HSRP ನಂಬರ್‌ಪ್ಲೇಟ್‌ ಗಡುವು ಮತ್ತೆ ಮುಂದಕ್ಕೆ: ಕೊನೆಯ ದಿನಾಂಕಕ್ಕೆ ಇನ್ನೆಷ್ಟು ತಿಂಗಳು ಬಾಕಿ?

ಸದ್ಯಕ್ಕೆ ನಮ್ಮ ರಾಜ್ಯದಲ್ಲಿ ಮಾತ್ರವಲ್ಲದೇ, ದೇಶದಲ್ಲಿಯೇ ಸದ್ದು ಮಾಡುತ್ತಿರುವ ವಿಷಯಗಳಲ್ಲಿ HSRP ನಂಬರ್ ಪ್ಲೇಟ್‌ ಸಹ ಒಂದು. ಈಗಾಗಲೇ ಭಾರತ ಸರ್ಕಾರ ಎಲ್ಲಾ ರಾಜ್ಯಗಳಲ್ಲೂ ಈ ನಂಬರ್‌ ಪ್ಲೇಟ್‌ ಅನ್ನು ವಾಹನಕ್ಕೆ ಅಳವಡಿಸುವಂತೆ ಆದೇಶ ನಿಡಿದ್ದು ಬಹುತೇಕ ರಾಜ್ಯಗಳೆಲ್ಲವೂ ಈ ಕುರಿತಾದ ಕೆಲಸವನ್ನು ಮಾಡುತ್ತಿದೆ.

ಇದರಲ್ಲಿ ಕರ್ನಾಟಕದಂತಹ ಕೆಲವು ರಾಜ್ಯಗಳಂತೂ ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಂಡಿದೆ. ಈಗಾಗಲೇ ಕರ್ನಾಟಕ ಸರ್ಕಾರ ಫೆಬ್ರವರಿ ೧೭ ರ ಒಳಗೆ ತನ್ನ ವಾಹನದ ನಂಬರ್‌ ಪ್ಲೇಟ್‌ ಅನ್ನು HSRP ನಂಬರ್‌ ಪ್ಲೇಟ್‌ಗೆ ಬದಲಾಯಿಸಲು ಗಡುವು ನೀಡಿತ್ತು. ಇದನ್ನು ಕಾರ್ಯ ರೂಪಕ್ಕೆ ತರಲು ಸಾಕಷ್ಟು ಯೋಜನೆಗಳನ್ನು ಸಹ ರೂಪಿಸಿಕೊಂಡಿದ್ದು.

HSRP Number Plate Deadline Extends For Three Months In Karnataka

ಇದೀಗ ಬಂದ ಮಾಹಿತಿಗಳ ಪ್ರಕಾರ ತಮ್ಮ ವಾಹನದ ನಂಬರ್‌ ಪ್ಲೇಟ್‌ ಅನ್ನು HSRP ನಂಬರ್‌ ಪ್ಲೆಟ್‌ ಆಗಿ ಬದಲಾಯಿಸಲು ನೀಡಿದ್ದ ಗಡುವನ್ನು ಇದೀಗ ವಿಸ್ತರಿಸಲಾಗಿದೆ. ಕರ್ನಾಟಕ ಸರ್ಕಾರ ಈ ಹಿಂದೆ ನೀಡಿದ್ದ ಗಡುವಾದ ಫೆಬ್ರವರಿ ೧೭ ಅನ್ನು ವಿಸ್ತರಿಸಿದ್ದು ಮುಂದಿನ ಮೂರು ತಿಂಗಳುಗಳ ಕಾಲ HSRP ನಂಬರ್ ಪ್ಲೇಟ್ ಹಾಕಿಸಿಕೊಳ್ಳಲು ಕಾಲಾವಕಾಶವನ್ನು ನೀಡಿದೆ.

ಹೌದು, ರಾಜ್ಯ ಸರ್ಕಾರ ಈ ಗಡುವನ್ನು ಮುಂದಿನ ಮೇ ತಿಂಗಳ ೧೭ ರವರೆಗೆ ವಿಸ್ತರಿಸಿದ್ದು, ವಾಹನ ಚಾಲಕರಿಗೆ ಕಾಲಾವಕಾಶವನ್ನು ಕೊಟ್ಟಿದ್ದಾರೆ. ಈಗಿರುವ ವಾಹನಗಳ ಒಟ್ಟು ಸಂಖ್ಯೆಯಲ್ಲಿ ಕೇವಲ ೯.೧೬% ವಾಹನಗಳಷ್ಟೇ HSRP ನಂಬರ್ ಪ್ಲೇಟ್‌ ಅನ್ನು ಅಳವಡಿಸಿದ್ದು, ಸುಮಾರು ೯೦% ವಾಹನಗಳು HSRP ನಂಬರ್ ಪ್ಲೇಟ್‌ ಅನ್ನು ಇನ್ನೂ ಅಳವಡಿಸಬೇಕಷ್ಟೇ.

HSRP Number Plate Deadline Extends For Three Months In Karnataka

ಮೇ 17 ರಿಂದ ಹೆಚ್ಎಸ್ಆರ್​ಪಿ ನಂಬರ್ ಪ್ಲೇಟ್ ಅಳವಡಿಸದ ವಾಹನ ಸವಾರರಿಗೆ ದಂಡ ಬೀಳಲಿದೆ. ಮೊದಲ ಬಾರಿಗೆ 1000 ರೂ ದಂಡ. ಎರಡನೇ ಬಾರಿ ಸಿಕ್ಕಿಬಿದ್ದರೆ 2000 ರೂ ವಿಧಿಸಲು ಸಾರಿಗೆ ಇಲಾಖೆ ಮುಂದಾಗಿದೆ. ಈ ಮೊದಲು ಹೆಚ್‌ಎಸ್‌ಆರ್‌ಪಿ ಹಾಕಿಸಲು ಸಾರಿಗೆ ಇಲಾಖೆ ಫೆಬ್ರವರಿ17ರ ಗಡುವು ವಿಧಿಸಿತ್ತು. ಆದರೆ, ವಾಹನ ಮಾಲೀಕರು ಹೆಚ್‌ಎಸ್‌ಆರ್‌ಪಿ ನಂಬರ್ ಪೇಟ್ ಹಾಕಿಸಲು ಸಾಧ್ಯವಿಲ್ಲ ಎಂದು ತಿಳಿದ ಸಾರಿಗೆ ಇಲಾಖೆಯು 2024 ರ ಮೇ 17ರವರೆಗೆ ವಿಸ್ತರಣೆ ಮಾಡಲಾಗಿದೆ.

ಮಾಹಿತಿಗಳ ಪ್ರಕಾರ ಯಾವೆಲ್ಲಾ ವಾಹನಗಳು 2022, ಜುಲೈ ತಿಂಗಳ ನಂತರ ಮಾರಾಟವಾಗಿದೆಯೋ, ಅಂತಹ ವಾಹನಗಳಲ್ಲಿ ಈ ಹೈ ಸೆಕ್ಯೂರಿಟಿ ನಂಬರ್‌ ಪ್ಲೇಟ್‌ಗಳ ಜೊತೆಯೇ ಬಂದಿದೆ. ಕರ್ನಾಟಕದಂತಹ ರಾಜ್ಯಗಳು ಇದೀಗ ಈ ಹೈ ಸೆಕ್ಯೂರಿಟಿ ನಂಬರ್‌ ಪ್ಲೇಟ್‌ಗಳನ್ನು ಕಡ್ಡಾಯ ಗೊಳಿಸಿದ್ದು ಮೇ 17 ರ ನಂತರ ಯಾವೆಲ್ಲಾ ವಾಹನದಲ್ಲಿ ಈ ನಂಬರ್ ಪ್ಲೇಟ್‌ಗಳು ಇಲ್ಲವೋ, ಆ ವಾಹನದ ಮಾಲೀಕರಿಗೆ ಸುಮಾರು 500 ರಿಂದ 1000 ವರೆಗೆ ದಂಡವನ್ನು ವಿಧಿಸಲಾಗುತ್ತದೆ.

ಇತ್ತೀಚಿನ ಮಾಹಿತಿಗಳ ಪ್ರಕಾರ ಸದ್ಯಕ್ಕೆ ನೀವು ಈ ಹೈ ಸೆಕ್ಯೂರಿಟಿ ನಂಬರ್‌ ಪ್ಲೇಟ್‌ಗಳನ್ನು ಪಡೆಯಲು ನೀವು ಕೇವಲ SIAM ಅಥವಾ ಸೊಸಯಟಿ ಆಫ್‌ ಇಂಡಿಯನ್‌ ಆಟೋಮೊಬೈಲ್‌ ಮಾನುಫಾಕ್ಚರ್ಸ್‌ ಔದ್ಯೋಗಿಕ ವೆಬ್‌ಸೈಟ್‌ನಲ್ಲಿ ಮಾತ್ರ ಸಾಧ್ಯ. HSRP ನಂಬರ್‌ ಪ್ಲೇಟ್‌ಗೆ ಅರ್ಜಿ ಹಾಕಲು ನೀವು ಆ ವೆಬ್‌ಸೈಟ್‌ನಲ್ಲಿ ಕೇಳುವ ಮಾಃಇತಿಗಳನ್ನು ತುಂಬಿಸಬೇಕಾಗುತ್ತದೆ. ಇದರಲ್ಲಿ ಸಾಧಾರಣವಾಗಿ ನಿಮ್ಮ ಹೆಸರು, ಈಮೈಲ್‌, ವಾಹನದ ನಂಬರ್, ಚೇಸಿಸ್‌ ನಂಬರ್‌, ರಾಜ್ಯದ ಹೆಸರು ಮತ್ತು ಇನ್ನಿತರ ಮಾಹಿತಿಗಳನ್ನು ನೀಡಬೇಕಾಗುತ್ತದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Wednesday, February 14, 2024, 17:47 [IST]
English summary
Hsrp number plate deadline extends for three months in karnataka
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+