Hyundai: ಮೊದಲ ಕ್ರೆಟಾ ಎಲೆಕ್ಟ್ರಿಕ್ ಕಾರಿನ ಡೆಲಿವರಿ: ಫುಲ್ ಜೋಷ್‌ನಲ್ಲಿ ವಿತರಣೆ ಪಡೆದ ಕುಟುಂಬ!
ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳಿಗೆ ಬೇಡಿಕೆ ಹೆಚ್ಚಾಗುತ್ತಿದ್ದಂತೆ ಹ್ಯುಂಡೈ ಕೂಡ ತನ್ನ ಬಹುನಿರೀಕ್ಷಿತ ಕ್ರೆಟಾ ಎಲೆಕ್ಟ್ರಿಕ್ (Hyundai Creta Electric) ಎಸ್‌ಯುವಿಯನ್ನು ಬಿಡುಗಡೆ ಮಾಡಿದೆ. ಇದರ ಬೆಲೆಯು ಭಾರತದ ಎಕ್ಸ್‌ಶೋರೂಂ ದರದಂತೆ ರೂ.17.99 ಲಕ್ಷಗಳಾಗಿದೆ. ವಿಶೇಷವೇನೆಂದರೆ ಈ ಕಾರಿನ ಡೆಲಿವರಿಗಳು ಸದ್ಯ ಆರಂಭವಾಗಿವೆ. ಗ್ರಾಹಕರು ಡೆಲಿವರಿ ತೆಗೆದುಕೊಳ್ಳುವ ವೀಡಿಯೊಗಳು ಈಗ ಆನ್‌ಲೈನ್‌ನಲ್ಲಿ ಹೊರಬಂದಿವೆ. ಸನ್‌ರೈಸ್ ಹ್ಯುಂಡೈ ಡೀಲರ್‌ಶಿಪ್‌ನಲ್ಲಿ ಗ್ರಾಹಕರು ಹೊಸದಾಗಿ ಖರೀದಿಸಿದ ಕ್ರೆಟಾ ಎಲೆಕ್ಟ್ರಿಕ್ ಅನ್ನು ಕುಟುಂಬದೊಂದಿಗೆ ಡೆಲಿವರಿ ಪಡೆಯುವುದನ್ನು ನಾವು ನೋಡಬಹುದು.
ಟೈಟಾನ್ ಗ್ರೇ ಮ್ಯಾಟ್ ಬಣ್ಣದಲ್ಲಿ ವಿನ್ಯಾಸಗೊಳಿಸಲಾದ ಹೊಸ ಹ್ಯುಂಡೈ ಕ್ರೆಟಾ ಎಲೆಕ್ಟ್ರಿಕ್ ವಾಹನವನ್ನು ಕುಟುಂಬವೊಂದು ಡೆಲಿವರಿ ಪಡೆದುಕೊಂಡಿದೆ. ಈ ಬಗ್ಗೆ ಕುಟುಂಬ ಸಂತೋಷ ವ್ಯಕ್ತಪಡಿಸಿದ್ದು, ಡೀಲರ್ ಸಿಬ್ಬಂದಿ ಗ್ರಾಹಕರಿಗೆ ವಾಹನದ ಬಗ್ಗೆ ತ್ವರಿತ ಮಾಹಿತಿ ನೀಡುವುದನ್ನು ಸಹ ಕಾಣಬಹುದು. ಚಾರ್ಜರ್‌ಗಳನ್ನು ಸಹ ತೋರಿಸಿ ವಿವರಿಸುವ ದೃಶ್ಯಗಳನ್ನು ವಿಡಿಯೋದಲ್ಲಿ ಕಾಣಬಹುದು.

ಎಲೆಕ್ಟ್ರಿಕ್ ಕ್ರೆಟಾ ವಿಶೇಷತೆಗಳು: ಈ ಕಾರು 42 ಕಿಲೋವ್ಯಾಟ್ ಮತ್ತು 51.4 ಕಿಲೋವ್ಯಾಟ್ ಎಂಬ ಎರಡು ಬ್ಯಾಟರಿ ಪ್ಯಾಕ್ ಆಯ್ಕೆಗಳೊಂದಿಗೆ ಲಭ್ಯವಿದೆ. ಒಮ್ಮೆ ಸಣ್ಣ ಬ್ಯಾಟರಿ ಪ್ಯಾಕ್ ಅನ್ನು ಚಾರ್ಜ್ ಮಾಡಿದರೆ 390 ಕಿ.ಮೀ ಹಾಗೂ ದೊಡ್ಡ 51.4 ಕಿಲೋವ್ಯಾಟ್ ಬ್ಯಾಟರಿಯನ್ನು ಚಾರ್ಜ್ ಮಾಡಿದರೆ 473 ಕಿ.ಮೀ ಓಡಿಸಬಹುದು. ಕಾರಿನಲ್ಲಿ ಸಿಂಗಲ್ ಮೋಟರ್ ಸೆಟಪ್ ನೀಡಲಾಗಿದೆ.
ಡಿಸಿ ಫಾಸ್ಟ್ ಚಾರ್ಜಿಂಗ್ ಮೂಲಕ ಕೇವಲ 58 ನಿಮಿಷಗಳಲ್ಲಿ ಬ್ಯಾಟರಿ ಪ್ಯಾಕ್ ಅನ್ನು ಶೇ80 ರಷ್ಟು ಚಾರ್ಜ್ ಮಾಡಬಹುದು. 11 ಕಿಲೋವ್ಯಾಟ್ ಎಸಿ ಹೋಮ್ ಚಾರ್ಜರ್ ಮೂಲಕ ಬ್ಯಾಟರಿಯನ್ನು ಶೇ100 ರಷ್ಟು ರೀಚಾರ್ಜ್ ಮಾಡಲು 4 ಗಂಟೆಗಳು ಬೇಕಾಗುತ್ತವೆ. ಈ ಕಾರು 7.9 ಸೆಕೆಂಡುಗಳಲ್ಲಿ 100 ಕಿ.ಮೀ ವೇಗವನ್ನು ತಲುಪುವ ಸಾಮರ್ಥ್ಯವನ್ನು ಹೊಂದಿದೆ.

ಫೀಚರ್ಸ್: ಕ್ರೆಟಾ ಎಲೆಕ್ಟ್ರಿಕ್ ಕಾರಿನಲ್ಲಿ ಇನ್ಫೋಟೈನ್‌ಮೆಂಟ್ ಹಾಗೂ ಇನ್ಸ್ಟ್ರುಮೆಂಟ್ ಕ್ಲಸ್ಟರ್‌ಗಾಗಿ ಡ್ಯುಯಲ್ 10.25-ಇಂಚಿನ ಸ್ಕ್ರೀನ್‌ಗಳನ್ನು ನೀಡಲಾಗಿದೆ. ಹೊಸ ಸ್ಟೀರಿಂಗ್ ವೀಲ್, ಹೊಸ ಸೆಂಟರ್ ಕನ್ಸೋಲ್, ಆಂಬಿಯೆಂಟ್ ಲೈಟಿಂಗ್, ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್, ಡ್ರೈವ್ ಮೋಡ್ ಆಯ್ಕೆಗಾಗಿ ರೋಟರಿ ನಾಬ್, ಪನೋರಮಿಕ್ ಸನ್ ರೂಫ್ ನಂತಹ ಆಧುನಿಕ ಫೀಚರ್ಸ್ ನೀಡಲಾಗಿದೆ.
ಇವಿಷ್ಟೇ ಅಲ್ಲದೇ ಫ್ರಂಟ್ ವೆಂಟಿಲೇಟೆಡ್ ಮತ್ತು ಪವರ್ಡ್ ಸೀಟುಗಳು, ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲ್, 360 ಡಿಗ್ರಿ ಕ್ಯಾಮೆರಾ, ಡಿಜಿಟಲ್ ಕೀ, ADAS ಸೂಟ್ ಸೇರಿದಂತೆ ಹೆಚ್ಚಿನವುಗಳನ್ನು ಒಳಗೊಂಡಿದೆ. ಕ್ರೆಟಾ ಎಲೆಕ್ಟ್ರಿಕ್ ವಿ 2 ಎಲ್ (ವಾಹನದಿಂದ ವಾಹನಕ್ಕೆ ಚಾರ್ಜ್ ಲೋಡ್) ಚಾರ್ಜಿಂಗ್ ಸಾಮರ್ಥ್ಯದೊಂದಿಗೆ ಬರುತ್ತದೆ.
ಹೊಸ ಹ್ಯುಂಡೈ ಕ್ರೆಟಾ ಎಲೆಕ್ಟ್ರಿಕ್ ಕಾರು ಭಾರತೀಯ ಇವಿ ಮಾರುಕಟ್ಟೆಯಲ್ಲಿ ಎಂಜಿ ಝಡ್ಎಸ್ ಇವಿ, ಮಹೀಂದ್ರಾ ಎಕ್ಸ್‌ಯುವಿ 400 ಇವಿ, ಟಾಟಾ ಕರ್ವ್ ಇವಿ ಮತ್ತು ಬಿಇ 6 ಮತ್ತು ಎಕ್ಸ್‌ಇವಿ 9 ಇ ನಂತಹ ಕೆಲವು ಕಾರುಗಳಿಗೆ ಪೈಪೋಟಿ ನೀಡುತ್ತದೆ. ಮುಂಬರುವ ಟಾಟಾ ಹ್ಯಾರಿಯರ್ ಇವಿ ಮತ್ತು ಮಾರುತಿ ಇ-ವಿಟಾರಾ ಕೂಡ ಇದರಿಂದ ಸ್ಪರ್ಧೆಯನ್ನು ಎದುರಿಸಲಿವೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications