ಮನಕಲುಕುವ ಘಟನೆ: ಮೃತ ತಾಯಿಯನ್ನು 80 ಕಿ.ಮೀ ಬೈಕ್‌ನಲ್ಲೇ ಸಾಗಿಸಿದ ಮಗ

ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಆಘಾತಕಾರಿ ವಿಡಿಯೋವೊಂದು ಹರಿದಾಡುತ್ತಿದೆ. ವ್ಯಕ್ತಿಯೊಬ್ಬ ತನ್ನ ತಾಯಿಯ ಮೃತದೇಹವನ್ನು ತನ್ನ ಮೋಟಾರ್‌ಸೈಕಲ್‌ನಲ್ಲಿ ಸುಮಾರು 50 ಕಿಲೋಮೀಟರ್‌ಗೂ ಹೆಚ್ಚು ದೂರ ಸಾಗಿಸಿದ ದೃಶ್ಯ ಹಲವರನ್ನು ಮನಕಲುಕುವಂತೆ ಮಾಡಿದೆ.

ಆಂಬುಲನ್ಸ್ ಕಲ್ಪಿಸದ ಆಸ್ಪತ್ರೆ: ಮೃತ ತಾಯಿಯನ್ನು 80 ಕಿ.ಮೀ ಬೈಕ್‌ನಲ್ಲೇ ಕೊಂಡೊಯ್ದ ಮಗ

ಮಾಧ್ಯಮ ವರದಿಗಳ ಪ್ರಕಾರ, ಮಧ್ಯಪ್ರದೇಶದ ಶಾಹದೋಲ್ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯೊಂದು ಮೃತದೇಹವನ್ನು ಸಾಗಿಸಲು ನಿರಾಕರಿಸಿದ್ದರಿಂದ ಆ ವ್ಯಕ್ತಿ ಬೈಕ್‌ನಲ್ಲೇ ಸಾಗಿಸಿದ್ದಾನೆ. ಮೃತ ಮಹಿಳೆಯನ್ನು ಮಧ್ಯಪ್ರದೇಶ-ಛತ್ತೀಸ್‌ಗಢ ಗಡಿಯಲ್ಲಿರುವ ಅನುಪ್ಪುರ್ ಜಿಲ್ಲೆಯ ನಿವಾಸಿ ಜೈಮಂತ್ರಿ ಯಾದವ್ ಎಂದು ಗುರುತಿಸಲಾಗಿದೆ.

ಆಂಬುಲನ್ಸ್ ಕಲ್ಪಿಸದ ಆಸ್ಪತ್ರೆ: ಮೃತ ತಾಯಿಯನ್ನು 80 ಕಿ.ಮೀ ಬೈಕ್‌ನಲ್ಲೇ ಕೊಂಡೊಯ್ದ ಮಗ

ಕೆಲ ದಿನಗಳ ಹಿಂದೆ ತೀವ್ರ ಎದೆನೋವು ಕಾಣಿಸಿಕೊಂಡು ಆಕೆಯನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಕೆಯ ಸ್ಥಿತಿ ಹದಗೆಡುತ್ತಿದ್ದಂತೆ ಅನುಪ್ಪುರ್ ಜಿಲ್ಲಾ ಆಸ್ಪತ್ರೆಯ ಅಧಿಕಾರಿಗಳು ಅವರನ್ನು ಪಕ್ಕದ ಜಿಲ್ಲೆಯ ವೈದ್ಯಕೀಯ ಕಾಲೇಜು ಮತ್ತು ಜಿಲ್ಲಾ ಆಸ್ಪತ್ರೆಗೆ ಕಳುಹಿಸಿದ್ದಾರೆ. ಅಲ್ಲಿ ಅವರು ಚಿಕಿತ್ಸೆಯ ಸಮಯದಲ್ಲಿ ಸಾವನ್ನಪ್ಪಿದ್ದಾರೆ ಎಂದು ಆಸ್ಪತ್ರೆಯ ಸಿಬ್ಬಂದಿ ತಿಳಿಸಿದರು.

ಮಹಿಳೆ ಸಾವನ್ನಪ್ಪಿದ ನಂತರ ಶವಸಂಸ್ಕಾರಕ್ಕೆ ಮೃತದೇಹವನ್ನು ಸಾಗಿಸಲು ಆಸ್ಪತ್ರೆಯಲ್ಲಿ ಯಾವುದೇ ಶವ ವಾಹನ ಲಭ್ಯವಿಲ್ಲ ಎಂದು ಆಸ್ಪತ್ರೆ ಸಿಬ್ಬಂದಿ ಹೇಳಿದೆ. ಆದರೂ ಮನೆಗೆ ಕೊಂಡೊಯ್ಯಲು ಆಕೆಯ ಮಗ ಆಂಬುಲನ್ಸ್ ವ್ಯವಸ್ಥೆ ಮಾಡಲು ಪ್ರಯತ್ನಿಸಿದನಾದರೂ, ಯಾವುದೇ ಪ್ರಯೋಜನವಾಗಲಿಲ್ಲ.

ಆಂಬುಲನ್ಸ್ ಕಲ್ಪಿಸದ ಆಸ್ಪತ್ರೆ: ಮೃತ ತಾಯಿಯನ್ನು 80 ಕಿ.ಮೀ ಬೈಕ್‌ನಲ್ಲೇ ಕೊಂಡೊಯ್ದ ಮಗ

ಇನ್ನು ಕುಟುಂಬದವರು ಕೂಡ ಇತರೆ ಖಾಸಗಿ ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಲು ಪ್ರಯತ್ನಿಸಿದರು. ಆದರೆ ಖಾಸಗಿ ವಾಹನ ನಿರ್ವಾಹಕರು ಕೂಡ 5,000 ರೂ.ಗೆ ಬೇಡಿಕೆಯಿಟ್ಟಿದ್ದು, ಇದನ್ನು ಭರಿಸಲಾಗದ ಕಾರಣ ಮೃತದೇಹವನ್ನು ದ್ವಿಚಕ್ರ ವಾಹನದಲ್ಲಿ ತೆಗೆದುಕೊಂಡು ಹೋಗಲು ನಿರ್ಧರಿಸಿದ್ದರು. ನಂತರ, ಮೃತದೇಹವನ್ನು ಬೆಡ್‌ಶೀಟ್‌ನಲ್ಲಿ ಸುತ್ತಿ, ಮೋಟಾರ್-ಸೈಕಲ್‌ಗೆ ಕಟ್ಟಿಕೊಂಡು ಮಹಿಳೆಯ ಮಗ ಸುಮಾರು 80 ಕಿ.ಮೀ. ಪ್ರಯಾಣಿಸಿದ್ದಾನೆ.

ಆಂಬುಲನ್ಸ್ ಕಲ್ಪಿಸದ ಆಸ್ಪತ್ರೆ: ಮೃತ ತಾಯಿಯನ್ನು 80 ಕಿ.ಮೀ ಬೈಕ್‌ನಲ್ಲೇ ಕೊಂಡೊಯ್ದ ಮಗ

60 ವರ್ಷದ ಮೃತ ಮಹಿಳೆಯ ದೇಹವನ್ನು ಮರದ ಹಲಗೆಯ ಮೇಲೆ ಇರಿಸಿ ದ್ವಿಚಕ್ರ ವಾಹನವನ್ನು ಸವಾರಿ ಮಾಡಿದ್ದಾನೆ. ಈ ದೃಶ್ಯವನ್ನು ಚಿತ್ರೀಕರಿಸಿದ ದಾರಿಹೋಕರು ಅದನ್ನು ಸಾಮಾಜಿಕ ಮಾಧ್ಯಮದಲ್ಲಿ ಅಪ್‌ಲೋಡ್ ಮಾಡಿದ ನಂತರ ಘಟನೆ ಬೆಳಕಿಗೆ ಬಂದಿದೆ. ಸದ್ಯ ಈ ವಿಡಿಯೋ ಸಖತ್ ವೈರಲ್ ಆಗಿದ್ದು ಹಲವರ ಕಣ್ಣುಗಳನ್ನು ಒದ್ದೆಯಾಗಿಸಿದೆ.

ಆಂಬುಲನ್ಸ್ ಕಲ್ಪಿಸದ ಆಸ್ಪತ್ರೆ: ಮೃತ ತಾಯಿಯನ್ನು 80 ಕಿ.ಮೀ ಬೈಕ್‌ನಲ್ಲೇ ಕೊಂಡೊಯ್ದ ಮಗ

ಈ ಘಟನೆ ವೈರಲ್ ಆಗುತ್ತಿದ್ದಂತೆ ಎಚ್ಚತ್ತ ಅಧಿಕಾರಿಗಳು ಸಿಬ್ಬಂದಿಯನ್ನು ವಿಚಾರಿಸಿದ್ದು, ನಮ್ಮ ಸರ್ಕಾರಿ ವೈದ್ಯಕೀಯ ಕಾಲೇಜಿನ ಆಡಳಿತ ಮಂಡಳಿ ಶವ-ವಾಹನ ಅಥವಾ ಆಂಬ್ಯುಲೆನ್ಸ್ ಸೌಲಭ್ಯ ಲಭ್ಯವಿಲ್ಲ. ಆದರೂ ವಾಹನ ವ್ಯವಸ್ಥೆ ಮಾಡಬಹುದಿತ್ತು. ಆದರೆ ಮೃತ ಮಹಿಳೆಯ ಕುಟುಂಬವು ವಾಹನವನ್ನು ಕೇಳಲಿಲ್ಲ ಎಂದು ಹೇಳಿಕೊಂಡಿದೆ.

ಆಂಬುಲನ್ಸ್ ಕಲ್ಪಿಸದ ಆಸ್ಪತ್ರೆ: ಮೃತ ತಾಯಿಯನ್ನು 80 ಕಿ.ಮೀ ಬೈಕ್‌ನಲ್ಲೇ ಕೊಂಡೊಯ್ದ ಮಗ

ಆಂಬ್ಯುಲೆನ್ಸ್ ಅಲಭ್ಯತೆಯಿಂದಾಗಿ ಹಲವು ಕುಟುಂಬಗಳು ಸ್ವಂತವಾಗಿ ಮೃತದೇಹಗಳನ್ನು ಕೊಂಡೊಯ್ಯಬೇಕಾದ ಘಟನೆ ಮಧ್ಯಪ್ರದೇಶದಲ್ಲಿ ಇದೇ ಮೊದಲೇನಲ್ಲ. ಈ ಹಿಂದೆ ಜುಲೈ 11 ರಂದು ಗುನಾ ಜಿಲ್ಲೆಯಲ್ಲಿ 8 ವರ್ಷದ ಮಗು ತನ್ನ ಎರಡು ವರ್ಷದ ಸಹೋದರನ ಶವವನ್ನು ಮನೆಗೆ ತೆಗೆದುಕೊಂಡು ಹೋಗಲು ವಾಹನಕ್ಕಾಗಿ ಕಾಯುತ್ತಿದ್ದ ಘಟನೆ ಈ ಹಿಂದೆ ವರದಿಯಾಗಿತ್ತು.

ಆಂಬುಲನ್ಸ್ ಕಲ್ಪಿಸದ ಆಸ್ಪತ್ರೆ: ಮೃತ ತಾಯಿಯನ್ನು 80 ಕಿ.ಮೀ ಬೈಕ್‌ನಲ್ಲೇ ಕೊಂಡೊಯ್ದ ಮಗ

ಇಂತಹ ಪ್ರಕರಣಗಳಲ್ಲಿ ಕೆಲವು ಬೆಳಕಿಗೆ ಬಂದರೆ ಇನ್ನೂ ಕೆಲವು ಯಾರಿಗೂ ತಿಳಿಯದೇ ಮರೆಯಾಗುತ್ತಿವೆ. ಈ ಬಗ್ಗೆ ಅಲ್ಲಿ ಸರ್ಕಾರ ಯಾವುದೇ ಕ್ರಮ ಕೈಗೊಳ್ಳದಿರುವುದು ವಿಪರ್ಯಾಸವಾಗಿದೆ.

ಆಂಬುಲನ್ಸ್ ಕಲ್ಪಿಸದ ಆಸ್ಪತ್ರೆ: ಮೃತ ತಾಯಿಯನ್ನು 80 ಕಿ.ಮೀ ಬೈಕ್‌ನಲ್ಲೇ ಕೊಂಡೊಯ್ದ ಮಗ

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಹೆತ್ತ ತಾಯಿಯ ಮರತದೇಹವನ್ನು ಯಾವುದೇ ಮಗನು ಬೈಕ್‌ನಲ್ಲಿ ಕೊಂಡೊಯ್ಯಲು ಬಯಸುವುಯುವುದಿಲ್ಲ. ಇಂತಹ ಸಂದರ್ಭಗಳನ್ನು ದುರ್ವಿನಿಯೋಗಗೊಳಿಸಿಕೊಳ್ಳುವ ಖಾಸಗಿ ಆಂಬುಲನ್ಸ್ ಚಾಲಕರ ಮೇಲೆ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕಾಗಿದೆ. ಇಂತಹ ಪರಿಸ್ಥಿತಿ ಮತ್ಯಾರಿಗೂ ಬರದಂತೆ ನೋಡಿಕೊಳ್ಳಬೇಕಿದ್ದು, ಈ ಬಗ್ಗೆ ಆಸ್ಪತ್ರೆ ಸಿಬ್ಬಂದಿಯನ್ನು ತರಾಟೆ ತೆಗೆದುಕೊಂಡು ವಜಾಗೊಳಿಸಬೇಕು.

Most Read Articles

Kannada
English summary
Hospital without ambulance Son carried dead mother 80 km on bike
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X