'Hyundai' ಕಾರನ್ನು ಹೆಲ್ಮೆಟ್ ಧರಿಸಿ ಓಡಿಸುವ ಮಾಲೀಕ: ಏನ್ ಇವರ ಕಥೆ
ಭಾರತದಲ್ಲಿ ಸುರಕ್ಷತೆಯ ದೃಷ್ಟಿಯಿಂದ ದ್ವಿಚಕ್ರ ವಾಹನ ಓಡಿಸುವಾಗ ಹೆಲ್ಮೆಟ್ ಧರಿಸುವುದು ಕಡ್ಡಾಯವಾಗಿದೆ. ಆದರೆ, ರೇಸ್ ಬಿಟ್ಟು, ಇನ್ನುಳಿದ ಯಾವುದೇ ಸಂದರ್ಭದಲ್ಲಿ ಹೆಲ್ಮೆಟ್ ಹಾಕಿಕೊಂಡು ಕಾರನ್ನು ಚಲಾಯಿಸಿದರೆ, ಸುತ್ತಲಿರುವವರ ಕಣ್ಣಗೆ ಆತ ಬೇರೆ ರೀತಿಯಲ್ಲಿ ಕಾಣುತ್ತನೆ. ಸದ್ಯ, ವ್ಯಕ್ತಿಯೊಬ್ಬ ಈ ರೀತಿಯ ಕೆಲಸವನ್ನೇ ಮಾಡಿದ್ದು, ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ರಾಜಸ್ಥಾನದ ಹುಂಡೈ ಕ್ರೆಟಾ ಎಸ್‌ಯುವಿ ಮಾಲೀಕ ಖಲೀಲ್ ಮೊಹಮ್ಮದ್, ಪ್ರತಿ ಬಾರಿ ಅದನ್ನು ಓಡಿಸುವಾಗ ಹೆಲ್ಮೆಟ್ ಧರಿಸುವುದಕ್ಕೆ ಪ್ರಾರಂಭಿಸಿದ್ದಾರೆ. ಅಷ್ಟಕ್ಕೂ ಅವರು ಈ ರೀತಿಯಾಗಿ ಏಕೆ ಮಾಡುತ್ತಿದ್ದಾರೆ ಎಂಬ ಪ್ರಶ್ನೆ ನಿಮ್ಮಲ್ಲಿ ಹಲವರಿಗೆ ಕಾಡಲು ಶುರುವಾಗಿಬಹುದು. ಖಲೀಲ್ ಅವರು, ಕ್ರೆಟಾ ಕಾರಿನಲ್ಲಿ ಹೋಗುವಾಗ ಹೆಲ್ಮೆಟ್ ಹಾಕದಿರುವ ಕಾರಣ, ಪೊಲೀಸರು ದಂಡ ವಿಧಿಸಿದ್ದರಂತೆ. ಅದನ್ನು ವಿನೂತನವಾಗಿ ಪ್ರತಿಭಟಿಸುತ್ತಿದ್ದಾರೆ.

ಕೆಲವು ದಿನಗಳ ಹಿಂದೆ, ಹೀಗೆ ಒಮ್ಮೆ ಕಾರ್ಯನಿಮಿತ್ತ ಎಲ್ಲಿಗೊ ಹೋಗಬೇಕಾದರೆ, ಖಲೀಲ್ ಅವರನ್ನು ತಡೆದ ಪೊಲೀಸರು ರೂ.2,000 ಬೇಡಿಕೆ ಇಟ್ಟಿದ್ದಾರೆ. ಆದರೆ, ಲಂಚವನ್ನು ಕೊಡಲು ನಿರಾಕರಿಸಿದ್ದಾರೆ. ಬಳಿಕ, ಪೊಲೀಸರು, ಕಾರಿನ ಡಾಕ್ಯುಮೆಂಟ್ ತೋರಿಸುವಂತೆ ಕೇಳಿದ್ದಾರೆ. ಅವೆಲ್ಲ ಸರಿಯಾಗಿರುವುದನ್ನು ಮನಗಂಡ ಪೊಲೀಸರು, ಖಲೀಲ್ ಮದ್ಯಪಾನ ಮಾಡಿ, ಕಾರನ್ನು ಓಡಿಸಿದ್ದಾರೆ ಎಂಬ ಆರೋಪ ಮಾಡಿದ್ದಾರೆ.
ಆ ನಂತರವು, ಪೊಲೀಸರು ರೂ.2000 ಲಂಚ ನಿಡುವಂತೆ ಮತ್ತೆ ಕೇಳಿದ್ದಾರೆ. ಇದನ್ನು ಖಲೀಲ್ ಸಾರಾಸಗಟಾಗಿ ತಳ್ಳಿಹಾಕಿದ್ದಾರೆ. ಇದರಿಂದ ಕೋಪಗೊಂಡ ಪೊಲೀಸರು, ವಾಹನ ಚಲಾಯಿಸುವಾಗ ಹೆಲ್ಮೆಟ್ ಧರಿಸಿಲ್ಲ ಎಂಬ ಕಾರಣ ನೀಡಿ, ರೂ.1000 ದಂಡ ಕಟ್ಟುವಂತೆ ಚಲನೆ ನೀಡಿದ್ದಾರೆ. ಸದ್ಯ, ಅದೇ ಖಲೀಲ್ ಸಿಟ್ಟಿಗೆ ಕಾರಣವಾಗಿದ್ದು, ವಿಭಿನ್ನವಾಗಿ ಪ್ರತಿಭಟಿಸಲು ಶುರು ಮಾಡಿದ್ದಾರೆ.
ಈಗ ಪ್ರತಿ ಬಾರಿಯು ತಮ್ಮ ಹ್ಯುಂಡೈ ಕ್ರೆಟಾ ಕಾರಿನಲ್ಲಿ ಓಡಾಡುವಾಗ ತಪ್ಪದೆ, ಹೆಲ್ಮೆಟ್ ಹಾಕಿಕೊಳ್ಳುತ್ತಿದ್ದಾರೆ. ಜೊತೆಗೆ ವಿನಃ ಕಾರಣ ದಂಡ ವಿಧಿಸಿದ ಪೊಲೀಸರು ವಿರುದ್ಧ ಕಾನೂನಾತ್ಮಕವಾಗಿ ಹೋರಾಟಕ್ಕೆ ಇಳಿಯಲಾಗುವುದು ಎಂದು ಖಲೀಲ್ ಅವರು ಹೇಳಿಕೊಂಡಿದ್ದಾರೆ. ಇಲ್ಲಿನ ಘಟನೆಯನ್ನು ಗಮನಿದಾಗ ಅಲ್ಲಿನ ಪೊಲೀಸರು ಕರ್ತವ್ಯ ಲೋಪವೆಸಗಿ ಎಷ್ಟರ ಮಟ್ಟಿಗೆ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂಬುದು ಸುಲಭವಾಗಿ ಗೊತ್ತಾಗುತ್ತದೆ.
ಸದ್ಯ, ಖಲೀಲ್ ವಿಚಾರದಲ್ಲಿ ಪೊಲೀಸರು, ತಮ್ಮ ಲಂಚದ ಆಸೆಗೆ ಕಾರಿನಲ್ಲಿ ಚಲಿಸುತ್ತಿದ್ದರೂ ಹೆಲ್ಮೆಟ್ ಧರಿಸಿಲ್ಲ ಎಂದು ದಂಡ ವಿಧಿಸಿದ್ದಾರೆ. ಇದು ಮನುಷ್ಯನ ಕೈಯಿಂದ ನಡೆದಿರುವ ಕೆಲಸವಾಗಿದೆ. ಆದರೆ, ಇಂತಹ ಭ್ರಷ್ಟಾಚಾರ ತಡೆಯಲು ಜೊತೆಗೆ ಸಾರ್ವಜನಿಕರು ಸಂಚಾರಿ ನಿಯಮ ಪಾಲಿಸುವಂತೆ ಪ್ರೇರಿಪಿಸಲು ಕೆಲವೊಂದು ರಾಜ್ಯಗಳಲ್ಲಿ ಕೃತಕ ಬುದ್ದಿಮತ್ತೆ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ಇವುಗಳು ಕಳುಹಿಸುವ ಡೇಟಾದಿಂದ ಕೆಲವೊಮ್ಮೆ ಅತಾಚುರ್ಯಗಳುತ್ತಿವೆ.
ಅದರಲ್ಲೂ ಕೇರಳದಲ್ಲಿ ಹೆಲ್ಮೆಟ್ ಹಾಕದೆ ಪ್ರಯಾಣಿಸಿದ್ದಕ್ಕಾಗಿ ರೂ.500 ರೂಪಾಯಿ ದಂಡ ಕಟ್ಟುವಂತೆ ನೋಟಿಸ್ ನೀಡಲಾಗಿತ್ತು. ಆದರೆ, ಈ ನೋಂದಣಿ ಸಂಖ್ಯೆಯಲ್ಲಿ ಅದರ ಮಾಲೀಕರ ಬಳಿಯಿರುವುದು ಮಾರುತಿ ಸುಜುಕಿ ಆಲ್ಟೋ ಕಾರು. ಇದೇ ರೀತಿ ಒಡಿಶಾದಲ್ಲಿ ದ್ವಿಚಕ್ರ ವಾಹನದಲ್ಲಿ ಸೀಟ್ ಬೆಲ್ಟ್ ಹಾಕಿಲ್ಲವೆಂದು 1,000 ರೂಪಾಯಿ ಫೈನ್ ವಿಧಿಸಿ, ಇ ಚಲನ್ ಕಳುಹಿಸಲಾಗಿತ್ತು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಕೂಡ ಮರೆಯದಿರಿ. ನಿಮ್ಮ ಸ್ನೇಹಿತ ಜೊತೆಗೂ ಶೇರ್ ಮಾಡಿ.


Click it and Unblock the Notifications