ಕರೋನಾ ವಾರಿಯರ್‌ಗಳಿಗೆ ವಿಶಿಷ್ಟವಾಗಿ ನಮಿಸಿದ ಪೈಲಟ್..!

ಪ್ರಪಂಚದಾದ್ಯಂತ ಹರಡಿರುವ ಕರೋನಾ ವೈರಸ್‌ಗೆ ಆರೋಗ್ಯ ಕಾರ್ಯಕರ್ತರು ಹಗಲು ರಾತ್ರಿ ಚಿಕಿತ್ಸೆ ನೀಡುತ್ತಿದ್ದಾರೆ. ತಮ್ಮ ಜೀವವನ್ನೂ ಲೆಕ್ಕಿಸದೇ ಕರೋನಾ ವೈರಸ್ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿರುವ ಇವರನ್ನು ದೇವರಂತೆ ಕಾಣಲಾಗುತ್ತಿದೆ. ದೇಶ, ಗಡಿಗಳನ್ನು ಮರೆತು ಜನರು ಆರೋಗ್ಯ ಕಾರ್ಯಕರ್ತರಿಗೆ ಧನ್ಯವಾದ ಅರ್ಪಿಸುತ್ತಿದ್ದಾರೆ.

ಕರೋನಾ ವಾರಿಯರ್‌ಗಳಿಗೆ ವಿಶಿಷ್ಟವಾಗಿ ನಮಿಸಿದ ಪೈಲಟ್..!

ಇದಕ್ಕಾಗಿ ಹೊಸ ಹೊಸ ವಿಧಾನಗಳನ್ನು ಅನುಸರಿಸುತ್ತಿದ್ದಾರೆ. ಇತ್ತೀಚೆಗೆ ಬೋಯಿಂಗ್ ವಿಮಾನದ ಪೈಲಟ್ ಒಬ್ಬರು ಇದೇ ರೀತಿ ವಿಶಿಷ್ಟವಾಗಿ ಧನ್ಯವಾದ ಅರ್ಪಿಸಿದ್ದಾರೆ. ವಿಶಿಷ್ಟವಾಗಿ ಧನ್ಯವಾದ ಅರ್ಪಿಸಿದ ಪೈಲಟ್‌ರವರ ಈ ನಡೆಯ ಬಗ್ಗೆ ವ್ಯಾಪಕ ಚರ್ಚೆಯಾಗುತ್ತಿದ್ದು, ಜನರು ಈ ವಿಧಾನವನ್ನು ಶ್ಲಾಘಿಸುತ್ತಿದ್ದಾರೆ.

ಕರೋನಾ ವಾರಿಯರ್‌ಗಳಿಗೆ ವಿಶಿಷ್ಟವಾಗಿ ನಮಿಸಿದ ಪೈಲಟ್..!

ಚೀನಾದ ಶಾಂಘೈನಿಂದ ಹಾರಾಡುವ ವಿಮಾನದ ಪೈಲಟ್ ವಿಶಿಷ್ಟವಾಗಿ ಧನ್ಯವಾದ ಅರ್ಪಿಸಿದ್ದಾರೆ. ಈ ವಿಮಾನದ ಪೈಲಟ್ ಆಕಾಶದ ಮೇಲೆ ಹೃದಯದ ಚಿತ್ತಾರವನ್ನು ಮೂಡಿಸಿ, ಆ ಮೂಲಕ ಕರೋನಾ ವಾರಿಯರ್‌ಗಳಿಗೆ ಧನ್ಯವಾದ ಅರ್ಪಿಸಿದರು. ಈ ಹೃದಯದ ಚಿತ್ರವನ್ನು ಐಸ್‌ಲ್ಯಾಂಡ್ ರಾಜಧಾನಿಯ ಆಕಾಶದಲ್ಲಿ ನಿರ್ಮಿಸಲಾಗಿದೆ.

MOSTREAD: ಕರೋನಾ ವೈರಸ್ ಎಫೆಕ್ಟ್: ಭಾರೀ ಪ್ರಮಾಣದಲ್ಲಿ ಕುಸಿದ ಇಂಧನ ಮಾರಾಟ

ಕರೋನಾ ವಾರಿಯರ್‌ಗಳಿಗೆ ವಿಶಿಷ್ಟವಾಗಿ ನಮಿಸಿದ ಪೈಲಟ್..!

ಐಸ್‌ಲ್ಯಾಂಡ್ ರಾಜಧಾನಿ ರೇಕಾವಿಕ್‌ನಲ್ಲಿರುವ ಎರಡು ಆಸ್ಪತ್ರೆಗಳ ಮೇಲೆ ಈ ಹೃದಯದ ಚಿತ್ರವನ್ನು ಬಿಡಿಸಲಾಯಿತು. ಬೋಯಿಂಗ್ ವಿಮಾನದ ಪೈಲಟ್ ಹೆಚ್ಚುವರಿಯಾಗಿ 9 ನಿಮಿಷಗಳನ್ನು ತೆಗೆದುಕೊಂಡು ಹೃದಯವನ್ನು ಆಕಾಶದಲ್ಲಿ ಮೂಡಿಸಿದರು. ಆ ನಂತರ ವಿಮಾನವನ್ನು ಏರ್ ಪೋರ್ಟ್‌ನಲ್ಲಿ ಲ್ಯಾಂಡಿಂಗ್ ಮಾಡಿದರು.

ಕರೋನಾ ವಾರಿಯರ್‌ಗಳಿಗೆ ವಿಶಿಷ್ಟವಾಗಿ ನಮಿಸಿದ ಪೈಲಟ್..!

ಅಂದ ಹಾಗೆ ಆ ಪೈಲಟ್ ಹೆಸರು ಹಾಗೂ ಇತರ ಮಾಹಿತಿಗಳನ್ನು ಬಹಿರಂಗಪಡಿಸಿಲ್ಲ. ಫ್ಲೈಟ್ ಟ್ರ್ಯಾಕರ್ ಆ್ಯಪ್ ಫ್ಲೈಟ್ ರಾಡಾರ್ ಈ ವಿಷಯವನ್ನು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದು, ಅದರ ಚಿತ್ರಗಳನ್ನು ಸಹ ಬಿಡುಗಡೆಗೊಳಿಸಿದೆ. ಬೋಯಿಂಗ್ 767 ವಿಮಾನ ಐಸ್‌ಲ್ಯಾಂಡ್ ಮೇಲೆ ದೊಡ್ಡ ಹೃದಯವನ್ನು ಮೂಡಿಸಿದೆ ಎಂದು ಹೇಳಿದೆ.

MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಕರೋನಾ ವಾರಿಯರ್‌ಗಳಿಗೆ ವಿಶಿಷ್ಟವಾಗಿ ನಮಿಸಿದ ಪೈಲಟ್..!

ಈ ಚಿತ್ರದಲ್ಲಿ ಪ್ರಯಾಣದ ಪೂರ್ಣ ರೇಖೆಯನ್ನು ಸಹ ತೋರಿಸಲಾಗಿದ್ದು, ಹೃದಯವನ್ನು ಸುಲಭವಾಗಿ ಕಾಣಬಹುದು. ಜಗತ್ತಿನ ಜನರು ಆರೋಗ್ಯ ಕಾರ್ಯಕರ್ತರಿಗೆ ವಿಭಿನ್ನ ರೀತಿಯಲ್ಲಿ ಧನ್ಯವಾದಗಳನ್ನು ಅರ್ಪಿಸುತ್ತಿದ್ದಾರೆ. ಆದರೆ ಇದೇ ಮೊದಲ ಬಾರಿಗೆ ಈ ವಿಧಾನವನ್ನು ಬಳಸಲಾಗಿದೆ.

ಕರೋನಾ ವಾರಿಯರ್‌ಗಳಿಗೆ ವಿಶಿಷ್ಟವಾಗಿ ನಮಿಸಿದ ಪೈಲಟ್..!

ವಿಶ್ವದ ಅನೇಕ ದೇಶಗಳು ಚೀನಾದಿಂದ ವೈದ್ಯಕೀಯ ವಸ್ತುಗಳನ್ನು ಖರೀದಿಸುತ್ತಿದ್ದು, ಚೀನಾವು ಪ್ರಪಂಚದಾದ್ಯಂತ ಆ ದೇಶಗಳಿಗೆ ವೈದ್ಯಕೀಯ ಸಾಮಗ್ರಿಗಳನ್ನು ಪೂರೈಸುತ್ತಿದೆ. ಭಾರತದಲ್ಲಿಯೂ ಸಹ ವೈದ್ಯಕೀಯ ಸರಕುಗಳು ಹಾಗೂ ಅಗತ್ಯ ವಸ್ತುಗಳನ್ನು ಬೇರೆ ದೇಶಗಳಿಂದ ತರಲಾಗಿದೆ.

MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ಕರೋನಾ ವಾರಿಯರ್‌ಗಳಿಗೆ ವಿಶಿಷ್ಟವಾಗಿ ನಮಿಸಿದ ಪೈಲಟ್..!

ಕರೋನಾ ವಿರುದ್ಧ ಹೋರಾಡುವ ವೈದ್ಯರು ಇತರರ ಸುರಕ್ಷತೆಯ ಬಗ್ಗೆಯೂ ಕಾಳಜಿ ವಹಿಸುತ್ತಿದ್ದಾರೆ. ತಮ್ಮ ಕುಟುಂಬಕ್ಕೆ ಸೋಂಕು ಹರಡದಿರಲಿ ಎಂಬ ಕಾರಣಕ್ಕೆ ವೈದ್ಯರೊಬ್ಬರು ಮನೆಗೆ ಹೋಗದೇ ಕಾರಿನಲ್ಲಿಯೇ ಉಳಿದುಕೊಂಡಿರುವ ಬಗ್ಗೆ ವರದಿಯಾಗಿತ್ತು.

ಕರೋನಾ ವಾರಿಯರ್‌ಗಳಿಗೆ ವಿಶಿಷ್ಟವಾಗಿ ನಮಿಸಿದ ಪೈಲಟ್..!

ವಿಶ್ವದ ಹೆಚ್ಚಿನ ದೇಶಗಳು ವಿಮಾನಗಳ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. ಭಾರತದಲ್ಲಿಯೂ ಮೇ 3ರವರೆಗೆ ವಿಮಾನಗಳ ಸೇವೆಯನ್ನು ರದ್ದುಗೊಳಿಸಲಾಗಿದೆ. ಇದನ್ನು ಜೂನ್ 1ರವರೆಗೆ ವಿಸ್ತರಿಸುವ ಸಾಧ್ಯತೆಗಳಿವೆ.

Article Published On: Monday, April 27, 2020, 17:55 [IST]
English summary
Iceland flight draws heart in air to thanks corona warriors. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+