ಸಮುದ್ರದ ಅಲೆಗಳ ಹೊಡೆತಕ್ಕೆ ಸಿಲುಕಿ ಹೊರಬರಲು ಪರದಾಡಿದ i20 ಕಾರು

ಕಡಲ ತೀರಕ್ಕೆ ಹ್ಯಾಚ್ ಬ್ಯಾಕ್ ಅಥವಾ ಇನ್ನಾವುದೇ 2 ವ್ಹೀಲ್ ಡ್ರೈವ್ ಕಾರುಗಳನ್ನು ತೆಗೆದುಕೊಂಡು ಹೋಗುವುದು ಅಪಾಯಕಾರಿ. ಕಡಲ ತೀರದಲ್ಲಿರುವ ಮರಳಿನಲ್ಲಿ ಕಾರುಗಳು ಹೇಗೆ ಸುಲಭವಾಗಿ ಸಿಲುಕಿ ಕೊಳ್ಳುತ್ತವೆ ಎಂಬುದನ್ನು ತೋರಿಸುವ ಹಲವಾರು ವೀಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಸಮುದ್ರದ ಅಲೆಗಳ ಹೊಡೆತಕ್ಕೆ ಸಿಲುಕಿ ಹೊರಬರಲು ಪರದಾಡಿದ i20 ಕಾರು

ಆದರೂ ಕೆಲವರು ತಮ್ಮ ವಾಹನಗಳನ್ನು ಕಡಲ ತೀರಕ್ಕೆ ತೆಗೆದುಕೊಂಡು ಹೋಗುತ್ತಲೇ ಇರುತ್ತಾರೆ. ಇತ್ತೀಚಿಗೆ ಹಳೆಯ ತಲೆಮಾರಿನ ಐ 20 ಕಾರು ಕಡಲ ತೀರದಲ್ಲಿ ಸಿಲುಕಿ ಕೊಂಡಿತ್ತು. ಈ ಘಟನೆಯ ವೀಡಿಯೊ ವೈರಲ್ ಆಗಿದೆ. ಈ ಘಟನೆ ಎಲ್ಲಿ ಸಂಭವಿಸಿದೆ ಎಂಬುದು ಈ ವೀಡಿಯೊ ಮೂಲಕ ತಿಳಿದಿಲ್ಲ. ಆದರೆ ಈ ವೀಡಿಯೊದಲ್ಲಿರುವ ಐ 20 ಕಾರು ಕಡಲ ತೀರದಲ್ಲಿ ಸಿಲುಕಿ ಹೊರ ಬರಲು ಪರದಾಡುತ್ತಿರುವುದನ್ನು ಈ ವೀಡಿಯೊದಲ್ಲಿ ಕಾಣಬಹುದು.

ಸಮುದ್ರದ ಅಲೆಗಳ ಹೊಡೆತಕ್ಕೆ ಸಿಲುಕಿ ಹೊರಬರಲು ಪರದಾಡಿದ i20 ಕಾರು

ಈ ಪರಿಸ್ಥಿತಿಯಲ್ಲಿ ಐ 20 ಕಾರು ತಾನಾಗಿಯೇ ಹೊರ ಬರಲು ಯಾವುದೇ ಮಾರ್ಗವಿಲ್ಲ. ಬೇರೆ ಯಾವುದಾದರೂ ವಾಹನದ ಸಹಾಯದಿಂದ ಈ ಕಾರ್ ಅನ್ನು ಹೊರ ತರಬೇಕು. ಈ ಐ 20 ಕಾರು ಹೊರ ಬಂದರೂ ಹಲವು ರೀತಿಯ ರಿಪೇರಿಗಳನ್ನು ಮಾಡಿಸಬೇಕಾಗುತ್ತವೆ. ಇದಕ್ಕೆ ಸಾಕಷ್ಟು ಹಣ ಖರ್ಚಾಗುವುದು ಖಚಿತ.

ಸಮುದ್ರದ ಅಲೆಗಳ ಹೊಡೆತಕ್ಕೆ ಸಿಲುಕಿ ಹೊರಬರಲು ಪರದಾಡಿದ i20 ಕಾರು

ಕಡಲ ತೀರ ವಾಹನಗಳನ್ನು ತೆಗೆದುಕೊಂಡು ಹೋಗುವುದು ಗಂಭೀರ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಕಾರು ಚಾಲಕ ಎಷ್ಟೇ ಸಮರ್ಥನಾಗಿದ್ದರೂ, ಕಾರು 4X4 ಡ್ರೈವ್ ಸಿಸ್ಟಂ ಹೊಂದಿದ್ದರೂ ಕಡಲ ತಿರವು ತೀರಾ ಮೃದುವಾಗಿರುವ ಕಾರಣ ಅಲ್ಲಿರುವ ಮರಳಿನಲ್ಲಿ ಕಾರ್ ಅನ್ನು ಚಾಲನೆ ಮಾಡುವುದು ಕಷ್ಟ. ಒಂದು ವೇಳೆ ಕಾರು ಸಿಲುಕಿಕೊಂಡರೆ, ಸರಿಯಾದ ಸಮಯಕ್ಕೆ ನೆರವು ದೊರೆಯದಿದ್ದರೆ ಸಮುದ್ರದ ಉಬ್ಬರವಿಳಿತದ ಕಾರಣಕ್ಕೆ ಕಾರು ಕೊಚ್ಚಿಕೊಂಡು ಹೋಗಬಹುದು.

ಸಮುದ್ರದ ಅಲೆಗಳ ಹೊಡೆತಕ್ಕೆ ಸಿಲುಕಿ ಹೊರಬರಲು ಪರದಾಡಿದ i20 ಕಾರು

ಭಾರತದಲ್ಲಿ ಇಂತಹ ಹಲವು ಚಾಲನಾ ಕಡಲತೀರಗಳಿವೆ. ಈ ತೀರಗಳಲ್ಲಿ ವಾಹನಗಳನ್ನು ಕಾನೂನುಬದ್ಧವಾಗಿ ಚಾಲನೆ ಮಾಡಬಹುದು ಹಾಗೂ ತಮ್ಮ ವಾಹನವನ್ನು ತೀರಕ್ಕೆ ಸಮೀಪ ತೆಗೆದುಕೊಂಡು ಹೋಗಬಹುದು. ಅಂತಹ ಕಡಲ ತೀರಗಳು ಗಟ್ಟಿಯಾದ ಮರಳನ್ನು ಹೊಂದಿರುತ್ತವೆ ಎಂಬುದು ಗಮನಾರ್ಹ. ಕೇರಳದಲ್ಲಿರುವ ಮುಜಪ್ಪಿಲಂಗಡ್ ಬೀಚ್ ಅಂತಹ ಬೀಚ್ ಗಳಲ್ಲಿ ಒಂದು.

ಸಮುದ್ರದ ಅಲೆಗಳ ಹೊಡೆತಕ್ಕೆ ಸಿಲುಕಿ ಹೊರಬರಲು ಪರದಾಡಿದ i20 ಕಾರು

ಈ ಬೀಚ್ ನಲ್ಲಿ ಶುಲ್ಕವನ್ನು ಪಾವತಿಸಿದ ನಂತರ ವಾಹನಗಳನ್ನು ಕಡಲ ತೀರಕ್ಕೆ ಕೊಂಡೊಯ್ಯಬಹುದು. ನಂತರ ಆ ವಾಹನಗಳನ್ನು ಚಾಲನೆ ಮಾಡಲೂ ಬಹುದು. ಕಡಲ ತೀರಗಳಲ್ಲಿ ವಾಹನಗಳನ್ನು ಚಾಲನೆ ಮಾಡುವುದು ಎಷ್ಟು ಅಪಾಯಕಾರಿ ಹಾಗೂ ಅಲ್ಲಿ ವಾಹನ ಚಾಲನೆ ಮಾಡುವುದನ್ನು ಏಕೆ ತಪ್ಪಿಸಬೇಕು ಎಂಬುದನ್ನು ಅರ್ಥ ಮಾಡಿಕೊಳ್ಳುವುದು ಮುಖ್ಯ.

ಸಮುದ್ರದ ಅಲೆಗಳ ಹೊಡೆತಕ್ಕೆ ಸಿಲುಕಿ ಹೊರಬರಲು ಪರದಾಡಿದ i20 ಕಾರು

ವಾಹನಗಳನ್ನು ಕಡಲ ತೀರಕ್ಕೆ ಕೊಂಡೊಯ್ಯುವ ಮುನ್ನ ಆ ವಾಹನಗಳ ಸಾಮರ್ಥ್ಯವನ್ನು ಅರ್ಥ ಮಾಡಿಕೊಳ್ಳುವುದು ಮುಖ್ಯ. ಎಲ್ಲಾ ವಾಹನಗಳು ಆಫ್ ರೋಡಿಂಗ್ ಮಾಡಲು ಸಾಧ್ಯವಿಲ್ಲ. ಹಾಗೆಯೇ, ಎಲ್ಲಾ ವಾಹನಗಳನ್ನು ಕಡಲ ತೀರಗಳಲ್ಲಿ ಯಶಸ್ವಿಯಾಗಿ ಚಾಲನೆ ಮಾಡಲು ಸಾಧ್ಯವಿಲ್ಲ. ಈ ಸಾಮರ್ಥ್ಯವು ಕಾರಿನ ಡ್ರೈವ್‌ಟ್ರೇನ್ ವಿನ್ಯಾಸ ಹಾಗೂ ಟಯರ್‌ಗಳನ್ನು ಅವಲಂಬಿಸಿರುತ್ತದೆ.

ಸಮುದ್ರದ ಅಲೆಗಳ ಹೊಡೆತಕ್ಕೆ ಸಿಲುಕಿ ಹೊರಬರಲು ಪರದಾಡಿದ i20 ಕಾರು

4X4 ಡ್ರೈವ್ ಸಿಸ್ಟಂ ಹೊಂದಿರುವ ವಾಹನಗಳು ಬೀಚ್ ಗಳಲ್ಲಿ ಸಿಲುಕಿ ಕೊಳ್ಳುವುದಿಲ್ಲ ಎಂಬುದು ತಪ್ಪು ಕಲ್ಪನೆ. ಬಹುತೇಕ ಜನರು ಈ ರೀತಿಯ ಅಭಿಪ್ರಾಯವನ್ನು ಹೊಂದಿರುತ್ತಾರೆ. ಆದರೆ ಅತ್ಯಂತ ಸಮರ್ಥ ವಾಹನಗಳೆಂದು ಪರಿಗಣಿಸಲಾಗುವ 4 X 4 ವಾಹನಗಳು ಕಡಲ ತೀರಗಳಲ್ಲಿ ಸಿಲುಕಿ ಕೊಳ್ಳಬಹುದು.

ಸಮುದ್ರದ ಅಲೆಗಳ ಹೊಡೆತಕ್ಕೆ ಸಿಲುಕಿ ಹೊರಬರಲು ಪರದಾಡಿದ i20 ಕಾರು

ವಾಹನದ ಮಿತಿಗಳನ್ನು ಅರಿತು ಅಜ್ಞಾತ ಸ್ಥಳಗಳಿಗೆ ತೆರಳುವಾಗ ಜಾಗರೂಕರಾಗಿರುವುದು ಒಳ್ಳೆಯದು. ಕಡಲ ತೀರಗಳಿಗೆ ತೆರಳುವಾಗ ಟ್ರಾಕ್ಷನ್ ಬೋರ್ಡ್‌ಗಳನ್ನು ಇಟ್ಟು ಕೊಳ್ಳುವುದು ಅಥವಾ ಜೊತೆಗೆ ರಕ್ಷಣಾ ವಾಹನವನ್ನು ಕೊಂಡೊಯ್ಯುವುದು ಸೂಕ್ತ. ಇಲ್ಲದಿದ್ದರೆ ಅನಾಹುತಗಳಾಗುವುದು ಖಚಿತ.

ಸಮುದ್ರದ ಅಲೆಗಳ ಹೊಡೆತಕ್ಕೆ ಸಿಲುಕಿ ಹೊರಬರಲು ಪರದಾಡಿದ i20 ಕಾರು

ಇತ್ತೀಚಿಗೆ ಸಮುದ್ರ ತೀರದಲ್ಲಿ ಜಾಲಿ ಡ್ರೈವ್‌ಗೆ ಹೋಗಿದ್ದ Toyota Fortuner ಎಸ್‌ಯುವಿಯೊಂದು ಉರುಳಿ ಬಿದ್ದ ಘಟನೆ ವರದಿಯಾಗಿತ್ತು. ಅದೃಷ್ಟವಶಾತ್ ಈ ಘಟನೆಯಲ್ಲಿ ಚಾಲಕ ಸಣ್ಣ ಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಈ ಘಟನೆಯ ವೀಡಿಯೊವನ್ನು ಯೂಟ್ಯೂಬ್ ಚಾನೆಲ್ ನಲ್ಲಿ ಅಪ್ ಲೋಡ್ ಮಾಡಲಾಗಿತ್ತು. ಈ ವೀಡಿಯೊ ವೈರಲ್ ಆಗಿತ್ತು.

ವರದಿಗಳ ಪ್ರಕಾರ ಈ Toyota Fortuner ಚಾಲಕ ಎಸ್‌ಯು‌ವಿಯಲ್ಲಿ ಬೀಚ್‌ಗೆ ತೆರಳಿ ಸಾಗರದ ಅಲೆಗಳ ನಡುವೆ ಚಲಿಸುತ್ತಿರುವ ಕಾರಿನ ವೀಡಿಯೊ ಚಿತ್ರೀಕರಣ ಮಾಡಲು ನಿರ್ಧರಿಸಿದ್ದ. Fortuner ಕಾರಿನ ಚಾಲಕ ಇದಕ್ಕಾಗಿ ಹಲವು ಪ್ರಯತ್ನಗಳನ್ನು ಮಾಡುತ್ತಿದ್ದನೆ. ಈ ವೇಳೆ ವಾಹನದ ಎಡಭಾಗಕ್ಕೆ ಅಲೆ ಅಪ್ಪಳಿಸಿತ್ತು.

ಸಮುದ್ರದ ಅಲೆಗಳ ಹೊಡೆತಕ್ಕೆ ಸಿಲುಕಿ ಹೊರಬರಲು ಪರದಾಡಿದ i20 ಕಾರು

ಈ Fortuner ಮಗುಚಿ ಬಿದ್ದ ನಂತರ ಎಡಗಡೆಯ ಫ್ರಂಟ್ ವಿಂಡೋ ಗ್ಲಾಸ್ ಹಾಗೂ ಮಿರರ್ ಹೊಡೆದು ಹೋಗಿದ್ದವು. Fortuner ಬದಲು ಕಡಿಮೆ ಗ್ರೌಂಡ್ ಕ್ಲಿಯರೆನ್ಸ್ ಹೊಂದಿರುವ ಹ್ಯಾಚ್‌ಬ್ಯಾಕ್ ಕಾರಿಗೆ ಈ ರೀತಿ ಆಗಿದ್ದರೆ ಪರಿಸ್ಥಿತಿ ಇನ್ನೂ ಭೀಕರವಾಗಿರುತ್ತಿತ್ತು.

ಗಮನಿಸಿ: ಈ ಲೇಖನದಲ್ಲಿ ಮೊದಲ ನಾಲ್ಕು ಚಿತ್ರಗಳನ್ನು ಹೊರತುಪಡಿಸಿ ಉಳಿದ ಚಿತ್ರಗಳನ್ನು ರೆಫರೆನ್ಸ್'ಗಾಗಿ ಬಳಸಲಾಗಿದೆ.

Most Read Articles

Kannada
English summary
I20 car gets stuck in sea video goes viral details
Story first published: Saturday, September 4, 2021, 12:41 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X