ವಾಹನ ಚಾಲಕರೇ ಎಚ್ಚೆತ್ತುಕೊಳ್ಳಿ...ನಿಮ್ಮಿಂದ ಅಪಘಾತವಾಯಿತೆಂದು ಹಣ ಕೇಳಿದ್ರೆ ಹೀಗೆ ಮಾಡಿ

ಬೆಂಗಳೂರಿನಲ್ಲಿ ಖತರ್ನಾಕ್ ಗ್ಯಾಂಗ್‌ವೊಂದು ವಾಹನ ಚಾಲಕರಿಂದ ಹಣ ಸುಳಿಗೆ ಮಾಡುತ್ತಿದೆ. ಹಣ ದೋಚುವ ಇವರ ಪ್ಲಾನ್ ನೋಡಿದರೆ ದಂಗಾಗುತ್ತೀರ.

ಬೆಂಗಳೂರು ಪೊಲೀಸ್ ಡಿಸಿಪಿ ಕೃಷ್ಣಕಾಂತ್ ಅವರು ಪೋಸ್ಟ್ ಮಾಡಿದ ವಿಡಿಯೋದಲ್ಲಿ ಇಬ್ಬರು ಖದೀಮರು ಕಿಯಾ ಕ್ಯಾರೆನ್ಸ್ ಚಾಲಕನಿಗೆ 15,000 ರೂಪಾಯಿ ದರೋಡೆ ಮಾಡಲು ಎಷ್ಟು ನಿಖರವಾಗಿ ಪ್ಲಾನ್ ಮಾಡಿಕೊಂಡಿದ್ದರು ಎಂಬುದನ್ನು ತೋರಿಸುತ್ತದೆ.

ಕಳೆದ ತಿಂಗಳು ಸಿದ್ದಾಪುರದಲ್ಲಿ ಘಟನೆ ನಡೆದಿದ್ದು, ದಕ್ಷಿಣ ಡಿಸಿಪಿ ಕೃಷ್ಣಕಾಂತ್ ಅವರು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿರುವ ಸಿಸಿಟಿವಿ ರೆಕಾರ್ಡಿಂಗ್‌ನಲ್ಲಿ ಬೈಕ್‌ನಲ್ಲಿ ಬಂದ ಇಬ್ಬರು ವ್ಯಕ್ತಿಗಳು ಕಿಯಾ ಕ್ಯಾರೆನ್ಸ್ ಚಾಲಕನನ್ನು ಅಪಘಾತದ ನೆಪದಲ್ಲಿ ದರೋಡೆ ಮಾಡಲು ಪ್ರಯತ್ನಿಸುತ್ತಿರುವುದನ್ನು ನೋಡಬಹುದು.

ಬೈಕ್ ಸವಾರರು ಅಪಘಾತ ನೆಪ ಹೇಳಿ ಕಿಯಾ ಕ್ಯಾರೆನ್ಸ್ ಚಾಲಕನಿಂದ 15,000 ರೂ. ಸುಳಿಗೆ ಮಾಡಿದ್ದಾರೆ. ಇದು ಪಕ್ಕಾ ಪ್ಲಾನಿಂಗ್ ದರೋಡೆಯಾಗಿದ್ದು, ವಾಹನ ಚಾಲನೆ ವೇಳೆ ಇಂತಹ ಸನ್ನಿವೇಶಗಳು ಎದುರಾದರೆ ಕೂಡಲೇ ಪೊಲೀಸರನ್ನು ಸಂಪರ್ಕಿಸಲು ಡಿಸಿಪಿ ಅವರು ಮನವಿ ಮಾಡಿದ್ದಾರೆ.

ಆಗಿದ್ದಾದ್ರೂ ಏನು!
ಉದ್ದೇಶಪೂರ್ವಕವಾಗಿ ಕಾರು ತಮ್ಮ ಪಕ್ಕದಲ್ಲಿ ಹಾದು ಹೋಗುವವರೆಗೆ ಕಾದು, ಕಾರು ಪಕ್ಕದಲ್ಲೇ ಹೋಗುತ್ತಿಂದೆ ಬೈಕ್‌ನಲ್ಲಿ ಹಿಂದೆ ಕುಳಿತಿರುವ ವ್ಯಕ್ತಿ ಕಾರಿನೆ ಡಿಕ್ಕಿಗೆ ಬಡಿಯುತ್ತಾನೆ. ಇದು ಅಪಘಾತವಾಗಿದೆಯೆಂದು ಬಿಂಬಿಸುವ ಪ್ರಯತ್ನವಾಗಿದೆ. ಇದೇ ದೃಷ್ಯಗಳು ಸಿಸಿಟಿವಿಯಲ್ಲೂ ರೆಕಾರ್ಡ್ ಆಗಿವೆ.

ನಂತರ ಬೈಕ್‌ನಲ್ಲಿದ್ದ ಪುಂಡರು ಕಾರುನ್ನು ಮುಂದೆ ನಿಲ್ಲಿಸುವಂತೆ ಕಾರಿನತ್ತ ಜೋರಾಗಿ ಕೂಗುತ್ತಾರೆ. ಆಗ ಕಾರು ಚಾಲಕ ರಸ್ತೆ ಬದಿ ನಿಲ್ಲಿಸಿದಾಗ ಅಪಘಾತ ಮಾಡಿ ಪರಾರಿಯಾಗುತ್ತೀಯಾ ಎಂದು ಪ್ರಶ್ನಿಸಿ ಬೈಕ್ ಡ್ಯಾಮೇಜ್ ಆಗಿದೆಯೆಂದು ಹಣಕ್ಕೆ ಬೇಡಿಕೆಯಿಡುತ್ತಾರೆ. ಬಳಿಕ ಸವಾರರು 15,000 ರೂ.ಗಳನ್ನು ಆತನಿಂದ ದೋಚಿದ್ದಾರೆ.

ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಪೊಲೀಸರು ಸಂಪೂರ್ಣ ಹಣವನ್ನು ದರೋಡೆಕೋರರಿಂದ ವಶಪಡಿಸಿಕೊಂಡು, ಕೃತ್ಯಕ್ಕೆ ಬಳಸಿದ್ದ ಮೋಟಾರ್‌ಸೈಕಲ್ ಅನ್ನು ಸಹ ಸೀಜ್ ಮಾಡಿದ್ದಾರೆ. ಅಲ್ಲದೇ ಬೆಂಗಳೂರಿನಲ್ಲಿ ಇಂತಹ ಇತರ ಗ್ಯಾಂಗ್‌ಗಳ ಬಗ್ಗೆ ಆರೋಪಿಗಳನ್ನು ವಿಚಾರಿಸಲಾಗುತ್ತಿದೆ.

ಇದೊಂದೇ ಅಲ್ಲ, ಇನ್ನೂ ಇಂತಹ ಹಲವು ದರೋಡೆ ವಿಧಾನಗಳಿವೆ. ನಿಧಾನಗತಿಯ ಟ್ರಾಫಿಕ್‌ನಲ್ಲಿ ನಡೆದುಕೊಂಡು ಹೋಗುವಾಗ ಅವರ ಕಾಲಿನ ಮೇಲೆ ಕಾರು ಹಾದುಹೋದಂತೆ ವರ್ತಿಸಿ ಚಾಲಕರನ್ನು ವಂಚಿಸುವ ಕೆಲವರಿದ್ದಾರೆ. ಇಂತಹ ಘಟನೆಗಳಲ್ಲೂ ಪೊಲೀಸ್ ದೂರು ನಿಡುವುದಾಗಿ ಬೆದರಿಸಿ ಭಾರೀ ಪ್ರಮಾಣದಲ್ಲಿ ಹಣ ವಸೂಲಿ ಮಾಡುತ್ತಿದ್ದಾರೆ.

ಇದೇ ವರ್ಷದ ಆರಂಭದಲ್ಲಿ ದಿಲ್ಲಿಯಲ್ಲಿ ನಡೆದ ಘಟನೆಯೊಂದು ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ದರೋಡೆಕೋರರು ಬಂದೂಕು ಬಳಸಿ ಉದ್ಯಮಿಯೊಬ್ಬರಿಂದ 2 ಕೋಟಿ ರೂ. ಸುಳಿಗೆ ಮಾಡಿದ್ದರು. ಇಂತಹ ಗ್ಯಾಂಗ್‌ಗಳಿಗೆ ಹಲವು ಹೆಸರುಗಳಿವೆ. ಥಕ್-ಥಕ್ ಗ್ಯಾಂಗ್, ಆಕ್ಸಲ್ ಗ್ಯಾಂಗ್ ಮತ್ತು ಇನ್ನೂ ಅನೇಕ ಕುಖ್ಯಾತ ಗ್ಯಾಂಗ್‌ಗಳು ಇಂತಹ ದರೋಡೆಗಳನ್ನು ಆಗಾಗ್ಗೆ ಮಾಡುತ್ತಾರೆ.

ಗ್ಯಾಂಗ್ ಹಣ ಎಸೆದು ಅಥವಾ ರೇಡಿಯೇಟರ್‌ನಿಂದ ಆಯಿಲ್ ಸೋರಿಕೆಯಾಗುತ್ತಿದೆ ಎಂದು ಹೇಳಿ ವಾಹನದಿಂದ ಹೊರಗೆ ಬರುವಂತೆ ಚಾಲಕನಿಗೆ ಆಮಿಷ ಒಡ್ಡುತ್ತದೆ. ಒಬ್ಬನೇ ಚಾಲಕ ವಾಹನದಿಂದ ಹೊರಬಂದಾಗ, ಅವರು ಲ್ಯಾಪ್‌ಟಾಪ್ ಅಥವಾ ನಗದು ಮುಂತಾದ ಬೆಲೆಬಾಳುವ ವಸ್ತುಗಳನ್ನು ಹೊಂದಿರುವ ಬ್ಯಾಗ್‌ಗಳನ್ನು ಎಗರಿಸುತ್ತಾರೆ.

ಸಾಮಾನ್ಯವಾಗಿ ಯಾವುದೋ ಆಲೋಚನೆಯಲ್ಲಿ ಚಾಲನೆಯಲ್ಲಿರುವ ನಾವು ಇಂತಹ ಘಟನೆಗಳು ಎದುರಾದಾಗ ಎಚ್ಚರಿಕೆಯಿಂದ ಇರುವುದಿಲ್ಲ. ಆದರೆ ಇದೇ ಅವಕಾಶವನ್ನು ಖದೀಮರು ಬಳಸಿಕೊಳ್ಳುತ್ತಾರೆ. ಸಾರ್ವಜನಿಕರು ಇಂತಹ ದರೋಡೆಕೋರರಿಂದ ಇನ್ನಾದರು ಎಚ್ಚರಿಕೆಯಿಂದ ಇರಬೆಕು. ಒಂದು ವೇಳೆ ನೀವೇ ಅಪಘಾತ ಮಾಡಿದರು ಅವರಿಗೆ ಹಣ ಕೊಡುವ ಬದಲು ಪೊಲೀಸರು ಮೊರೆ ಹೋಗುವುದು ಉತ್ತಮ.

Most Read Articles

Kannada
English summary
If any one ask you to pay for an accident do this
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X