ಪ್ರೇರಣಾತ್ಮಕ ಕಥೆ: ಮನೆ ಕೆಲಸದಾಕೆಗೆ 'ಸೈಕಲ್' ಖರೀದಿಸಲು ಸಹಾಯ ಮಾಡಿದ ಮಾಲೀಕ.. ವಿಡಿಯೋ ವೈರಲ್

ಬೆಂಗಳೂರು, ಕೋಲ್ಕತ್ತಾ, ಮುಂಬೈ, ದೆಹಲಿಯಂತಹ ದೊಡ್ಡ ನಗರಗಳ ಬಹುತೇಕ ಜನರು, ತಮ್ಮ ಕಚೇರಿಯಲ್ಲಿಯೇ ಹೆಚ್ಚಿನ ಸಮಯವನ್ನು ಕಳೆಯುತ್ತಾರೆ. ಅವರಿಗೆ ಮನೆಯ ಕೆಲಸವನ್ನು ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಆ ಕಾರಣಕ್ಕೆ ಮನೆ ಕೆಲಸದವರನ್ನು ನೇಮಿಸಿಕೊಂಡಿರುತ್ತಾರೆ. ಹಲವೆಡೆ ಅವರು ಕುಟುಂಬದ ಸದಸ್ಯರೇ ಆಗಿಬಿಟ್ಟಿರುತ್ತಾರೆ.

ಹೈದರಾಬಾದ್‌ನ ವ್ಯಕ್ತಿಯೊಬ್ಬ ತನ್ನ ಮನೆಯಲ್ಲಿ ಕೆಲಸ ಮಾಡುವ ಮಹಿಳೆಗೆ ಸೈಕಲ್ ಕೊಂಡುಕೊಳ್ಳಲು ಸಹಾಯ ಮಾಡಿದ್ದಾರೆ. ಅದಕ್ಕೆ ಸಂಬಂಧಿಸಿದ ಪ್ರೇರಣಾತ್ಮಕ ಪೋಸ್ಟ್‌ವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಸರಿ ಸುಮಾರು 4 ಲಕ್ಷಕ್ಕೂ ಅಧಿಕ ವೀಕ್ಷಣೆಯನ್ನು ಪಡೆದುಕೊಂಡಿದ್ದು, 4 ಸಾವಿರಕ್ಕೂ ಹೆಚ್ಚಿನ ಮಂದಿ ಲೈಕ್ ಮಾಡಿದ್ದಾರೆ.

Hyderabad Man Helps Housework Women Buy New Bicycle Inspirational Story

ನರೇಶ್ ಎಂಬುವವರೂ 'ಎಕ್ಸ್' ಖಾತೆಯಲ್ಲಿ ತಮ್ಮ ಮನೆಯ ಕೆಲಸದಾಕೆ ಸೈಕಲ್ ತುಳಿದುಕೊಂಡು ಬರುತ್ತಿರುವ ಹಾಗೂ ಹೋಗುತ್ತಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ. 'ನಮ್ಮ ಮನೆಯಲ್ಲಿ ಅಡುಗೆ ಕೆಲಸ ಮಾಡುವ ನೀರಜಾ, ಪ್ರತಿ ದಿನವು 25 ನಿಮಿಷ ನಡೆದುಕೊಂಡು ಬರುತ್ತಾಳೆ. ಆಕೆ ಇನ್ನೂ 2 ಮನೆಯಲ್ಲಿ ಕೆಲಸ ಮಾಡುತ್ತಾಳೆ. ಸರಿ ಸುಮಾರು 1.5 ರಿಂದ 2 ಗಂಟೆಗಳ ಕಾಲ ನಡೆಯುತ್ತಾಳೆ' ಎಂದು ನರೇಶ್ ಹೇಳುತ್ತಾರೆ.

ಮುಂದುವರಿದು, 'ಹೈದರಾಬಾದ್‌ನಲ್ಲಿ ಬೈಸಿಕಲ್ ಮೇಯರ್ ಎಂದೇ ಖ್ಯಾತಿಗಳಿಸಿರುವ ಸಂತಾನ ಸೆಲ್ವನ್ ಅವರಿಂದ ಪ್ರೇರಣೆಗೊಂಡು ನಾನು ಆಕೆಗೆ ಸೈಕಲ್ ಖರೀದಿಸಲು ತಿಳಿಸಿದೆ. ಆದರೆ, ಪ್ರಾರಂಭದಲ್ಲಿ ನೆರೆಹೊರೆಯ ಜನರು ನಗುತ್ತಾರೆ ಮತ್ತು ತಮಾಷೆ ಮಾಡುತ್ತಾರೆಂದು ಆಕೆ ಹಿಂದೆ ಸರಿದಿದ್ದಳು. ಆ ಬಳಿಕ ಒಪ್ಪಿಕೊಂಡ ನೀರಜಾಗೆ ಸೈಕಲ್ ಖರೀದಿಸಲು ಅರ್ಧದಷ್ಟು ಹಣವನ್ನು ನೀಡಿದೆ, ಆಕೆ ಉಳಿದ ದುಡ್ಡನ್ನು ಹಾಕಿದಳು' ಎಂದಿದ್ದಾರೆ.

Hyderabad Man Helps Housework Women Buy New Bicycle Inspirational Story

'ಇಂದು ನೀರಜಾ ಗುಲಾಬಿ (ರೋಜ್) ಬಣ್ಣದ ಸೈಕಲ್ ನಲ್ಲಿ ಕೆಲಸಕ್ಕೆ ಬಂದು ಹೋಗುತ್ತಿದ್ದು, ಪ್ರಯಾಣದ ಸಮಯ 5 ರಿಂದ 7 ನಿಮಿಷ ಕಡಿಮೆಯಾಗಿದೆ ಎಂದು ನರೇಶ್ ತಮ್ಮ 'ಎಕ್ಸ್' ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಈ ಪೋಸ್ಟ್‌ನ್ನು ನೆಟ್ಟಿಗರು ಸಹ ಪ್ರಶಂಸಿಸಿದ್ದಾರೆ. ಸಾಮಾಜಿಕ ಜಾಲತಾಣ ಬಳಕೆದಾರನೊಬ್ಬ, ನೀವು ಆಕೆಗೆ ಸೈಕಲ್ ಹೆಲ್ಮೆಟ್ ಗಿಫ್ಟ್ ಮಾಡಿ ಎಂದು ಕಾಮೆಂಟ್ ಮಾಡಿದ್ದಾರೆ. ಅದಕ್ಕೆ ನರೇಶ್ ಕೂಡ ಕೊಡಿಸುತ್ತೇನೆ ಎಂದು ಉತ್ತರಿಸಿದ್ದಾರೆ.

ಇನ್ನೊಬ್ಬ ನೆಟ್ಟಿಗ, 'ಬೆಂಗಳೂರಿನಲ್ಲಿ ಮನೆ ಕೆಲಸ ಮಾಡುವ ಪುರುಷ ಹಾಗೂ ಮಹಿಳೆಯರು ಸೈಕಲ್ ತುಳಿಯುವುದನ್ನು ನೋಡಿದ್ದೇನೆ. ಸೈಕಲ್ ಓಡಿಸುವುದರಲ್ಲಿ ತಪ್ಪೇನಿಲ್ಲ. ಇದು ಅವರ ಪ್ರಯಾಣದ ಸಮಯವನ್ನು ಉಳಿಸುತ್ತದೆ. ಜೊತೆಗೆ ಪರಿಸರಕ್ಕೂ ಒಳ್ಳೆಯದು. ಸೈಕಲ್ ಖರೀದಿಸಲು ಹೆಚ್ಚು ಹಣ ವ್ಯಯಿಸಬೇಕಾಗಿಲ್ಲ. ಪೆಟ್ರೋಲ್ ಸೇರಿದಂತೆ ನಿರ್ವಹಣೆಗೂ ದುಡ್ಡು ಬೇಕಿಲ್ಲ' ಎಂದು ಹೇಳಿದ್ದಾರೆ.

ಮತ್ತೊಬ್ಬ ಬಳಕೆದಾರ, 'ನೀವು ನಿಜಕ್ಕೂ ಅದ್ಬುತ. ನಾನು ಶಾಲೆಯಲ್ಲಿದ್ದಾಗ, ಮನೆ ಕೆಲಸದ ಮಹಿಳೆಯೊಬ್ಬರು ಸೈಕಲ್ ನಲ್ಲಿ ಓಡಾಡುತ್ತಿದ್ದುದನ್ನು ನೋಡುತ್ತಿದ್ದೆ.. 35 ರಿಂದ 38 ವರ್ಷಗಳ ನಂತರವು ಆಕೆ ಕೆಲಸಕ್ಕೆ ಸೈಕಲ್ ತುಳಿಯುವುದನ್ನು ಕಂಡಿದ್ದೇನೆ. ಇವತ್ತಿಗೂ ಅದೇ ಫಿಟ್ನೆಸ್ ಇದೆ' ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರ, 'ಕಾಕತಾಳೀಯವೆಂಬಂತೆ 'ನಾನು ಗುರುಗ್ರಾಮ್ ನಲ್ಲಿ ಗುಲಾಬಿ ಬಣ್ಣದ ಸೈಕಲ್ ಸವಾರಿ ಮಾಡುವ ಮಹಿಳೆಯರನ್ನು ನೋಡಿದ್ದೇನೆ' ಎಂದಿದ್ದಾರೆ.

ಡ್ರೈವ್‌ಸ್ಪಾರ್ಕ್ ಕನ್ನಡ ತಂಡ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ಒದಗಿಸುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ ಗಳನ್ನು ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Saturday, April 20, 2024, 16:33 [IST]
English summary
Hyderabad man helps housework women buy new bicycle inspirational story
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+