ಅಟಲ್ ಸುರಂಗದಲ್ಲಿ ನೃತ್ಯ ಮಾಡಿದ ಪ್ರವಾಸಿಗರ ಬಂಧನ

ಪ್ರಧಾನ ಮಂತ್ರಿ ನರೇಂದ್ರ ಮೋದಿರವರು ಕೆಲ ತಿಂಗಳ ಹಿಂದಷ್ಟೇ ಅಟಲ್ ಸುರಂಗವನ್ನು ಉದ್ಘಾಟಿಸಿದ್ದರು. ಅಟಲ್ ಸುರಂಗವು ಸಾರ್ವಜನಿಕ ಬಳಕೆಗಾಗಿ ತೆರೆದ ನಂತರ ಈ ಮಾರ್ಗದಲ್ಲಿ ಜನರ ಓಡಾಟ ಹೆಚ್ಚಾಗಿದೆ.

ಅಟಲ್ ಸುರಂಗದಲ್ಲಿ ನೃತ್ಯ ಮಾಡಿದ ಪ್ರವಾಸಿಗರ ಬಂಧನ

ಜನರು ಈ ಸುರಂಗದ ದೃಶ್ಯ ವೈಭವವನ್ನು ಕಣ್ತುಂಬಿ ಕೊಳ್ಳಲು ಹಾಗೂ ಸುಂದರವಾದ ದೃಶ್ಯಗಳ ಫೋಟೋ ತೆಗೆಯಲು ಹಾಗೂ ವೀಡಿಯೊ ಮಾಡಲು ಹೆಚ್ಚಿನ ಸಂಖ್ಯೆಯಲ್ಲಿ ಮುಗಿಬೀಳುತ್ತಿದ್ದಾರೆ. ಇದರಿಂದಾಗಿ ಸುರಂಗದೊಳಗೆ ವಾಹನ ದಟ್ಟಣೆ ಹೆಚ್ಚಾಗಿ ಟ್ರಾಫಿಕ್ ಜಾಮ್ ಉಂಟಾಗುತ್ತಿದೆ. ಈ ಕಾರಣಕ್ಕೆ ಅಟಲ್ ಸುರಂಗದೊಳಗೆ ಫೋಟೋ ತೆಗೆಯುವುದನ್ನು ಹಾಗೂ ವೀಡಿಯೊ ಮಾಡುವುದನ್ನು ನಿಷೇಧಿಸಲಾಗಿದೆ.

ಅಟಲ್ ಸುರಂಗದಲ್ಲಿ ನೃತ್ಯ ಮಾಡಿದ ಪ್ರವಾಸಿಗರ ಬಂಧನ

ಇತ್ತೀಚಿಗೆ ಕೆಲವು ಪ್ರವಾಸಿಗರು ತಮ್ಮ ವಾಹನಗಳನ್ನು ಅಟಲ್ ಸುರಂಗದ ಮಧ್ಯದಲ್ಲಿ ನಿಲ್ಲಿಸಿ ಫೋಟೊ ಹಾಗೂ ವೀಡಿಯೊ ತೆಗೆದುಕೊಳ್ಳುವುದರ ಜೊತೆಗೆ ನೃತ್ಯ ಮಾಡಿದ್ದಾರೆ. ಇದರಿಂದಾಗಿ ಸಂಚಾರ ದಟ್ಟಣೆ ಉಂಟಾಗಿದೆ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಅಟಲ್ ಸುರಂಗದಲ್ಲಿ ನೃತ್ಯ ಮಾಡಿದ ಪ್ರವಾಸಿಗರ ಬಂಧನ

ಅಟಲ್ ಸುರಂಗದಲ್ಲಿ ಸಂಚಾರಕ್ಕೆ ಅಡ್ಡಿ ಪಡಿಸಿದ ಕಾರಣಕ್ಕೆ ಹಿಮಾಚಲ ಪ್ರದೇಶ ಪೊಲೀಸರು ಏಳು ಜನ ಪ್ರವಾಸಿಗರನ್ನು ಬಂಧಿಸಿ, 3 ಕಾರುಗಳನ್ನು ವಶಕ್ಕೆ ಪಡೆದಿದ್ದಾರೆ. ಅಟಲ್ ಸುರಂಗದೊಳಗೆ ಪ್ರವಾಸಿಗರು ನೃತ್ಯ ಮಾಡುತ್ತಿರುವ ವೀಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಅಟಲ್ ಸುರಂಗದಲ್ಲಿ ನೃತ್ಯ ಮಾಡಿದ ಪ್ರವಾಸಿಗರ ಬಂಧನ

ಈ ವೀಡಿಯೊಗಳು ಹಿಮಾಚಲ ಪ್ರದೇಶ ಪೊಲೀಸರ ಗಮನಕ್ಕೂ ಬಂದಿವೆ. ಅವರು ತಕ್ಷಣವೇ ತನಿಖೆಯನ್ನು ಆರಂಭಿಸಿದ್ದಾರೆ. ಈ ಸುರಂಗವು ಸಂಚಾರ ಪ್ರಾಮುಖ್ಯತೆಯನ್ನು ಹೊಂದಿರುವ ರಸ್ತೆಯಾಗಿರುವುದರಿಂದ ಅವರು ತಕ್ಷಣ ಕ್ರಮ ಕೈಗೊಂಡಿದ್ದಾರೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಅಟಲ್ ಸುರಂಗದಲ್ಲಿ ನೃತ್ಯ ಮಾಡಿದ ಪ್ರವಾಸಿಗರ ಬಂಧನ

ಸುರಂಗದ ಮಧ್ಯದಲ್ಲಿ ಪ್ರವಾಸಿಗರು ತಮ್ಮ ವಾಹನಗಳನ್ನು ನಿಲುಗಡೆ ಮಾಡುವುದರ ಜೊತೆಗೆ ನೃತ್ಯ ಕೂಡ ಮಾಡಿದ್ದಾರೆ. ಇದರಿಂದಾಗಿ ಸುರಂಗದೊಳಗೆ ಸಂಚಾರ ದಟ್ಟಣೆಯುಂಟಾಗಿ ವಾಹನಗಳು ಸಾಲುಗಟ್ಟಿ ನಿಂತಿದ್ದವು.

ಅಟಲ್ ಸುರಂಗದಲ್ಲಿ ನೃತ್ಯ ಮಾಡಿದ ಪ್ರವಾಸಿಗರ ಬಂಧನ

ಕೆಲವೇ ಕೆಲವು ಪ್ರವಾಸಿಗರಿಂದಾಗಿ ಇತರ ವಾಹನ ಸವಾರರಿಗೂ ತೊಂದರೆಯಾಗಿದೆ. ಈ ಘಟನೆ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಬಂಧಿತರಾಗಿರುವ ಏಳು ಜನರ ಜೊತೆಗೆ ಇನ್ನೂ ಹಲವರನ್ನು ಬಂಧಿಸುವ ಸಾಧ್ಯತೆಗಳಿವೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಅಟಲ್ ಸುರಂಗದಲ್ಲಿ ನೃತ್ಯ ಮಾಡಿದ ಪ್ರವಾಸಿಗರ ಬಂಧನ

ಅಟಲ್ ಸುರಂಗದೊಳಗೆ ವಾಹನ ನಿಲುಗಡೆಯನ್ನು ನಿಷೇಧಿಸಲಾಗಿದೆ. ಅದನ್ನು ಮೀರಿ ಪಾರ್ಕಿಂಗ್ ಮಾಡುವುದು ಕಾನೂನುಬಾಹಿರವಾಗಿದೆ. ಈ ಸುರಂಗದಲ್ಲಿ ಸೆಲ್ಫಿ ತೆಗೆದುಕೊಳ್ಳುವುದರಿಂದ ಹಾಗೂ ವೀಡಿಯೊ ತೆಗೆಯುವುದರಿಂದ ಬೇರೆಯವರಿಗೆ ತೊಂದರೆಯಾಗುತ್ತದೆ.

ಅಟಲ್ ಸುರಂಗದಲ್ಲಿ ನೃತ್ಯ ಮಾಡಿದ ಪ್ರವಾಸಿಗರ ಬಂಧನ

ಈ ರೀತಿಯ ಚಟುವಟಿಕೆಗಳು ಇತರ ವಾಹನ ಸವಾರರಿಗೆ ತೊಂದರೆಯನ್ನುಂಟು ಮಾಡುತ್ತವೆ ಎಂದು ಪ್ರವಾಸಿಗರಿಗೆ ತಿಳಿದಿರಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಟಲ್ ಸುರಂಗವು ಸಾರ್ವಜನಿಕರ ಬಳಕೆಗೆ ತೆರೆದುಕೊಂಡ ಕೂಡಲೇ ಹಲವಾರು ರಸ್ತೆ ಅಪಘಾತಗಳು ನಡೆದಿರುವುದು ಗಮನಾರ್ಹ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ವಾಹನ ಸವಾರರು ವೇಗವಾಗಿ ವಾಹನ ಚಾಲನೆ ಮಾಡಿದ್ದು ಸಹ ಈ ಅಪಘಾತಗಳಿಗೆ ಕಾರಣವಾಗಿದೆ. ಇತರ ವಾಹನಗಳನ್ನು ಹಿಂದಿಕ್ಕಲು ಯತ್ನಿಸಿದ ವಾಹನಗಳು ಅಪಘಾತಕ್ಕೀಡಾಗಿವೆ.

ಅಟಲ್ ಸುರಂಗದಲ್ಲಿ ನೃತ್ಯ ಮಾಡಿದ ಪ್ರವಾಸಿಗರ ಬಂಧನ

ಈ ಕಾರಣಕ್ಕೆ ಅಟಲ್ ಸುರಂಗದೊಳಗೆ ವೇಗವಾಗಿ ಸಾಗುವ ವಾಹನಗಳಿಗೆ ದಂಡ ವಿಧಿಸಲಾಗುತ್ತಿದೆ. ವಾಹನ ಚಾಲಕರು ಸಂಚಾರ ನಿಯಮಗಳನ್ನು ಉಲ್ಲಂಘಿಸುವುದನ್ನು ತಡೆಯಲು ಪೊಲೀಸ್ ತಂಡಗಳನ್ನು ಸಹ ಸ್ಥಾಪಿಸಲಾಗಿದೆ. ಈ ತಂಡಗಳು ಅಟಲ್ ಸುರಂಗದಲ್ಲಿ ಗಸ್ತು ತಿರುಗಿ ಅಕ್ರಮಗಳ ಮೇಲೆ ನಿಗಾ ಇಡುತ್ತಿವೆ.

Most Read Articles

Kannada
English summary
Himachal Pradesh police arrests tourists for violating traffic rules in Atal Tunnel. Read in Kannada.
Story first published: Friday, December 25, 2020, 17:40 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X