ಮೂತ್ರ ವಿರಾಮಕ್ಕೆಂದು ಇಳಿಸಿ ಪತ್ನಿಯನ್ನು ಮರೆತು ಹೊರಟ ಪತಿ: ಹೆಂಡತಿ ಮಾಡಿದ ಕೆಲಸಕ್ಕೆ ಎಲ್ಲರ ಮೆಚ್ಚುಗೆ

ಗಂಡಸರು ಪ್ರಮುಖ ವಿಷಯಗಳನ್ನು ಮರೆತುಬಿಡುವ ಖ್ಯಾತಿಯನ್ನು ಹೊಂದಿದ್ದಾರೆ. ಹುಟ್ಟುಹಬ್ಬ ಅಥವಾ ಮದುವೆ ದಿನವಾಗಿರಲಿ ಸುಲಭವಾಗಿ ಮರೆತುಬಿಡುತ್ತಾರೆ. ಆದರೆ ಇಲ್ಲೊಬ್ಬ ಪತಿ ಮರೆಯಲಾಗದ ತಪ್ಪನ್ನು ಮಾಡಿ ಇಂದು ಚರ್ಚೆಗೆ ಗ್ರಾಸವಾಗಿದ್ದಾನೆ. ಈತನ ಮರೆವಿನಿಂದಾಗಿ ಪತ್ನಿಯು ಸುಮಾರು 20 ಕಿ.ಮೀ ದೂರ ನಡೆದಿರುವ ಘಟನೆ ಥಾಯ್‌ಲ್ಯಾಂಡ್‌ನಲ್ಲಿ ನಡೆದಿದೆ.

ಸಾಮಾನ್ಯವಾಗಿ ಗಂಡಸರಿಗೆ ಮರೆವು ಹೆಚ್ಚು ಎಂದು ಹೇಳುವುದನ್ನು ನಾವು ಕೇಳಿರುತ್ತೇವೆ. ಆದರೆ ಪ್ರಯಾಣದ ವೇಳೆ ಹೆಂಡತಿಯನ್ನು ಮರೆತು ಬಿಟ್ಟು ಹೋಗುವಷ್ಟು ಮರೆವು ಯಾರಿಗೂ ಇರುವುದಿಲ್ಲ. ಇಲ್ಲೊಬ್ಬ ವ್ಯಕ್ತಿ ಯಾವ ಮಟ್ಟಕ್ಕೆ ಮರೆವಿನ ಖಾಯಿಲೆ ಹೊಂದಿದ್ದಾನೆ ಎಂದರೆ ನಡು ರಸ್ತೆಯಲ್ಲಿ ಹೆಂಡತಿಯನ್ನು ಬಿಟ್ಟು ಬರೋಬ್ಬರಿ 150 ಕಿ.ಮೀ ಹೊಗಿದ್ದಾನೆ. ಹೋಗುವ ದಾರಿಯಲ್ಲಿ ಹೆಂಡತಿ ಇದ್ದಾಳ, ಇಲ್ಲವೇ ಎಂಬುದನ್ನು ಕೂಡ ನೋಡಿಕೊಳ್ಳದೇ ಹೋಗಿರುವುದು ಹಲವರನ್ನು ಆಶ್ಚರ್ಯಗೊಳಿಸಿದೆ.

ಮೂತ್ರ ವಿರಾಮಕ್ಕೆಂದು ಇಳಿಸಿ ಪತ್ನಿಯನ್ನು ಮರೆತು ಹೊರಟ ಪತಿ: ಹೆಂಡತಿ ಮಾಡಿದ ಕೆಲಸಕ್ಕೆ ಎಲ್ಲರ ಮೆಚ್ಚುಗೆ

ಬೂಂಟೊಮ್ ಚೈಮೂನ್ (55) ಮತ್ತು ಅವರ ಪತ್ನಿ ಅಮ್ನುವೇ ಚೈಮೂನ್ (49) ಕಳೆದ ಭಾನುವಾರ ಮುಂಜಾನೆ 3 ಗಂಟೆಗೆ ಮಹಾ ಸರಖಮ್ ಪ್ರಾಂತ್ಯದಲ್ಲಿರುವ ಅಮ್ನುವೇ ಚೈಮೂನ್ ಅವರ ತವರು ಮನೆಯಲ್ಲಿ ಹೊಸ ವರ್ಷವನ್ನು ಆಚರಿಸಲು ರಸ್ತೆ ಪ್ರವಾಸವನ್ನು ಕೈಗೊಂಡಾಗ ಈ ಘಟನೆ ನಡೆದಿದೆ. ಅವರ ಮನೆಯಿಂದ ಸ್ವಲ್ಪ ದೂರ ಪ್ರಯಾಣಿಸಿದ ನಂತರ ಪತಿ ಮೂತ್ರ ವಿಸರ್ಜನೆ ಮಾಡುವ ಬಯಕೆಯನ್ನು ವ್ಯಕ್ತಪಡಿಸಿ ತನ್ನ ಕಾರನ್ನು ರಸ್ತೆಯ ಪಕ್ಕದಲ್ಲಿ ನಿಲ್ಲಿಸಿದ್ದಾರೆ.

ಈ ವೇಳೆ ಪತ್ನಿ ಗ್ಯಾಸ್ ಸ್ಟೇಷನ್‌ನಲ್ಲಿ ಏಕೆ ನಿಲ್ಲಿಸಲಿಲ್ಲ ಎಂದು ಪ್ರಶ್ನಿಸಿದ್ದಾರೆ, ಅದಕ್ಕೆ ಅವರು ಉತ್ತರವನ್ನು ನೀಡದೇ ಮೂತ್ರ ವಿಸರ್ಜನೆಗೆಂದು ಇಳಿದು ಹೋಗಿದ್ದಾನೆ. ಆದ್ದರಿಂದ ಕಾಡಿನಲ್ಲಿ ತನ್ನನ್ನು ತಾನು ಮುಕ್ತಗೊಳಿಸಲು ಪತ್ನಿ ನಿರ್ಧರಿಸಿದ್ದಾರೆ ಎಂದು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ. ತನ್ನ ಹೆಂಡತಿ ಕೂಡ ತನ್ನನ್ನು ತಾನು ಸಮಾಧಾನ ಮಾಡಿಕೊಳ್ಳಲು ಕಾರಿನಿಂದ ಇಳಿದಿರುವುದು ಆಕೆಯ ಗಂಡನಿಗೆ ತಿಳಿದಿರಲಿಲ್ಲ. ಅಮ್ನುವಾಯ್ ಹಿಂದಿರುಗಿದಾಗ, ಅಕೆಯ ಪತಿ ಆಗಲೇ ಕಾರಿನೊಂದಿಗೆ ಹೊರಟುಬಿಟ್ಟಿದ್ದಾರೆ.

ಆಕೆಯನ್ನು ಕತ್ತಲೆಯಲ್ಲಿ ಬಿಟ್ಟು ಹೋಗಿದ್ದಾರೆ. ಭಯವಾದರೂ, ಹೆಂಡತಿ ಸಹಾಯಕ್ಕಾಗಿ ನಡೆಯಲು ನಿರ್ಧರಿಸಿದ್ದರು, ಸುಮಾರು 20 ಕಿ.ಮೀ (ಅಂದಾಜು 12.4 ಮೈಲುಗಳು) ದೂರ ನಡೆದ ನಂತರ ಅವರು ಬೆಳಿಗ್ಗೆ 5 ಗಂಟೆಗೆ ಕಬಿನ್ ಬುರಿ ಜಿಲ್ಲೆಯನ್ನು ತಲುಪಿ ಸಹಾಯಕ್ಕಾಗಿ ಪೊಲೀಸರನ್ನು ಸಂಪರ್ಕಿಸಿದ್ದಾರೆ. ತನ್ನ ಗಂಡನ ನಂಬರ್ ಗೊತ್ತಿಲ್ಲದ ಕಾರಣ ಆಕೆಯ ಸಂಕಷ್ಟ ಇಲ್ಲಿಗೆ ಮುಗಿಯಲಿಲ್ಲ. ತನ್ನ ಫೋನ್ ಅನ್ನು ಕಾರಿನಲ್ಲಿ ಬ್ಯಾಗ್‌ನಲ್ಲಿಟ್ಟು ಹೋಗಿದ್ದರು ಎಂದು ವರದಿಯಾಗಿದೆ.

ಈ ಕಾರಣದಿಂದಾಗಿ ಆಕೆಯ ಪತಿಯನ್ನು ಕಂಡುಹಿಡಿಯುವಲ್ಲಿ ಪೊಲೀಸರಿಗೆ ತುಸು ಕಷ್ಟವಾದರೂ ಆಕೆ ನೀಡಿದ ಮಾಹಿತಿಯನ್ನು ಆಧರಿಸಿ, ಬೆಳಿಗ್ಗೆ 8 ಗಂಟೆಗೆ ಅಧಿಕಾರಿಗಳು ಅಂತಿಮವಾಗಿ ಆಕೆಯ ಸಂಗಾತಿಯನ್ನು ಸಂಪರ್ಕಿಸುವಲ್ಲಿ ಯಶಸ್ವಿಯಾದರು. ಆದರೆ ಪತಿರಾಯ ಅಷ್ಟೊತ್ತಿಗಾಗಲೇ 159.6 ಕಿ.ಮೀ (100 ಮೈಲುಗಳು) ದೂರದಲ್ಲಿರುವ ಕೊರಾಟ್ ಪ್ರಾಂತ್ಯವನ್ನು ತಲುಪಿದ್ದರು. ಹಾಗಾಗಿ ಏನೂ ಮಾಡಲಾಗದೇ ಪೊಲೀಸರೆ ಗಂಡನ ಬಳಿಗೆ ಕರೆದೊಯ್ದು ಆಕೆಯನ್ನು ಒಪ್ಪಿಸಿದ್ದಾರೆ ಎಂದು ವರದಿಯಿಂದ ತಿಳಿದು ಬಂದಿದೆ.

ಏನೇ ಆಗಲಿ ಇಂತಹ ಮರೆವಿನ ಖಾಯಿಲೆ ಕೆಲವೊಮ್ಮೆ ತುಂಬಲಾರದ ನಷ್ಟವನ್ನು ಮಾಡಬಹುದು. ಈ ಘಟನೆಯಲ್ಲಿನ ಮಹಿಳೆಯ ಧೈರ್ಯಕ್ಕೆ ಮೆಚ್ಚಲೇಬೇಕು ಏಕೆಂದರೆ ಕಾಡಿನ ಮಧ್ಯೆ ಸಾಗುವ ರಸ್ತೆಯಲ್ಲಿ ಬರೋಬ್ಬರಿ 20 ಕಿ.ಮೀ ನಡೆಯುವುದೆಂದರೆ ಸುಲಭದ ಮಾತಲ್ಲ. ಕೊನೆಗೆ ಸಹಾಯಕ್ಕೆಂದು ಪೊಲೀಸರು ನೆರವಾದದ್ದು ಕೂಡ ಆಕೆಯ ಸಾಹಸಕ್ಕೆ ಪ್ರತಿಫಲ ನೀಡಿದೆ. ಈ ಘಟನೆಯು ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದ್ದು, ಮಹಿಳೆಯ ಧೈರ್ಯಕ್ಕೆ ಮೆಚ್ಚಿ ಕೊಂಡಾಡುತ್ತಿದ್ದಾರೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.

Article Published On: Thursday, December 29, 2022, 14:51 [IST]
English summary
Husband forgets wife after pee break on road trip
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+