HSRP ನಂಬರ್ ಪ್ಲೇಟ್ ಗಡುವು ಮುಂದಕ್ಕೆ: ಈಗಲೂ ಹಾಕಿಸಿಕೊಳ್ಳದಿದ್ದರೆ ಸರ್ಕಾರ ಸುಮ್ಮನಿರಲ್ಲ!
ಸದ್ಯಕ್ಕೆ ರಾಜ್ಯದಲ್ಲಿ ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಸದ್ದು ಮಾಡುತ್ತಿರುವ ವಿಚಾರ HSRP ನಂಬರ್ ಪ್ಲೇಟ್ ಅಥವಾ ಹೈ ಸೆಕ್ಯೂರಿಟಿ ನಂಬರ್ ಪ್ಲೇಟ್. ಈಗಾಗಲೇ ಸದ್ಯಕ್ಕೆ ವಾಹನಗಳಲ್ಲಿರುವ ನಂಬರ್ ಪ್ಲೇಟ್ ಅನ್ನು ಬದಲಿಸಲು ರಾಜ್ಯ ಸರ್ಕಾರ ಹಲವು ಗಡುವುಗಳನ್ನು ನೀಡಿದ್ದರೂ, ಯಾರೂ ಸಹ ಈ ಕುರಿತಾಗಿ ಹೆಚ್ಚಿನ ತಲೆ ಕೆಡಿಸಿಕೊಂಡಿರಲಿಲ್ಲ.
ಇದೀಗ ಸರ್ಕಾರ ತಮ್ಮ ವಾಹನಕ್ಕೆ ಹೈ ಸೆಕ್ಯೂರಿಟಿ ನಂಬರ್ ಪ್ಲೇಟ್ ಅನ್ನು ಬದಲಾಯಿಸುವ ಗಡುವನ್ನು ಮುಂದಕ್ಕೆ ಹಾಕಿದ್ದು, ಫೆಭ್ರವರಿ 17 ರವರೆಗೆ ಈ ಗಡುವನ್ನು ವಿಸ್ತರಿಸಿದೆ. ರಾಜ್ಯ ಸಾರಿಗೆ ಇಲಾಖೆ ಏನೋ ಈಗಾಗಲೇ ಎರಡ್ ಎರಡು ಬಾರಿ ಕಾಲಾವಕಾಶ ನೀಡಿದೆ. ಫೆಬ್ರವರಿ 17 ರೊಳಗೆ ಹೆಚ್ಎಸ್ಆರ್ಪಿ ನಂಬರ್ ಪ್ಲೇಟ್ ಹಾಕಿಸಿಕೊಂಡಿಲ್ಲ ಅಂದರೆ ದಂಡ ಬೀಳುತ್ತದೆ.

ಫೆ.17 ರಿಂದ ಹೆಚ್ಎಸ್ಆರ್ಪಿ ನಂಬರ್ ಪ್ಲೇಟ್ ಅಳವಡಿಸದ ವಾಹನ ಸವಾರರಿಗೆ ದಂಡ ಬೀಳಲಿದೆ. ಮೊದಲ ಬಾರಿಗೆ 1000 ರೂ ದಂಡ. ಎರಡನೇ ಬಾರಿ ಸಿಕ್ಕಿಬಿದ್ದರೆ 2000 ರೂ ವಿಧಿಸಲು ಸಾರಿಗೆ ಇಲಾಖೆ ಮುಂದಾಗಿದೆ. ಈ ಮೊದಲು ಹೆಚ್‌ಎಸ್‌ಆರ್‌ಪಿ ಹಾಕಿಸಲು ಸಾರಿಗೆ ಇಲಾಖೆ 2023ರ ನ.17ರ ಗಡುವು ವಿಧಿಸಿತ್ತು. ಆದರೆ, ವಾಹನ ಮಾಲೀಕರು ಹೆಚ್‌ಎಸ್‌ಆರ್‌ಪಿ ನಂಬರ್ ಪೇಟ್ ಹಾಕಿಸಲಿಲ್ಲ. ಇದರಿಂದ ಸಾರಿಗೆ ಇಲಾಖೆಯು 2024ರ ಫೆಬ್ರವರಿ 17ರವರೆಗೆ ವಿಸ್ತರಣೆ ಮಾಡಲಾಗಿತ್ತು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ನಡೆದ ಸಾರಿಗೆ ಇಲಾಖೆ ಸಭೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ರಾಮಲಿಂಗಾ ರೆಡ್ಡಿ, ಅನೇಕ ಇಲಾಖೆಗಳನ್ನ ಸಿಎಂ ಸಭೆ ಕರೆದಿದ್ದರು. ಆಟೋ ಟ್ಯಾಕ್ಸಿ, ಲಾರಿ ಅಸೋಷಿಯಷನ್ ಅವರು ಎಲ್ಲಾ ಬಂದಿದ್ದರು. ಅವರ ಬೇಡಿಕೆಗಳನ್ನ ಕೂಡ ಇಟ್ಟಿದ್ದಾರೆ. ಜೊತೆಗೆ, ನಮ್ಮ ಸರ್ಕಾರ ಬಂದಮೇಲೆ ಸಾಕಷ್ಟು ಬೇಡಿಕೆ ಈಡೇರಿಸಿದ್ದೇವೆ ಎಂದರು. ಇಂದು ಹೊಸ ಬೇಡಿಕೆಗಳನ್ನೂ ಸಹ ಇಟ್ಟಿದ್ದಾರೆ. ಮುಂದಿನದ್ದು ಬಜೆಟ್ ದಿನ ನೋಡೋಣ ಎಂದು ಹೇಳಿದ್ದೇವೆ ಎಂದು ಹೇಳಿದರು.
ಹೈಸೆಕ್ಯೂರಿಟಿ ನಂಬರ್ ಪ್ಲೇಟ್ ಕುರಿತು ಕರ್ನಾಟಕ ರಾಜ್ಯ ಸಾರಿಗೆ ಇಲಾಖೆ ಈಗಾಗಲೇ ಹಲವು ಗಡುವುಗಳನ್ನು ನೀಡಿ ವಿಸ್ತರಿಸಿದೆ. ಫೆಬ್ರವರಿ 17 ಕೊನಯ ದಿನ. ಬಳಿಕ ದುಬಾರಿ ದಂಡ ಪಾವತಿ ತಲೆನೋವು ಶುರುವಾಗಲಿದೆ. ನಕಲಿ ನಂಬರ್ ಪ್ಲೇಟ್, ವಾಹನಗಳನ್ನು ಕಾನೂನು ಬಾಹಿರ ಚಟುವಟಿಕೆಗೆ ಬಳಕೆ ಮಾಡುವುದನ್ನು ತಪ್ಪಿಸಲು ಹಾಗೂ ವಾಹನಗಳನ್ನು ಟ್ರಾಕ್ ಮಾಡಲು ಸೇರಿದಂತೆ ಹಲವು ಕಾರಣಗಳಿಂದ ಹೈಸೆಕ್ಯೂರಿಟಿ ನಂಬರ್ ಪ್ಲೇಟ್ ಅಗತ್ಯವಾಗಿದೆ.
ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಎಂದರೇನು? ಹೆಚ್‌ಎಸ್‌ಆರ್‌ಪಿ ಎಂಬುದು ವಾಹನಗಳ ನೋಂದಣಿ ನಂಬರ್ ಪ್ಲೇಟ್ ಆಗಿದೆ. ಹೈ ಸೆಕ್ಯುರಿಟಿ ರಿಜಿಸ್ಟೇಷನ್ ಪ್ಲೇಟ್ ಶಾಶ್ವತ ಗುರುತಿನ ನಂಬರ್ ಒದಗಿಸುತ್ತದೆ. ಅಲ್ಯೂಮಿನಿಯಂ ಲೋಹದಲ್ಲಿ ತಯಾರಿಸಿದ ನಂಬರ್ ಪ್ಲೇಟ್. ಬಳಕೆಯಿಲ್ಲದ ಎರಡು ಲಾಕ್‌ಗಳನ್ನು ಹೊಂದಿದೆ. ಮುಂಭಾಗದ ಮತ್ತು ಹಿಂಭಾಗದ ನಂಬರ್ ಪ್ಲೇಟ್‌ನ ಎಡಬದಿಯ ಮೇಲ್ತುದಿಯಲ್ಲಿ ಕ್ರೋಮಿಯಂ ಹಾಲೋಗ್ರಾಂ ಹೊಂದಿದ್ದು, ಅದರಲ್ಲಿ ಆಶೋಕಚಕ್ರದ ಚಿತ್ರವಿದೆ.
ನಂಬರ್ ಪ್ಲೇಟ್ ಪಡೆಯುವುದು ಹೇಗೆ? ಇದಕ್ಕಾಗಿ ನೀವು ಕರ್ನಾಟಕ ಸಾರಿಗೆ ಇಲಾಖೆಯ ವೆಬ್‌ಸೈಟ್ https://transport.karnataka.gov.in ಅಥವಾ www.siam.in ಗೆ ಭೇಟಿ ನೀಡಬೇಕು. ಇಲ್ಲಿ ಹೆಚ್‌ಎಸ್‌ಆರ್‌ಪಿ ಮೇಲೆ ಕ್ಲಿಕ್ ಮಾಡಿ. ಅಲ್ಲಿ ನಿಮ್ಮ ವಾಹನದ ಉತ್ಪಾದಕ ಕಂಪನಿಯನ್ನು ಆಯ್ಕೆ ಮಾಡಿ. ಬಳಿಕ ಅಲ್ಲಿ ಬೇಸಿಕ್ ವೆಹಿಕಲ್ ಡಿಟೇಲ್ಸ್ ಕೇಳಿರುವುದನ್ನು ಭರ್ತಿ ಮಾಡಿ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications