ಮರುಭೂಮಿಯ ರಾಜಕುಮಾರ ಥಾರ್ ರೋಕ್ಸ್ ಮನೆಗೆ ತರಲು ಒಂಟೆಗಳ ಮೇಲೆ ಬಂದ ದಂಪತಿ: ವಿಶೇಷ ಪೂಜೆ!

ಮಹೀಂದ್ರಾ ಥಾರ್ ಎಲ್ಲರಿಗೂ ತಿಳಿದಂತೆ ಹಾರ್ಡ್‌ಕೋರ್ ಆಫ್-ರೋಡ್ ಡಿಎನ್‌ಎ, ಗೋ-ಎನಿವೇರ್ ಸಾಮರ್ಥ್ಯ ಮತ್ತು ಒರಟಾದ ಲೈಫ್ ಸ್ಟೈಲ್ ಎಸ್‍ಯುವಿಯಾಗಿದೆ. ಆಫ್-ರೋಡ್ ವಾಹನ ಎಂದಾಗ ಎಲ್ಲರ ಮನಸ್ಸಿಗೆ ಬರುವುದು ಮಹೀಂದ್ರಾ ಥಾರ್ (Mahindra Thar) ಎಂದರೆ ತಪ್ಪಲ್ಲ. ಭಾರತದಲ್ಲಿ ಬಹಳ ವರ್ಷಗಳಿಂದ ಮಾರಾಟವಾಗುತ್ತಿರುವ ಜನಪ್ರಿಯ ಆಫ್ ರೋಡರ್ ಎಸ್‍ಯುವಿ. ಭಾರತದಲ್ಲಿ ಥಾರ್ ಎಸ್‍ಯುವಿಗೆ ದೊಡ್ಡ ಅಭಿಮಾನಿ ಬಳಗವಿದೆ. ಆದರೆ ಎಂದಿಗೂ ಫ್ಯಾಮಿಲಿ ಎಸ್‌ಯುವಿಯಾಗಿರಲಿಲ್ಲ. ಇದಕ್ಕೆ ಹೊರತಾಗಿರಲಿಲ್ಲ 2020ರ ಬಿಡುಗಡೆಗೊಂಡ 3-ಡೋರ್ ಥಾರ್. ಇನ್ನು ಥಾರ್ 5-ಡೋರ್ ಆವೃತ್ತಿ ಥಾರ್ ರೋಕ್ಸ್ ಹೊಸ ಬದಲಾವಣೆಗಳೊಂದಿಗೆ ಎಂಟ್ರಿ ಕೊಟ್ಟಿತ್ತು.

ದಸರಾ ಹಬ್ಬಕ್ಕೆ ಈ ಮಹೀಂದ್ರಾ ಥಾರ್ ರೋಕ್ಸ್ ಎಸ್‍ಯುವಿಯ ವಿತರಣೆಯನ್ನು ಪ್ರಾರಂಭಿಸಿತು. ಈ ಥಾರ್ ಎಸ್‍ಯುವಿ ಖರೀದಿಗಾಗಿ ಬುಕ್ಕಿಂಗ್ ಪ್ರಾರಂಭವಾದಗ 60 ನಿಮಿಷಗಳಲ್ಲಿ 1.76 ಲಕ್ಷಕ್ಕೂ ಹೆಚ್ಚು ಬುಕ್ಕಿಂಗ್ ಗಳನ್ನು ಪಡೆದುಕೊಂಡು ಹೊಸ ದಾಖಲೆ ಬರೆದಿದೆ. ಆನ್‌ಲೈನ್‌ನಲ್ಲಿ ಈ ಎಸ್‍ಯುವಿಯ ವಿತರಣೆಗಳ ವೀಡಿಯೊಗಳು ಮತ್ತು ಚಿತ್ರಗಳನ್ನು ಪೋಸ್ಟ್ ಮಾಡಲು ಪ್ರಾರಂಭಿಸಿದ್ದಾರೆ. ಕೆಲವರು ತಮ್ಮ ಹೊಸ ಕಾರುಗಳನ್ನು ವಿಭಿನ್ನ ರೀತಿಯಲ್ಲಿ ವಿತರಣೆ ಪಡೆದುಕೊಳ್ಳುತ್ತಾರೆ.

Mahindra Thar Roxx

ಇದೇ ರೀತಿ ಒಬ್ಬ ವ್ಯಕ್ತಿಯು ತನ್ನ ಹೊಸ ಥಾರ್ ರೋಕ್ಸ್ ಅನ್ನು ವಿತರಣೆ ಪಡೆಯಲು ಒಂಟೆ ಮೇಲೆ ಬಂದಿದ್ದಾರೆ. ಇವರ ಈ ವೀಡಿಯೋವನ್ನು MP04 ರೈಡರ್ ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ವೀಡಿಯೋದಲ್ಲಿ ಹೇಳಿಕೊಂಡ ರೀತಿ ಭೋಪಾಲ್‌ನ ಮೊದಲ ಮಹೀಂದ್ರ ಥಾರ್ ರೋಕ್ಸ್ ಆಗಿದೆ. ಆದ್ದರಿಂದ, ಅವರು ಇದನ್ನು ತಮ್ಮ ಕುಟುಂಬ ಮತ್ತು ಡೀಲರ್‌ಶಿಪ್‌ಗೆ ಎಲ್ಲರೂ ನೆನಪಿಸಿಕೊಳ್ಳುವ ರೀತಿ ಹೋಗಲು ಪ್ಲಾನ್ ಮಾಡಿದ್ದಾರೆ.

ಇದಕ್ಕಾಗಿ ಅವರು ಒಂದೆರಡು ಒಂಟೆಗಳನ್ನು ಬಾಡಿಗೆಗೆ ಪಡೆದರು. ಮಹೀಂದ್ರಾ ಥಾರ್ ಮರುಭೂಮಿಗೆ ಸಂಬಂಧಿಸಿದೆ ಮತ್ತು ಒಂಟೆಗಳನ್ನು ಸಾಮಾನ್ಯವಾಗಿ "ಮರುಭೂಮಿಯ ಹಡಗು" ಎಂದು ಕರೆಯಲಾಗುತ್ತದೆ ಎಂದು ಅವರು ಹೇಳಿದರು. ಮಹೀಂದ್ರಾ ಥಾರ್ ರೋಕ್ಸ್ ಡ್‌ಶೀಲ್ಡ್‌ನಲ್ಲಿ ಸಣ್ಣ ಒಂಟೆ ಗ್ರಾಫಿಕ್ಸ್ ಅನ್ನು ಸಹ ಹೊಂದಿದೆ. ವ್ಲೋಗರ್ ಮತ್ತು ಅವನ ಹೆಂಡತಿ ಒಂಟೆಯ ಮೇಲೆ ಕುಳಿತುಕೊಳ್ಳುತ್ತಾರೆ, ಮತ್ತು ನಂತರ ಇಬ್ಬರೂ ಒಂಟೆಯ ಮೇಲೆ ಡೀಲರ್‌ಶಿಪ್‌ಗೆ ಬಂದಿದ್ದಾರೆ.

Mahindra Thar Roxx

ವ್ಲಾಗರ್ ರೆಡ್ ಬಣ್ಣದ ಮಹೀಂದ್ರಾ ಥಾರ್ ರೋಕ್ಸ್ (Mahindra Thar Roxx) ಎಸ್‍ಯುವಿಯನ್ನು ಆಯ್ಕೆ ಮಾಡಿದ್ದಾರೆ. ಇವರು ಹೊಸ ಎಸ್‍ಯುವಿಯನ್ನು ವಿತರಣೆ ಪಡೆದು ಪೂಜೆ ಸಲ್ಲಿಸಿ ಮನೆ ಕಡೆ ಡ್ರೈವ್ ಮಾಡಿಕೊಂಡು ಹೋಗಿದ್ದಾರೆ. ವ್ಲಾಗರ್ ಆಯ್ಕೆ ಮಾಡಿಕೊಂಡ ಮಾದರಿಯಲ್ಲಿ ಸನ್‌ರೂಫ್ ಇಲ್ಲದ ಕಾರಣ ಇದು ಟಾಪ್-ಎಂಡ್ ರೂಪಾಂತರವಲ್ಲ ಎಂದು ಹೇಳಬಹುದು. ಇದು ನಿಖರವಾಗಿ ಯಾವ ರೂಪಾಂತರ ಎಂಬ ಮಾಹಿತಿ ಇಲ್ಲ.

ಇನ್ನು ಮಹೀಂದ್ರಾ ಕಂಪನಿಯು ಉತ್ಪಾದನೆಯನ್ನು ಹೆಚ್ಚಿಸುವ ಮೂಲಕ ಮಹೀಂದ್ರಾ ಥಾರ್ ರೋಕ್ಸ್ ಎಸ್‍ಯುವಿ ಕಾಯುವ ಅವಧಿಯನ್ನು ಕಡಿಮೆ ಮಾಡುತ್ತದೆ. ಈ ಮಹೀಂದ್ರಾ ಥಾರ್ ರಾಕ್ಸ್‌ ಹೊರಭಾಗದಲ್ಲಿ ಆಕರ್ಷಕವಾದ ವಿನ್ಯಾಸ (ಡಿಸೈನ್) ಹೊಂದಿದೆ. ಉತ್ತಮವಾಗಿರುವ ಎಲ್ಇಡಿ ಪ್ರೊಜೆಕ್ಟರ್ ಹೆಡ್‌ಲೈಟ್‌ಗಳು, ಎಲ್‌ಇಡಿ ಡಿಆರ್‌ಎಲ್‌ಗಳು, ಸರ್ಕ್ಯೂಲರ್ ಫಾಗ್ ಲೈಟ್‌ಗಳು ಮತ್ತು ಅಲಾಯ್ ವೀಲ್‌ಗಳನ್ನು ಹೊಂದಿದೆ.

Mahindra Thar Roxx

ಮಹೀಂದ್ರಾ ಕಂಪನಿಯು ಥಾರ್ ರೋಕ್ಸ್ 4X4 ಪ್ರತ್ಯೇಕವಾಗಿ 2.2-ಲೀಟರ್ ಡೀಸೆಲ್ ಎಂಜಿನ್‌ನಿಂದ ಚಾಲಿತವಾಗಿದ್ದು, ಈ ಎಂಜಿನ್ 175 bhp ಪವರ್ ಮತ್ತು 370 Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಅನ್ನು ಹೊಂದಿದೆ. ಇನ್ನು ಡೀಸೆಲ್ 4X2 ರೂಪಾಂತರಗಳು, 2.2-ಲೀಟರ್ TGDi ಪೆಟ್ರೋಲ್ ರೂಪಾಂತರವು 152hp ಮತ್ತು 330 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಆಟೋಮ್ಯಾಟಿಕ್ ರೂಪಾಂತರವು 177 hp ಮತ್ತು 380 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಮತ್ತೊಂದೆಡೆ, ಮಹೀಂದ್ರಾ ಥಾರ್ ರೋಕ್ಸ್‌ನಲ್ಲಿರುವ ಬೇಸ್ 2.2-ಲೀಟರ್ ಡೀಸೆಲ್ ಎಂಜಿನ್ 162 hp ಮತ್ತು 330 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಆದರೆ 4X4 ಪವರ್‌ಟ್ರೇನ್‌ಗಳೊಂದಿಗೆ ಟಾಪ್ ಸ್ಪೆಕ್ ಮಾದರಿಗಳು 175hp ಮತ್ತು 370Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಇದರ ಡೀಸೆಲ್ ಪವರ್‌ಟ್ರೇನ್‌ಗಳು 6-ಸ್ಪೀಡ್ ಮ್ಯಾನುವಲ್ ಅಥವಾ 6-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಆಯ್ಕೆಯೊಂದಿಗೆ ಹೊಂದಿದೆ. ಮೈಲೇಜ್ ಅಂಕಿಅಂಶಗಳ ಬಗ್ಗೆ ಹೇಳುವುದಾದರೆ, ಪೆಟ್ರೋಲ್ ಎಂಜಿನ್ 12.40 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ. ಮತ್ತೊಂದೆಡೆ, ಡೀಸೆಲ್ ಎಂಜಿನ್ 15.20 ಕಿ.ಮೀ ನಷ್ಟು ಮೈಲೇಜ್ ನೀಡುತ್ತದೆ ಎಂದು ಹೇಳಲಾಗುತ್ತದೆ. ಥಾರ್ ರೋಕ್ಸ್ ನಗರ ಮತ್ತು ಹೆದ್ದಾರಿಯಲ್ಲಿ ಕ್ರಮವಾಗಿ 10.82 ಕಿ.ಮೀ ಮತ್ತು 15.44 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ.

Article Published On: Monday, October 21, 2024, 13:39 [IST]
English summary
Husband and wife arrived on camel to take delivery of new mahindra thar roxx
Read more on india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+