ಸಂಚಾರ ವಿಧಾನವನ್ನೇ ಬದಲಿಸಲಿವೆ ಹೈಪರ್‌ಲೂಪ್‌ಗಳು

ಪ್ರಯಾಣ ವಿಧಾನವು ದಿನದಿಂದ ದಿನಕ್ಕೆ ಬದಲಾಗುತ್ತಲೇ ಇದೆ. ಮೊದಲು ಎತ್ತಿನ ಗಾಡಿಯಲ್ಲಿ ಪ್ರಯಾಣಿಸುತ್ತಿದ್ದ ನಾವು ಈಗ ವಿಮಾನ ಹಾಗೂ ಹಾರುವ ಕಾರುಗಳಂತಹ ವಿವಿಧ ವಾಹನಗಳನ್ನು ನೋಡುತ್ತಿದ್ದೇವೆ.

ಸಂಚಾರ ವಿಧಾನವನ್ನೇ ಬದಲಿಸಲಿವೆ ಹೈಪರ್‌ಲೂಪ್‌ಗಳು

ಈಗ ಸಂಚಾರ ವಿಧಾನದಲ್ಲಿ ಮತ್ತೊಂದು ಕ್ರಾಂತಿಯುಂಟಾಗುತ್ತಿದೆ. ಸದ್ಯದಲ್ಲೇ ಹೈಪರ್‌ಲೂಪ್ ಗಳು ಬಳಕೆಗೆ ಬರಲಿವೆ. ಇತ್ತೀಚಿಗೆ ಅಮೆರಿಕಾದ ಡೆವ್ಲೋಬ್ ಪರೀಕ್ಷಾ ಕೇಂದ್ರದಲ್ಲಿ ನಡೆಸಿದ ಹೈಪರ್‌ಲೂಪ್ ಪರೀಕ್ಷೆಯು ಯಶಸ್ವಿಯಾಗಿ ಪೂರ್ಣಗೊಂಡಿದೆ ಎಂದು ವರದಿಯಾಗಿದೆ. ಕಳೆದ ಕೆಲ ವರ್ಷಗಳಿಂದ ಹೈಪರ್‌ಲೂಪ್ ಗಳನ್ನು ಪರೀಕ್ಷಿಸಲಾಗುತ್ತಿದೆ. ಈಗ ಮುನುಷ್ಯರನ್ನು ಹೈಪರ್‌ಲೂಪ್ ನಲ್ಲಿ ಕೂರಿಸಿ ಪರೀಕ್ಷಿಸಲಾಗಿದೆ.

ಸಂಚಾರ ವಿಧಾನವನ್ನೇ ಬದಲಿಸಲಿವೆ ಹೈಪರ್‌ಲೂಪ್‌ಗಳು

ಈ ಪರೀಕ್ಷೆ ಯಶಸ್ವಿಯಾಗಿರುವ ಬಗ್ಗೆ ವರ್ಜಿನ್ ಹೈಪರ್‌ಲೂಪ್ ಸೋಮವಾರ ಮಾಹಿತಿ ನೀಡಿದೆ. ವರ್ಜಿನ್ ಹೈಪರ್‌ಲೂಪ್ ನಲ್ಲಿ ಇಬ್ಬರು ಪ್ರಯಾಣಿಕರನ್ನು ಕೂರಿಸಿ ಪರೀಕ್ಷಿಸಲಾಯಿತು.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಸಂಚಾರ ವಿಧಾನವನ್ನೇ ಬದಲಿಸಲಿವೆ ಹೈಪರ್‌ಲೂಪ್‌ಗಳು

ಈ ಪರೀಕ್ಷೆಯಲ್ಲಿ ಒಬ್ಬ ಪುರುಷ ಹಾಗೂ ಒಬ್ಬ ಮಹಿಳೆ ಭಾಗವಹಿಸಿದ್ದರು. ಇವರಿಬ್ಬರೊ ವರ್ಜಿನ್ ಹೈಪರ್‌ಲೂಪ್‌ನ ಉದ್ಯೋಗಿಗಳು. ಈ ಪರೀಕ್ಷೆಯಲ್ಲಿ ಹೈಪರ್‌ಲೂಪ್ ಪ್ರತಿ ಗಂಟೆಗೆ 172 ಕಿ.ಮೀ ವೇಗದಲ್ಲಿ ಸಾಗಿದೆ.

ಸಂಚಾರ ವಿಧಾನವನ್ನೇ ಬದಲಿಸಲಿವೆ ಹೈಪರ್‌ಲೂಪ್‌ಗಳು

ಈ ಹೈಪರ್‌ಲೂಪ್ ಗಂಟೆಗೆ 1,000 ಕಿ.ಮೀಗಿಂತ ಹೆಚ್ಚಿನ ವೇಗದಲ್ಲಿ ಚಲಿಸಬಲ್ಲದು ಎಂಬುದು ಗಮನಾರ್ಹ. 15 ಸೆಕೆಂಡುಗಳ ಈ ಪರೀಕ್ಷೆಯಲ್ಲಿ ವರ್ಜಿನ್ ಹೈಪರ್‌ಲೂಪ್ 15 ಸೆಕೆಂಡುಗಳಲ್ಲಿ 500 ಮೀಟರ್ ದೂರ ಸಾಗಿದೆ.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಸಂಚಾರ ವಿಧಾನವನ್ನೇ ಬದಲಿಸಲಿವೆ ಹೈಪರ್‌ಲೂಪ್‌ಗಳು

ಈ ಪರೀಕ್ಷೆಯ ಯಶಸ್ಸಿನ ನಂತರ ಪುಣೆ ಮೂಲದ, ವರ್ಜಿನ್ ಹೈಪರ್‌ಲೂಪ್ ಉದ್ಯೋಗಿಯಾದ ಧಾನೆ ಮಂಜ್ರೇಕರ್ ಮುಂದಿನ ಸವಾರಿಯನ್ನು ಹೈಪರ್‌ಲೂಪ್‌ನಲ್ಲಿ ಮಾಡಲು ಸಜ್ಜಾಗಿದ್ದಾರೆ. ಈ ಮಾಹಿತಿಯನ್ನು ಕಂಪನಿಯ ಉನ್ನತ ಅಧಿಕಾರಿಗಳು ಖಚಿತಪಡಿಸಿದ್ದಾರೆ.

ಸಂಚಾರ ವಿಧಾನವನ್ನೇ ಬದಲಿಸಲಿವೆ ಹೈಪರ್‌ಲೂಪ್‌ಗಳು

ಹೈಪರ್‌ಲೂಪ್ ಹೊಸ ತಲೆಮಾರಿನ ಪ್ರಯಾಣ ವಿಧಾನವಾಗಿದೆ. ಹೈಪರ್‌ಲೂಪ್ ಪಿಲ್ಲರ್ ಗಳ ಮೇಲೆ ಜೋಡಿಸಲಾದ ಕಡಿಮೆ ಒತ್ತಡದ ಪೈಪ್ ಗಳ ಮೂಲಕ ಹೆಚ್ಚಿನ ವೇಗದಲ್ಲಿ ಚಲಿಸುವ ವಾಹನವಾಗಿದೆ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಸಂಚಾರ ವಿಧಾನವನ್ನೇ ಬದಲಿಸಲಿವೆ ಹೈಪರ್‌ಲೂಪ್‌ಗಳು

ಹೈಪರ್‌ಲೂಪ್, ಮಾತ್ರೆಗಳನ್ನಿಡುವ ಬಾಕ್ಸ್ ರೀತಿಯಲ್ಲಿರುತ್ತದೆ. ಈ ವ್ಯವಸ್ಥೆಯಲ್ಲಿ ಮಾನವರ ಪ್ರಯಾಣಕ್ಕಾಗಿ ಸೀಟುಗಳನ್ನು ಅಳವಡಿಸಲಾಗುತ್ತದೆ. ಭಾರತದಲ್ಲಿಯೂ ಹೈಪರ್‌ಲೂಪ್ ವ್ಯವಸ್ಥೆಯನ್ನು ಜಾರಿಗೆ ತರಲು ಹಲವು ರಾಜ್ಯ ಸರ್ಕಾರಗಳು ಮುಂದಾಗಿವೆ.

ಈ ಸಂಚಾರ ವಿಧಾನವನ್ನು ಬೆಂಗಳೂರು, ಮುಂಬೈ, ಪುಣೆ, ಹೈದರಾಬಾದ್ ಹಾಗೂ ಚೆನ್ನೈ ನಗರಗಳಲ್ಲಿ ಜಾರಿಗೊಳಿಸುವ ಬಗ್ಗೆ ಅಧ್ಯಯನ ನಡೆಸಲಾಗುತ್ತಿದೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಸಂಚಾರ ವಿಧಾನವನ್ನೇ ಬದಲಿಸಲಿವೆ ಹೈಪರ್‌ಲೂಪ್‌ಗಳು

ವಿಶ್ವದ ಮೊದಲ ಹೈಪರ್‌ಲೂಪ್ ಸಾರಿಗೆ ವಿಧಾನವನ್ನು ದುಬೈ ಹಾಗೂ ಅಬುಧಾಬಿ ನಗರಗಳ ನಡುವೆ ನಿರ್ಮಿಸಲಾಗುವುದು. ಈ ವಿಧಾನವು ಸಾರಿಗೆ ಜಗತ್ತಿನಲ್ಲಿ ಹೊಸ ಕ್ರಾಂತಿಯನ್ನುಂಟು ಮಾಡುವ ನಿರೀಕ್ಷೆಗಳಿವೆ.

Most Read Articles

Kannada
English summary
Hyperloop first human trial successfully completed. Read in Kannada.
Story first published: Thursday, November 12, 2020, 20:27 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X