Hyundai: ಹ್ಯುಂಡೈ ಎಕ್ಸ್‌ಟರ್ ಮೊದಲ ಅಪಘಾತ: ಮುಗಿಬಿದ್ದು ಖರೀದಿಸಿದವರು ಇದನ್ನೊಮ್ಮೆ ನೋಡಿ
ಭಾರತದಲ್ಲಿ ಹ್ಯುಂಡೈ(Hyundai) ಕಂಪನಿಯು ಹೊಸದಾಗಿ ಪರಿಚಯಿಸಿದ ಎಕ್ಸ್‌ಟರ್ ಉತ್ತಮ ಬೇಡಿಕೆಯೊಂದಿಗೆ ಮಾರಾಟವಾಗುತ್ತಿದೆ. ಈ ಕಾರು ಜನಪ್ರಿಯ ಸ್ಯಾಂಟ್ರೊವನ್ನು ಸ್ಥಗಿತಗೊಳಿಸಿದ ನಂತರ ಗ್ರ್ಯಾಂಡ್ ಐ10 ನಿಯೋಸ್ ಜೊತೆಗೆ ಕಂಪನಿಯು ಮಾರಾಟ ಮಾಡುತ್ತಿರುವ ಎಂಟ್ರಿ ಲೆವೆಲ್ ಕಾರಾಗಿದೆ. ಇದೀಗ ಎಕ್ಸ್‌ಟರ್‌ನ ಮೊದಲ ಅಪಘಾತದ ವರದಿಯಾಗಿದೆ. ಈ ಅಪಘಾತದ ಫಲಿತಾಂಶವನ್ನು ಇಲ್ಲಿ ನೋಡೋಣ.
ಮಾಹಿತಿಯ ಪ್ರಕಾರ, ಹುಂಡೈ ಎಕ್ಸ್‌ಟರ್ (Hyundai Exter) ಕಾರಿಗೆ ಟ್ರಕ್ ಒಂದು ಹಿಂದಿನಿಂದ ಡಿಕ್ಕಿ ಹೊಡೆದಿದ್ದು, ಡಿವೈಡರ್ ಮೇಲೆ ಏರಿ ನಿಂತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಆದರೇ ಇಲ್ಲಿ ಯಾವ ರೀತಿ ಡಿಕ್ಕಿಯಾಗಿದೆ ಎಂಬುದೇ ಅರ್ಥವಾಗದ ವಿಷಯವಾಗಿದೆ. ಹೇಗೋ, ವಾಹನವು ಟ್ರಕ್‌ನ ಬಂಪರ್ ಮೇಲೆ ಮತ್ತು ಮುಂಭಾಗದಿಂದ ಡಿವೈಡರ್ ಮೇಲೆ ಹತ್ತಿದೆ. ಸದ್ಯ ಯಾವುದೇ ಪ್ರಯಾಣಿಕರಿಗೆ ಗಂಭೀರ ಗಾಯಗಳು ಆಗಿರುವ ಬಗ್ಗೆ ವರದಿಯಾಗಿಲ್ಲ. ವಾಹನಕ್ಕೂ ಯಾವುದೇ ಹಾನಿಯಾಗಿಲ್ಲ. ದೃಶ್ಯಗಳು ಆಘಾತಕಾರಿಯಾಗಿ ಕಾಣಬಹುದಾದರೂ, ಕಾರು ಅಥವಾ ಮಾಲೀಕ, ಪ್ರಯಾಣಿಕರಿಗೆ ಯಾವುದೇ ಹಾನಿಯಾಗಿಲ್ಲ.

ಹೇಗಿದೆ ಹ್ಯುಂಡೈ ಎಕ್ಸಟರ್, ಬೆಲೆ ಎಷ್ಟು?: ದೇಶದಲ್ಲಿ ಮೈಕ್ರೋ ಎಸ್‌ಯುವಿ ವಿಭಾಗದಲ್ಲಿ ಟಾಟಾ ಪಂಚ್ ದೊಡ್ಡಮಟ್ಟದಲ್ಲಿ ಜನಪ್ರಿಯತೆ ಗಳಿಸಿದೆ. ಅದಕ್ಕೆ ಪೈಪೋಟಿ ನೀಡಲು ಹ್ಯುಂಡೈ (Hyundai) ಕಂಪನಿ ಎಕ್ಸ್‌ಟರ್ ಕಾರನ್ನು ಕಳೆದ ವರ್ಷ ಜುಲೈ ತಿಂಗಳು ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿತ್ತು. ಈ ಎಕ್ಸ್‌ಟರ್ ಅತ್ಯಂತ ಕೈಗೆಟುಕುವ ಬೆಲೆಯಲ್ಲಿ ಖರೀದಿಗೆ ದೊರೆಯಲಿದ್ದು, ರೂ.6 ರಿಂದ ರೂ.10.10 ಲಕ್ಷ ಎಕ್ಸ್ ಶೋರೂಂ ದರದಲ್ಲಿ ಖರೀದಿಗೆ ಸಿಗುತ್ತದೆ.
ಎಂಜಿನ್: ಈ ಹ್ಯುಂಡೈ ಎಕ್ಸ್‌ಟರ್ 1.2-ಲೀಟರ್, 4 ಸಿಲಿಂಡರ್ ಎಂಜಿನ್ ಪೆಟ್ರೋಲ್ ಎಂಜಿನ್ ಹೊಂದುದ್ದು, 81.8 bhp ಗರಿಷ್ಠ ಪವರ್ ಹಾಗೂ 113.8 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. 5-ಸ್ಪೀಡ್ ಮ್ಯಾನುವಲ್/ ಆಟೋಮೆಟಿಕ್ ಗೇರ್‌ಬಾಕ್ಸ್ ಆಯ್ಕೆಯೊಂದಿಗೆ ಲಭ್ಯವಿದೆ. ಸಿಎನ್‌ಜಿ ಕಿಟ್‌ನಲ್ಲಿ 67.7 bhp ಪವರ್ ಮತ್ತು 95.2 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಇದಕ್ಕೆ ಆಟೋಮೆಟಿಕ್ ಆಯ್ಕೆ ಇಲ್ಲ.

ಮೈಲೇಜ್ & ವೈಶಿಷ್ಟ್ಯಗಳು: ಹ್ಯುಂಡೈ ಎಕ್ಸ್‌ಟರ್ ಮೈಲೇಜ್ ಬಗ್ಗೆ ಹೇಳುವುದಾದರೆ, ಇದು ಯಾವ ಬೈಕಿಗೂ ಕಮ್ಮಿ ಇಲ್ಲದಂತಹ ಇಂಧನ ದಕ್ಷತೆಯನ್ನು ಹೊಂದಿದೆ. ಪೆಟ್ರೋಲ್ ವೇರಿಯೆಂಟ್ 19.2kmpl ರಿಂದ 19.4kmpl, ಸಿಎನ್‌ಜಿ ರೂಪಾಂತರ 27.1 km/kg ಮೈಲೇಜ್ ನೀಡುತ್ತದೆ. ಈ ಕಾರು, ಗ್ರಾಹಕರನ್ನು ಆಕರ್ಷಿಸುವ ಹತ್ತು ಹಲವು ವೈಶಿಷ್ಟ್ಯಗಳನ್ನು ಪಡೆದಿದೆ. ಮುಖ್ಯವಾಗಿ, 8 ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಅನ್ನು ಒಳಗೊಂಡಿದೆ. ಇದರೊಟ್ಟಿಗೆ, ಆಪಲ್ ಕಾರ್ ಪ್ಲೇ, ಆಂಡ್ರಾಯ್ಡ್ ಆಟೋ, ಎಲೆಕ್ಟ್ರಿಕ್ ಸನ್‌ರೂಫ್, ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್ ಹಾಗೂ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಸೇರಿದಂತೆ ವಿವಿಧ ಫೀಚರ್ಸ್ ಹೊಂದಿದೆ.
ಸುರಕ್ಷತೆ: ಸುರಕ್ಷತೆ ದೃಷ್ಟಿಯಿಂದ 6 ಏರ್‌ಬ್ಯಾಗ್ಸ್, ESC (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್), TPMS (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್), ಸೀಟ್‌ಬೆಲ್ಟ್ ರಿಮೈಂಡರ್, ISOFIX ಚೈಲ್ಡ್ ಸೀಟ್ ಆಂಕರ್‌ಗಳನ್ನು ಒಳಗೊಂಡಿದೆ. ಹ್ಯುಂಡೈ ಎಕ್ಸ್‌ಟರ್ ಮೈಕ್ರೊ ಎಸ್‌ಯುವಿ ವಿಭಾಗದಲ್ಲಿ, ಟಾಟಾ ಪಂಚ್ ಮತ್ತು ಸಿಟ್ರನ್ ಸಿ3 ಗೆ ಪ್ರತಿಸ್ಪರ್ಧಿಯಾಗಿದೆ.
ವಾಸ್ತವವಾಗಿ, ಪ್ರಸಿದ್ಧ ಸ್ಯಾಂಟ್ರೊವನ್ನು ಸ್ಥಗಿತಗೊಳಿಸಿದ ನಂತರ ಗ್ರ್ಯಾಂಡ್ ಐ10 ನಿಯೋಸ್ ಜೊತೆಗೆ ಕೊರಿಯಾದ ಕಾರು ತಯಾರಕರು, ಎಂಟ್ರಿ ಲೆವೆಲ್ ಕಾರುಗಳಲ್ಲಿ ಒಂದಾಗಿ ಎಕ್ಸ್‌ಟರ್ ಅನ್ನು ಪರಿಚಯಿಸಿದರು. ಇದರ ಆಧುನಿಕ ವೈಶಿಷ್ಟ್ಯಗಳು, ಆಕರ್ಷಕ ನೋಟ ಮತ್ತು ಹೆಚ್ಚಿನ ಸುರಕ್ಷತಾ ಮಾನದಂಡಗಳಿಂದಾಗಿ ಜನರು ಹೆಚ್ಚಾಗಿ ಖರೀದಿಸುತ್ತಿದ್ದಾರೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications