ಡ್ರೋನ್ ಮೂಲಕ ಲಸಿಕೆ ವಿತರಿಸಲು ಅನುಮೋದನೆ ಪಡೆದ ಐಸಿಎಂಆರ್

ಭಾರತದಲ್ಲಿ ಕರೋನಾ ವೈರಸ್ ಎರಡನೇ ಅಲೆ ವೇಗವಾಗಿ ಹರಡುತ್ತಿದೆ. ಈ ಹಿನ್ನೆಲೆಯಲ್ಲಿ ಕೋವಿಡ್ 19 ಲಸಿಕೆಯನ್ನು ಹೆಚ್ಚು ಹೆಚ್ಚು ಜನರಿಗೆ ನೀಡಲು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ.

ಡ್ರೋನ್ ಮೂಲಕ ಲಸಿಕೆ ವಿತರಿಸಲು ಅನುಮೋದನೆ ಪಡೆದ ಐಸಿಎಂಆರ್

ಈಗ ನಾಗರಿಕ ವಿಮಾನಯಾನ ಇಲಾಖೆ ಹಾಗೂ ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಐಐಟಿ ಕಾನ್ಪುರದ ಸಹಯೋಗದೊಂದಿಗೆ, ಡ್ರೋನ್ ಮೂಲಕ ಕೋವಿಡ್ -19 ಲಸಿಕೆ ನೀಡಲು ಐಸಿಎಂಆರ್'ಗೆ ಅವಕಾಶ ನೀಡಿವೆ. ಎಲ್ಲವೂ ಸರಿಯಾಗಿ ನಡೆದರೆ ಮುಂಬರುವ ದಿನಗಳಲ್ಲಿ ಕೋವಿಡ್ 19 ಲಸಿಕೆಯನ್ನು ದೇಶದಲ್ಲಿ ಅಗತ್ಯವಿರುವ ಪ್ರತಿಯೊಬ್ಬರಿಗೂ ಡ್ರೋನ್‌ ಮೂಲಕ ತಲುಪಿಸಲಾಗುತ್ತದೆ.

ಡ್ರೋನ್ ಮೂಲಕ ಲಸಿಕೆ ವಿತರಿಸಲು ಅನುಮೋದನೆ ಪಡೆದ ಐಸಿಎಂಆರ್

ನಾಗರಿಕ ವಿಮಾನಯಾನ ಇಲಾಖೆಯು ಒಂದು ವರ್ಷದವರೆಗೆ ಷರತ್ತುಬದ್ಧವಾಗಿ ಡ್ರೋನ್‌ಗಳನ್ನು ಬಳಸಲು ಅನುಮತಿ ನೀಡಿದೆ. ಈ ಮೂಲಕ ಐಸಿಎಂಆರ್ ಒಂದು ವರ್ಷದ ಅವಧಿಗೆ ಅಥವಾ ಮುಂದಿನ ಆದೇಶದವರೆಗೆ ಡ್ರೋನ್ ಬಳಸಲು ಸಾಧ್ಯವಾಗಲಿದೆ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಡ್ರೋನ್ ಮೂಲಕ ಲಸಿಕೆ ವಿತರಿಸಲು ಅನುಮೋದನೆ ಪಡೆದ ಐಸಿಎಂಆರ್

ಡ್ರೋನ್‌ಗಳ ಬಳಕೆಯಿಂದ ವಿನಾಯಿತಿ

ಡೆಹ್ರಾಡೂನ್, ಹಲ್ದ್ವಾನಿ, ಹರಿದ್ವಾರ ಹಾಗೂ ರುದ್ರಪುರ ಮುನ್ಸಿಪಲ್ ಕಾರ್ಪೊರೇಷನ್‌ಗಳಿಗೆ ಷರತ್ತುಬದ್ಧವಾಗಿ ಡ್ರೋನ್‌ ಬಳಸಲು ಅನುಮತಿ ನೀಡಲಾಗಿದೆ. ಇದಕ್ಕಾಗಿ ಜಿಐಎಸ್ ಆಧಾರಿತ ಡೇಟಾಬೇಸ್ ಹಾಗೂ ಎಲೆಕ್ಟ್ರಾನಿಕ್ ತೆರಿಗೆ ರಶೀದಿಗಳಿಗಾಗಿ ಡೇಟಾ ಸಿದ್ಧಪಡಿಸಲಾಗುತ್ತಿದೆ.

ಡ್ರೋನ್ ಮೂಲಕ ಲಸಿಕೆ ವಿತರಿಸಲು ಅನುಮೋದನೆ ಪಡೆದ ಐಸಿಎಂಆರ್

ಇದೇ ವೇಳೆ ವೇದಾಂತ ಲಿಮಿಟೆಡ್ ಡ್ರೋನ್‌ ಮೂಲಕ ನಕ್ಷೆ ಹಾಗೂ ಡೇಟಾ ಸಂಗ್ರಹಿಸಲು ಷರತ್ತುಬದ್ಧ ಅನುಮತಿಯನ್ನು ಸಹ ಪಡೆದಿದೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಡ್ರೋನ್ ಮೂಲಕ ಲಸಿಕೆ ವಿತರಿಸಲು ಅನುಮೋದನೆ ಪಡೆದ ಐಸಿಎಂಆರ್

ಕಳೆದ ವರ್ಷವೂ ಡ್ರೋನ್ ಬಳಕೆ

ಕರೋನಾ ಸಾಂಕ್ರಾಮಿಕ ರೋಗವನ್ನು ತಡೆಗಟ್ಟಲು ಕಳೆದ ವರ್ಷ ಹಲವು ನಗರಗಳಲ್ಲಿ ಡಿಸ್ ಇನ್'ಫೆಕ್ಷನ್ ಗಳನ್ನು ಡ್ರೋನ್‌ಗಳ ಮೂಲಕ ಸಿಂಪಡಿಸಲಾಗಿತ್ತು. ಇಂದೋರ್, ನೋಯ್ಡಾ ಹಾಗೂ ದೆಹಲಿಯ ಹಲವು ಪ್ರದೇಶಗಳಲ್ಲಿ ಡ್ರೋನ್‌ಗಳ ಸಹಾಯದಿಂದ ಸ್ಯಾನಿಟೈಜೇಷನ್ ಮಾಡಲಾಗಿತ್ತು.

ಡ್ರೋನ್ ಮೂಲಕ ಲಸಿಕೆ ವಿತರಿಸಲು ಅನುಮೋದನೆ ಪಡೆದ ಐಸಿಎಂಆರ್

ಇದರ ಜೊತೆಗೆ ಕರೋನಾ ಪೀಡಿತ ಪ್ರದೇಶಗಳು ಹಾಗೂ ಕಂಟೈನ್‌ಮೆಂಟ್ ಜೋನ್'ಗಳಲ್ಲಿ ಡ್ರೋನ್‌ಗಳ ಮೂಲಕ ಆಹಾರ ಪ್ಯಾಕೆಟ್‌ ಹಾಗೂ ಅಗತ್ಯ ಸಾಮಗ್ರಿಗಳನ್ನು ವಿತರಿಸಲಾಗಿತ್ತು.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಡ್ರೋನ್ ಮೂಲಕ ಲಸಿಕೆ ವಿತರಿಸಲು ಅನುಮೋದನೆ ಪಡೆದ ಐಸಿಎಂಆರ್

ಡ್ರೋನ್‌ಗಳು ವೇಗವಾಗಿದ್ದು ಸುರಕ್ಷಿತವಾಗಿವೆ

ತಜ್ಞರ ಪ್ರಕಾರ ವೈದ್ಯಕೀಯ ಸರಬರಾಜು ಹಾಗೂ ವಿತರಣೆಯಲ್ಲಿ ಡ್ರೋನ್‌ಗಳನ್ನು ಬಳಸುವುದರಿಂದ ಜನರಿಗೆ ಕರೋನಾ ಸೋಂಕು ಉಂಟಾಗುವುದರಿಂದ ರಕ್ಷಿಸಬಹುದು.

ಡ್ರೋನ್ ಮೂಲಕ ಲಸಿಕೆ ವಿತರಿಸಲು ಅನುಮೋದನೆ ಪಡೆದ ಐಸಿಎಂಆರ್

ಡ್ರೋನ್‌ಗಳು ಬೇರೆ ವಾಹನಗಳಿಗಿಂತ ವೇಗವಾಗಿ ಲಸಿಕೆ ತಲುಪಿಸುವ ಸಾಮರ್ಥ್ಯವನ್ನು ಹೊಂದಿವೆ. ಸಂಚಾರಕ್ಕೆ ರಸ್ತೆಗಳ ಕೊರತೆಯಿರುವ ಪ್ರದೇಶಗಳಲ್ಲಿಯೂ ಲಸಿಕೆಗಳನ್ನು ತಲುಪಿಸಲು ಡ್ರೋನ್‌ಗಳನ್ನು ಬಳಸಬಹುದು.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಡ್ರೋನ್ ಮೂಲಕ ಲಸಿಕೆ ವಿತರಿಸಲು ಅನುಮೋದನೆ ಪಡೆದ ಐಸಿಎಂಆರ್

ಚೀನಾ ಸಹಾಯ ಹಸ್ತ

ಭಾರತದಲ್ಲಿ ಹೆಚ್ಚುತ್ತಿರುವ ಕರೋನಾ ವೈರಸ್ ಪ್ರಕರಣಗಳ ಬಗ್ಗೆ ಚೀನಾ ಕಳವಳ ವ್ಯಕ್ತಪಡಿಸಿದೆ. ಕರೋನಾ ವೈರಸ್ ಎದುರಿಸಲು ಭಾರತಕ್ಕೆ ಸಕಲ ರೀತಿಯಲ್ಲೂ ನೆರವು ನೀಡಲು ಸಿದ್ಧವಿರುವುದಾಗಿ ಚೀನಾ ತಿಳಿಸಿದೆ.

ಡ್ರೋನ್ ಮೂಲಕ ಲಸಿಕೆ ವಿತರಿಸಲು ಅನುಮೋದನೆ ಪಡೆದ ಐಸಿಎಂಆರ್

ವಿಶೇಷವೆಂದರೆ ಒಂದು ದಿನದ ಹಿಂದಷ್ಟೇ ಚೀನಾ ಭಾರತಕ್ಕೆ ನೆರವು ನೀಡಲು ಮುಂದಾಗಿದೆ. ಭಾರತದಲ್ಲಿ ನಿನ್ನೆ ಹೊಸದಾಗಿ 3,14,835 ಹೊಸ ಸೋಂಕು ಪ್ರಕರಣಗಳು ದಾಖಲಾಗಿವೆ.

Most Read Articles

Kannada
English summary
ICMR gets approval to deliver vaccine through drones. Read in Kannada.
Story first published: Saturday, April 24, 2021, 15:40 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X