11 ಸಾವಿರ ಅಡಿ ಎತ್ತರದಲ್ಲಿ ಹಾರಿದ ಮಹೀಂದ್ರಾ ಟ್ರ್ಯಾಕ್ಟರ್

ಉದ್ಯಮಿ ಆನಂದ್ ಮಹೀಂದ್ರಾ ಸದಾಕಾಲ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುತ್ತಾರೆ. ದೇಶದ ಹಾಗೂ ವಿದೇಶಗಳಲ್ಲಿ ನಡೆಯುವ ಆಸಕ್ತಿಕರ ವಿಷಯಗಳನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಶೇರ್ ಮಾಡುತ್ತಲೇ ಇರುತ್ತಾರೆ.

11 ಸಾವಿರ ಅಡಿ ಎತ್ತರದಲ್ಲಿ ಹಾರಿದ ಮಹೀಂದ್ರಾ ಟ್ರ್ಯಾಕ್ಟರ್

ಇತ್ತೀಚೆಗೆ ಆನಂದ್ ಮಹೀಂದ್ರಾ ಅವರು ಭಾರತೀಯ ವಾಯುಪಡೆಯ ಹೆಲಿಕಾಪ್ಟರ್ ಬಗೆಗಿನ ಚಿತ್ರವೊಂದನ್ನು ಟ್ವಿಟರ್ ನಲ್ಲಿ ಶೇರ್ ಮಾಡಿದ್ದಾರೆ. ಈ ಚಿತ್ರದಲ್ಲಿ ವಾಯುಪಡೆಯ ಹೆಲಿಕಾಪ್ಟರ್ ಮಹೀಂದ್ರಾ ಟ್ರ್ಯಾಕ್ಟರ್ ಅನ್ನು ಲಿಫ್ಟ್ ಮಾಡುತ್ತಿರುವುದನ್ನು ಕಾಣಬಹುದು.

11 ಸಾವಿರ ಅಡಿ ಎತ್ತರದಲ್ಲಿ ಹಾರಿದ ಮಹೀಂದ್ರಾ ಟ್ರ್ಯಾಕ್ಟರ್

ಮಹೀಂದ್ರಾ ಕಂಪನಿಯ ಟ್ರ್ಯಾಕ್ಟರ್ ಮಾತ್ರ 11 ಸಾವಿರ ಅಡಿ ಎತ್ತರದಲ್ಲಿ ಹಾರುವ ಶಕ್ತಿಯನ್ನು ಹೊಂದಿದೆ ಎಂದು ಆನಂದ್ ಮಹೀಂದ್ರಾ ಬರೆದು ಕೊಂಡಿದ್ದಾರೆ.ಭಾರತೀಯ ವಾಯುಪಡೆ ಹಾಗೂ ಮಹೀಂದ್ರಾ ಯಾವಾಗಲೂ ಮುಂಚೂಣಿಯಲ್ಲಿ ಉಳಿಯುವ ಕೆಲಸ ಮಾಡುತ್ತವೆ ಎಂದು ಅವರು ಹೇಳಿದ್ದಾರೆ.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

11 ಸಾವಿರ ಅಡಿ ಎತ್ತರದಲ್ಲಿ ಹಾರಿದ ಮಹೀಂದ್ರಾ ಟ್ರ್ಯಾಕ್ಟರ್

ಆನಂದ್ ಮಹೀಂದ್ರಾರವರ ಈ ಪೋಸ್ಟ್ ಗೆ ಇದುವರೆಗೂ 100ಕ್ಕೂ ಹೆಚ್ಚು ರಿಟ್ವೀಟ್‌ ಹಾಗೂ 2.5 ಸಾವಿರಕ್ಕೂ ಹೆಚ್ಚು ಲೈಕ್‌ಗಳು ಬಂದಿವೆ. ಭಾರತೀಯ ವಾಯುಪಡೆಯು ಲಡಾಖ್, ಕಾಶ್ಮೀರ, ಹಿಮಾಚಲ ಪ್ರದೇಶ ಹಾಗೂ ಅರುಣಾಚಲ ಪ್ರದೇಶದ ಸಾವಿರಾರು ಅಡಿ ದೂರವಿರುವ ಹೊರಠಾಣೆಗಳಿಗೆ ಸಾಗಲು ಹೆಲಿಕಾಪ್ಟರ್‌ಗಳನ್ನು ಬಳಸುತ್ತದೆ.

11 ಸಾವಿರ ಅಡಿ ಎತ್ತರದಲ್ಲಿ ಹಾರಿದ ಮಹೀಂದ್ರಾ ಟ್ರ್ಯಾಕ್ಟರ್

ಈ ಸ್ಥಳಗಳಲ್ಲಿ ವಾಯುಪಡೆಯು ಭಾರೀ ಸರಕುಗಳನ್ನು ಸಾಗಿಸಲು ಟ್ರಾಕ್ಟರುಗಳನ್ನು ಬಳಸುತ್ತದೆ. ಮಹೀಂದ್ರಾ ಕಂಪನಿಯು ಭಾರತೀಯ ಸೇನೆಗಾಗಿ ಶಸ್ತ್ರಸಜ್ಜಿತ ವಾಹನಗಳನ್ನು ಸಹ ಉತ್ಪಾದಿಸುತ್ತದೆ.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

11 ಸಾವಿರ ಅಡಿ ಎತ್ತರದಲ್ಲಿ ಹಾರಿದ ಮಹೀಂದ್ರಾ ಟ್ರ್ಯಾಕ್ಟರ್

ಇದರ ಜೊತೆಗೆ ಮಹೀಂದ್ರಾ ಕಂಪನಿಯು ಯಾಂಟಿ ಲ್ಯಾಂಡ್‌ಮೈನ್‌, ಕ್ಯಾರೇಜ್ ವೆಹಿಕಲ್ ಹಾಗೂ ಮಿಲಿಟರಿಗಾಗಿ ಹಲವಾರು ಲಘು ಹಾಗೂ ಭಾರವಾದ ವಾಹನಗಳನ್ನು ಸಹ ಉತ್ಪಾದಿಸುತ್ತದೆ.

11 ಸಾವಿರ ಅಡಿ ಎತ್ತರದಲ್ಲಿ ಹಾರಿದ ಮಹೀಂದ್ರಾ ಟ್ರ್ಯಾಕ್ಟರ್

ಇತ್ತೀಚೆಗೆ ಆನಂದ್ ಮಹೀಂದ್ರಾ, ಬಿಹಾರದಲ್ಲಿ 3 ಕಿ.ಮೀ ಉದ್ದದ ಕಾಲುವೆ ತೋಡಿದ್ದ ರೈತ ಲೂಂಗ್ ಭುಯಾನ್‌ಗೆ ಟ್ರ್ಯಾಕ್ಟರ್ ಅನ್ನು ಉಡುಗೊರೆಯಾಗಿ ನೀಡಿದ್ದರು. ತಮ್ಮ ಹಳ್ಳಿಯಲ್ಲಿ ಕೃಷಿಗಾಗಿ ನೀರಿನ ಸಮಸ್ಯೆಯನ್ನು ನಿವಾರಿಸಲು ಲೂಂಗ್ ಭುಯಾನ್ 30 ವರ್ಷಗಳ ಕಠಿಣ ಪರಿಶ್ರಮದಿಂದ 3 ಕಿ.ಮೀ ಉದ್ದದ ಕಾಲುವೆಯನ್ನು ನಿರ್ಮಿಸಿದ್ದರು.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

11 ಸಾವಿರ ಅಡಿ ಎತ್ತರದಲ್ಲಿ ಹಾರಿದ ಮಹೀಂದ್ರಾ ಟ್ರ್ಯಾಕ್ಟರ್

ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ್ದ ಭೂಯಾನ್ ಟ್ರ್ಯಾಕ್ಟರ್ ಬೇಕೆಂದು ಆಶಿಸಿದ್ದರು. ಅವರ ಕೆಲಸದಿಂದ ಪ್ರೇರಿತರಾದ ಆನಂದ್ ಮಹೀಂದ್ರಾ ಅವರಿಗೆ ಟ್ರಾಕ್ಟರ್ ಅನ್ನು ಬಹುಮಾನವಾಗಿ ನೀಡಿದರು.

11 ಸಾವಿರ ಅಡಿ ಎತ್ತರದಲ್ಲಿ ಹಾರಿದ ಮಹೀಂದ್ರಾ ಟ್ರ್ಯಾಕ್ಟರ್

ಇದರ ಜೊತೆಗೆ ಆನಂದ್ ಮಹೀಂದ್ರಾ ಲೈಬ್ರರಿಯಾಗಿ ಮಾಡಿಫೈಗೊಂಡಿದ್ದ ಬೊಲೆರೊ ಚಿತ್ರವೊಂದನ್ನು ಶೇರ್ ಮಾಡಿದ್ದರು. ಆನಂದ್ ಮಹೀಂದ್ರಾ ಭಾರತೀಯರ ಆಟೋಮೊಬೈಲ್ ಗೆ ಸಂಬಂಧಿಸಿದ ವಿಶಿಷ್ಟ ವಿಷಯಗಳನ್ನು ಶೇರ್ ಮಾಡುತ್ತಲೇ ಇರುತ್ತಾರೆ.

Most Read Articles

Kannada
English summary
IAF chopper lifts Mahindra tractor, Anand Mahindra shares the images. Read in Kannada.
Story first published: Monday, November 2, 2020, 20:12 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X