2024ರ ಭಾರತೀಯ ಮಾರುಕಟ್ಟೆಗೆ ಧುಮುಕಲಿರುವ ಘಟಾನುಘಟಿ ಕಾರುಗಳಿವು: 5 ಡೋರ್ ಥಾರ್-ಟಾಟಾ ಕರ್ವ್ ವರೆಗೆ
ಕಳೆದ ಕೆಲವಾರು ಸಮಯದಿಂದ ಭಾರತೀಯ ಆಟೋ ಮೊಬೈಲ್ ಇಂಡಸ್ಟ್ರೀಯು ದಿನೇ ದಿನೇ ಬೆಳೆಯುತ್ತಿದ್ದು, ಭಾರತದಲ್ಲಿ ಪ್ರತೀ ಸೆಗ್ಮೆಂಟ್‌ನಲ್ಲೂ ನಾನಾ ಆಯ್ಕೆಗಳೊಂದಿಗೆ ಕಾರುಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತಿದೆ. ಇದರಿಂದ ಕಾರು ಕಂಪನಿಗಳ ನಡುವೆ ಸ್ಪರ್ಧೆಗಳು ಹೆಚ್ಚಾಗುತ್ತಿದ್ದು, ಮುಂದಿನ ವರ್ಷವೂ ಹಲವಾರು ಕಾರುಗಳು (Upcoming cars) ಮಾರುಕಟ್ಟೆಗೆ ಲಗ್ಗೆ ಇಡುತ್ತಿದೆ.
೧. ನಿಸಾನ್ ಕಶಾಕಿ: ಜಪಾನಿ ಕಾರು ನಿರ್ಮಾಣ ಕಂಪನಿಯಾದ ನಿಸಾನ್ ಮುಂದಿನ ವರ್ಷ ಅಂದರೆ 2024 ರಲ್ಲಿ ಭಾರತದಲ್ಲಿ ತನ್ನ ಪ್ರಸಿದ್ದ ಕಶಾಕಿ ಕಾರನ್ನು ಲಾಂಚ್ ಮಾಡಲಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಈ ನಿಸಾನ್ ಕಶಾಕಿ ಯು ತುಂಬಾ ಪ್ರಸಿದ್ದವಾಗಿರುವ ಎಸ್‌ಯುವಿ ಆಗಿದ್ದು, ಇದು ಭಾರತದಲ್ಲೂ ಸದ್ದು ಮಾಡುವ ನಿರೀಕ್ಷೆಗಳಿವೆ.

೨. ಹ್ಯುಂಡೈ ಸ್ಟಾರ್‌ಗೆಸರ್: ಸೌತ್ ಕೊರಿಯಾದ ಬೃಹತ್ ವಾಹನ ನಿರ್ಮಾಣ ಕಂಪನಿಯಾದ ಹ್ಯುಂಡೈ ಮುಂದಿನ ವರ್ಷ ಅಂದರೆ 2024 ರಂದು ತನ್ನ ಸ್ಟಾರ್‌ಗೆಸರ್ ಎಂಪಿವಿಯನ್ನು ಭಾರತದ ಮಾರುಕಟ್ಟೆಯಲ್ಲಿ ಲಾಂಚ್ ಮಾಡಲಿದೆ. ಇದು ಕಿಯಾ ಕಾರೆನ್ಸ್ ಪ್ಲಾಟ್‌ಫಾರ್ಮ್‌ನಲ್ಲಿ ಗ್ರಾಹಕರ ಮುಂದೆ ಬರಲಿದೆ ಎಂದು ತಿಳಿದು ಬಂದಿದೆ.
೩. ಮಹೀಂದ್ರಾ ಥಾರ್ 5 ಡೋರ್: ಈಗಾಗಲೇ ಭಾರತೀಯ ಆಫ್‌ರೊಡ್ ಮಾರುಕಟ್ಟೆಯಲ್ಲಿ ಎಗ್ಗಿಲ್ಲದೇ ಮುನ್ನುಗ್ಗುತ್ತಿರುವ ಮಹೀಂದ್ರಾ ಥಾರ್ 3 ಡೋರ್ ಇರುವಂತೆಯೇ ಮಹೀಂದ್ರಾ ಕಂಪನಿಯು ಮುಂದಿನ ವರ್ಷ ತನ್ನ ಬಹುನಿರೀಕ್ಷಿತ ಮಹೀಂದ್ರಾ ಥಾರ್ 5 ಡೋರ್ ಅನ್ನು ರಸ್ತೆಗೆ ಇಳಿಸಲಿದೆ. ಭಾರತೀಯರು ಕಾತುರದಿಂದ ಈ ಕಾರು ಲಾಂಚ್ ಆಗಲು ಕಾಯುತ್ತಿದ್ದಾರೆ.

೪. ಹೊಸ ಜನರೇಶನ್ ಸುಜುಕಿ ಸ್ವಿಫ್ಟ್: ಭಾರತೀಯರು ಅತಿ ನಿರೀಕ್ಷೆಯಿಂದ ಕಾಯುತ್ತಿರುವ ವಾಹನದಲ್ಲಿ ಹೊಸ ಜನರೇಶನ್ ಸುಜುಕಿ ಸ್ವಿಫ್ಟ್ ಸಹ ಒಂದು. ಈಗಾಗಲೇ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಸೆಗ್ಮೆಂಟ್‌ನಲ್ಲಿ ಭಾರತದಲ್ಲಿ ಬಳ ವರ್ಷದಿಂದ ಲಗಾಮಿಲ್ಲದೆ ಇರುವ ಕುದುರೆಯಂತೆ ಸ್ವಿಫ್ಟ್ ತನ್ನ ನಾಗಲೋಟವನ್ನು ಮುಂದುವರೆಸಿದ್ದು, ಈ ಕಾರಿನ ಆಗಮನದಿಂದ ಅದೊಂದು ಅಶ್ವಮೇಧದಂತೆ ಮುನ್ನುಗ್ಗಲಿದೆ.
೫. ಟಾಟಾ ಕರ್ವ್: ಭಾರತದ ಹೆಮ್ಮೆಯ ಕಾರು ತಯಾರಿಕಾ ಕಂಪನಿಯಾದ ಟಾಟಾ ಮೋಟಾರ್ಸ್ ನ ಬಹುನಿರೀಕ್ಷಿತ ಟಾಟಾ ಕರ್ವ್ ಕಾರು ಮುಂದಿನ ವರ್ಷ ಭಾರತೀಯ ಗ್ರಾಹಕರ ಮಡಿಲು ಸೇರಲಿದೆ. ಭಾರತೀಯ ಮಾರುಕಟ್ಟೆಗೆ ಬರಲಿರುವ ಅತ್ಯಂತ ವಿಶಿಷ್ಟವಾದ ಎಸ್‌ಯುವಿ ಇದಾಗಿರಲಿದೆ ಎಂಬುದು ಈಗಾಗಲೇ ಎಲ್ಲರಿಗೂ ತಿಳಿದಿದೆ.
ಇನ್ನು ಮುಂದಿನ ವರ್ಷ ಅಂದರೆ 2024 ರಲ್ಲಿ ಇಷ್ಟು ಮಾತ್ರವಲ್ಲದೇ ಇನ್ನೂ ಹಲವಾರು ಕಂಪನಿಗಳ ಹಲವು ಕಾರುಗಳು ಭಾರತದ ಮಾರುಕಟ್ಟೆಯನ್ನು ಪ್ರವೇಶ ಮಾಡಿ ತಮ್ಮ ಅದೃಷ್ಟವನ್ನು ಪರೀಕ್ಷಿಸಲಿದೆ. ಮುಖ್ಯವಾಗಿ ಅವುಗಳಲ್ಲಿ ಪ್ರಮುಖವಾಗಿರುವಂತಹ ನಿಸಾನ್ ಜ್ಯೂಕ್, ಮಹೀಂದ್ರಾ ಎಕ್ಸ್‌ಯುವಿ e8 ಕಾರುಗಳು ಸಹ ಸೇರಿವೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications