ಕಾರಿನ ವಿಂಡ್‌ಶೀಲ್ಡ್ ಮೇಲೆ ಬಿದ್ದ ಬೃಹತ್ ಗಾತ್ರದ ಮಂಜುಗಡ್ಡೆ

ಕಾರು ಪಾರ್ಕಿಂಗ್ ಮಾಡಿರುವಾಗ ಯಾವುದಾದರೂ ವಸ್ತುಗಳು ಕಾರುಗಳ ಮೇಲೆ ಹಠಾತ್ ಆಗಿ ಬೀಳಬಹುದು. ಈ ಹಿಂದೆ ಪಾರ್ಕಿಂಗ್'ನಲ್ಲಿ ನಿಂತಿದ್ದ ಇನೋವಾ ಕಾರಿನ ಮೇಲೆ ಬೃಹತ್ ಗಾತ್ರದ ಕಲ್ಲೊಂದು ಬಿದ್ದ ಘಟನೆ ವರದಿಯಾಗಿತ್ತು.

ಕಾರಿನ ವಿಂಡ್‌ಶೀಲ್ಡ್ ಮೇಲೆ ಬಿದ್ದ ಬೃಹತ್ ಗಾತ್ರದ ಮಂಜುಗಡ್ಡೆ

ಈಗ ಇದೇ ರೀತಿಯ ಘಟನೆಯೊಂದು ವರದಿಯಾಗಿದೆ. ಯುವತಿಯೊಬ್ಬಳು ಪಾರ್ಕಿಂಗ್ ಮಾಡಲಾಗಿದ್ದ ಕಾರಿನಲ್ಲಿ ಕುಳಿತಿದ್ದಳು. ನಂತರ ಯುವಕನೊಬ್ಬ ಚಾಲಕನ ಸೀಟಿನಲ್ಲಿ ಕುಳಿತುಕೊಳ್ಳುತ್ತಾನೆ. ಅವನು ಕಾರಿನೊಳಗೆ ಪ್ರವೇಶಿಸಿದ ಕೆಲವೇ ಸೆಕೆಂಡುಗಳಲ್ಲಿ ಬೃಹತ್ ಮಂಜುಗಡ್ಡೆಯೊಂದು ಕಾರಿನ ವಿಂಡ್‌ಶೀಲ್ಡ್ ಮೇಲೆ ಬಿದ್ದಿದೆ.

ಕಾರಿನ ವಿಂಡ್‌ಶೀಲ್ಡ್ ಮೇಲೆ ಬಿದ್ದ ಬೃಹತ್ ಗಾತ್ರದ ಮಂಜುಗಡ್ಡೆ

ಯುವಕ ಕಾರಿನೊಳಗೆ ಪ್ರವೇಶಿಸಿ ಕಾರಿನ ಬಾಗಿಲು ಸಂಪೂರ್ಣವಾಗಿ ಮುಚ್ಚುವ ಮೊದಲೇ ಈ ಘಟನೆ ನಡೆದಿದೆ. ಈ ಘಟನೆಯಿಂದ ಆತಂಕಕ್ಕೊಳಗಾದ ಯುವಕ ತಕ್ಷಣವೇ ಕಾರಿನಿಂದ ಹೊರಬಂದಿದ್ದಾನೆ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಕಾರಿನ ವಿಂಡ್‌ಶೀಲ್ಡ್ ಮೇಲೆ ಬಿದ್ದ ಬೃಹತ್ ಗಾತ್ರದ ಮಂಜುಗಡ್ಡೆ

ಆತನ ಜೊತೆಗೆ ಕಾರಿನಲ್ಲಿ ಕುಳಿತಿದ್ದ ಯುವತಿಯು ಸಹ ಹೊರಟು ಹೋಗುತ್ತಾಳೆ. ಕಾರು ಸಹ ಆಟೋಮ್ಯಾಟಿಕ್ ಆಗಿ ಹಿಂದಕ್ಕೆ ಚಲಿಸುವುದನ್ನು ಈ ವೀಡಿಯೊದಲ್ಲಿ ಕಾಣಬಹುದು.

ಕಾರಿನ ವಿಂಡ್‌ಶೀಲ್ಡ್ ಮೇಲೆ ಬಿದ್ದ ಬೃಹತ್ ಗಾತ್ರದ ಮಂಜುಗಡ್ಡೆ

ಮಂಜುಗಡ್ಡೆ ಬಿದ್ದ ಕಾರಣಕ್ಕೆ ಕಾರಿನೊಳಗಿದ್ದವರು ಹೊರಗೆ ಓಡಿದ್ದಾರೆ. ಗಾಬರಿಯಿಂದ ಹೊರ ಹೋಗುವಾಗ ಕಾರಿನ ಹ್ಯಾಂಡ್‌ಬ್ರೇಕ್ ಹಾಕುವುದನ್ನು ಮರೆತಿದ್ದಾರೆ. ಇದರಿಂದಾಗಿ ಕಾರು ಆಟೋಮ್ಯಾಟಿಕ್ ಆಗಿ ಹಿಂದಕ್ಕೆ ಸಾಗಿದೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಕಾರಿನ ವಿಂಡ್‌ಶೀಲ್ಡ್ ಮೇಲೆ ಬಿದ್ದ ಬೃಹತ್ ಗಾತ್ರದ ಮಂಜುಗಡ್ಡೆ

ಹೀಗೆ ಹಿಂದಕ್ಕೆ ಚಲಿಸಿದ ಕಾರು ಹತ್ತಿರದಲ್ಲಿದ್ದ ಕಟ್ಟಡದ ಗೋಡೆಗೆ ಅಪ್ಪಳಿಸಿದೆ. ಗೋಯಿಂಗ್ ವೈರಲ್ ಎಂಬ ಯೂಟ್ಯೂಬ್ ಚಾನೆಲ್'ನಲ್ಲಿ ಈ ಘಟನೆಯ ವೀಡಿಯೊವನ್ನು ಅಪ್ ಲೋಡ್ ಮಾಡಲಾಗಿದೆ.

ಕಾರಿನ ವಿಂಡ್‌ಶೀಲ್ಡ್ ಮೇಲೆ ಬಿದ್ದ ಬೃಹತ್ ಗಾತ್ರದ ಮಂಜುಗಡ್ಡೆ

ಅದೃಷ್ಟವಶಾತ್ ಈ ಘಟನೆಯಲ್ಲಿ ಯಾರಿಗೂ ತೊಂದರೆಯಾಗಿಲ್ಲ. ಆದರೆ ಕಾರಿಗೆ ತೀವ್ರವಾಗಿ ಹಾನಿಯಾಗಿದೆ. ಮಂಜುಗಡ್ಡೆ ಬಿದ್ದ ಕಾರಣಕ್ಕೆ ವಾಹನದ ಮುಂಭಾಗಹಾಗೂ ಹಿಂಭಾಗಗಳಿಗೆ ಹಾನಿಯಾಗಿದೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಕಾರಿನ ವಿಂಡ್‌ಶೀಲ್ಡ್ ಮೇಲೆ ಬಿದ್ದ ಬೃಹತ್ ಗಾತ್ರದ ಮಂಜುಗಡ್ಡೆ

ಜೊತೆಗೆ ಕಾರು ಹಿಮ್ಮುಖವಾಗಿ ಚಲಿಸಿ ಕಟ್ಟಡದ ಗೋಡೆಗೆ ಡಿಕ್ಕಿ ಹೊಡೆದ ಕಾರಣಕ್ಕೂ ಕಾರಿಗೆ ಹಾನಿಯಾಗಿದೆ. ಈ ಘಟನೆ ನಡೆದಿರುವುದು ರಷ್ಯಾದಲ್ಲಿ. ಭಾರತದಲ್ಲಿ ಈ ರೀತಿ ಮಂಜುಗಡ್ಡೆಗಳು ಬೀಳುವುದಿಲ್ಲ ಎಂಬುದೇ ಸಮಾಧಾನದ ಸಂಗತಿ.

ಕಾರಿನ ವಿಂಡ್‌ಶೀಲ್ಡ್ ಮೇಲೆ ಬಿದ್ದ ಬೃಹತ್ ಗಾತ್ರದ ಮಂಜುಗಡ್ಡೆ

ಆದರೆ ಮಳೆಗಾಲದಲ್ಲಿ ಮರಗಳ ಬಳಿ ಅಥವಾ ಮರಗಳ ಕೆಳಗೆ ವಾಹನಗಳನ್ನು ನಿಲ್ಲಿಸಿದಾಗ ಈ ರೀತಿಯ ಘಟನೆಗಳು ಸಂಭವಿಸುತ್ತವೆ. ಈ ಕಾರಣಕ್ಕೆ ಸಾಧ್ಯವಾದಷ್ಟು ಮರಗಳ ಬಳಿ ಹಾಗೂ ಮರಗಳ ಕೆಳಗೆ ವಾಹನಗಳನ್ನು ನಿಲ್ಲಿಸದೇ ಇರುವುದು ಒಳಿತು.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಕಾರಿನ ಮೇಲೆ ಬಿದ್ದ ಮಂಜುಗಡ್ಡೆ ಸುಮಾರು 100 ಕೆಜಿಗಿಂತ ಹೆಚ್ಚು ತೂಕವಿತ್ತು ಎಂದು ತಿಳಿದು ಬಂದಿದೆ. ಈ ಬೃಹತ್ ಗಡ್ಡೆ ಬೇರೊಬ್ಬರ ಮೇಲೆ ಬಿದ್ದಿದ್ದರೆ ಪರಿಸ್ಥಿತಿ ಮತ್ತಷ್ಟು ಗಂಭೀರವಾಗುತ್ತಿತ್ತು. ಅದೃಷ್ಟವಶಾತ್ ಆ ರೀತಿಯ ಘಟನೆ ನಡೆದಿಲ್ಲ.

ಕಾರಿನ ವಿಂಡ್‌ಶೀಲ್ಡ್ ಮೇಲೆ ಬಿದ್ದ ಬೃಹತ್ ಗಾತ್ರದ ಮಂಜುಗಡ್ಡೆ

ಈ ಘಟನೆ ನಡೆದಿರುವ ಪ್ರದೇಶದಲ್ಲಿ ಈ ರೀತಿ ಭಾರೀ ಪ್ರಮಾಣದ ಹಿಮಪಾತವಾಗುವುದು ಸಹಜ. ಅಲ್ಲಿನ ರೈಲು ಮಾರ್ಗ, ರಸ್ತೆ ಹಾಗೂ ವಾಯುನೆಲೆಗಳೆಲ್ಲವೂ ಹಿಮದಿಂದ ಆವೃತ್ತವಾಗಿರುತ್ತವೆ.

Most Read Articles

Kannada
English summary
Huge ice block falls on car windshield video goes viral. Read in Kannada.
Story first published: Thursday, April 1, 2021, 16:51 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X