ಹೊಸ ವಿಶ್ವ ದಾಖಲೆ ನಿರ್ಮಿಸಲಿದೆ ಶ್ರೀ ಸಿದ್ಧರೂಢ ಸ್ವಾಮಿಜಿ ರೈಲು ನಿಲ್ದಾಣ

ಇನ್ನು ಕೆಲವೇ ದಿನಗಳಲ್ಲಿ ಹುಬ್ಬಳ್ಳಿಯಲ್ಲಿರುವ ಶ್ರೀ ಸಿದ್ಧರೂಢ ಸ್ವಾಮಿಜಿ ರೈಲು ನಿಲ್ದಾಣವು ವಿಶ್ವದ ಅತಿ ಉದ್ದದ ಪ್ಲಾಟ್‌ಫಾರಂ ಎಂಬ ಹೆಗ್ಗಳಿಕೆಯನ್ನು ಹೊಂದಲಿದೆ. ಕೇಂದ್ರ ಸರ್ಕಾರವು ಈ ವರ್ಷದ ಸೆಪ್ಟೆಂಬರ್‌ ತಿಂಗಳಿನಲ್ಲಿ ಈ ರೈಲ್ವೆ ನಿಲ್ದಾಣದ ಹೆಸರನ್ನು ಹುಬ್ಬಳ್ಳಿ ರೈಲ್ವೆ ನಿಲ್ದಾಣದಿಂದ ಶ್ರೀ ಸಿದ್ಧರೂಢ ಸ್ವಾಮೀಜಿ ರೈಲು ನಿಲ್ದಾಣ ಎಂದು ಬದಲಿಸಿತು.

ಹೊಸ ವಿಶ್ವ ದಾಖಲೆ ನಿರ್ಮಿಸಲಿದೆ ಶ್ರೀ ಸಿದ್ಧರೂಢ ಸ್ವಾಮಿಜಿ ರೈಲು ನಿಲ್ದಾಣ

ಸದ್ಯ ಉತ್ತರಪ್ರದೇಶದಲ್ಲಿರುವ ಗೋರಖ್‌ಪುರ ರೈಲ್ವೆ ನಿಲ್ದಾಣವು ಅತಿ ಉದ್ದದ ಪ್ಲಾಟ್‌ಫಾರಂ ಎಂಬ ಹೆಗ್ಗಳಿಕೆಯನ್ನು ಹೊಂದಿದೆ. ಗೋರಖ್‌ಪುರ ರೈಲ್ವೆ ನಿಲ್ದಾಣದ ಪ್ಲಾಟ್‌ಫಾರಂನ ಉದ್ದ 1,366 ಮೀಟರ್ ಗಳಾದರೆ, ಶ್ರೀ ಸಿದ್ಧರೂಢ ಸ್ವಾಮೀಜಿ ರೈಲು ನಿಲ್ದಾಣದ ಪ್ಲಾಟ್‌ಫಾರಂನ ಉದ್ದ 1,505 ಮೀಟರ್‌ ಗಳಾಗಲಿದೆ.

ಹೊಸ ವಿಶ್ವ ದಾಖಲೆ ನಿರ್ಮಿಸಲಿದೆ ಶ್ರೀ ಸಿದ್ಧರೂಢ ಸ್ವಾಮಿಜಿ ರೈಲು ನಿಲ್ದಾಣ

ಈ ಪ್ಲಾಟ್‌ಫಾರಂನ ನಿರ್ಮಾಣ ಕಾರ್ಯವು ಶೀಘ್ರಗತಿಯಲ್ಲಿ ಸಾಗುತ್ತಿದ್ದು, ಈ ವರ್ಷದ ಅಂತ್ಯದ ವೇಳೆಗೆ ಪೂರ್ಣಗೊಳ್ಳಲಿದೆ ಎಂದು ರೈಲ್ವೆ ಇಲಾಖೆಯು ಮಾಹಿತಿ ನೀಡಿದೆ. ಮೊದಲು ಈ ಪ್ಲಾಟ್‌ಫಾರಂ‌ ಕೇವಲ 500 ಮೀಟರ್ ಉದ್ದವಾಗಿತ್ತು.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಹೊಸ ವಿಶ್ವ ದಾಖಲೆ ನಿರ್ಮಿಸಲಿದೆ ಶ್ರೀ ಸಿದ್ಧರೂಢ ಸ್ವಾಮಿಜಿ ರೈಲು ನಿಲ್ದಾಣ

ಪ್ರಯಾಣಿಕರ ಸಂಖ್ಯೆಯನ್ನು ಪರಿಗಣಿಸಿ ನೈಋತ್ಯ ರೈಲ್ವೆಯು ಈ ಪ್ಲಾಟ್‌ಫಾರಂ‌ನ ಉದ್ದವನ್ನು 1,400 ಮೀಟರ್‌ಗಳಿಗೆ ಹೆಚ್ಚಿಸಲು ನಿರ್ಧರಿಸಿತು. ನಂತರ ಈ ಯೋಜನೆಯನ್ನು 1,505 ಮೀಟರ್‌ಗಳಿಗೆ ಬದಲಿಸಲು ನಿರ್ಧರಿಸಿತು.

ಹೊಸ ವಿಶ್ವ ದಾಖಲೆ ನಿರ್ಮಿಸಲಿದೆ ಶ್ರೀ ಸಿದ್ಧರೂಢ ಸ್ವಾಮಿಜಿ ರೈಲು ನಿಲ್ದಾಣ

ಈ ಯೋಜನೆಗಾಗಿ ರೈಲ್ವೆ ಇಲಾಖೆಯು ರೂ.90 ಕೋಟಿ ಖರ್ಚು ಮಾಡುತ್ತಿದೆ. ಈ ಪ್ಲಾಟ್‌ಫಾರಂ‌ ಜನವರಿ 2021ರೊಳಗೆ ಪೂರ್ಣಗೊಳ್ಳಲಿದೆ. ಮೊದಲು ಈ ಯೋಜನೆಯನ್ನು 2020ರ ಜೂನ್ ವೇಳೆಗೆ ಮುಗಿಸಬೇಕಿತ್ತು. ಕೋವಿಡ್ -19 ಕಾರಣದಿಂದ ಕಾರ್ಮಿಕರ ಕೊರತೆಯುಂಟಾಗಿ ಮುಂದಿನ ವರ್ಷ ಪೂರ್ಣಗೊಳ್ಳಲಿದೆ.

ಹೊಸ ವಿಶ್ವ ದಾಖಲೆ ನಿರ್ಮಿಸಲಿದೆ ಶ್ರೀ ಸಿದ್ಧರೂಢ ಸ್ವಾಮಿಜಿ ರೈಲು ನಿಲ್ದಾಣ

ಈ ಪ್ಲಾಟ್‌ಫಾರಂ‌ ನಿರ್ಮಾಣದಲ್ಲಿ 250ಕ್ಕೂ ಹೆಚ್ಚು ಕಾರ್ಮಿಕರು ತೊಡಗಿದ್ದಾರೆ. 2030ರ ವೇಳೆಗೆ ಭಾರತೀಯ ರೈಲ್ವೆಯನ್ನು ಸಂಪೂರ್ಣವಾಗಿ ಎಲೆಕ್ಟ್ರಿಕ್ ಕರಣಗೊಳಿಸುವ ನಿಟ್ಟಿನಲ್ಲಿ ರೈಲ್ವೆ ಇಲಾಖೆಯು ಕಾರ್ಯನಿರ್ವಹಿಸುತ್ತಿದೆ.

ಹೊಸ ವಿಶ್ವ ದಾಖಲೆ ನಿರ್ಮಿಸಲಿದೆ ಶ್ರೀ ಸಿದ್ಧರೂಢ ಸ್ವಾಮಿಜಿ ರೈಲು ನಿಲ್ದಾಣ

ರೈಲ್ವೆ ಸಚಿವ ಪಿಯೂಷ್ ಗೋಯಲ್ 2030ರಿಂದ ಎಲ್ಲಾ ರೈಲುಗಳು ಸಂಪೂರ್ಣವಾಗಿ ಎಲೆಕ್ಟ್ರಿಕ್ ಶಕ್ತಿಯ ಮೇಲೆ ಚಲಿಸಲಿವೆ. ಹಾಗೂ ಭಾರತೀಯ ರೈಲ್ವೆ ಶೂನ್ಯ ಇಂಗಾಲ ಹೊರಸೂಸುವ ರೈಲ್ವೆ ಆಗಲಿದೆ ಎಂದು ಹೇಳಿದ್ದಾರೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಹೊಸ ವಿಶ್ವ ದಾಖಲೆ ನಿರ್ಮಿಸಲಿದೆ ಶ್ರೀ ಸಿದ್ಧರೂಢ ಸ್ವಾಮಿಜಿ ರೈಲು ನಿಲ್ದಾಣ

ಭಾರತೀಯ ರೈಲ್ವೆ ಪ್ರತಿವರ್ಷ ಸುಮಾರು 800 ಕೋಟಿ ಪ್ರಯಾಣಿಕರನ್ನು ಹಾಗೂ 100.2 ಮಿಲಿಯನ್ ಟನ್ ಸರಕುಗಳನ್ನು ಸಾಗಿಸುತ್ತದೆ. ಭಾರತವು ತನ್ನ ಸಂಪೂರ್ಣ ರೈಲು ಜಾಲವನ್ನು 100%ನಷ್ಟು ಎಲೆಕ್ಟ್ರಿಕ್ ಕರಣ ಗೊಳಿಸುವ ಮೊದಲ ದೇಶವಾಗಲಿದೆ.

ಹೊಸ ವಿಶ್ವ ದಾಖಲೆ ನಿರ್ಮಿಸಲಿದೆ ಶ್ರೀ ಸಿದ್ಧರೂಢ ಸ್ವಾಮಿಜಿ ರೈಲು ನಿಲ್ದಾಣ

ಅಮೆರಿಕಾ, ರಷ್ಯಾ ಹಾಗೂ ಚೀನಾ ದೇಶಗಳ ನಂತರ ಭಾರತವು ವಿಶ್ವದ ನಾಲ್ಕನೇ ಅತಿದೊಡ್ಡ ರೈಲು ಜಾಲವನ್ನು ಹೊಂದಿದೆ. ದೇಶದಲ್ಲಿ 67,368 ಕಿ.ಮೀ ರೈಲ್ವೆ ಹಳಿಗಳು ಹಾಗೂ 7,300 ರೈಲು ನಿಲ್ದಾಣಗಳಿವೆ. ರೈಲು ಹಳಿಗಳ ಸುತ್ತಲಿರುವ ಭೂಮಿಯಲ್ಲಿ ಭಾರತದಲ್ಲಿ ತಯಾರಿಸಿದ ಸೋಲಾರ್ ವಿದ್ಯುತ್ ಉಪಕರಣಗಳನ್ನು ಬಳಸಿ 20 ಗಿಗಾ ವ್ಯಾಟ್ ವಿದ್ಯುತ್ ಉತ್ಪಾದಿಸಲಾಗುತ್ತದೆ.

Most Read Articles

Kannada
English summary
Hubli Railway station to set new record as longest platform in the world. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X