ಮಧ್ಯರಾತ್ರಿ ಹೊರಡುವ ರೈಲಿನ ಟಿಕೆಟ್‌ ಬುಕಿಂಗ್ ಮಾಡುವ ಮುನ್ನ ಈ ಸುದ್ದಿ ಗಮನಿಸಿ

ಭಾರತದಲ್ಲಿ ರೈಲು ಸಾರಿಗೆ ವ್ಯವಸ್ಥೆ ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿದೆ. ಇನ್ನು ರೈಲು ಟಿಕೆಟ್‌ ವಿಚಾರಕ್ಕೆ ಸಂಬಂಧಿಸಿದಂತೆ ಹಲವು ವಿಶೇಷ ನಿಯಮಗಳನ್ನು ಹೊಂದಿದೆ. ಅದರಲ್ಲೂ ನಿಮ್ಮ ರೈಲು 11:55PM ಕ್ಕೆ ನಿಲ್ದಾಣಕ್ಕೆ ಬಂದು 12.05AM ಕ್ಕೆ ಹೊರಟರೆ ನೀವು ಯಾವ ದಿನಾಂಕದ ಟಿಕೆಟ್‌ ಬುಕ್‌ ಮಾಡಬೇಕು ಅನ್ನೊ ಗೊಂದಲ ಸಹಜ.

ಹೌದು, ತಡ ರಾತ್ರಿ 11:55PMಕ್ಕೆ ನಿಲ್ದಾಣಕ್ಕೆ ಬರುವ ಟ್ರೈನ್‌ 12.05AMಕ್ಕೆ ಹೊರಟರೆ ನೀವು ಯಾವ ದಿನದ ಟಿಕೆಟ್‌ ಬುಕ್‌ ಮಾಡಬೇಕು ಎನ್ನುವ ಗೊಂದಲ ಉಂಟಾಗಲಿದೆ. ಏಕೆಂದರೆ 12.00AM ಗಂಟೆಯ ನಂತರ ಮರುದಿನ ಪ್ರಾರಂಭವಾಗಲಿದೆ. ಆದರಿಂದ ನೀವು ಯಾವ ದಿನದ ಟಿಕೆಟ್‌ ಬುಕ್‌ ಮಾಡಬೇಕು ಎನ್ನುವ ಗೊಂದಲದಲ್ಲಿರುತ್ತಾರೆ. ಹಾಗಂತ ನೀವು ಚಿಂತಿಸಬೇಕಾದ ಅವಶ್ಯಕತೆಯಿಲ್ಲ. ಇಂತಹ ಗೊಂದಲಮಯ ಸನ್ನಿವೇಶದಲ್ಲಿ ನೀವು ಏನು ಮಾಡಬೇಕು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

train ticket booking

ಸಾಮಾನ್ಯವಾಗಿ ನೀವು ಯಾವ ದಿನ ರೈಲಿನಲ್ಲಿ ಹೊರಡಬೇಕು ಆದ ದಿನದ ರೈಲು ಟಿಕೆಟ್‌ ಬುಕ್‌ ಮಾಡಿಕೊಳ್ಳುವುದು ಸಹಜ. ಆದರೆ ನೀವು ಹೊರಡಬೇಕಾದ ರೈಲು ನಿಮ್ಮ ನಿಲ್ದಾಣಕ್ಕೆ ತಡ ರಾತ್ರಿ ಬಂದು 12.05AM ನಂತರ ಹೊರಟರೇ ಯಾವ ದಿನಕ್ಕೆ ಟಿಕೆಟ್‌ ಬುಕ್‌ ಮಾಡಬೇಕು ಎನ್ನುವ ಗೊಂದಲ ಬರಲಿದೆ. ಇಂತಹ ಸನ್ನಿವೇಶದಲ್ಲಿ ರೈಲು ಹೊರಡುವ ದಿನದ ಆಧಾರದ ಮೇಲೆ ಟಿಕೆಟ್‌ ಕಾಯ್ದಿರಿಸಬೇಕಾಗುತ್ತದೆ. ರೈಲು ನಿರ್ಗಮನದ ದಿನದ ಆಧಾರದ ಮೇಲೆ ಟಿಕೆಟ್‌ಗಳನ್ನು ಕಾಯ್ದಿರಿಸುವುದು ಸೂಕ್ತವಾಗಿದೆ.

ಅಂದರೆ ಇಂತಹ ಸನ್ನಿವೇಶದಲ್ಲಿ ರೈಲ್ವೆ ಇಲಾಖೆ ರೈಲು ಹೊರಡುವ ಸಮಯ ಮತ್ತು ದಿನಾಂಕವನ್ನು ಮಾತ್ರ ದಾಖಲಿಸಿರುತ್ತದೆ. ಆದ್ದರಿಂದ, ರೈಲು ಹೊರಡುವ ಸಮಯದ ಏಕರೂಪತೆಯನ್ನು ಮಧ್ಯದ ಪ್ರತಿ ನಿಲ್ದಾಣದಲ್ಲಿ ನಿರ್ವಹಿಸಲಾಗುತ್ತದೆ. ಟೈಮ್ ಟೇಬಲ್‌ನಲ್ಲಿ ತೋರಿಸಿರುವಂತೆ ರೈಲು ಹೊರಡುವ ದಿನಾಂಕದ ಪ್ರಕಾರ ಬುಕಿಂಗ್ ಮಾಡಲಾಗುತ್ತದೆ. ಆದರಿಂದ ನೀವು ರೈಲು ಟಿಕೆಟ್‌ ಬುಕಿಂಗ್‌ ಮಾಡುವಾಗ ಈ ವಿಚಾರಗಳನ್ನು ಗಮನಿಸಬೇಕಾಗುತ್ತದೆ.

train ticket booking

ಇಂತಹ ಸನ್ನಿವೇಶ ಸೃಷ್ಟಿಸಿರುವ ರೈಲು ಇದೆಯಾ?

ದೇಶದ ಹಲವು ರೈಲು ನಿಲ್ದಾಣಗಳಲ್ಲಿ ಈ ರೀತಿಯ ಗೊಂದಲಮಯ ಪರಿಸ್ಥಿತಿ ಇದೆ. ಇದರಲ್ಲಿ ಕ್ಯಾಲೆಂಡರ್ ಪ್ರಕಾರ ರೈಲು ಒಂದು ದಿನ ಮುಂಚಿತವಾಗಿ ಬರುತ್ತದೆ ಮತ್ತು ರೈಲು ಮರುದಿನ ಹೊರಡುತ್ತದೆ. ಇಂತಹ ರೈಲುಗಳಲ್ಲಿ ಹೊಸದಿಲ್ಲಿಯಿಂದ ಸಹರ್ಸಾಗೆ ಹೋಗುವ ರೈಲು ಬೆಸ್ಟ್‌ ಎಕ್ಸಾಂಫಲ್‌ ಆಗಿದೆ. ಈ ರೈಲು ಕಾನ್ಪುರ ಸೆಂಟ್ರಲ್ ನಿಲ್ದಾಣವನ್ನು ರಾತ್ರಿ 11:55 ಕ್ಕೆ ತಲುಪುತ್ತದೆ. ನಂತರ, ಈ ರೈಲು 12:5 ನಿಮಿಷಕ್ಕೆ ಹೊರಡುತ್ತದೆ. ಆದ್ದರಿಂದ, ಈ ಪರಿಸ್ಥಿತಿಯಲ್ಲಿ, ಮರುದಿನದ ಪ್ರಕಾರ ಟಿಕೆಟ್ ಬುಕಿಂಗ್ ಮಾಡಲಾಗುತ್ತದೆ.

train ticket booking

IRCTC ಮೂಲಕ ರೈಲು ಟಿಕೆಟ್‌ ಬುಕ್ ಮಾಡಲು ಹೀಗೆ ಮಾಡಿ:

* IRCTC ಖಾತೆಗೆ ಲಾಗ್ ಇನ್ ಮಾಡಿ.
* ನಿರ್ಗಮನ ಮತ್ತು ತಲುಪುವ ನಿಲ್ದಾಣಗಳು, ಪ್ರಯಾಣದ ದಿನಾಂಕ ಮತ್ತು ರೈಲು ವರ್ಗವನ್ನು ಆಯ್ಕೆ ಮಾಡಿ.
* ನಿಮ್ಮ ಪ್ರಯಾಣಕ್ಕಾಗಿ ಲಭ್ಯವಿರುವ ರೈಲುಗಳು ಮತ್ತು ಸಮಯಗಳನ್ನು ಪರಿಶೀಲಿಸಲು ರೈಲುಗಳನ್ನು ಹುಡುಕಿ ಬಟನ್ ಮೇಲೆ ಕ್ಲಿಕ್ ಮಾಡಿ.
* ಬಯಸಿದ ರೈಲನ್ನು ಆಯ್ಕೆ ಮಾಡಿ ಮತ್ತು ಚೆಕ್ ಲಭ್ಯತೆ ಮತ್ತು ಶುಲ್ಕ ಬಟನ್ ಮೇಲೆ ಕ್ಲಿಕ್ ಮಾಡಿ.
* ನಂತರ, ಕೋಟಾವನ್ನು ಆಯ್ಕೆ ಮಾಡಿ ಮತ್ತು ಬುಕ್ ನೌ ಬಟನ್ ಒತ್ತಿರಿ.
* ಅದರ ನಂತರ, ಪ್ರಯಾಣಿಕರ ವಿವರಗಳನ್ನು ಭರ್ತಿ ಮಾಡಬೇಕಾಗುತ್ತದೆ.
* ಆ ಬಳಿಕ, 'ಬುಕ್ಕಿಂಗ್ ಮುಂದುವರಿಸಿ' ಬಟನ್ ಮೇಲೆ ಕ್ಲಿಕ್ ಮಾಡಿ.
* ವಿವರಗಳನ್ನು ಪರಿಶೀಲಿಸಿ ಮತ್ತು ಪಾವತಿ ಮಾಡಿ ಆಯ್ಕೆಯನ್ನು ಕ್ಲಿಕ್ ಮಾಡಿ. * ಪಾವತಿ ವಿಧಾನವನ್ನು ಆಯ್ಕೆಮಾಡಿ ಮತ್ತು ಒದಗಿಸಿದ ಜಾಗದಲ್ಲಿ ಪಾವತಿ ವಿವರಗಳನ್ನು ನಮೂದಿಸಿ.
* ನಿಮ್ಮ ಬುಕಿಂಗ್ ಪೂರ್ಣಗೊಳಿಸಲು ಪಾವತಿ ಮಾಡಿ ಬಟನ್ ಒತ್ತಿರಿ. ಪಾವತಿ ಪೂರ್ಣಗೊಂಡ ತಕ್ಷಣ ನಿಮ್ಮ ನೋಂದಾಯಿತ ಇಮೇಲ್ ವಿಳಾಸದಲ್ಲಿ ನಿಮ್ಮ ಟಿಕೆಟ್ ವಿವರಗಳನ್ನು ನೀವು ಸ್ವೀಕರಿಸುತ್ತೀರಿ.

More from DriveSpark

Article Published On: Saturday, May 13, 2023, 9:03 [IST]
English summary
If a train arrives at 11.55PM and leaves at 12.05AM then for which date the ticket has to be taken?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+