ಬರಲಿದೆ ಭವಿಷ್ಯದ ಸಾರಿಗೆ ಹೈಪರ್‌ಲೂಪ್: ಇನ್ಮುಂದೆ ಬೆಂಗಳೂರು ಟು ಚೆನ್ನೈ ಪ್ರಯಾಣ ಕೇವಲ 30 ನಿಮಿಷ..!!

ಒಂದು ವೇಳೆ ಈ ಮಹತ್ತರ ಯೋಜನೆ ಭಾರತದಲ್ಲಿ ಕೈಗೂಡಿದ್ದೇ ಆದಲ್ಲಿ ದೇಶದ ಪ್ರಮುಖ ನಗರಗಳ ಮಧ್ಯೆ ಕೆಲವೇ ನಿಮಿಷಗಳಲ್ಲಿ ಪ್ರಯಾಣ ಸಾಧ್ಯವಾಗಿದ್ದು, ಈ ಮೂಲಕ ಹೈಪರ್ ಲೂಪ್ ಸಾರಿಗೆ ತಂತ್ರಜ್ಞಾನವು ಹೊಸ ಭರವಸೆ ಹುಟ್ಟುಹಾಕಲಿದೆ.

By Praveen

ಜಗತ್ತಿನ ಐದನೇ ಅತಿದೊಡ್ಡ ಸಾರಿಗೆ ವ್ಯವಸ್ಥೆ ಎಂದೇ ಬಿಂಬಿತವಾಗಿರುವ ಹೈಪರ್‌ಲೂಪ್ ತಂತ್ರಜ್ಞಾನವು ಭಾರತಕ್ಕೆ ಕಾಲಿಡಲು ಸಜ್ಜಾಗಿದೆ. ಎಲ್ಲವೂ ಅಂದುಕೊಂಡಂತೆ ನಡೆದಲ್ಲಿ ಇನ್ನು ಕೆಲವೇ ದಿನಗಳಲ್ಲಿ ಮುಂಬೈ ಟು ಪುಣೆ ಹಾಗೂ ಬೆಂಗಳೂರು ಟು ಚೆನ್ನೈ ನಡುವೆ ಹೈಪರ್‌ಲೂಪ್ ಹೈ ಸ್ಪೀಡ್ ರೈಲು ಯೋಜನೆ ಜಾರಿಯಾಗಲಿದೆ.

ಬರಲಿದೆ ಭವಿಷ್ಯದ ಸಾರಿಗೆ ಹೈಪರ್‌ಲೂಪ್: ಇನ್ಮುಂದೆ ಚೆನ್ನೈ ಪ್ರಯಾಣ ಕೇವಲ 30 ನಿಮಿಷ..!!

ಅಮೆರಿಕ ಮೂಲದ ಹೈಪರ್‌ಲೂಪ್ ಟ್ರಾನ್ಸ್‌ಪೋರ್ಟ್ ಟೆಕ್ನಾಲಜಿ ಸಂಸ್ಥೆಯು ಈ ಹಿಂದೆ ಭಾರತಕ್ಕೆ ಹೈಪರ್‌ಲೂಪ್ ಸಾರಿಗೆ ವ್ಯವಸ್ಥೆಯನ್ನು ಪರಿಚಯಿಸುವ ಇರಾದೆಯನ್ನು ವ್ಯಕ್ತಪಡಿಸಿತ್ತು. ಆದ್ರೆ ಇದೀಗ ಮಹತ್ತರ ಯೋಜನೆ ಬಗೆಗೆ ಭಾರತದಲ್ಲಿ ಪರಿಶೀಲನೆ ನಡೆಸುತ್ತಿದ್ದು, ಬೃಹತ್ ಯೋಜನೆ ಜಾರಿ ಸಾಧ್ಯತೆಗಳಿವೆ.

ಬರಲಿದೆ ಭವಿಷ್ಯದ ಸಾರಿಗೆ ಹೈಪರ್‌ಲೂಪ್: ಇನ್ಮುಂದೆ ಚೆನ್ನೈ ಪ್ರಯಾಣ ಕೇವಲ 30 ನಿಮಿಷ..!!

ಹೈಪರ್ ಲೂಪ್ ಹೈ ಸ್ಪೀಡ್ ರೈಲು ಯೋಜನೆ ವಿಚಾರವಾಗಿ ಕೇಂದ್ರದ ಜೊತೆ ಮಾತುಕತೆ ನಡೆಸಿರುವ ಸಂಸ್ಥಾಪಕ ಬಿಬಾಬ್ ಗ್ಯಾಬ್ರಿಯಲ್, ಯೋಜನೆ ಜಾರಿಗೊಳಿಸುವ ನಿಟ್ಟಿನಲ್ಲಿ ಮಹತ್ತರ ಚರ್ಚೆ ನಡೆಸಿ ಮಾಹಿತಿ ಸಂಗ್ರಹಿಸುತ್ತಿದ್ದಾರೆ.

ಬರಲಿದೆ ಭವಿಷ್ಯದ ಸಾರಿಗೆ ಹೈಪರ್‌ಲೂಪ್: ಇನ್ಮುಂದೆ ಚೆನ್ನೈ ಪ್ರಯಾಣ ಕೇವಲ 30 ನಿಮಿಷ..!!

ಇನ್ನು 2013ರಲ್ಲಿ ಟೆಸ್ಲಾ ಸ್ಥಾಪಕರಾಗಿರುವ ಎಲನ್ ಮಸ್ಕ್ ಮೊದಲ ಬಾರಿಗೆ ಹೈಪರ್ ಲೂಪ್ ತಂತ್ರಜ್ಞಾನವನ್ನು ಜಗತ್ತಿಗೆ ಪರಿಚಯಿಸಿದ್ದರು. ಆದ್ರೆ ಇದೀಗ ಹೈಪರ್ ಲೂಪ್ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು ಜಗತ್ತಿನ ಪ್ರಮುಖ ದೇಶಗಳು ಯೋಜನೆ ರೂಪಿಸುತ್ತಿವೆ.

ಬರಲಿದೆ ಭವಿಷ್ಯದ ಸಾರಿಗೆ ಹೈಪರ್‌ಲೂಪ್: ಇನ್ಮುಂದೆ ಚೆನ್ನೈ ಪ್ರಯಾಣ ಕೇವಲ 30 ನಿಮಿಷ..!!

ಇನ್ನೊಂದು ಪ್ರಮುಖ ವಿಚಾರವೇನೆಂದರೆ ಹೈಪರ್ ಲೂಪ್ ಸ್ಪೀಡ್ ರೈಲು, ವಿಮಾನಗಿಂತಲೂ ಅತಿ ವೇಗವಾಗಿ ಸಂಚರಿಸುತ್ತದೆ. ಹೀಗಾಗಿ ಯೋಜನೆ ಜಾರಿಗೆ ಬಂದಲ್ಲಿ ಬೆಂಗಳೂರು ಟು ಚೆನ್ನೈ ಪ್ರಯಾಣ ಕೇವಲ 30 ನಿಮಿಷದಲ್ಲಿ ಸಾಧ್ಯವಾಗಲಿದೆ.

ಬರಲಿದೆ ಭವಿಷ್ಯದ ಸಾರಿಗೆ ಹೈಪರ್‌ಲೂಪ್: ಇನ್ಮುಂದೆ ಚೆನ್ನೈ ಪ್ರಯಾಣ ಕೇವಲ 30 ನಿಮಿಷ..!!

ವಿಮಾನ, ರೈಲು, ಹಡಗು ಮತ್ತು ಬಸ್ ಸಾರಿಗೆ ನಂತರ ಹೈಪರ್ ಲೂಪ್ ಅನ್ನು ಭವಿಷ್ಯದ 5ನೇ ಸಾರಿಗೆ ವ್ಯವಸ್ಥೆ ಎಂದೇ ಬಿಂಬಿಸಲಾಗಿದೆ. ಹೀಗಾಗಿ ಬೃಹತ್ ನಗರಗಳಲ್ಲಿ ಹೈಪರ್ ಲೂಪ್ ತಂತ್ರಜ್ಞಾನ ಜಾರಿಯಾದಲ್ಲಿ ಖಂಡಿತವಾಗಿಯೂ ಯಶಸ್ವಿಯಾಗಲಿದೆ.

ಬರಲಿದೆ ಭವಿಷ್ಯದ ಸಾರಿಗೆ ಹೈಪರ್‌ಲೂಪ್: ಇನ್ಮುಂದೆ ಚೆನ್ನೈ ಪ್ರಯಾಣ ಕೇವಲ 30 ನಿಮಿಷ..!!

ಇನ್ನೊಂದು ಪ್ರಮುಖ ವಿಚಾರವನ್ನು ನಾವು ತಿಳಿದುಕೊಳ್ಳಲೇಬೇಕು. ಯಾಕೇಂದ್ರೆ ಇದೊಂದು ಅತ್ಯಂತ ಕಡಿಮೆ ವೆಚ್ಚದಾಯಕ ಯೋಜನೆಯಾಗಿದ್ದು, ಹೈ ಸ್ಪೀಡ್ ರೈಲು ಯೋಜನೆಗಿಂತ 10 ಪಟ್ಟು ಖರ್ಚು ಕಡಿಮೆ ಎಂದರೆ ನೀವು ನಂಬಲೇಬೇಕು.

ಬರಲಿದೆ ಭವಿಷ್ಯದ ಸಾರಿಗೆ ಹೈಪರ್‌ಲೂಪ್: ಇನ್ಮುಂದೆ ಚೆನ್ನೈ ಪ್ರಯಾಣ ಕೇವಲ 30 ನಿಮಿಷ..!!

ಕಡಿಮೆ ಭಾರದ ಸ್ಟೀಲ್ ಟ್ಯೂಬ್‌ನಲ್ಲಿ ಲಗತ್ತಿಸಲಾಗಿರುವ ಪೊಡ್ ಎನ್ನುವ ಕ್ಯಾಪ್ಸುಲ್ ಮುಖಾಂತರ ಈ ಹೈ ಸ್ಪೀಡ್ ರೈಲು ಸಂಚರಿಸಲಿದ್ದು, ನಿಮಗೆ ಪ್ರಯಾಣದ ಆಯಾಸವೇ ಆಗುವುದಿಲ್ಲ.

ಬರಲಿದೆ ಭವಿಷ್ಯದ ಸಾರಿಗೆ ಹೈಪರ್‌ಲೂಪ್: ಇನ್ಮುಂದೆ ಚೆನ್ನೈ ಪ್ರಯಾಣ ಕೇವಲ 30 ನಿಮಿಷ..!!

ಇನ್ನು ಭೂಕಂಪಗಳಂತಹ ನೈಸರ್ಗಿಕ ವಿಪತ್ತುಗಳನ್ನು ಎದುರಿಸ ಬಲ್ಲ ಆತ್ಯಾಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡಿರುವ ಹೈಪರ್ ಲೂಪ್, ಕ್ಯಾಪ್ಸುಲ್‌ಗಳ ಮೂಲಕ ಪರಸ್ಪರ ಸಂಘರ್ಷಣೆಯಾಗದಂತೆ ನೋಡಿಕೊಳ್ಳಲಿದೆ.

ಬರಲಿದೆ ಭವಿಷ್ಯದ ಸಾರಿಗೆ ಹೈಪರ್‌ಲೂಪ್: ಇನ್ಮುಂದೆ ಚೆನ್ನೈ ಪ್ರಯಾಣ ಕೇವಲ 30 ನಿಮಿಷ..!!

ಪ್ರತಿ ಪೊಡ್ ನಡುವೆ 8 ಕಿಲೋ ಮೀಟರ್ ಅಂತರವಿರಲಿದ್ದು, ಒಂದು ಪೊಡ್‌ನಿಂದ ಇನ್ನೊಂದು ಪೊಡ್‌ಗೆ ಕೇವಲ 30 ಸೆಕೆಂಡುಗಳಷ್ಟೇ ವ್ಯತ್ಯಾಸವಿರಲಿದೆ. ಜೊತೆಗೆ ಸೋಲಾರ್‌ನಿಂದಲೇ ನಿಯಂತ್ರಿಸಲ್ಪಡುವ ಹೈಪರ್‌ಲೂಪ್ ರೈಲು, ಗಂಟೆಗೆ 1300 ಕೀ.ಮೀ ವೇಗದಲ್ಲಿ ಚಲಿಸಲಿದೆ.

ಬರಲಿದೆ ಭವಿಷ್ಯದ ಸಾರಿಗೆ ಹೈಪರ್‌ಲೂಪ್: ಇನ್ಮುಂದೆ ಚೆನ್ನೈ ಪ್ರಯಾಣ ಕೇವಲ 30 ನಿಮಿಷ..!!

ಮಹತ್ತರ ಯೋಜನೆ ಕುರಿತು ಈಗಾಗಲೇ ಹಿರಿಯ ಅಧಿಕಾರಿಗಳೊಂದಿಗೆ ಮಾತನಾಡಿರುವ ರೈಲ್ವೆ ಸಚಿವ ಸುರೇಶ್ ಪ್ರಭು, ಯೋಜನೆಯ ಜಾರಿ ಸಾಧ್ಯತೆಗಳ ಬಗ್ಗೆ ಪರಿಶೀಲನೆ ನಡೆಸುವಂತೆ ಸೂಚಿಸಿದ್ದಾರೆ ಎನ್ನಲಾಗಿದೆ. ಇದರಿಂದಾಗಿಯೇ ಯೋಜನೆ ಜಾರಿ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಬರಲಿದೆ ಭವಿಷ್ಯದ ಸಾರಿಗೆ ಹೈಪರ್‌ಲೂಪ್: ಇನ್ಮುಂದೆ ಚೆನ್ನೈ ಪ್ರಯಾಣ ಕೇವಲ 30 ನಿಮಿಷ..!!

ಈ ಬೃಹತ್ ಯೋಜನೆಯ ಹೈಪರ್ ಲೂಪ್ ಹಳಿ ನಿರ್ಮಾಣಕ್ಕೆ ಪ್ರತಿ ಕಿಲೋ ಮೀಟರ್‌ಗೆ 50 ಮಿಲಿಯನ್ ಅಮೆರಿಕನ್ ಡಾಲರ್ ವೆಚ್ಚ ಅಂದಾಜಿಸಲಾಗಿದೆ. ಪ್ರತಿಯೊಂದು ಪೊಡ್‌ನಲ್ಲಿ 28ರಿಂದ 40 ಮಂದಿಯನ್ನು ಸಾಗಿಸುವ ಸಾಮರ್ಥ್ಯ ಹೊಂದಿದ್ದು, ದಿನ ಒಂದಕ್ಕೆ 67 ಸಾವಿರ ಪ್ರಯಾಣಿಕರನ್ನು ಹೊತ್ತೊಯ್ಯುವ ಯೋಜನೆಯಿದೆ.

ಬರಲಿದೆ ಭವಿಷ್ಯದ ಸಾರಿಗೆ ಹೈಪರ್‌ಲೂಪ್: ಇನ್ಮುಂದೆ ಚೆನ್ನೈ ಪ್ರಯಾಣ ಕೇವಲ 30 ನಿಮಿಷ..!!

ಒಂದು ವೇಳೆ ವೇಳೆ ಹೈಪರ್ ಲೂಪ್ ಯೋಜನೆ ಭಾರತದಲ್ಲಿ ನನಸಾದ್ದಲ್ಲಿ ಮುಂಬೈ ಟು ಪುಣೆ ಮತ್ತು ಬೆಂಗಳೂರು ಟು ಚೆನ್ನೈ ನಡುವಿನ ಪ್ರಯಾಣದ ಸಮಯ ಕೇವಲ 30 ನಿಮಿಷಗಳಿಗೆ ಇಳಿಕೆಯಾಗಲಿದ್ದು, ಜೊತೆಗೆ ಭಾರತದಲ್ಲಿ ಜನಪ್ರಿಯತೆ ಕೂಡಾ ಪಡೆಯಲಿದೆ.

ಮಾರುತಿ ಬಲೆನೊ ಆರ್‌ಎಸ್ ಕಾರಿನ ಚಿತ್ರಗಳಿಗಾಗಿ ಕೆಳಗಿನ ಗ್ಯಾಲರಿಯನ್ನು ಈ ಕೂಡಲೇ ಕ್ಲಿಕ್ ಮಾಡಿ.

More from DriveSpark

Article Published On: Thursday, March 2, 2017, 12:04 [IST]
English summary
Hyperloop One has entered India and it has some amazing plans for the country. But the technology is still a concept.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+