ಕೊನೆಗೂ ಹೊರ ಬಂತು 40 ಅಡಿ ಆಳದಲ್ಲಿದ್ದ ಹ್ಯುಂಡೈ ವೆನ್ಯೂ ಕಾರು

ಇತ್ತೀಚಿಗೆ ಮುಂಬೈನ ಘಾಟ್ಕೋಪರ್'ನಲ್ಲಿ ಪಾರ್ಕ್ ಮಾಡಲಾಗಿದ್ದ ಹ್ಯುಂಡೈ ವೆನ್ಯೂ ಕಾರು ಇದ್ದಕ್ಕಿದ್ದಂತೆ ಕಂದಕದಲ್ಲಿ ಮುಳುಗಿ ಕಣ್ಮರೆಯಾದ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

ಕೊನೆಗೂ ಹೊರ ಬಂತು 40 ಅಡಿ ಆಳದಲ್ಲಿದ್ದ ಹ್ಯುಂಡೈ ವೆನ್ಯೂ ಕಾರು

ಹ್ಯುಂಡೈ ವೆನ್ಯೂ ಕಾರಿನ ಪಕ್ಕದಲ್ಲಿ ಮಾರುತಿ ವ್ಯಾಗನ್ಆರ್ ಸೇರಿದಂತೆ ಹಲವು ಕಾರುಗಳನ್ನು ನಿಲ್ಲಿಸಲಾಗಿತ್ತು. ಆದರೆ ಆ ಕಾರುಗಳಿಗೆ ಯಾವುದೇ ಹಾನಿಯಾಗಿರಲಿಲ್ಲ. ವೆನ್ಯೂ ಕಾರು ಮಾತ್ರ ಕಂದಕದಲ್ಲಿ ಮುಳುಗಿತ್ತು.

ಕೊನೆಗೂ ಹೊರ ಬಂತು 40 ಅಡಿ ಆಳದಲ್ಲಿದ್ದ ಹ್ಯುಂಡೈ ವೆನ್ಯೂ ಕಾರು

ಜೋರಾಗಿ ಮಳೆ ಸುರಿದ ಕಾರಣ ವೆನ್ಯೂ ಕಾರು ನಿಲ್ಲಿಸಿದ್ದ ಜಾಗದಲ್ಲಿ ಹಾಕಲಾಗಿದ್ದ ಕಾಂಕ್ರೀಟ್ ಚಪ್ಪಡಿ ಕುಸಿದಿತ್ತು. ಇದರಿಂದ ಕಾರಿನ ಮುಂಭಾಗವು ಕಂದಕದೊಳಗೆ ಪ್ರವೇಶಿಸಿ ಕಾರು ಸಂಪೂರ್ಣವಾಗಿ ಮುಳುಗಿ ಹೋಗಿತ್ತು.

ಕೊನೆಗೂ ಹೊರ ಬಂತು 40 ಅಡಿ ಆಳದಲ್ಲಿದ್ದ ಹ್ಯುಂಡೈ ವೆನ್ಯೂ ಕಾರು

ವೆನ್ಯೂ ಕಾಂಪ್ಯಾಕ್ಟ್ ಎಸ್‌ಯುವಿಯು 4 ಮೀಟರ್ ಉದ್ದವನ್ನು ಹೊಂದಿದೆ. ಅದೃಷ್ಟವಶಾತ್ ಈ ಘಟನೆ ನಡೆದ ಸಮಯದಲ್ಲಿ ಕಾರಿನಲ್ಲಿ ಯಾರೂ ಇರಲಿಲ್ಲ. ಇದರಿಂದ ಭಾರೀ ಅನಾಹುತವಾಗುವುದು ತಪ್ಪಿದೆ.

ಕೊನೆಗೂ ಹೊರ ಬಂತು 40 ಅಡಿ ಆಳದಲ್ಲಿದ್ದ ಹ್ಯುಂಡೈ ವೆನ್ಯೂ ಕಾರು

ವೆನ್ಯೂ ಕಾರು ನಿಲ್ಲಿಸಲಾಗಿದ್ದ ಪ್ರದೇಶದ ಕೆಳಗೆ 40 ಅಡಿ ಆಳದ ಬಾವಿ ಇತ್ತು. ಈ ಬಾವಿಯ ಕೆಳಭಾಗಕ್ಕೆ ಹೋಗಿದ್ದ ವೆನ್ಯೂ ಕಾರನ್ನು ಹಲವು ತಾಸುಗಳ ಪ್ರಯತ್ನದ ನಂತರ ಹೊರ ತೆಗೆಯಲಾಗಿದೆ.

ಕೊನೆಗೂ ಹೊರ ಬಂತು 40 ಅಡಿ ಆಳದಲ್ಲಿದ್ದ ಹ್ಯುಂಡೈ ವೆನ್ಯೂ ಕಾರು

ಕ್ರೇನ್ ಸಹಾಯದಿಂದ ರಾತ್ರಿ ವೇಳೆಗೆ ವೆನ್ಯೂ ಕಾರನ್ನು ಕಂದಕದಿಂದ ಹೊರಗೆ ತರಲಾಗಿದೆ. ಈ ಹಿಂದೆ ಬಳಕೆಯಲ್ಲಿದ್ದ ಬಾವಿಯನ್ನು ಕಾಂಕ್ರೀಟ್ ಹಾಗೂ ಸಿಮೆಂಟ್ ತುಂಬಿ ಮುಚ್ಚಲಾಗಿತ್ತು.

ಕೊನೆಗೂ ಹೊರ ಬಂತು 40 ಅಡಿ ಆಳದಲ್ಲಿದ್ದ ಹ್ಯುಂಡೈ ವೆನ್ಯೂ ಕಾರು

ಸದಾ ಜನದಟ್ಟಣೆಯಿಂದ ಕೂಡಿರುವ ಈ ಪ್ರದೇಶದಲ್ಲಿ ವಾಹನಗಳನ್ನು ನಿಲುಗಡೆ ಮಾಡಲಾಗುತ್ತದೆ. ಸದ್ಯಕ್ಕೆ ಇಡೀ ಪ್ರದೇಶವನ್ನು ಪೊಲೀಸರು ನಿರ್ಬಂಧಿಸಿದ್ದಾರೆ ಎಂದು ಬೃಹನ್ ಮುಂಬೈ ಕಾರ್ಪೊರೇಷನ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಕೊನೆಗೂ ಹೊರ ಬಂತು 40 ಅಡಿ ಆಳದಲ್ಲಿದ್ದ ಹ್ಯುಂಡೈ ವೆನ್ಯೂ ಕಾರು

ಕಾರನ್ನು ಕಂದಕದಿಂದ ಮೇಲಕ್ಕೆ ಎತ್ತಲಾಗಿದ್ದರೂ ಆ ಕಾರಿಗೆ ಎಷ್ಟು ಹಾನಿಯಾಗಿದೆ ಎಂಬ ಮಾಹಿತಿ ಲಭ್ಯವಾಗಿಲ್ಲ. ಚಿತ್ರಗಳಲ್ಲಿ ಕಾಣುವಂತೆ ಮೇಲಕ್ಕೆ ಎತ್ತಲಾದ ಕಾರಿನ ವಿಂಡೋ ಪ್ಯಾನೆಲ್'ಗಳು ಮುರಿದಿಲ್ಲ.

ಕೊನೆಗೂ ಹೊರ ಬಂತು 40 ಅಡಿ ಆಳದಲ್ಲಿದ್ದ ಹ್ಯುಂಡೈ ವೆನ್ಯೂ ಕಾರು

ಮುಳುಗಿದ ಕೆಲವೇ ಗಂಟೆಗಳಲ್ಲಿ ಕಾರನ್ನು ಮೇಲಕ್ಕೆ ಎತ್ತಿರುವುದರಿಂದ ಎಂಜಿನ್'ಗೂ ಹೆಚ್ಚು ಹಾನಿಯಾಗಿರುವ ಸಾಧ್ಯತೆಗಳು ಕಡಿಮೆ. ಕಾರು ಕಂದಕದೊಳಗೆ ಬೀಳುವಾಗ ಹಾಗೂ ಮೇಲಕ್ಕೆ ಎತ್ತುವಾಗ ಹಾನಿಗೊಳಗಾಗಿದೆ. ಚಿತ್ರಗಳಲ್ಲಿ ಕಾರಿನ ಮುಂಭಾಗಕ್ಕೆ ಅಲ್ಪ ಪ್ರಮಾಣದ ಹಾನಿಯಾಗಿರುವುದನ್ನು ಕಾಣಬಹುದು.

Most Read Articles

Kannada
English summary
Hyundai Venue car rescued from sinkhole in Mumbai. Read in Kannada.
Story first published: Tuesday, June 15, 2021, 12:43 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X