Just In
Don't Miss!
- Lifestyle
'ಮಂಗಳವಾರದ ರಾಶಿಫಲ: ಮೇಷ-ಮೀನದವರೆಗಿನ ದಿನ ಭವಿಷ್ಯ '
- News
ಕೋವಿಡ್ ಲಸಿಕೆ ಪಡೆದುಕೊಂಡಿದ್ದ ಆರೋಗ್ಯ ಇಲಾಖೆ ಉದ್ಯೋಗಿ ಹೃದಯಾಘಾತದಿಂದ ಸಾವು
- Sports
ಐಎಸ್ಎಲ್: ಅಂಕ ಹಂಚಿಕೊಂಡ ಈಸ್ಟ್ ಬೆಂಗಾಲ್ ಮತ್ತು ಚೆನ್ನೈಯಿನ್
- Finance
ಪ್ರಮುಖ ಮಾರುಕಟ್ಟೆಯಲ್ಲಿ ಅಡಿಕೆ, ಮೆಣಸು, ಕಾಫೀ ಜ. 18ರ ದರ
- Movies
ಶಿವಲಿಂಗಕ್ಕೆ ಅಪಮಾನ: ನಟಿಯ ವಿರುದ್ಧ ಮಾಜಿ ರಾಜ್ಯಪಾಲ ದೂರು
- Education
IIMB Recruitment 2021: ಪ್ರಾಜೆಕ್ಟ್ ಎಕ್ಸಿಕ್ಯುಟಿವ್- ಡೆವಲಪ್ಮೆಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಗರ್ಭಿಣಿ ಪತ್ನಿಗಾಗಿ 1,200 ಕಿ.ಮೀ ಸ್ಕೂಟರ್ ಚಾಲನೆ ಮಾಡಿದ ಪತಿರಾಯ
ಒಬ್ಬ ವ್ಯಕ್ತಿಯು ಯಾವುದಾದರೂ ಕೆಲಸವನ್ನು ಮಾಡಲೇ ಬೇಕೆಂದು ತೀರ್ಮಾನಿಸಿದರೆ ಯಾವುದೇ ಕೆಲಸವು ಅವನಿಗೆ ಕಷ್ಟವೆನಿಸುವುದಿಲ್ಲ. ಜಾರ್ಖಂಡ್‌ನಲ್ಲೂ ಇದೇ ರೀತಿಯ ಪ್ರಕರಣವೊಂದು ಬೆಳಕಿಗೆ ಬಂದಿದೆ.

ವ್ಯಕ್ತಿಯೊಬ್ಬ ತನ್ನ ಗರ್ಭಿಣಿ ಪತ್ನಿಯನ್ನು ಪರೀಕ್ಷಾ ಕೇಂದ್ರಕ್ಕೆ ಕರೆದೊಯ್ಯಲು 1,200 ಕಿ.ಮೀ ಸ್ಕೂಟರ್ ಚಾಲನೆ ಮಾಡಿದ್ದಾನೆ. ಮಾಧ್ಯಮ ವರದಿಗಳ ಪ್ರಕಾರ ಶಿಕ್ಷಕರ ನೇಮಕಾತಿ ಪರೀಕ್ಷೆಗೆ ಹಾಜರಾಗಲು ಧನಂಜಯ್ ಕುಮಾರ್ ಎಂಬಾತ ತನ್ನ ಪತಿ ಸೋನಿ ಹೆಂಬ್ರಾಮ್ ರವರನ್ನು ಜಾರ್ಖಂಡ್ ನಿಂದ ಮಧ್ಯಪ್ರದೇಶಕ್ಕೆ ಸ್ಕೂಟರ್ ನಲ್ಲಿ ಕರೆ ತಂದಿದ್ದಾನೆ.

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿರುವ ಗಂತಾ ತೋಲಾ ಗ್ರಾಮದಿಂದ ಗ್ವಾಲಿಯರ್‌ನ ಸೆಂಟರ್ ಫಾರ್ ಡೀಡ್ (ಡಿಪ್ಲೊಮಾ ಇನ್ ಎಜುಕೇಶನ್) ಗೆ ತಲುಪಲು ಈ ದಂಪತಿ ಸ್ಕೂಟರ್‌ನಲ್ಲಿ ತಮ್ಮ ಪ್ರಯಾಣವನ್ನು ಆರಂಭಿಸಿದ್ದಾರೆ. ಧನಂಜಯ್ ಕುಮಾರ್ ಗೆ ತನ್ನ ಹೆಂಡತಿ ಶಾಲಾ ಶಿಕ್ಷಕಿಯಾಗಬೇಕೆಂಬ ಆಸೆ. ಈ ಕಾರಣಕ್ಕೆ ಆಕೆಯನ್ನು ಅಷ್ಟು ದೂರ ಕರೆದೊಯ್ದಿದ್ದಾನೆ.
MOST READ:ಒಂದು ವರ್ಷದಿಂದ ಚಲಿಸಿದರೂ ಇನ್ನೂ ಗುರಿ ಮುಟ್ಟದ ಟ್ರಕ್

ಧನಂಜಯ್ ಹಾಗೂ ಆತನ ಪತ್ನಿ ನಾಲ್ಕು ರಾಜ್ಯಗಳಲ್ಲಿ 1,200 ಕಿಲೋಮೀಟರ್‌ಗಿಂತ ಹೆಚ್ಚು ಪ್ರಯಾಣ ಮಾಡಿದ್ದಾರೆ. ಈ ಅವಧಿಯಲ್ಲಿ ದಂಪತಿಗಳು ಮಳೆಯ ಜೊತೆಗೆ ಹದಗೆಟ್ಟ ರಸ್ತೆಗಳಲ್ಲೂ ಸಂಚರಿಸಿದ್ದಾರೆ. ಲಾಕ್‌ಡೌನ್ ಕಾರಣದಿಂದಾಗಿ ಇನ್ನೂ ಹಲವು ರಾಜ್ಯಗಳಲ್ಲಿ ರೈಲು ಹಾಗೂ ಬಸ್‌ಗಳ ಕಾರ್ಯಾಚರಣೆ ಸಂಪೂರ್ಣವಾಗಿ ಪುನರಾರಂಭಗೊಂಡಿಲ್ಲ.

ಈ ಕಾರಣಕ್ಕೆ ಈ ದಂಪತಿಗಳು ಸ್ಕೂಟರ್ ಬಳಸಿ ಪರೀಕ್ಷಾ ಕೇಂದ್ರಕ್ಕೆ ತಲುಪಿದ್ದಾರೆ. ರೈಲು, ಬಸ್ಸು ಹಾಗೂ ಇತರ ಸಾರಿಗೆ ವಿಧಾನಗಳು ಲಭ್ಯವಿಲ್ಲದ ಕಾರಣ, ಸ್ಕೂಟರ್ ಮೂಲಕವೇ ಪ್ರಯಾಣಿಸಲು ನಿರ್ಧರಿಸಿದೆವು ಎಂದು ಧನಂಜಯ್ ಕುಮಾರ್ ಹೇಳಿದ್ದಾನೆ.
MOSTREAD: ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ರೂಫ್ ಸೀಳಿದ ಬಂಡೆ

ಗರ್ಭಿಣಿಯಾಗಿರುವ ನನ್ನ ಪತ್ನಿ ಆರಂಭದಲ್ಲಿ ಇಷ್ಟು ದೂರದ ಪ್ರಯಾಣಕ್ಕೆ ಹಿಂದೇಟು ಹಾಕಿದ್ದಳು. ಆದರೆ ನನ್ನ ಇಚ್ಛಾಶಕ್ತಿ ಹಾಗೂ ದೃಢ ನಿಶ್ಚಯವನ್ನು ನೋಡಿದ ನಂತರ ಅವಳು ಈ ದೀರ್ಘ ಪ್ರಯಾಣಕ್ಕೆ ಒಪ್ಪಿಕೊಂಡಳು. ಗ್ವಾಲಿಯರ್‌ಗೆ ಬಂದು ಟ್ಯಾಕ್ಸಿ ಮೂಲಕ ಪ್ರಯಾಣಿಸಿದ್ದರೆ ಸುಮಾರು ರೂ.30,000 ಖರ್ಚಾಗುತ್ತಿತ್ತು ಎಂದುಆತ ಹೇಳಿದ್ದಾನೆ.

ಅಷ್ಟು ಹಣವನ್ನು ಹೊಂದಿಸಲು ನನಗೆ ಸಾಧ್ಯವಿಲ್ಲ. ನಮ್ಮಲ್ಲಿದ್ದ ಸಣ್ಣ ಆಭರಣಗಳನ್ನು ರೂ.10,000ಗಳಿಗೆ ಅಡಮಾನ ಇಟ್ಟಿದ್ದೇವೆ. ಇದುವರೆಗೂ ನಮ್ಮ ಒಂದು ಕಡೆಯ ಪ್ರಯಾಣಕ್ಕೆ ಹಾಗೂ ರೂಂ ಬಾಡಿಗೆಗಾಗಿ ರೂ.5,000 ಖರ್ಚು ಮಾಡಿದ್ದೇವೆ ಎಂದು ಧನಂಜಯ್ ಹೇಳಿದ್ದಾನೆ.