ಅಸಲಿ-ನಕಲಿ ನೋಟುಗಳ ನಿಜ ಬಣ್ಣ ಬಲ್ಲಿರೇನು?
ಬೆಂಗಳೂರಿನಲ್ಲಿ ಖೋಟಾ ನೋಟುಗಳ ಹಾವಳಿ ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಲೇ ಇದೆ. ಇಂತಹದೊಂದು ಪ್ರಸಂಗ ನನಗೂ ಎದುರಾಗಿತ್ತು. ಎಂದಿನಂತೆ ಕಚೇರಿಗೆ ತೆರಳಲು ಸಿದ್ಧವಾಗುತ್ತಿದ್ದ ನನಗೆ ಗಾಡಿಯಲ್ಲಿ ಇಂಧನ ಖಾಲಿಯಾಗಿರುವ ವಿಚಾರ ತಕ್ಷಣ ಜ್ಞಾಪಕಕ್ಕೆ ಬಂದಿತ್ತು.
ಇನ್ನೇನು ಆಫೀಸ್‌ಗೆ ಬರುವ ತರಾತುರಿಯಲ್ಲಿ ಇಂಧನ ಮರು ತುಂಬುವಿಕೆಗೆ ಬಂಕ್‌ಗೆ ತೆರಳಿದ ನನಗೆ ಆಶ್ಚರ್ಯ ಕಾದಿತ್ತು. 200 ರು.ಗಳ ಪೆಟ್ರೋಲ್ ತುಂಬಿಸಿದ ನಾನು ಎರಡು ಹಸಿಬಿಸಿ 100 ರು.ಗಳ ನೋಟುಗಳನ್ನು ಪೆಟ್ರೋಲ್ ಬಂಕ್ ಸಿಬ್ಬಂದಿಗೆ ನೀಡಿದಾಗ ಆತನ ಕಣ್ಣುಗಳು ನನ್ನನ್ನೇ ದಿಟ್ಟಿಸಿ ನೋಡುತ್ತಿದ್ದವು. ಆತ ಇದನ್ನು ಖೋಟಾ ನೋಟು ಎಂದು ಹೇಳುವಷ್ಟರಲ್ಲೇ ನನ್ನ ಮುಖ ಸಪ್ಪೆಯಾಗಿ ಬಿಟ್ಟಿತ್ತು.
ಆದರೆ ನಿಜಕ್ಕೂ ಇದು ಖೋಟಾ ನೋಟೇ? ಖಂಡಿತ ಅಲ್ಲ. 2005 ಇಸವಿಗಿಂತಲೂ ಮುಂಚಿತವಾಗಿ ಮುದ್ರಿಸಲ್ಪಟ್ಟ ನೋಟುಗಳನ್ನು ತಪ್ಪಾಗಿ ನಕಲಿ ನೋಟು ಎಂದು ಅರ್ಥೈಸಲಾಗಿದೆ. 1996ನೇ ಇಸವಿಯಿಂದ 2005ನೇ ಇಸವಿಯ ವರೆಗೆ ಮುದ್ರಿಸಲ್ಪಟ್ಟ ಇಂತಹ ನೋಟುಗಳ ಚಲಾವಣೆಗಳನ್ನು ಆರ್‌ಬಿಐ ಹಿಂಪಡೆದುಕೊಂಡಿದೆ.
ಹಾಗೊಂದು ವೇಳೆ ನಿಮ್ಮ ಕೈಗೂ ಇಂತಹದೊಂದು ನೋಟು ಬಂದು ಸೇರಿದರೆ ರಾಷ್ಟ್ರೀಕೃತ ಬ್ಯಾಂಕ್‌ಗೆ ತೆರಳಿ ಬದಲಾಯಿಸಿಕೊಳ್ಳಲಬಹುದು. ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಭೇಟಿ ಕೊಡಿರಿ
ಅಷ್ಟಕ್ಕೂ ಅಸಲಿ ನೋಟುಗಳನ್ನು ಪತ್ತೆ ಹಚ್ಚುವುದು ಹೇಗೆ? ಇಲ್ಲಿದೆ ನೋಡಿ


Click it and Unblock the Notifications








