ದೋಷಪೂರಿತ ನಂಬರ್‍‍ಪ್ಲೇಟ್‍ ಹೊಂದಿದ್ದ ಕಾರಿಗೆ ಪೊಲೀಸರು ಮಾಡಿದ್ದೇನು?

ಭಾರತದಲ್ಲಿ ಹಲವಾರು ವಾಹನಗಳು ದೋಷ ಪೂರಿತ ನಂಬರ್‍‍ಪ್ಲೇಟ್‍‍ಗಳನ್ನು ಹೊಂದಿವೆ. ಈ ವಾಹನಗಳ ಮಾಲೀಕರು ನಂಬರ್‍‍‍ಪ್ಲೇಟ್‍‍ಗಳಲ್ಲಿ ಪಾಲಿಸಬೇಕಾದ ನಿಯಮಗಳನ್ನು ಪಾಲಿಸುವುದಿಲ್ಲ. ಬದಲಿಗೆ ತಮಗೆ ಇಷ್ಟ ಬಂದ ರೀತಿಯ ನಂಬರ್‍‍ಪ್ಲೇಟ್‍‍ಗಳನ್ನು ಅಳವಡಿಸಿಕೊಳ್ಳುತ್ತಾರೆ.

ದೋಷಪೂರಿತ ನಂಬರ್‍‍ಪ್ಲೇಟ್‍ ಹೊಂದಿದ್ದ ಕಾರಿಗೆ ಪೊಲೀಸರು ಮಾಡಿದ್ದೇನು?

ಗಮನಿಸಬೇಕಾದ ಸಂಗತಿಯೆಂದರೆ ಬಹುತೇಕರು ಸಿಂಗಲ್ ಡಿಜಿಟ್ ನಂಬರ್‍‍ಗಳನ್ನು ತಮ್ಮ ವಾಹನಗಳ ನಂಬರ್‍‍ಪ್ಲೇಟ್‍‍ನಲ್ಲಿ ಅಳವಡಿಸಿಕೊಳ್ಳುತ್ತಾರೆ. 0009 ಎಂದು ನಂಬರ್‍‍ಪ್ಲೇಟ್‍‍ನಲ್ಲಿ ಬರೆಸುವ ಬದಲು ಕೇವಲ 9 ಎಂದು ಬರೆಯಿಸುತ್ತಾರೆ. ಮೋಟಾರು ವಾಹನಗಳ ಕಾಯ್ದೆಯು ಬೇಕಾಬಿಟ್ಟಿಯಾಗಿ ನಂಬರ್ ಪ್ಲೇಟ್ ಅಳವಡಿಸುವವರ ವಿರುದ್ಧ ಕ್ರಮ ಕೈಗೊಳ್ಳಲು ಪೊಲೀಸರಿಗೆ ಅಧಿಕಾರ ನೀಡಿದೆ.

ದೋಷಪೂರಿತ ನಂಬರ್‍‍ಪ್ಲೇಟ್‍ ಹೊಂದಿದ್ದ ಕಾರಿಗೆ ಪೊಲೀಸರು ಮಾಡಿದ್ದೇನು?

ಈ ನಿಟ್ಟಿನಲ್ಲಿ ಹೈದರಾಬಾದ್ ಪೊಲೀಸರು ಹೊಸ ಅಭಿಯಾನವನ್ನು ಆರಂಭಿಸಿದ್ದಾರೆ. ದಂಡ ವಿಧಿಸುವ ಬದಲು ವಾಹನಗಳನ್ನು ವಶಕ್ಕೆ ಪಡೆಯುತ್ತಿದ್ದಾರೆ. ಇದರ ಜೊತೆಗೆ ವಾಹನ ಸವಾರರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.

ದೋಷಪೂರಿತ ನಂಬರ್‍‍ಪ್ಲೇಟ್‍ ಹೊಂದಿದ್ದ ಕಾರಿಗೆ ಪೊಲೀಸರು ಮಾಡಿದ್ದೇನು?

ಹೈದರಾಬಾದ್‍‍ನ ಪಂಚಗಟ್ಟ ಪೊಲೀಸರು ನಿನ್ನೆ ದೋಷಪೂರಿತ ನಂಬರ್ ಪ್ಲೇಟ್ ಹೊಂದಿದ್ದ ವಾಹನವೊಂದನ್ನು ವಶಕ್ಕೆ ಪಡೆದಿದ್ದಾರೆ. ಪೊಲೀಸರು ಹೀಗೆ ವಶಕ್ಕೆ ಪಡೆದ ಟೊಯೊಟಾ ಫಾರ್ಚೂನರ್ ಕಾರು ಸಿಂಗಲ್ ಡಿಜಿಟ್‍‍ನ ರಿಜಿಸ್ಟ್ರೇಶನ್ ನಂಬರ್ ಅನ್ನು ಹೊಂದಿತ್ತು.

ದೋಷಪೂರಿತ ನಂಬರ್‍‍ಪ್ಲೇಟ್‍ ಹೊಂದಿದ್ದ ಕಾರಿಗೆ ಪೊಲೀಸರು ಮಾಡಿದ್ದೇನು?

ನಂಬರ್ ಪ್ಲೇಟ್‍‍ನಲ್ಲಿದ್ದ ಬೇರೆ ಅಕ್ಷರಗಳು ಹಾಗೂ ಅಂಕಿಗಳಿಗಿಂತ ವಾಹನದ ಈ ಸಂಖ್ಯೆಯೇ ದೊಡ್ಡದಾಗಿತ್ತು. ಪೊಲೀಸರು ಈ ರೀತಿಯ ವಾಹನಗಳ ಮೇಲೆ ಕಣ್ಣಿಟ್ಟಿದ್ದಾರೆ. ಟೊಯೊಟಾ ಫಾರ್ಚೂನರ್ ಕಾರ್ ಅನ್ನು ವಶಕ್ಕೆ ಪಡೆದ ನಂತರ ಪೊಲೀಸರು ಅದರ ನಂಬರ್ ಪ್ಲೇಟ್ ಅನ್ನು ಬದಲಿಸಿದ್ದಾರೆ.

ದೋಷಪೂರಿತ ನಂಬರ್‍‍ಪ್ಲೇಟ್‍ ಹೊಂದಿದ್ದ ಕಾರಿಗೆ ಪೊಲೀಸರು ಮಾಡಿದ್ದೇನು?

ಫಾರ್ಚೂನರ್ ಮೊದಲು ಹೊಂದಿದ್ದ ನಂಬರ್ ಹಾಗೂ ನಂತರ ಪೊಲೀಸರು ಅಳವಡಿಸಿದ ನಂಬರ್‍‍ಪ್ಲೇಟ್‍‍ಗಳ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಇದರಿಂದಾದರೂ ವಾಹನ ಸವಾರರು ಜಾಗೃತರಾಗಲಿದ್ದಾರೆ ಎಂಬುದು ಪೊಲೀಸರ ಅಭಿಪ್ರಾಯ.

ದೋಷಪೂರಿತ ನಂಬರ್‍‍ಪ್ಲೇಟ್‍ ಹೊಂದಿದ್ದ ಕಾರಿಗೆ ಪೊಲೀಸರು ಮಾಡಿದ್ದೇನು?

ಟೊಯೊಟಾ ಫಾರ್ಚೂನರ್ ಅನ್ನು ವಶಕ್ಕೆ ಪಡೆದ ನಂತರ ಪೊಲೀಸರು ಸ್ಥಳದಲ್ಲಿಯೇ ಬೇರೆ ನಂಬರ್ ಪ್ಲೇಟ್ ಅಳವಡಿಸಿದ್ದಾರೆ. ಈ ನಂಬರ್ ಪ್ಲೇಟ್‍‍ನ ಹಣವನ್ನು ಫಾರ್ಚೂನರ್ ಮಾಲೀಕನಿಂದ ಪಡೆಯಲಾಯಿತೇ ಎಂಬುದು ತಿಳಿದು ಬಂದಿಲ್ಲ.

ದೋಷಪೂರಿತ ನಂಬರ್‍‍ಪ್ಲೇಟ್‍ ಹೊಂದಿದ್ದ ಕಾರಿಗೆ ಪೊಲೀಸರು ಮಾಡಿದ್ದೇನು?

ಆದರೆ ಎಲ್ಲಾ ಸಮಯದಲ್ಲೂ ಪೊಲೀಸರು ಈ ರೀತಿಯಾಗಿ ಸೌಮ್ಯವಾಗಿ ವರ್ತಿಸುವ ಸಾಧ್ಯತೆಗಳಿಲ್ಲ. ಸದ್ಯಕ್ಕೆ ಜನರಲ್ಲಿ ಜಾಗೃತಿಯನ್ನು ಮೂಡಿಸುವ ಕೆಲಸವನ್ನು ಮಾಡುತ್ತಿರುವ ಕಾರಣಕ್ಕೆ ಟೊಯೊಟಾ ಫಾರ್ಚೂನರ್ ಕಾರ್ ಅನ್ನು ವಶಕ್ಕೆ ಪಡೆದು ಬೇರೆ ನಂಬರ್ ಪ್ಲೇಟ್ ಅಳವಡಿಸಿದ್ದಾರೆ.

ದೋಷಪೂರಿತ ನಂಬರ್‍‍ಪ್ಲೇಟ್‍ ಹೊಂದಿದ್ದ ಕಾರಿಗೆ ಪೊಲೀಸರು ಮಾಡಿದ್ದೇನು?

ನಂಬರ್‍‍ಪ್ಲೇಟ್‍‍ಗಳ ಬಗ್ಗೆ ಕಾರ್ಯಾಚರಣೆಯನ್ನು ಆರಂಭಿಸಿದರೆ, ಇದರ ಜೊತೆಗೆ ಉಳಿದ ದಾಖಲೆಗಳನ್ನೂ ಸಹ ಪರಿಶೀಲಿಸಿ, ದಾಖಲೆಗಳಿಲ್ಲದಿದ್ದರೆ ದಂಡ ವಿಧಿಸಲಿದ್ದಾರೆ. ಪೊಲೀಸರು ದಂಡ ವಿಧಿಸುವ ಮುನ್ನ ನಿಮ್ಮ ವಾಹನದ ನಂಬರ್‍‍ಪ್ಲೇಟ್ ಸರಿಯಾಗಿದೆಯೇ ಪರಿಶೀಲಿಸಿ ಕೊಳ್ಳಿ.

Article Published On: Wednesday, February 12, 2020, 16:15 [IST]
English summary
Hyderabad traffic cops bust Toyota Fortuner SUV owner for faulty number plate. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+