ರಸ್ತೆ ಮಧ್ಯ ಪಲ್ಟಿ ಹೊಡೆದ ಹೊಚ್ಚ ಹೊಸ ಹ್ಯುಂಡೈ ಕ್ರೆಟಾ

By Nagaraja

ವಿಚಿತ್ರವಾದ ಅಪಘಾತ ಪ್ರಕರಣವೊಂದರಲ್ಲಿ ಇತ್ತೀಚೆಗಷ್ಟೇ ಭಾರತೀಯ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿರುವ ಹೊಚ್ಚ ಹೊಸ ಹ್ಯುಂಡೈ ಕ್ರೆಟಾ ಕಾಂಪಾಕ್ಟ್ ಕ್ರೀಡಾ ಬಳಕೆಯ ವಾಹನವು (ಎಸ್‌ಯುವಿ) ಪಲ್ಟಿ ಹೊಡೆದ ಘಟನೆಯು ವರದಿಯಾಗಿದೆ.

ಈ ಸಂಬಂಧ ಫೇಸ್ ಬುಕ್ ನಲ್ಲಿ ಚಿತ್ರಗಳು ಬಿಸಿ ಬಿಸಿ ದೋಸೆಯಂತೆ ಬಿತ್ತರಿಸಿವೆ. ಘಟನೆಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಗಳು ಲಭ್ಯವಾಗಿಲ್ಲ. ಆದರೆ ಚಿತ್ರಗಳು ಹಲವು ಅನುಮಾಗಳಿಗೆ ಎಡೆ ಮಾಡಿಕೊಟ್ಟಿದೆ.

ರಸ್ತೆ ಮಧ್ಯ ಪಲ್ಟಿ ಹೊಡೆದ ಹೊಚ್ಚ ಹೊಸ ಹ್ಯುಂಡೈ ಕ್ರೆಟಾ

ಹ್ಯುಂಡೈ ಕ್ರೆಟಾ ಅಪಘಾತ ಎಲ್ಲಿ ನಡೆದಿದೆ ಎಂಬುದಕ್ಕೆ ಮಾಹಿತಿಗಳು ಅಲಭ್ಯ. ಆದರೆ ಬಲ್ಲ ಮೂಲಗಳ ಪ್ರಕಾರ ಡೀಲರುಗಳಿಂದ ಟೆಸ್ಟಿಂಗ್ ನಡೆಸುತ್ತಿರುವ ವೇಳೆ ಅಪಘಾತ ನಡೆದಿದೆ.

ರಸ್ತೆ ಮಧ್ಯ ಪಲ್ಟಿ ಹೊಡೆದ ಹೊಚ್ಚ ಹೊಸ ಹ್ಯುಂಡೈ ಕ್ರೆಟಾ

ಆಕಸ್ತ ಗ್ರಾಹಕರು ಕಾರು ಟೆಸ್ಟಿಂಗ್ ನಡೆಸುತ್ತಿರುವ ವೇಳೆ ಬೈಕ್ ವೊಂದು ಅಡ್ಡ ಬಂದಿರುವುದು ಅಪಘಾತಕ್ಕೆ ಕಾರಣ ಎನ್ನಲಾಗುತ್ತಿದೆ.

ರಸ್ತೆ ಮಧ್ಯ ಪಲ್ಟಿ ಹೊಡೆದ ಹೊಚ್ಚ ಹೊಸ ಹ್ಯುಂಡೈ ಕ್ರೆಟಾ

ಚಿತ್ರದಲ್ಲಿ ನೀವು ನೋಡುತ್ತಿರುವಂತೆಯೇ ಹ್ಯುಂಡೈ ಕ್ರೆಟಾ ಸಂಪೂರ್ಣವಾಗಿ ನಜ್ಜುಗುಜ್ಜುಗೊಂಡಿದೆ. ಆದರೆ ಹೇಗೆ ಅಪಘಾತ ಸಂಭವಿಸಿತು ಎಂಬುದು ಇನ್ನೂ ನಿಗೂಢ.

ರಸ್ತೆ ಮಧ್ಯ ಪಲ್ಟಿ ಹೊಡೆದ ಹೊಚ್ಚ ಹೊಸ ಹ್ಯುಂಡೈ ಕ್ರೆಟಾ

ಹ್ಯುಂಡೈ ಕ್ರೆಟಾ ಕಾರಿನ ಮುಂಭಾಗ ಸಂಪೂರ್ಣವಾಗಿ ಜಖಂ ಆಗಿದೆ. ಫ್ರಂಟ್ ಬಂಪರ್, ಬೊನೆಟ್, ವಿಂಡ್ ಶೀಲ್ಡ್ ಎಲ್ಲವೂ ಅಪಘಾತದ ರಭಸಕ್ಕೆ ನಜ್ಜುಗುಜ್ಜಾಗಿದೆ.

ರಸ್ತೆ ಮಧ್ಯ ಪಲ್ಟಿ ಹೊಡೆದ ಹೊಚ್ಚ ಹೊಸ ಹ್ಯುಂಡೈ ಕ್ರೆಟಾ

ನಿಮಗೆಲ್ಲರಿಗೂ ತಿಳಿದಿರುವಂತೆಯ ಹ್ಯುಂಡೈ ಕ್ರೆಟಾದ ಎಲ್ಲ ವೆರಿಯಂಟ್ ಗಳಲ್ಲೂ ಎಬಿಎಸ್ ಮತ್ತು ಇಬಿಡಿಗಳಂತಹ ಸುರಕ್ಷತಾ ವೈಶಿಷ್ಟ್ಯಗಳು ಲಭ್ಯವಿದೆ. ಇನ್ನು ಟಾಪ್ ಎಂಡ್ ವೆರಿಯಂಟ್ ನಲ್ಲಿ ಎಸ್ ಎಕ್ಸ್(ಐಚ್ಛಿಕ) ಬದಿ ಹಾಗೂ ಕರ್ಟೈನ್ ಏರ್ ಬ್ಯಾಗ್ ಜೊತೆಗೆ ಸೆಗ್ಮೆಂಟ್ ನಲ್ಲಿ ಇದೇ ಮೊದಲ ಬಾರಿಗೆ ಇಎಸ್ ಸಿ, ವಿಎಸ್ ಎಂ, ಹಿಲ್ ಸ್ಟ್ಯಾರ್ಟ್ ಅಸಿಸ್ಟ್ ಮತ್ತು 17 ಇಂಚುಗಳ ಡೈಮಂಡ್ ಕಟ್ ಅಲಾಯ್ ವೀಲ್ ಸೌಲಭ್ಯವನ್ನು ಕೊಡಲಾಗಿದೆ.

ರಸ್ತೆ ಮಧ್ಯ ಪಲ್ಟಿ ಹೊಡೆದ ಹೊಚ್ಚ ಹೊಸ ಹ್ಯುಂಡೈ ಕ್ರೆಟಾ

ಗರಿಷ್ಠ ಸುರಕ್ಷಾ ಮಾನದಂಡಗಳನ್ನು ಹೊಂದಿರುವ ಹೊರತಾಗಿಯೂ ಹ್ಯುಂಡೈ ಕ್ರೆಟಾ ಈ ರೀತಿಯಾಗಿ ಪಲ್ಟಿ ಹೊಡೆದು ಜಖಂಗೊಂಡಿರುವುದು ಹಲವಾರು ಊಹಾಪೋಹಗಳಿಗೆ ಕಾರಣವಾಗಿದೆ.

Article Published On: Friday, July 24, 2015, 10:07 [IST]
English summary
Hyundai Creta Crashes
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+