ಮುಂದಿನ ಪೋಪ್ ಮೊಬೈಲ್ - ಹ್ಯುಂಡೈ ಸಾಂಟಾಫೆ ಕನ್ವರ್ಟಿಬಲ್
ಮುಂದಿನ ಪೋಪ್ ಮೊಬೈಲ್ ವಾಹನವಾಗಿ ಹ್ಯುಂಡೈ ಸಾಂಟಾಫೆ ಕನ್ವರ್ಟಿಬಲ್ ಕಾರು ಗುರುತಿಸಿಕೊಳ್ಳಲಿದೆ. ಕ್ರೈಸ್ತ ಧರ್ಮ ಗುರು ಪೋಪ್ ಗೆ ವಿಶೇಷವಾಗಿ ವಿನ್ಯಾಸಿತ ಹ್ಯುಂಡೈ ಸಾಂಪಾಫೆ ಕನ್ವರ್ಟಿಬಲ್ ಶೈಲಿಯನ್ನು ಪಡೆದುಕೊಂಡಿದೆ.
ಅಂದರೆ ಮೇಲ್ಚಾವಣೆ ತೆರೆದುಕೊಳ್ಳಲಿದ್ದು, ಸಾರ್ವಜನಿಕ ಪ್ರದೇಶಗಳಲ್ಲಿ ಕ್ರೈಸ್ತ ಅನುಯಾಯಿಗಳಿಗೆ ಆರ್ಶೀವಾರ್ದ ನೀಡಲು ಹೆಚ್ಚು ಸಹಕಾರಿಯೆನಿಸಿಕೊಳ್ಳಲಿದೆ.

ಹೊಸ ಪೋಪ್ ಮೊಬೈಲ್ ವಾಹನವು 2.2 ಲೀಟರ್ ಸಿಆರ್ ಡಿಐ, ಫೋರ್ ಸಿಲಿಂಡರ್ ಟರ್ಬೊ ಡೀಸೆಲ್ ಎಂಜಿನ್ ನಿಂದ ನಿಯಂತ್ರಿಸಲ್ಪಡಲಿದ್ದು, 194 ಅಶ್ವಶಕ್ತಿ (421 ತಿರುಗುಬಲ) ಉತ್ಪಾದಿಸಲಿದೆ.
ಈಗ ವ್ಯಾಟಿಕನ್ ಪೋಪ್ ಫ್ರಾನ್ಸಿಸ್ ಅವರ ವಾಹನಗಳ ಸಾಲಿಗೆ ಇದೂ ಸೇರ್ಪಡೆಯಾಗಿದೆ. ವರದಿಗಳ ಪ್ರಕಾರ ಹೆಚ್ಚು ದುಬಾರಿಯೆನಿಸಿರುವ ಮರ್ಸಿಡಿಸ್ ಬೆಂಝ್ ವಾಹನಗಳ ಬದಲಿಗೆ ಹ್ಯುಂಡೈ ಆಯ್ಕೆ ಮಾಡಲಾಗಿದೆ.
ಈಗ ವ್ಯಾಟಿಕನ್ ಇತಿಹಾಸದೊಂದಿಗೆ ಸೇರ್ಪಡೆಯಾಗಿರುವ ಹ್ಯುಂಡೈ ಸಾಂಪಾಫೆಯಲ್ಲಿ ಸನ್ ಗ್ಲಾಸ್ ಅಥವಾ ಬುಲೆಟ್ ಫ್ರೂಪ್ ಆವರಣ ಇರುವುದಿಲ್ಲ ಎಂಬುವುದು ಅಷ್ಟೇ ಮಹತ್ವಪೂರ್ಣವೆನಿಸಿದೆ.


Click it and Unblock the Notifications