ನು ರೆಫರೆನ್ಸ್'ಗಾಗಿ ಬಳಸಲಾಗಿದೆ.

Most Read Articles

Kannada
English summary
Hi tech speed cameras installed in Kolkata to control over speeding. Read in Kannada.
Story first published: Monday, June 21, 2021, 12:31 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X