'ಇದೇನಾ ಸಂಸ್ಕೃತಿ..' ಕಿಯಾ ಕಾರಿನ ಮೇಲೆ ಯುವಜೋಡಿ ಹೀಗಾ ಮಾಡುವುದು: ಯಾಮಾರಿದ್ರೆ ಯಮಲೋಕಕ್ಕೆ!

ಇತ್ತೀಚಿನ ದಿನಗಳಲ್ಲಿ ಚಲಿಸುತ್ತಿರುವ ಕಾರು (Car) ಅಥವಾ ಬೈಕ್ (Bike) ಮೇಲೆ ಆಲಿಂಗಿಸಿಕೊಳ್ಳುವುದು, ಇಲ್ಲವೇ ಚುಂಬಿಸುವ ಪ್ರವೃತ್ತಿಗಳು ಹೆಚ್ಚಾಗುತ್ತಿವೆ. ಸದ್ಯ, ಹೈದರಾಬಾದ್‌ನಲ್ಲಿ ಅಂತಹದ್ದೇ ಘಟನೆ ನಡೆದಿದ್ದು, ಆ ವಿಡಿಯೋ ಸಾಮಾಜಿಕ ಜಾಲತಾಣ ಭಾರೀ ವೈರಲ್ ಆಗಿದೆ. ನೆಟ್ಟಿಗರು ತೀವ್ರತರವಾಗಿ ಟೀಕಿಸಿದ್ದಾರೆ.

ಹೈದರಾಬಾದ್‌ ನಗರದ ರಸ್ತೆಯೊಂದರಲ್ಲಿ ರಾತ್ರಿವೇಳೆ ಚಲಿಸುತ್ತಿರುವ ಕಿಯಾ (kia) ಕಾರಿನ ಮೇಲೆ ಯುವಜೋಡಿ ಕುಳಿತುಕೊಂಡು, ಯಾವುದೇ ಅಳುಕಿಲ್ಲದೇ ಪರಸ್ಪರ ಚುಂಬಿಸಿದ್ದಾರೆ. ಧರಣೆ ಎಂಬ 'ಎಕ್ಸ್' ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದ್ದು, ಸಾಮಾಜಿಕ ಜಾಲತಾಣ ಬಳಕೆದಾರರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರು ಈ ಯುವ ಜೋಡಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಲವಾರು, ಇಂದಿನ ದಿನಗಳಲ್ಲಿ ಇವು ಮಾಮೂಲಿಯೆಂದು ಹೇಳಿದ್ದಾರೆ.

ಇದೇನಾ ಸಂಸ್ಕೃತಿ.. ಕಿಯಾ ಕಾರಿನ ಮೇಲೆ ಯುವಜೋಡಿ ಹೀಗಾ ಮಾಡುವುದು: ಯಾಮಾರಿದ್ರೆ ಯಮಲೋಕಕ್ಕೆ!

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಈ ವಿಡಿಯೋವನ್ನು ಹೈದರಾಬಾದ್‌ ಪೊಲೀಸರಿಗೂ ಟ್ಯಾಗ್ ಮಾಡಲಾಗಿದ್ದು, ಅವರಿಂದ ಘಟನೆ ಕುರಿತು ಈವೆರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. 'ಎಕ್ಸ್' ಬಳಕೆದಾರರೊಬ್ಬರು, 'ಹೈದರಾಬಾದ್‌ ಸಿಟಿ ಪೊಲೀಸ್, ದಯವಿಟ್ಟು ಇದರ ಬಗ್ಗೆ ಗಮನಹರಿಸಿ. ಸಾರ್ವಜನಿಕರ ಸುರಕ್ಷತೆ ದೃಷ್ಟಿಯಿಂದ ಅಗತ್ಯ ಕ್ರಮ ಕೈಗೊಳ್ಳಿ' ಎಂದು ಕಾಮೆಂಟ್ ಮಾಡಿದ್ದಾರೆ.

ಮತ್ತೊಬ್ಬರು, 'ಇದು ಅವರ ವೈಯಕ್ತಿಕ ವಿಷಯ, ಯಾವುದೇ ಸಮಸ್ಯೆಯಿಲ್ಲ. ಆದರೆ, ರಸ್ತೆಯಲ್ಲಿ ಸುರಕ್ಷತೆ ದೃಷ್ಟಿಯಿಂದ ಚಾಲಕ, ಇದ್ದಕ್ಕಿದ್ದಂತೆ ಬ್ರೇಕ್ ಹಾಕಿದರೆ, ಸನ್ ರೂಫ್ ಮಾರಕವಾಗಬಹುದು' ಎಂದು ಹೇಳಿದ್ದಾರೆ. ಇನ್ನೊಬ್ಬರು, 'ಜನರು ಹುಚ್ಚರಾಗಿ ಹೋಗಿದ್ದಾರೆ. ನಾಲ್ಕು ಗೋಡೆಗಳ ಮಧ್ಯೆ ಮಾಡಬೇಕಾದ ಕೆಲಸಗಳು ರಸ್ತೆಗೆ ಬಂದಿವೆ ಎಂದು ಕಾಮೆಂಟ್ ಮಾಡಿದ್ದಾರೆ.

ಹೈದರಾಬಾದ್‌ ನಗರದ ಸಾರ್ವಜನಿಕ ಸ್ಥಳದದಲ್ಲಿ ಈ ರೀತಿಯ ಘಟನೆಗಳು ವರದಿಯಾಗಿರುವುದು ಇದೇ ಮೊದಲಲ್ಲ. ಆಗಾಗ, ಇಂತಹ ಸುದ್ದಿಗಳು ಪ್ರಕಟವಾಗುತ್ತಲೇ ಇರುತ್ತವೆ. ಈ ಹಿಂದೆ ಸಾಕಷ್ಟು ದೂರುಗಳು ಬಂದ ಹಿನ್ನೆಲೆ, ಅವಿವಾಹಿತ ಯುವಕ, ಯುವತಿಯರನ್ನು ಅಲ್ಲಿನ ಇಂದಿರಾ ಪಾರ್ಕ್‌ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿತ್ತು. ಇದಕ್ಕೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿತ್ತು.

ಕೆಲವು ವರ್ಷಗಳ ಹಿಂದೆ, ಹೈದರಾಬಾದ್ ಮೆಟ್ರೋ ನಿಲ್ದಾಣವೊಂದರಲ್ಲಿ ಯುವಜೋಡಿಗಳು ಲಿಫ್ಟ್‌ಗಳಲ್ಲಿ ಚುಂಬಿಸುತ್ತಿರುವ ವಿಡಿಯೋ ಕೂಡ ವೈರಲ್ ಆಗಿತ್ತು. ಇತ್ತೀಚೆಗೆ, ಉತ್ತರ ಪ್ರದೇಶದ ಹಾಪುರದಲ್ಲಿ ಯುವಜೋಡಿಗಳು, ಚಲಿಸುತ್ತಿರುವ ಬೈಕ್‌ನಲ್ಲಿ ರೋಮ್ಯಾನ್ಸ್ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಅದಕ್ಕೆ ನೆಟ್ಟಿಗರಿಂದ ಟೀಕೆಗಳು ವ್ಯಕ್ತವಾಗಿದ್ದವು.

ಮಹಿಳೆಯೊಬ್ಬರು, ಬೈಕ್ ಫ್ಯುಯೆಲ್ ಟ್ಯಾಂಕ್ ಮೇಲೆ ಕುಳಿತುಕೊಂಡು ಯುವಕನನ್ನು ತಬ್ಬಿಕೊಂಡಿದ್ದಾರೆ. ಆತ ಯಾವುದೇ ಭಯವಿಲ್ಲದೆ, ಬೈಕ್‌ ಓಡಿಸುತ್ತಿದ್ದಾನೆ. ಅವರಿಬ್ಬರೂ ಹೆಲ್ಮೆಟ್ ಧರಿಸಿಲ್ಲ. ಜೊತೆಗೆ, ಸುರಕ್ಷತಾ ನಿಯಮಗಳನ್ನು ಪಾಲಿಸಿಲ್ಲ. ಈ ವಿಡಿಯೋ ಸ್ಥಳೀಯ ಪೋಲೀಸರ ಗಮನಕ್ಕೆ ಬಂದಿದ್ದು, ಅವರು ತಕ್ಷಣ ಎಚ್ಚೆತ್ತುಕೊಂಡಿದ್ದಾರೆ. ಮೋಟಾರು ವಾಹನ (ಎಂವಿ) ಕಾಯ್ದೆಯಡಿ ಪ್ರಕರಣ ದಾಖಲಿಸಿ, ಆ ಬೈಕ್ ಮಾಲೀಕನಿಗೆ ರೂ.8000 ದಂಡ ಕಟ್ಟುವಂತೆ ಸೂಚಿಸಿದ್ದಾರೆ.

ಸಾರ್ವಜನಿಕ ರಸ್ತೆಯಲ್ಲಿ ಚಲಿಸುತ್ತಿರುವ ವಾಹನಗಳಲ್ಲಿ ಈ ರೀತಿಯಾಗಿ ಮಾಡಿದರೆ, ದೊಡ್ಡಮಟ್ಟದ ಅಪಾಯಕ್ಕೆ ತುತ್ತಾಗಬಹುದು. ಕೆಲವೊಮ್ಮೆ ಪ್ರಾಣಹಾನಿಯಾಗಿಯೂ ಸಂಭವಿಸಬಹುದು. ಆ ಕಾರಣಕ್ಕೆ ಬೈಕ್ ಅಥವಾ ಕಾರುಗಳನ್ನು ಓಡಿಸುವಾಗ ಎಂದಿಗೂ ಇಂತಹ ಕೆಲಸ ಮಾಡಬೇಡಿ. ಸಂಚಾರಿ ನಿಯಮ ಪಾಲಿಸಿ, ನಿಗದಿತ ವೇಗಮಿತಿಯಲ್ಲಿ ವಾಹನಗಳನ್ನು ಚಲಾಯಿಸಿ. ಆಗ ಮುಂದಾಗಬಹುದಾದ ಅಪಘಾತವನ್ನು ತಪ್ಪಿಸಬಹುದು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Monday, October 16, 2023, 12:55 [IST]
English summary
Hyderabad video couple kissing moving kia car roof
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+