ಲಾಕ್‌ಡೌನ್ ಎಫೆಕ್ಟ್: ನಕಲಿ ಎಂಎಲ್ಎ ಸ್ಟಿಕ್ಕರ್ ಬಳಸಿ ತಗ್ಲಾಕಿಕೊಂಡ ಐನಾತಿ..!

ಕರೋನಾ ವೈರಸ್ ಸೋಂಕು ಹರಡುವುದನ್ನು ತಪ್ಪಿಸುವ ಸಲುವಾಗಿ ದೇಶಾದ್ಯಂತ ಮೇ 3ರವರೆಗೆ ಲಾಕ್‌ಡೌನ್ ಘೋಷಿಸಲಾಗಿತ್ತು. ಈಗ ಕೇಂದ್ರ ಗೃಹ ಇಲಾಖೆಯು ಲಾಕ್‌ಡೌನ್ ಅನ್ನು ಮೇ 17ರವರೆಗೆ ವಿಸ್ತರಿಸಿದೆ. ಲಾಕ್‌ಡೌನ್ 3.0ನಲ್ಲಿ ಕೆಲವು ನಿಯಮಗಳು ಹಾಗೂ ಷರತ್ತುಗಳೊಂದಿಗೆ ಇಡೀ ದೇಶವನ್ನು ಮೂರು ವಲಯಗಳಾಗಿ ವಿಂಗಡಿಸಿ ವಿನಾಯಿತಿ ನೀಡಲಾಗಿದೆ.

ಲಾಕ್‌ಡೌನ್ ಎಫೆಕ್ಟ್: ನಕಲಿ ಎಂಎಲ್ಎ ಸ್ಟಿಕ್ಕರ್ ಬಳಸಿ ತಗ್ಲಾಕಿಕೊಂಡ ಐನಾತಿ..!

ಈ ವಿನಾಯಿತಿಯನ್ನು ಜನರಿಗೆ ನೀಡಲಾಗಿದೆ. ಇದರಿಂದಾಗಿ ಜನರು ತಮ್ಮ ಅಗತ್ಯ ಕೆಲಸಗಳಿಗಾಗಿ ಮನೆಯಿಂದ ಹೊರಬಂದು ಅಗತ್ಯ ವಸ್ತುಗಳನ್ನು ಖರೀದಿಸಬಹುದು. ಲಾಕ್‌ಡೌನ್‌ 2.0ನಲ್ಲಿ, ಜನರು ಲಾಕ್‌ಡೌನ್ ನಿಯಮಗಳನ್ನು ಉಲ್ಲಂಘಿಸುತ್ತಿರುವುದು ಕಂಡು ಬಂದಿತ್ತು.

ಲಾಕ್‌ಡೌನ್ ಎಫೆಕ್ಟ್: ನಕಲಿ ಎಂಎಲ್ಎ ಸ್ಟಿಕ್ಕರ್ ಬಳಸಿ ತಗ್ಲಾಕಿಕೊಂಡ ಐನಾತಿ..!

ಅನೇಕ ಜನರು ಹೊರಗೆ ಹೋಗಲು ಕಾನೂನುಬಾಹಿರ ಮಾರ್ಗಗಳನ್ನು ಹುಡುಕಿಕೊಂಡಿದ್ದರು. ಮುಂಬೈನಲ್ಲಿ ಇದೇ ರೀತಿಯ ಪ್ರಕರಣವೊಂದು ಬೆಳಕಿಗೆ ಬಂದಿದೆ, ಈ ಘಟನೆಯಲ್ಲಿ 20 ವರ್ಷದ ಯುವಕನೊಬ್ಬ ಲಾಕ್‌ಡೌನ್ ವೇಳೆಯಲ್ಲಿ ಹೊರಗೆ ಹೋಗಲು ತನ್ನ ಕಾರಿನ ಮೇಲೆ ಎಂಎಲ್ಎ ಸ್ಟಿಕ್ಕರ್ ಅಂಟಿಸಿಕೊಂಡಿದ್ದ.

MOST READ:ಕರೋನಾದಿಂದ ಬೈಕ್ ಕಳೆದುಕೊಂಡ ಯುವಕನಿಗೆ ಸರ್ ಪ್ರೈಸ್ ಗಿಫ್ಟ್ ನೀಡಿದ ಟಿವಿಎಸ್

ಲಾಕ್‌ಡೌನ್ ಎಫೆಕ್ಟ್: ನಕಲಿ ಎಂಎಲ್ಎ ಸ್ಟಿಕ್ಕರ್ ಬಳಸಿ ತಗ್ಲಾಕಿಕೊಂಡ ಐನಾತಿ..!

ವರದಿಗಳ ಪ್ರಕಾರ ನಕಲಿ ಸ್ಟಿಕ್ಕರ್ ಬಳಸಿ ಸಿಕ್ಕಿಹಾಕಿಕೊಂಡ ಯುವಕನನ್ನು ಮುಂಬೈನ ಅಂಧೇರಿ ಪ್ರದೇಶದ 20 ವರ್ಷ ವಯಸ್ಸಿನ ಸಬೆತ್ ಅಸ್ಲಂ ಷಾ ಎಂದು ಗುರುತಿಸಲಾಗಿದೆ. ಪೊಲೀಸ್ ಚೆಕ್ ಪಾಯಿಂಟ್‌ನಿಂದ ತಪ್ಪಿಸಿಕೊಳ್ಳಲು ಆತ ತನ್ನ ಕಾರಿನಲ್ಲಿ ನಕಲಿ ಎಂಎಲ್ಎ ಸ್ಟಿಕ್ಕರ್ ಅನ್ನು ಅಂಟಿಸಿಕೊಂಡಿದ್ದ.

ಲಾಕ್‌ಡೌನ್ ಎಫೆಕ್ಟ್: ನಕಲಿ ಎಂಎಲ್ಎ ಸ್ಟಿಕ್ಕರ್ ಬಳಸಿ ತಗ್ಲಾಕಿಕೊಂಡ ಐನಾತಿ..!

ತಪಾಸಣೆ ವೇಳೆ ಈ ಯುವಕನನ್ನು ಪೊಲೀಸ್ ಪಾಯಿಂಟ್‌ನಲ್ಲಿ ತಡೆದು ನಿಲ್ಲಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಈ ಯುವಕ ಹೋಂಡಾ ಸಿವಿಕ್ ಕಾರಿನಲ್ಲಿ ಪ್ರಯಾಣಿಸುತ್ತಿದ್ದ. ಪೊಲೀಸರು ವೆಸ್ಟರ್ನ್ ಎಕ್ಸ್‌ಪ್ರೆಸ್ ಹೆದ್ದಾರಿಯಲ್ಲಿರುವ ಶ್ರೀ ಪ್ರಸಾದ್ ಹೋಟೆಲ್ ಬಳಿ ಯುವಕನನ್ನು ತಡೆದು ನಿಲ್ಲಿಸಿದ್ದಾರೆ.

MOST READ:ಮನೆ ತಲುಪಲು 1800 ಕಿ.ಮೀ ಸೈಕಲ್ ತುಳಿದ ಯುವಕ..!

ಲಾಕ್‌ಡೌನ್ ಎಫೆಕ್ಟ್: ನಕಲಿ ಎಂಎಲ್ಎ ಸ್ಟಿಕ್ಕರ್ ಬಳಸಿ ತಗ್ಲಾಕಿಕೊಂಡ ಐನಾತಿ..!

ಈ ಯುವಕನು ಏಕಾಂಗಿಯಾಗಿ ಕಾರು ಚಾಲನೆ ಮಾಡುತ್ತಿರುವುದು ಹಾಗೂ ಕಾರಿನ ಮೇಲೆ ಎಂಎಲ್ಎ ಸ್ಟಿಕ್ಕರ್ ಇರುವುದನ್ನು ಕಂಡ ಪೊಲೀಸರಿಗೆ ಅನುಮಾನ ಬಂದು, ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ವಿಚಾರಣೆಯ ಸಮಯದಲ್ಲಿ, ಆ ಯುವಕನು ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ.

ಲಾಕ್‌ಡೌನ್ ಎಫೆಕ್ಟ್: ನಕಲಿ ಎಂಎಲ್ಎ ಸ್ಟಿಕ್ಕರ್ ಬಳಸಿ ತಗ್ಲಾಕಿಕೊಂಡ ಐನಾತಿ..!

ಲಾಕ್‌ಡೌನ್‌ನಲ್ಲಿ ಪೊಲೀಸರು ತಪಾಸಣೆ ಮಾಡುವುದರಿಂದ ತಪ್ಪಿಸಿಕೊಳ್ಳುವ ಸಲುವಾಗಿ ಈ ಸ್ಟಿಕ್ಕರ್ ಅನ್ನು ಅಂಟಿಸಿಕೊಳ್ಳಲಾಗಿತ್ತು ಎಂದು ಒಪ್ಪಿಕೊಂಡಿದ್ದಾನೆ. ಐಪಿಸಿ, ವಿಪತ್ತು ನಿರ್ವಹಣಾ ಕಾಯ್ದೆ, ರಾಜ್ಯ ರಾಯಭಾರ ಕಾಯ್ದೆ ಹಾಗೂ ಇತರ ಕಾಯ್ದೆಗಳಡಿ ಯುವಕನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

Most Read Articles

Kannada
English summary
Honda Civic busted for using fake MLA sticker. Read in Kannada.
Story first published: Monday, May 4, 2020, 18:39 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X