ಲಾಕ್‌ಡೌನ್ ಅವಧಿಯಲ್ಲಿ ಹೊರಬಂದು ಸಿಕ್ಕಿಬಿದ್ದ ನಕಲಿ ಎಸಿಪಿ

ಭಾರತದಲ್ಲಿ ಕರೋನಾ ವೈರಸ್‌ನ ಎರಡನೇ ಅಲೆಯ ಆರ್ಭಟಕ್ಕೆ ಹಲವಾರು ಜನರು ಪ್ರಾಣ ಬಿಟ್ಟಿದ್ದಾರೆ. ಕರೋನಾ ವೈರಸ್ ಹರಡುವುದನ್ನು ನಿಯಂತ್ರಿಸಲು ವಿವಿಧ ರಾಜ್ಯಗಳಲ್ಲಿ ಲಾಕ್‌ಡೌನ್ ವಿಧಿಸಲಾಗಿದೆ.

ಲಾಕ್‌ಡೌನ್ ಅವಧಿಯಲ್ಲಿ ಹೊರಬಂದು ಸಿಕ್ಕಿಬಿದ್ದ ನಕಲಿ ಎಸಿಪಿ

ಲಾಕ್‌ಡೌನ್ ಅವಧಿಯಲ್ಲಿ ಜನರ ಸಂಚಾರವನ್ನು ನಿರ್ಬಂಧಿಸಲಾಗಿದೆ. ಆದರೂ ಜನರು ವಿನಾಕಾರಣ ಮನೆಯಿಂದ ಹೊರಬರುತ್ತಿದ್ದಾರೆ. ಪೊಲೀಸರು ಲಾಕ್‌ಡೌನ್ ನಿಯಮಗಳನ್ನು ಉಲ್ಲಂಘಿಸಿ ಮನೆಯಿಂದ ಹೊರ ಬರುವವರನ್ನು ತಡೆದು ತಪಾಸಣೆ ನಡೆಸುತ್ತಿದ್ದಾರೆ.

ಲಾಕ್‌ಡೌನ್ ಅವಧಿಯಲ್ಲಿ ಹೊರಬಂದು ಸಿಕ್ಕಿಬಿದ್ದ ನಕಲಿ ಎಸಿಪಿ

ಹೀಗೆ ಅನಗತ್ಯವಾಗಿ ಮನೆಯಿಂದ ಹೊರ ಬಂದ ಸಾವಿರಾರು ಜನರನ್ನು ಬಂಧಿಸಲಾಗಿದೆ. ಜೊತೆಗೆ ಹಲವಾರು ವಾಹನಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಇದೇ ರೀತಿಯ ಮತ್ತೊಂದು ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ.

MOST READ: ವಿಮಾನಗಳು ಹಾರಾಟ ನಡೆಸುವಾಗ, ಲ್ಯಾಂಡಿಂಗ್ ಆಗುವಾಗ ಉಂಟಾಗುವ ಶಬ್ದಗಳಿವು

ಲಾಕ್‌ಡೌನ್ ಅವಧಿಯಲ್ಲಿ ಹೊರಬಂದು ಸಿಕ್ಕಿಬಿದ್ದ ನಕಲಿ ಎಸಿಪಿ

ಈ ಘಟನೆಯಲ್ಲಿ ಸಿಕ್ಕಿ ಬಿದ್ದಿರುವ ವ್ಯಕ್ತಿ ತನ್ನನ್ನು ಸಹಾಯಕ ಪೊಲೀಸ್ ಆಯುಕ್ತನೆಂದು ಹೇಳಿಕೊಂಡಿದ್ದ. ಆದರೆ ಪೊಲೀಸರ ತಪಾಸಣೆ ವೇಳೆ ಆತ ನಕಲಿ ಪೊಲೀಸ್ ಅಧಿಕಾರಿ ಎಂದು ತಿಳಿದು ಬಂದಿದೆ.

ಲಾಕ್‌ಡೌನ್ ಅವಧಿಯಲ್ಲಿ ಹೊರಬಂದು ಸಿಕ್ಕಿಬಿದ್ದ ನಕಲಿ ಎಸಿಪಿ

ಹೈದರಾಬಾದ್‌ ಪೊಲೀಸರು ತಪಾಸಣೆ ವೇಳೆ ಮಹೀಂದ್ರಾ ಸ್ಕಾರ್ಪಿಯೋ ಕಾರನ್ನು ತಡೆದು ನಿಲ್ಲಿಸಿದ್ದಾರೆ. ಆಗ ಒಳಗಿದ್ದ ವ್ಯಕ್ತಿ ತಾನು ಸಹಾಯಕ ಪೊಲೀಸ್ ಆಯುಕ್ತ ಎಂದು ಹೇಳಿದ್ದಾನೆ.

MOST READ: ಪ್ರವಾಸದ ಹುಚ್ಚಿಗಾಗಿ ವಾಹನ ಕದಿಯುತ್ತಿದ್ದ ಎಂಜಿನಿಯರಿಂಗ್ ಪದವೀಧರ ಕೊನೆಗೂ ಲಾಕ್

ಲಾಕ್‌ಡೌನ್ ಅವಧಿಯಲ್ಲಿ ಹೊರಬಂದು ಸಿಕ್ಕಿಬಿದ್ದ ನಕಲಿ ಎಸಿಪಿ

ಆತ ತನ್ನ ಐಡಿ ಕಾರ್ಡ್ ಅನ್ನು ಸಹ ತೋರಿಸಿದ್ದಾನೆ. ಆದರೆ ಅಲ್ಲಿದ್ದ ಹಿರಿಯ ಅಧಿಕಾರಿಯೊಬ್ಬರು ಇದು ನಕಲಿ ಐಡಿ ಕಾರ್ಡ್ ಎಂದು ಕಂಡುಹಿಡಿದಿದ್ದಾರೆ. ನಂತರ ಕಾರಿನೊಳಗಿನ ವ್ಯಕ್ತಿಗೆ ಹೊರಬರಲು ಹೇಳಿದ್ದಾರೆ.

ಲಾಕ್‌ಡೌನ್ ಅವಧಿಯಲ್ಲಿ ಹೊರಬಂದು ಸಿಕ್ಕಿಬಿದ್ದ ನಕಲಿ ಎಸಿಪಿ

ಹೊರಗೆ ಬಂದ ವ್ಯಕ್ತಿ ತಾನು ಪತ್ರಕರ್ತ, ಈ ಐಡಿ ಕಾರ್ಡ್ ತನ್ನ ತಂದೆಗೆ ಸೇರಿದ್ದು ಎಂದು ಅಸ್ಪಷ್ಟ ಉತ್ತರ ನೀಡಿದ್ದಾನೆ. ಈ ವೇಳೆ ಅನುಮಾನಗೊಂಡ ಪೊಲೀಸರು ಆತನ ಪರ್ಸ್ ಪರಿಶೀಲಿಸಿದ್ದಾರೆ.

MOST READ: ಭಾರತದಲ್ಲಿ ಹೆಚ್ಚು ಕಾರು ಮಾರಾಟವಾಗುವ ಹತ್ತು ಪ್ರಮುಖ ನಗರಗಳಿವು

ಲಾಕ್‌ಡೌನ್ ಅವಧಿಯಲ್ಲಿ ಹೊರಬಂದು ಸಿಕ್ಕಿಬಿದ್ದ ನಕಲಿ ಎಸಿಪಿ

ಆತನ ಪರ್ಸ್'ನಲ್ಲಿ ವಿವಿಧ ಇಲಾಖೆಗಳಿಗೆ ಸೇರಿದ ಹಲವಾರು ನಕಲಿ ಐಡಿ ಕಾರ್ಡ್'ಗಳು ದೊರೆತಿವೆ. ಈ ಕಾರಣಕ್ಕೆ ನಕಲಿ ಪೊಲೀಸ್ ಅಧಿಕಾರಿಯನ್ನು ಬಂಧಿಸಿರುವ ಹೈದರಾಬಾದ್‌ ಪೊಲೀಸರು ಆತನ ಮಹೀಂದ್ರಾ ಸ್ಕಾರ್ಪಿಯೋ ಕಾರನ್ನು ವಶಕ್ಕೆ ಪಡೆದಿದ್ದಾರೆ.

ಲಾಕ್‌ಡೌನ್ ಅವಧಿಯಲ್ಲಿ ಹೊರಬಂದು ಸಿಕ್ಕಿಬಿದ್ದ ನಕಲಿ ಎಸಿಪಿ

ಈ ಬಗ್ಗೆ ಟಿವಿ 31 ನ್ಯೂಸ್ ನೆಟ್ ವರ್ಕ್ ವರದಿ ಮಾಡಿದೆ. ಭಾರತದಲ್ಲಿ ಪ್ರತಿದಿನ ಲಾಕ್‌ಡೌನ್ ನಿಯಮಗಳನ್ನು ಉಲ್ಲಂಘಿಸುತ್ತಿರುವ ಸಾವಿರಾರು ವಾಹನಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುತ್ತಿದೆ.ಇವುಗಳಲ್ಲಿ ದುಬಾರಿ ಬೆಲೆಯ ಕಾರುಗಳು ಸಹ ಸೇರಿವೆ.

MOST READ: ಕರೋನಾ ಸೋಂಕಿತರ ಪಾಲಿಗೆ ದೇವರಾದ ಕರೋನಾ ಸೋಂಕಿನಿಂದ ಗುಣಮುಖರಾದ ವ್ಯಕ್ತಿ

ಪೊಲೀಸರು ಬಡವರು, ಶ್ರೀಮಂತರು ಎಂಬುದನ್ನು ನೋಡದೇ ವಾಹನಗಳನ್ನು ಮುಟ್ಟುಗೋಲು ಹಾಕಿಕೊಳ್ಳುತ್ತಿದ್ದಾರೆ. ಹೀಗೆ ಮುಟ್ಟುಗೋಲು ಹಾಕಿಕೊಂಡ ವಾಹನಗಳನ್ನು ನಿಲ್ಲಿಸಲು ಬೆಂಗಳೂರು ಪೊಲೀಸರಿಗೆ ಸ್ಥಳದ ಅಭಾವ ಎದುರಾಗಿದೆ.

ಲಾಕ್‌ಡೌನ್ ಅವಧಿಯಲ್ಲಿ ಹೊರಬಂದು ಸಿಕ್ಕಿಬಿದ್ದ ನಕಲಿ ಎಸಿಪಿ

ಆದ್ದರಿಂದ ತಮ್ಮ ವಶದಲ್ಲಿರುವ ಸುಮಾರು 10 ಸಾವಿರ ವಾಹನಗಳನ್ನು ಅವುಗಳ ಮಾಲೀಕರಿಗೆ ಹಿಂದಿರುಗಿಸಲು ಬೆಂಗಳೂರು ನಗರ ಪೊಲೀಸರು ನಿರ್ಧರಿಸಿದ್ದಾರೆ. ದಂಡ ವಿಧಿಸಿ ವಾಹನಗಳನ್ನು ಬಿಡುಗಡೆಗೊಳಿಸಲು ನಿರ್ಧರಿಸಲಾಗಿದೆ. ಇದರಿಂದ ಇತರ ವಾಹನಗಳ ನಿಲುಗಡೆಗೆ ಸ್ಥಳಾವಕಾಶ ಸಿಗಲಿದೆ.

Most Read Articles

Kannada
English summary
Hyderabad police arrests fake ACP and seizes Mahindra Scorpio SUV. Read in Kannada.
Story first published: Saturday, May 29, 2021, 16:48 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X