ಬೈಕ್ ಟ್ಯಾಕ್ಸಿಯಾಗಿ ಬದಲಾದ ಹೋಂಡಾ ಸಿಬಿಆರ್ 650 ಆರ್ ಸೂಪರ್ ಬೈಕ್..!

ಭಾರತದಲ್ಲಿ ಸಾರ್ವಜನಿಕ ಸಾರಿಗೆಗಳಿಗಿಂತ ಬಾಡಿಗೆ ವಾಹನಗಳ ಸಂಖ್ಯೆಯೇ ಹೆಚ್ಚು. ದೇಶದ ಪ್ರಮುಖ ರಸ್ತೆಗಳಲ್ಲಿ ಸಂಚರಿಸುವ ಆಟೋ, ಕ್ಯಾಬ್‌ಗಳೇ ಇದಕ್ಕೆ ಸಾಕ್ಷಿ. ಇವುಗಳು ಸರ್ಕಾರಿ ಸಾರಿಗೆ ವಾಹನಗಳಿಗೆ ಹೋಲಿಸಿದರೆ ಆರಾಮದಾಯಕವಾಗಿರುತ್ತವೆ.

ಬೈಕ್ ಟ್ಯಾಕ್ಸಿಯಾಗಿ ಬದಲಾದ ಹೋಂಡಾ ಸಿಬಿಆರ್ 650 ಆರ್ ಸೂಪರ್ ಬೈಕ್..!

ಈ ವಾಹನಗಳು ಗ್ರಾಹಕರನ್ನು ಅವರು ಹೇಳಿದ ಜಾಗದಿಂದ ಪಿಕ್‌ಅಪ್ ಮಾಡಿ ಅವರು ಹೇಳಿದ ಜಾಗಕ್ಕೆ ಡ್ರಾಪ್ ಮಾಡುತ್ತವೆ. ಈ ಬಾಡಿಗೆ ವಾಹನಗಳು ಹೆಚ್ಚು ಶುಲ್ಕವನ್ನು ಹೊಂದಿದ್ದರೂ ಸಹ ಉತ್ತಮ ಎನಿಸುವಂತಹ ಸೇವೆಯನ್ನು ನೀಡುತ್ತವೆ. ಕೆಲವು ವರ್ಷಗಳಿಂದ ಬೈಕ್‌ಗಳನ್ನು ಸಹ ಟ್ಯಾಕ್ಸಿಗಳಾಗಿ ಬಳಸಲಾಗುತ್ತಿದೆ.

ಬೈಕ್ ಟ್ಯಾಕ್ಸಿಯಾಗಿ ಬದಲಾದ ಹೋಂಡಾ ಸಿಬಿಆರ್ 650 ಆರ್ ಸೂಪರ್ ಬೈಕ್..!

ಈ ಬೈಕ್ ಟ್ಯಾಕ್ಸಿಗಳು ಯುವಜನತೆಯಲ್ಲಿ ಹೆಚ್ಚು ಜನಪ್ರಿಯವಾಗಿವೆ. ಬೈಕ್ ಟ್ಯಾಕ್ಸಿಗಳು ಕ್ಯಾಬ್, ಆಟೊಗಳಿಗಿಂತ ಕಡಿಮೆ ಶುಲ್ಕ ವಿಧಿಸುವುದೇ ಇದಕ್ಕೆ ಕಾರಣ. ಬೈಕ್ ಟ್ಯಾಕ್ಸಿ ಸೇವೆ ನೀಡುತ್ತಿರುವ ರಾಪಿಡೋ ಕಂಪನಿಯು ದೇಶದ ಹಲವು ಭಾಗಗಳಲ್ಲಿ ತನ್ನ ಅಸ್ತಿತ್ವವನ್ನು ಸ್ಥಾಪಿಸುತ್ತಿದೆ.

MOST READ:ಕರೋನಾದಿಂದ ಬೈಕ್ ಕಳೆದುಕೊಂಡ ಯುವಕನಿಗೆ ಸರ್ ಪ್ರೈಸ್ ಗಿಫ್ಟ್ ನೀಡಿದ ಟಿವಿಎಸ್

ಬೈಕ್ ಟ್ಯಾಕ್ಸಿಯಾಗಿ ಬದಲಾದ ಹೋಂಡಾ ಸಿಬಿಆರ್ 650 ಆರ್ ಸೂಪರ್ ಬೈಕ್..!

ತಮಿಳುನಾಡಿನಂತಹ ಹಲವು ರಾಜ್ಯಗಳು ಬೈಕ್ ಟ್ಯಾಕ್ಸಿಗಳನ್ನು ನಿಷೇಧಿಸಿವೆ. ಬೈಕ್ ಟ್ಯಾಕ್ಸಿಗಳು ರಾಜ್ಯದ ಮಾರ್ಗಸೂಚಿಗಳನ್ನು ಅನುಸರಿಸದೇ ಇರುವುದೇ ಇದಕ್ಕೆ ಮುಖ್ಯ ಕಾರಣ. ಬೈಕ್ ಟ್ಯಾಕ್ಸಿ ಸೇವೆಯನ್ನು ನೀಡುತ್ತಿರುವ ರಾಜ್ಯಗಳಲ್ಲಿ ಮಧ್ಯಪ್ರದೇಶವು ಒಂದು.

ಬೈಕ್ ಟ್ಯಾಕ್ಸಿಯಾಗಿ ಬದಲಾದ ಹೋಂಡಾ ಸಿಬಿಆರ್ 650 ಆರ್ ಸೂಪರ್ ಬೈಕ್..!

ಮಧ್ಯಪ್ರದೇಶದ ರಾಜಧಾನಿ ಭೋಪಾಲ್‌ನಲ್ಲಿ ಅನೇಕ ಜನರು ಪ್ರತಿದಿನ ಈ ಸೇವೆಯನ್ನು ಬಳಸುತ್ತಾರೆ. ಬೈಕ್ ಟ್ಯಾಕ್ಸಿಗಾಗಿ ಕರೆ ಮಾಡಿದ ವ್ಯಕ್ತಿಯೊಬ್ಬರಿಗೆ ಆಶ್ಚರ್ಯ ಎದುರಾಗಿತ್ತು. ಅವರನ್ನು ಪಿಕ್‌ಅಪ್ ಮಾಡಲು ಹೋಂಡಾ ಸಿಬಿಆರ್ 650 ಆರ್ ಬೈಕ್ ಬಂದಿದ್ದೇ ಈ ಆಶ್ಚರ್ಯಕ್ಕೆ ಕಾರಣ.

MOSTREAD: ಕರೋನಾ ವೈರಸ್ ಎಫೆಕ್ಟ್: ಭಾರೀ ಪ್ರಮಾಣದಲ್ಲಿ ಕುಸಿದ ಇಂಧನ ಮಾರಾಟ

ಬೈಕ್ ಟ್ಯಾಕ್ಸಿಯಾಗಿ ಬದಲಾದ ಹೋಂಡಾ ಸಿಬಿಆರ್ 650 ಆರ್ ಸೂಪರ್ ಬೈಕ್..!

ಸಾಮಾನ್ಯವಾಗಿ ಬಜೆಟ್ ಬೆಲೆಯ ಬೈಕ್‌ಗಳನ್ನು ಮಾತ್ರ ಬೈಕ್ ಟ್ಯಾಕ್ಸಿಗಾಗಿ ಬಳಸಲಾಗುತ್ತದೆ. ಆದರೆ ಈ ಯುವಕ ಹೆಚ್ಚಿನ ಪರ್ಫಾಮೆನ್ಸ್ ಹೊಂದಿರುವ ಹೋಂಡಾ ಸಿಬಿಆರ್ 650 ಆರ್ ಬೈಕ್ ಅನ್ನು ಬಳಸಿದ್ದಾನೆ.

ಬೈಕ್ ಟ್ಯಾಕ್ಸಿಯಾಗಿ ಬದಲಾದ ಹೋಂಡಾ ಸಿಬಿಆರ್ 650 ಆರ್ ಸೂಪರ್ ಬೈಕ್..!

ಹೋಂಡಾ ಸಿಬಿಆರ್ 650 ಆರ್ ಬೈಕಿನ ಮಾಲೀಕ ಮ್ಯಾಜಿಶಿಯನ್ಸ್ ವ್ಲಾಕ್ಸ್ ಎಂಬ ಯೂಟ್ಯೂಬ್ ಚಾನೆಲ್ ಅನ್ನು ನಡೆಸುತ್ತಿದ್ದಾರೆ. ಅವರು ಈ ಬೈಕ್ ಅನ್ನು ಟ್ಯಾಕ್ಸಿಯಾಗಿ ಬದಲಿಸಿ, ಯುವಕನಿಗೆ ವೀಡಿಯೊ ರೆಕಾರ್ಡ್ ಮಾಡಲು ನೆರವಾಗಿದ್ದಾರೆ.

MOST READ:ಮನೆ ತಲುಪಲು 1800 ಕಿ.ಮೀ ಸೈಕಲ್ ತುಳಿದ ಯುವಕ..!

ಬೈಕ್ ಟ್ಯಾಕ್ಸಿಯಾಗಿ ಬದಲಾದ ಹೋಂಡಾ ಸಿಬಿಆರ್ 650 ಆರ್ ಸೂಪರ್ ಬೈಕ್..!

ಭಾರತದಲ್ಲಿ ಈ ಹಿಂದೆಯೂ ಸಹ ಈ ರೀತಿಯ ಹಲವು ಘಟನೆಗಳು ನಡೆದಿವೆ. ವಿದೇಶಗಳಲ್ಲಿ ಕ್ಯಾಬ್ ಬುಕ್ ಮಾಡುವವರಿಗೆ, ಫೆರಾರಿ, ಲಂಬೋರ್ಘಿನಿ, ಬೆಂಟ್ಲಿಯಂತಹ ಐಷಾರಾಮಿ ಕಾರುಗಳನ್ನು ಪಿಕ್‌ಅಪ್ ಮಾಡಲು ಬಳಸಲಾಗುತ್ತದೆ.

ಬೈಕ್ ಟ್ಯಾಕ್ಸಿಯಾಗಿ ಬದಲಾದ ಹೋಂಡಾ ಸಿಬಿಆರ್ 650 ಆರ್ ಸೂಪರ್ ಬೈಕ್..!

ಯುವಕರು ಭಾರತದಲ್ಲಿ ದುಬಾರಿ ಬೈಕ್‌ಗಳನ್ನು ಟ್ಯಾಕ್ಸಿ ಸೇವೆಗಾಗಿ ಬಳಸುತ್ತಿದ್ದು, ಅವುಗಳನ್ನು ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡುತ್ತಿದ್ದಾರೆ. ಈ ಘಟನೆ ಲಾಕ್‌ಡೌನ್ ಜಾರಿಗೊಳಿಸುವ ಮುನ್ನ ನಡೆದಿದ್ದು, ಯೂಟ್ಯೂಬ್‌ನಲ್ಲಿ ಈಗ ಅಪ್‌ಲೋಡ್ ಮಾಡಲಾಗಿದೆ.

MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ಈ ಬೈಕ್ ಅನ್ನು ಟ್ಯಾಕ್ಸಿಯಾಗಿ ಬಳಸಿದ ಯುವಕನು ಈ ಸವಾರಿ ಹೊಸ ಅನುಭವವನ್ನು ನೀಡಿದೆ ಎಂದು ಹೇಳಿದ್ದಾನೆ. ಇಂತಹ ಸೂಪರ್ ಬೈಕ್‌ಗಳನ್ನು ಇದೇ ಮೊದಲ ಬಾರಿಗೆ ಚಾಲನೆ ಮಾಡುತ್ತಿರುವುದಾಗಿ ಹೇಳಿದ್ದಾನೆ. ಈ ಕಾರಣಕ್ಕೆ ಆತ ಬೈಕ್ ಹತ್ತುವಾಗ ಎಡವಿದಂತಾಗಿದೆ. ಈ ಬೈಕ್ ಟ್ಯಾಕ್ಸಿ ವೇಗವು ರಸ್ತೆಯಲ್ಲಿದ್ದ ಇತರ ವಾಹನಗಳಿಗಿಂತ ವೇಗವಾಗಿತ್ತು.

ಬೈಕ್ ಟ್ಯಾಕ್ಸಿಯಾಗಿ ಬದಲಾದ ಹೋಂಡಾ ಸಿಬಿಆರ್ 650 ಆರ್ ಸೂಪರ್ ಬೈಕ್..!

ಹೋಂಡಾ ಸಿಬಿಆರ್ 650 ಆರ್ ಬೈಕಿನಲ್ಲಿ 648-ಸಿಸಿಯ ಡ್ಯುಯಲ್ ಸಿಲಿಂಡರ್, ಲಿಕ್ವಿಡ್-ಕೂಲ್ಡ್, ಪ್ಯುಯೆಲ್ ಇಂಜೆಕ್ಷನ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 85.9 ಬಿಹೆಚ್‌ಪಿ ಪವರ್ ಹಾಗೂ 60.1 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್‌ನಲ್ಲಿ 6-ಸ್ಪೀಡ್ ಗೇರ್‌ಬಾಕ್ಸ್‌ ಅಳವಡಿಸಲಾಗಿದೆ.

Most Read Articles

Kannada
English summary
Honda CBR 650 R Sports Bike changed to Rapido bike taxi. Read in Kannada.
Story first published: Tuesday, May 12, 2020, 11:03 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X