ವಾಹನ ದಿಗ್ಗಜರಿಗೆ ನೀಡಲಾಗುತ್ತಿರುವ ವೇತನವೆಷ್ಟು ಗೊತ್ತೇ?
ಟೊಯೊಟಾ ಕಾರೊಂದನ್ನು ಖರೀದಿಸಿದರೆ ಆ ಕಾರಿನ ನಿರ್ವಹಣೆ ಹಾಗೂ ದರಗಳ ಬಗ್ಗೆ ನಮ್ಮಲ್ಲಿ ಸ್ಪಷ್ಟ ಜ್ಞಾನವಿರುತ್ತದೆ. ಆದರೆ ಕಳೆದ ಹಲವಾರು ವರ್ಷಗಳಲ್ಲಿ ಬ್ರಾಂಡ್ ಮೌಲ್ಯ ಹೆಚ್ಚಿಸಿಕೊಳ್ಳುವುದರಲ್ಲಿ ಆ ನಿರ್ದಿಷ್ಟ ಕಂಪನಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಯ ಪಾತ್ರ ಮಹತ್ವದ್ದಾಗಿರುತ್ತದೆ.
ಈ ನಡುವೆ ಕಡಿಮೆ ಪಾವತಿ ಸಂಬಂಧ ಟೊಯೊಟೊ ಅಧ್ಯಕ್ಷ ಹಾಗೂ ಸಿಇಒ ಆಗಿರುವ ಅಕಿಯೊ ಟೊಯೊಡಾ ತಮ್ಮ ಸ್ಥಾನ ತೊರೆಯುವುದಾಗಿ ಬೆದರಿಕೆಯೊಡ್ಡಿದ್ದರು. ಅಷ್ಟಕ್ಕೂ ಟೊಯೊಡಾ ಪಡೆಯುವ ವೇತನ ಎಷ್ಟಾಗಿರಬಹುದು?
ಟೊಯೊಡಾ ಸೇರಿದಂತೆ ಜಗತ್ತಿನ ಪ್ರಮುಖ ಆಟೋ ಕಂಪನಿಗಳು ಸಿಇಒಗಳು ಪಡೆಯುವ ವೇತನದ ಕುರಿತು ಮಾಹಿತಿ ಕಲೆ ಹಾಕುವ ಪ್ರಯತ್ನವನ್ನು ಈ ಲೇಖನದ ಮೂಲಕ ಮಾಡಲಾಗಿದೆ. ನಿಮ್ಮ ಮಾಹಿತಿಗಾಗಿ, ಆಟೋ ಜಗತ್ತಿನ ಸಿಇಒಗಳ ಪೈಕಿ ಜಪಾನ್ ಮೂಲದ ಟೊಯೊಟಾದ ಟೊಯೊಡಾ ಅತಿ ಕಡಿಮೆ ವೇತನವನ್ನು ಪಡೆಯುತ್ತಿದ್ದಾರೆ. ಇಲ್ಲಿದೆ ನೋಡಿ ವಾಹನ ಜಗತ್ತಿನಲ್ಲಿ ಅತಿ ಹೆಚ್ಚು ವೇತನ ಪಡೆಯುವ ಸಿಇಒಗಳ ಪಟ್ಟಿ...

Alan Mulally - Ford
ವಾಹನ ಜಗತ್ತಿನಲ್ಲಿ ಅತಿ ಹೆಚ್ಚು ವೇತನ ಗಿಟ್ಟಿಸಿಕೊಳ್ಳುವ ಸಿಇಒಗಳ ಪೈಕಿ ಫೋರ್ಡ್ ಅಲನ್ ಮುಲಾಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಬ್ಲೂಮ್‌ಬರ್ಗ್ ಮಾಹಿತಿ ಪ್ರಕಾರ, 2012ನೇ ಸಾಲಿನಲ್ಲಿ ಅಲನ್ 21 ಮಿಲಿಯನ್ ಡಾಲರ್ ವೇತನ ಗಿಟ್ಟಿಸಿಕೊಂಡಿದ್ದಾರೆ.

Martin Winterkorn - Volkswagen
ಅತ್ಯಾಕರ್ಷಕ ಕಾರುಗಳನ್ನು ಉತ್ಪಾದಿಸುವುದರಲ್ಲಿ ಖ್ಯಾತಿ ಪಡೆದಿರುವ ಫೋಕ್ಸ್‌ವ್ಯಾಗನ್ ಸಿಇಒ ಮಾರ್ಟಿನ್ ವಿಂಟರ್‌ಕಾರ್ನ್ ಆನಂತರದ ಸ್ಥಾನದಲ್ಲಿದ್ದು, ಮಿಲಿಯನ್ ಅಮೆರಿಕನ್ ಡಾಲರ್ ವೇತನ ಸಂಪಾದಿಸುತ್ತಿದ್ದಾರೆ.

Dan Akerson - General Motors
ಅಮೆರಿಕನ್ ಮೂಲದ ಜನರಲ್ ಮೋಟಾರ್ಸ್ ಕಂಪನಿಯ ಸಿಇಒ ಡ್ಯಾನ್ ಅಕೆರ್ಸನ್ ವೇತನ 11 ಮಿಲಿಯನ್ ಅಮೆರಿಕನ್ ಡಾಲರ್ ಆಗಿದೆ.

Dieter Zetsche - Daimler
ಜರ್ಮನಿಯಲ್ಲಿ ಫೋಕ್ಸ್‌ವ್ಯಾಗನ್‌ಗೆ ಪ್ರಮುಖ ಎದುರಾಳಿಯಾಗಿರುವ ದೈಮ್ಲರ್ ಸಿಇಒ ಡಿಟೆರ್ ಜೆಟ್ಜೆ 10.6 ಮಿಲಿಯನ್ ಅಮೆರಿಕನ್ ಡಾಲರ್ ವೇತನ ಗಿಟ್ಟಿಸಿಕೊಳ್ಳುತ್ತಾರೆ.

Carlos Ghosn - Nissan Motor Co.
ಜಪಾನ್ ಮೂಲದ ನಿಸ್ಸಾನ್ ಮೋಟಾರ್ ಕಂಪನಿಯನ್ನು ಪರಿಗಣಿಸಿದಾಗ ಸಂಸ್ಥೆಯ ಸಿಇಒ ಕಾರ್ಲೋಸ್ 10 ಮಿಲಿಯನ್ ಅಮೆರಿಕನ್ ಡಾಲರ್ ವೇತನ ಪಡೆಯುತ್ತಿದ್ದಾರೆ.

Akio Toyoda - Toyota
ಲಾಸ್ಟ್ ಬಟ್ ಲೀಸ್ಟ್ ಎಂಬಂತೆ ಟೊಯೊಟಾ ಸಿಇಒ ಅಕಿಯೊ ಟೊಯೊಡಾ 1.9 ಮಿಲಿಯನ್ ಡಾಲರ್ ವೇತನ ಸಂಪಾದಿಸುತ್ತಿದ್ದಾರೆ. ಇದು ಕಳೆದ ವರ್ಷಕ್ಕೆ ಹೋಲಿಸಿದರೆ ಶೇ. 35ರಷ್ಟು ವರ್ಧನೆಯಾಗಿದೆ ಎಂದು ಜಪಾನ್ ಹಣಕಾಸು ಸಚಿವಾಲಯದ ವರದಿ ಬಹಿರಂಗಪಡಿಸಿದೆ.

ಜಗತ್ತಿನ ಪ್ರಮುಖ ಕಾರು ತಯಾರಕ ಕಂಪನಿ ಎನಿಸಿಕೊಂಡಿದ್ದರ ಹೊರತಾಗಿಯೂ ಟೊಯೊಟಾ ಸಿಇಒ ಅತಿ ಕಡಿಮೆ ವೇತನ ಪಡೆದುಕೊಳ್ಳುತ್ತಿದ್ದಾರೆ. ಇದೀಗ ನಿಮ್ಮ ಅನಿಸಿಕೆಗಳನ್ನು ನಮ್ಮ ಜತೆ ಹಂಚಿಕೊಳ್ಳಿರಿ.


Click it and Unblock the Notifications








