ಎಮರ್ಜೆನ್ಸಿ ಸಿಸ್ಟಂಗಾಗಿ ಹೊಸ ಟೆಕ್ನಾಲಜಿ ಬಿಡುಗಡೆಗೊಳಿಸಿದ ಹಿಟಾಚಿ

ಜಗತ್ತಿನಾದ್ಯಂತ ಪ್ರತಿದಿನ ಆಟೋಮೊಬೈಲ್‍‍ಗಳಿಗಾಗಿ ಬೇಡಿಕೆಯು ಹೆಚ್ಚುತ್ತಲೇ ಇದೆ. ಇವುಗಳಲ್ಲಿ ಟೆಕ್ನಾಲಜಿ ಆಧಾರಿತ ವಾಹನಗಳೂ ಸೇರಿವೆ. ಈ ಕಾರಣಕ್ಕೆ ಗ್ರಾಹಕರ ನಿರೀಕ್ಷೆಗೆ ತಕ್ಕಂತೆ ವಾಹನ ತಯಾರಕ ಕಂಪನಿಗಳೂ ಸಹ ಹೆಚ್ಚಿನ ಪ್ರಮಾಣದಲ್ಲಿ ಹೊಸ ಟೆಕ್ನಾಲಜಿಯನ್ನು ಬಿಡುಗಡೆಗೊಳಿಸುತ್ತಿವೆ.

ಎಮರ್ಜೆನ್ಸಿ ಸಿಸ್ಟಂಗಾಗಿ ಹೊಸ ಟೆಕ್ನಾಲಜಿ ಬಿಡುಗಡೆಗೊಳಿಸಿದ ಹಿಟಾಚಿ

ಗ್ರಾಹಕರು ವಾಹನ ಖರೀದಿಸುವ ಮುನ್ನ ಹೊಸ ಟೆಕ್ನಾಲಜಿಯನ್ನು ಹೊಂದಿರುವ ವಾಹನಗಳಿಗೆ ಹೆಚ್ಚಿನ ಆದ್ಯತೆಯನ್ನು ನೀಡುತ್ತಿದ್ದಾರೆ. ಪ್ರತಿದಿನ ಹೊಸ ಹೊಸ ಟೆಕ್ನಾಲಜಿಗಳು ಮಾರುಕಟ್ಟೆಗೆ ಕಾಲಿಡುತ್ತಿವೆ. ಈಗಿನ ಸರದಿ ಹಿಟಾಚಿ ಕಂಪನಿಯದು.

ಎಮರ್ಜೆನ್ಸಿ ಸಿಸ್ಟಂಗಾಗಿ ಹೊಸ ಟೆಕ್ನಾಲಜಿ ಬಿಡುಗಡೆಗೊಳಿಸಿದ ಹಿಟಾಚಿ

ಹಿಟಾಚಿ ಆಟೋಮೋಟಿವ್ ಸಿಸ್ಟಂ ಆಟೋಮೇಷನ್ ಟೆಕ್ನಾಲಜಿಯಲ್ಲಿ ಕ್ರಾಂತಿಯನ್ನುಂಟು ಮಾಡುವ ಉದ್ದೇಶದಿಂದ ಹೊಸ ಸ್ಟಿರಿಯೊ ಕ್ಯಾಮರಾವನ್ನು ಬಿಡುಗಡೆಗೊಳಿಸಿದೆ. ಈ ಕ್ಯಾಮರಾ ಆಟೋಮ್ಯಾಟಿಕ್ ಎಮರ್ಜೆನ್ಸಿ ಬ್ರೇಕಿಂಗ್ ಸಿಸ್ಟಂ ಅನ್ನು ಹೊಂದಿದೆ.

ಎಮರ್ಜೆನ್ಸಿ ಸಿಸ್ಟಂಗಾಗಿ ಹೊಸ ಟೆಕ್ನಾಲಜಿ ಬಿಡುಗಡೆಗೊಳಿಸಿದ ಹಿಟಾಚಿ

ಈ ಸಿಸ್ಟಂ ಎಮರ್ಜೆನ್ಸಿ ಸಂದರ್ಭದಲ್ಲಿ ಆಟೋಮ್ಯಾಟಿಕ್ ಆಗಿ ಬ್ರೇಕ್ ಹಾಕುತ್ತದೆ. ಇದರಲ್ಲಿರುವ ವೈಡ್ ಆಂಗಲ್ ಕ್ಯಾಮರಾ ತನ್ನ ಮುಂದೆ ಹಾಗೂ ಸುತ್ತಮುತ್ತಲಿರುವ ವಾಹನಗಳನ್ನು ಗುರುತಿಸಿ ಕಾರ್ಯ ನಿರ್ವಹಿಸುತ್ತದೆ.

ಎಮರ್ಜೆನ್ಸಿ ಸಿಸ್ಟಂಗಾಗಿ ಹೊಸ ಟೆಕ್ನಾಲಜಿ ಬಿಡುಗಡೆಗೊಳಿಸಿದ ಹಿಟಾಚಿ

ವಾಹನವು ಇನ್ನೊಂದು ವಾಹನಕ್ಕೆ ಡಿಕ್ಕಿ ಹೊಡೆದಾಗ ಅಥವಾ ಈ ಸ್ಟಿರಿಯೊ ಕ್ಯಾಮೆರಾವನ್ನು ಮತ್ತೊಂದು ವಾಹನದ ಮೇಲಿಟ್ಟಾಗ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಬಳಸಿಕೊಂಡು ಬ್ರೇಕಿಂಗ್ ಸಿಸ್ಟಂ ಅನ್ನು ತಕ್ಷಣವೇ ಆಕ್ಟಿವೇಟ್‍ಗೊಳಿಸುತ್ತದೆ. ಆಟೋಮೊಬೈಲ್ ಉದ್ಯಮವು ವೇಗವಾಗಿ ಬೆಳೆಯುತ್ತಿದೆ.

ಎಮರ್ಜೆನ್ಸಿ ಸಿಸ್ಟಂಗಾಗಿ ಹೊಸ ಟೆಕ್ನಾಲಜಿ ಬಿಡುಗಡೆಗೊಳಿಸಿದ ಹಿಟಾಚಿ

ಉದ್ಯಮವು ಬೆಳೆದಂತೆಲ್ಲಾ ಪ್ರಯಾಣಿಕರ ಸುರಕ್ಷತೆಗೆ ಹಾಗೂ ಚಾಲಕರಿಗೆ ಹೆಚ್ಚಿನ ಸುರಕ್ಷತೆಯನ್ನು ನೀಡುವ ಜವಾಬ್ದಾರಿಯು ವಾಹನ ತಯಾರಕ ಕಂಪನಿಗಳ ಮೇಲಿರುತ್ತದೆ. ಈ ಕಾರಣಕ್ಕೆ ವಾಹನಗಳಲ್ಲಿ ಬಳಸುವ ಟೆಕ್ನಾಲಜಿಯನ್ನು ಸಹ ಸುಧಾರಿಸಬೇಕಾಗುತ್ತದೆ. ಹಿಟಾಚಿ ಕಂಪನಿಯು ತನ್ನ ಹೊಸ ಸ್ಟೀರಿಯೊ ಕ್ಯಾಮರಾವನ್ನು ಇತ್ತೀಚಿಗಷ್ಟೇ ಬಿಡುಗಡೆಗೊಳಿಸಿದೆ.

ಎಮರ್ಜೆನ್ಸಿ ಸಿಸ್ಟಂಗಾಗಿ ಹೊಸ ಟೆಕ್ನಾಲಜಿ ಬಿಡುಗಡೆಗೊಳಿಸಿದ ಹಿಟಾಚಿ

2020ರ ವೇಳೆಗೆ ಎನ್‍‍ಸಿ‍ಎ‍‍ಪಿ ತನ್ನ ಸುರಕ್ಷತಾ ಪರ್ಫಾಮೆನ್ಸ್ ರೇಟಿಂಗ್‍‍ಗಳಿಗೆ ಅನುಸಾರವಾಗಿ ಆಟೋಮ್ಯಾಟಿಕ್ ಎಮರ್ಜೆನ್ಸಿ ಬ್ರೇಕಿಂಗ್ ಸಿಸ್ಟಂ ಅನ್ನು ಅಳವಡಿಸಿಕೊಳ್ಳುವಂತೆ ವಾಹನ ತಯಾರಕ ಕಂಪನಿಗಳಿಗೆ ಸೂಚಿಸುವ ಸಾಧ್ಯತೆಗಳಿವೆ ಎಂದು ಹಿಟಾಚಿ ಕಂಪನಿಯು ಹೇಳಿಕೆಯಲ್ಲಿ ತಿಳಿಸಿದೆ.

ಎಮರ್ಜೆನ್ಸಿ ಸಿಸ್ಟಂಗಾಗಿ ಹೊಸ ಟೆಕ್ನಾಲಜಿ ಬಿಡುಗಡೆಗೊಳಿಸಿದ ಹಿಟಾಚಿ

ಹೊಸದಾಗಿ ಬಿಡುಗಡೆಗೊಳಿಸಿರುವ ಸ್ಟಿರಿಯೊ ಕ್ಯಾಮರಾ, ಸಾಂಪ್ರಾದಾಯಿಕ ಸ್ಟಿರಿಯೊ ಕ್ಯಾಮರಾಗಳಿಗಿಂತ ಮೂರು ಪಟ್ಟು ಹೆಚ್ಚು ಆಂಗಲ್ ನೀಡಲಿದೆ ಎಂದು ಹೇಳಲಾಗಿದೆ. ಈ ಕ್ಯಾಮರಾದಲ್ಲಿ ಆಟೋಮ್ಯಾಟಿಕ್ ಬ್ರೇಕಿಂಗ್ ಸಿಸ್ಟಂ ಹಾಗೂ ಟರ್ನಿಂಗ್‍‍ಗಳಲ್ಲಿ ಉಪಯೋಗಕ್ಕೆ ಬರುವಂತಹ ಆಟೋಮ್ಯಾಟಿಕ್ ಸ್ಪೀಡ್ ಕಂಟ್ರೋಲ್ ನೀಡಲಾಗಿದೆ.

ಎಮರ್ಜೆನ್ಸಿ ಸಿಸ್ಟಂಗಾಗಿ ಹೊಸ ಟೆಕ್ನಾಲಜಿ ಬಿಡುಗಡೆಗೊಳಿಸಿದ ಹಿಟಾಚಿ

ಹಿಟಾಚಿ ಕಂಪನಿಯು ಆರ್ ಅಂಡ್ ಡಿ ನಂತರ ಈ ಟೆಕ್ನಾಲಜಿಯನ್ನು ಅಭಿವೃದ್ಧಿಪಡಿಸಿದೆ. ಈ ಕ್ಯಾಮರಾವನ್ನು ಎದುರುಗಡೆಯಿಂದ, ಹಿಂದೆಯಿಂದ ಬರುವ ವಾಹನಗಳನ್ನು ಹಾಗೂ ಪಾದಚಾರಿಗಳನ್ನು ಸರಿಯಾಗಿ ಗುರುತಿಸುವಂತೆ ವಿನ್ಯಾಸಗೊಳಿಸಲಾಗಿದೆ.

Most Read Articles

Kannada
English summary
Hitachi Automotive Systems Develops Stereo Camera Enabling Automatic Emergency Braking at Intersections. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X