ಅಪ್ಪ-ಮಗಳ ಭಾಂದವ್ಯ.. ಪ್ರೀತಿಯ ಪುತ್ರಿಗೆ ತಂದೆಯಿಂದ 2 ಕೋಟಿಯ ಪೋರ್ಷೆ ಕಾರು ಗಿಫ್ಟ್

ಯಾವುದೇ ನಿರೀಕ್ಷೆ ಇಲ್ಲದೆ, ನಮ್ಮೆಲ್ಲ ಆಸೆಗಳನ್ನು ನಿರಾಸೆ ಮಾಡದೆ ನೆರವೇರಿಸೋ ಒಂದು ಜೀವ ಅಪ್ಪ.. ಇಲ್ಲೊಬ್ಬ ತಂದೆ ತನ್ನ ಪ್ರೀತಿಯ ಪುತ್ರಿಗೆ ಬರೋಬ್ಬರಿ ರೂ. 2 ಕೋಟಿ ಮೌಲ್ಯದ ಪೋರ್ಷೆ ಕಾರನ್ನು ಗಿಫ್ಟ್ ನೀಡಿದ್ದಾರೆ. ಸದ್ಯ, ಆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಪ್ರಮುಖ ರಿಯಲ್ ಎಸ್ಟೇಟ್ ಕಂಪನಿಯಾಗಿರುವ ಹೈಲೈಟ್ ಗ್ರೂಪ್ (HiLite Group) ಮಾಲೀಕ ಪಿ.ಸುಲೈಮಾನ್ ಅವರು, ತಮ್ಮ ಪುತ್ರಿ ನಿಮಾ ಸುಲೈಮಾನ್‌ಗೆ ಹೊಚ್ಚ ಹೊಸ ಪೋರ್ಷೆ 911 ಕ್ಯಾರೆರಾ ಎಸ್ (Porsche 911 Carrera S) ಕಾರನ್ನು ಉಡುಗೊರೆಯಾಗಿ ಕೊಟ್ಟಿದ್ದಾರೆ. ಈ ವಿಡಿಯೋವನ್ನು ಸ್ವತಃ ಕೊಚ್ಚಿಯ ಪೋರ್ಷೆ ಡೀಲರ್‌ಶಿಪ್ ಹಂಚಿಕೊಂಡಿದ್ದು, ನಿಮಾ ಸುಲೈಮಾನ್‌ ತಮ್ಮ ನಿವಾಸದ ಮುಂದೆಯೇ ಕುಟುಂಬದೊಂದಿಗೆ ನೂತನ ಕಾರನ್ನು ವಿತರಣೆ ಪಡೆಯುತ್ತಿರುವುದನ್ನು ಕಾಣಬಹುದು.

HiLite Group Owner P Sulaiman Gifts His Daughter Porsche 911 Carrera S Car Details

ಇತ್ತಿಚೆಗೆ ನಿಮಾ ಸುಲೈಮಾನ್‌ ಹೈಲೈಟ್ ಗ್ರೂಪ್ ನಿರ್ದೇಶಕಿ ಹುದ್ದೆಗೇರಿದ್ದರು. ಅವರು ಗಿಫ್ಟ್ ಪಡೆದಿರುವ ಕಾರು ಸುಮಾರು ರೂ.2.01 ಕೋಟಿ ಬೆಲೆಯನ್ನು ಹೊಂದಿದ್ದು, ಶಾರ್ಕ್ ಬ್ಲೂ ಬಣ್ಣದ ಆಯ್ಕೆಯನ್ನು ಒಳಗೊಂಡಿದೆ. ದೇಶೀಯ ಮಾರುಕಟ್ಟೆಯಲ್ಲಿ ಇದೇ ಪೋರ್ಷೆ 911 ಕಾರಿನ ವಿವಿಧ ರೂಪಾಂತರ (ವೇರಿಯೆಂಟ್)ಗಳು ರೂ.1.86 - 4.26 ಎಕ್ಸ್ ಶೋರೂಂ ದರವನ್ನು ಪಡೆದಿವೆ.

ಈ ಪೋರ್ಷೆ 911 ಕಾರಿನ ಮಾದರಿ (ಮಾಡೆಲ್)ಗಳು 3-ಲೀಟರ್ ಟ್ವಿನ್ ಟರ್ಬೊ, 3.8-ಲೀಟರ್ ಟ್ವಿನ್ ಟರ್ಬೊ & 4-ಲೀಟರ್ ನ್ಯಾಚುರಲ್ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ಹೊಂದಿವೆ. ರೂಪಾಂತರಗಳಿಗೆ ಅನುಗುಣವಾಗಿ 6-ಸ್ಪೀಡ್ ಮ್ಯಾನುವಲ್, 7-ಸ್ಪೀಡ್ & 8-ಸ್ಪೀಡ್ ಡಿಸಿಟಿ (ಡುಯಲ್ ಕ್ಲಚ್ ಟ್ರಾಸ್ಮಿಷನ್) ಗೇರ್ ಬಾಕ್ಸ್ ಅನ್ನು ಒಳಗೊಂಡಿದ್ದು, 10.64 ಕೆಎಂಪಿಎಲ್ ನೀಡುತ್ತವೆ.

HiLite Group Owner P Sulaiman Gifts His Daughter Porsche 911 Carrera S Car Details

ಪೋರ್ಷೆ 911 ರೂಪಾಂತರಗಳು 2 ಅಥವಾ 4 ಆಸನ ವ್ಯವಸ್ಥೆಯೊಂದಿಗೂ ಗ್ರಾಹಕರಿಗೆ ಲಭ್ಯವಿವೆ. 10.9-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಡುಯಲ್ ಝೋನ್ ಕ್ಲೈಮೇಟ್ ಕಂಟ್ರೋಲ್, ಡಿಜಿಟಲ್ ಡ್ರೈವರ್‌ಸ್ ಡಿಸ್ಪ್ಲೇ, ವೆಂಟಿಲೇಟೆಡ್ ಫ್ರಂಟ್ ಸೀಟ್ಸ್, 13-ಸ್ಪೀಕರ್ ಬರ್ಮೆಸ್ಟರ್ ಸೌಂಡ್ ಸಿಸ್ಟಂ, 13-ಸ್ಪೀಕರ್ ಬರ್ಮೆಸ್ಟರ್ ಸೌಂಡ್ ಸಿಸ್ಟಂ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಪಡೆದಿವೆ.

ಈ ಕಾರಿನ ಮಾದರಿಗಳು ಸುರಕ್ಷತೆಗೂ ಹೆಸರುವಾಸಿಯಾಗಿದ್ದು, ಮಲ್ಟಿ ಏರ್‌ಬ್ಯಾಗ್‌, ರೇರ್ ವ್ಯೂ ಕ್ಯಾಮೆರಾ, 360 ಡಿಗ್ರಿ ಕ್ಯಾಮೆರಾ, ಡ್ರೈವರ್ ಅಸಿಸ್ಟ್, ಲೇನ್ ಅಸಿಸ್ಟ್, ನೈಟ್ ವಿಷನ್ ಅಸಿಸ್ಟ್, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್‌ ಒಳಗೊಂಡಂತೆ ಹಲವು ರಕ್ಷಣಾತ್ಮಕ ವೈಶಿಷ್ಟ್ಯಗಳನ್ನು ಒಳಗೊಂಡಿವೆ. ನೂತನ ಪೋರ್ಷೆ 911 ಆವೃತ್ತಿಗಳಿಗೆ ಫೆರಾರಿ ರೋಮಾ, ಫೆರಾರಿ 296 ಜಿಟಿಬಿ, ಆಸ್ಟನ್ ಮಾರ್ಟಿನ್ ವಾಂಟೇಜ್ ಪ್ರಬಲ ಎದುರಾಳಿಯಾಗಿವೆ.

ನಿಮಾ ಸುಲೈಮಾನ್‌ ತಂದೆ ಪಿ.ಸುಲೈಮಾನ್ ಸಹ ವಿವಿಧ ಐಷಾರಾಮಿ ಕಾರುಗಳ ಮಾಲೀಕರಾಗಿದ್ದಾರೆ. ಅವರ ಬಳಿ 'ಆಡಿ ಎ6' ಸೆಡಾನ್ ಇದೆ. ಈ ಕಾರು ರೂಪಾಂತರಗಳ ಅನ್ವಯ ರೂ.64.09 ದಿಂದ ರೂ.70.44 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ದೊರೆಯುತ್ತದೆ. ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ಪಡೆದಿದ್ದು, ಗಂಟೆಗೆ 250 ಕಿ.ಮೀ ಗರಿಷ್ಠ ವೇಗವನ್ನು ಹೊಂದಲಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ತಂಡ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ಒದಗಿಸುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ ಗಳನ್ನು ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Tuesday, April 23, 2024, 15:21 [IST]
English summary
Hilite group owner p sulaiman gifts his daughter porsche 911 carrera s car details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+