ಈ ನಟರ ಒಂದೊಂದು ಬೈಕ್ ಬೆಲೆ ಕೇಳಿದ್ರೆ ಹುಬ್ಬೇರಿಸುವುದು ಖಚಿತ: ಸಣ್ಣ ಮನೆಯನ್ನೇ ಕಟ್ಟಬಹುದು

ಬಾಲಿವುಡ್ ದೇಶದಲ್ಲೇ ಅತ್ಯಂತ ಶ್ರೀಮಂತ ಚಿತ್ರರಂಗವಾಗಿದ್ದು, ಇಲ್ಲಿನ ನಟ-ನಟಿಯರು ಹೆಚ್ಚು ಐಷಾರಾಮಿ ಜೀವನಕ್ಕೆ ಹೊಂದುಕೊಂಡಿದ್ದಾರೆ. ಅವರು ದುಬಾರಿ ಕಾರು, ಬಂಗಲೆಗಳನ್ನು ಹೊಂದಿರುವುದು ಎಲ್ಲರಿಗೂ ಗೊತ್ತಿರುವ ವಿಷಯ, ಆದರೆ ಬೈಕ್‌ಗಳ ವಿಷಯಕ್ಕೆ ಬಂದರೆ ನೀವು ದಂಗಾಗುವುದು ಖಚಿತ.

Recommended Video

Royal Enfield Hunter 350 | ಹೊಸ ಬೈಕ್ ಕುರಿತಾದ ಮೊದಲ ಅನಿಸಿಕೆಯ ವಾಕ್‌ರೌಂಡ್ #FirstLook

ಏಕೆಂದರೆ ಬಾಲಿವುಡ್ ನಟರ ಬಳಿಯಿರುವ ದುಬಾರಿ ಬೈಕ್‌ವೊಂದರ ಬೆಲೆಗೆ ಸಣ್ಣ ಮನೆಯೊಂದನ್ನು ಕಟ್ಟಬಹುದು. ಹೌದು ಸಲ್ಮಾನ ಖಾನ್ ಅವರಿಂದ ಹಿಡಿದು ಶಾಹಿದ್ ಕಪೂರ್ ವರೆಗೂ ಪ್ರತಿಯೊಬ್ಬ ನಟ ಕೂಡ ಕನಿಷ್ಟವೆಂದರೂ 20 ಲಕ್ಷ ರೂ. ಮೌಲ್ಯದ ಬೈಕ್‌ ಅನ್ನು ಹೊಂದಿದ್ದಾರೆ. ಈ ನಟರ ಬಳಿಯಿರುವ ಬೈಕ್‌ಗಳು ಹಾಗೂ ಅವುಗಳ ಬೆಲೆ, ವಿಶೇಷತೆಗಳನ್ನು ಇಲ್ಲಿ ನೋಡೋಣ..

ಈ ನಟರ ಒಂದೊಂದು ಬೈಕ್ ಬೆಲೆ ಕೇಳಿದ್ರೆ ಹುಬ್ಬೇರಿಸುವುದು ಖಚಿತ: ಸಣ್ಣ ಮನೆಯನ್ನೇ ಕಟ್ಟಿಸಬಹುದು

ಸಲ್ಮಾನ್ ಖಾನ್

ಬಾಲಿವುಡ್ ಸುಲ್ತಾನ್ ಎಂದೇ ಕರೆಸಿಕೊಳ್ಳುವ ಸಲ್ಮಾನ್ ಖಾನ್ ಅವರಿಗೆ ಅತಿ ವೇಗದ ಬೈಕ್‌ಗಳು ಎಂದರೆ ಸಖತ್ ಇಷ್ಟ. ಇವರು ಐಷಾರಾಮಿ ಕಾರುಗಳು, ಬಂಗಲೆಗಳಂತೆಯೇ ದುಬಾರಿ ಬೈಕ್‌ಗಳನ್ನು ಹೊಂದಿದ್ದಾರೆ. ಅವರ ಖರೀದಿಯಲ್ಲಿ ಫೇವರೆಟ್ ಬೈಕ್ ಆದ ಯಮಹಾ R1 ಅಂದ್ರೆ ಸಲ್ಲು ಭಾಯ್‌ಗೆ ಎಲ್ಲಿಲ್ಲದ ಪ್ರೀತಿ, ಈ ಬೈಕ್‌ನಲ್ಲಿ ಮುಂಬೈ ರಸ್ತೆಗಳಲ್ಲಿ ಓಡಾಡುತ್ತಾ ಹಲವು ಬಾರಿ ಕಾಣಿಸಿಕೊಂಡಿದ್ದಾರೆ.

ಈ ನಟರ ಒಂದೊಂದು ಬೈಕ್ ಬೆಲೆ ಕೇಳಿದ್ರೆ ಹುಬ್ಬೇರಿಸುವುದು ಖಚಿತ: ಸಣ್ಣ ಮನೆಯನ್ನೇ ಕಟ್ಟಿಸಬಹುದು

ಯಮಹಾ R1 ಬೈಕ್ ಭಾರತದಲ್ಲಿ 21 ಲಕ್ಷ ರೂ. (ಎಕ್ಸ್-ಶೋರೂಮ್) ಬೆಲೆಗೆ ಮಾರಾಟಕ್ಕೆ ಲಭ್ಯವಿದೆ. ಈ ಸೂಪರ್ ಸ್ಟೋರ್ಟ್ಸ್ ಬೈಕ್ 998-ಸಿಸಿ ಕ್ರಾಸ್ ಪ್ಲೇನ್, 4 ಸಿಲಿಂಡರ್, 4 ವಾಲ್ವ್ ಎಂಜಿನ್ ಪಡೆದಿದ್ದು, 197-ಬಿಹೆಚ್‍ಪಿ ಮತ್ತು 112-ಎನ್ಎಂ ಟಾರ್ಕ್ ಅನ್ನು ಉತ್ಪಾದಿಸಬಲ್ಲದು. ಈ ಎಂಜಿನ್ ಅನ್ನು 6 ಸ್ಪೀಡ್ ಗೇರ್‍‍ಬಾಕ್ಸ್ ಗೆ ಜೋಡಿಸಲಾಗಿದೆ.

ಈ ನಟರ ಒಂದೊಂದು ಬೈಕ್ ಬೆಲೆ ಕೇಳಿದ್ರೆ ಹುಬ್ಬೇರಿಸುವುದು ಖಚಿತ: ಸಣ್ಣ ಮನೆಯನ್ನೇ ಕಟ್ಟಿಸಬಹುದು

ಬೈಕ್‌ನ ವಿಶೇಷತೆಗಳ ವಿಷಯಕ್ಕೆ ಬಂದರೆ ಆರ್1 ಬೈಕ್ ಕ್ವಿಕ್ ಶಿಫ್ಟ್ ಸಿಸ್ಟಂ, ಲಿಫ್ಟ್ ಕಂಟ್ರೋಲ್ ಸಿಸ್ಟಂ, ಕೇಂದ್ರೀಯವಾಗಿ ಎಲ್ಇಡಿ ಹೆಡ್‍ಲ್ಯಾಂಪ್‍ಗಳೊಂದಿಗೆ ಪೋರ್ಸ್ಡ್ ಏರ್ ಇಂಟೇಕ್‍, ಎರಡೂ ಕಡೆ ಡಿಆರ್‍ಎಲ್, ಪೂರ್ಣವಾಗಿ ನಿಯಂತ್ರಿಸಬಲ್ಲ ಸಸ್ಪೆಷನ್ ಸಿಸ್ಟಂ ಮತ್ತು ಎಬಿಎಸ್ ಅನ್ನು ಹೊಂದಿದೆ.

ಈ ನಟರ ಒಂದೊಂದು ಬೈಕ್ ಬೆಲೆ ಕೇಳಿದ್ರೆ ಹುಬ್ಬೇರಿಸುವುದು ಖಚಿತ: ಸಣ್ಣ ಮನೆಯನ್ನೇ ಕಟ್ಟಿಸಬಹುದು

ಅಕ್ಷಯ್ ಕುಮಾರ್

ಬಾಲಿವುಡ್‌ ಕಿಲಾಡಿ ಅಕ್ಷಯ್ ಕುಮಾರ್ ಅವರಿಗೂ ಸ್ಪೋರ್ಟ್ಸ್ ಬೈಕ್‌ಗಳೆಂದರೆ ಬಹಳ ಇಷ್ಟ. ಅವರು ಹೆಲ್ಮೆಟ್ ಧರಿಸಿ ಯಾರಿಗೂ ತಿಳಿಯದಂತೆ ಲಾಂಗ್‌ ಡ್ರೈವ್‌ ಹೋಗಿಬರುತ್ತಿರುತ್ತಾರೆ. ಇನ್ನು ಅಕ್ಷಯ್ ಕುಮಾರ್ ಅವರು ಖರೀದಿಸಿರುವ ಅತ್ಯಂತ ದುಬಾರಿ ಬೈಕ್ ಎಂದರೆ ಯಮಹಾ ವಿಮ್ಯಾಕ್ಸ್. ಈ ಬೈಕ್ 2020 ರಲ್ಲಿ ಭಾರತದಲ್ಲಿ ಸ್ಥಗಿತಗೊಂಡಿದೆ. ಈ ಮೋಟಾರ್‌ಸೈಕಲ್‌ನ ಬೆಲೆ 27 ಲಕ್ಷ ರೂ. (ಎಕ್ಸ್-ಶೋರೂಮ್) ಇದೆ.

ಈ ನಟರ ಒಂದೊಂದು ಬೈಕ್ ಬೆಲೆ ಕೇಳಿದ್ರೆ ಹುಬ್ಬೇರಿಸುವುದು ಖಚಿತ: ಸಣ್ಣ ಮನೆಯನ್ನೇ ಕಟ್ಟಿಸಬಹುದು

ಈ ಮೋಟಾರ್‌ಸೈಕಲ್‌ 1679cc V4 ಲಿಕ್ವಿಡ್-ಕೂಲ್ಡ್ ಎಂಜಿನ್ ಅನ್ನು ಹೊಂದಿದೆ, ಇದು 6500 RPM ನಲ್ಲಿ 167 Nm ಗರಿಷ್ಠ ಟಾರ್ಕ್ ಮತ್ತು 9000 rpm ನಲ್ಲಿ 200 bhp ಪವರ್ ಉತ್ಪಾದಿಸುತ್ತದೆ. ಈ ಬೈಕ್ ಗಂಟೆಗೆ 220 ಕಿಮೀ. ವೇಗವನ್ನು ತಲುಪಬಲ್ಲದು.

ಈ ನಟರ ಒಂದೊಂದು ಬೈಕ್ ಬೆಲೆ ಕೇಳಿದ್ರೆ ಹುಬ್ಬೇರಿಸುವುದು ಖಚಿತ: ಸಣ್ಣ ಮನೆಯನ್ನೇ ಕಟ್ಟಿಸಬಹುದು

ಜಾನ್ ಅಬ್ರಹಾಂ

ಭಾರತದಲ್ಲಿ ಸೂಪರ್ ಬೈಕ್ ಸಿನಿಮಾಗಳು ಎಂದಾಕ್ಷಣ ಹಲವರಿಗೆ ಮೊದಲು ನೆನಪಾಗುವುದು ಧೂಮ್ ಸಿನಿಮಾ. ಈ ಧೂಮ್ ಚಿತ್ರದಲ್ಲಿ ಸುಜುಕಿ ಹಯಾಬುಸಾ ಸವಾರಿ ಮಾಡುತ್ತಾ ಕಾಣಿಸಿಕೊಳ್ಳುವ ಜಾನ್ ಅಬ್ರಹಾಂ ಅವರಿಗೆ ನಿಜ ಜೀವನದಲ್ಲೂ ಸೂಪರ್ ಬೈಕ್‌ಗಳೆಂದರೆ ಸಖತ್ ಇಷ್ಟ. ಜಾನ್ ಅಬ್ರಹಾಂ ಅವರ ಸಂಗ್ರಹಣೆಯಲ್ಲಿ ಹಯಾಬುಸಾ ಮತ್ತು ಯಮಹಾ YZF R1 ಸೇರಿದಂತೆ 16 ಕ್ಕೂ ಹೆಚ್ಚು ಬೈಕ್‌ಗಳಿವೆ.

ಈ ನಟರ ಒಂದೊಂದು ಬೈಕ್ ಬೆಲೆ ಕೇಳಿದ್ರೆ ಹುಬ್ಬೇರಿಸುವುದು ಖಚಿತ: ಸಣ್ಣ ಮನೆಯನ್ನೇ ಕಟ್ಟಿಸಬಹುದು

ಇವುಗಳಲ್ಲಿ ಜಾನ್‌ ಅಬ್ರಹಾಂ ಅವರ ಫೇವರೆಟ್ ಬೈಕ್ ಆದ ಅತ್ಯಂತ ಬೆಲೆಬಾಳುವ ಡುಕಾಟಿ ಪ್ಯಾನಿಗೇಲ್ V4 ದೇಶದಲ್ಲಿನ ಅತ್ಯಂತ ದುಬಾರಿ ಬೈಕ್‌ಗಳಲ್ಲಿ ಒಂದಾಗಿದೆ. ಈ ಬೈಕ್‌ನ ಬೆಲೆಯು ಭಾರತದಲ್ಲಿ 25 ಲಕ್ಷ ರೂ. (ಎಕ್ಸ್-ಶೋರೂಮ್) ಇದೆ. ಈ ಬೈಕ್ 1.1-ಲೀಟರ್ 4-ಸಿಲಿಂಡರ್‌ನೊಂದಿಗೆ 215 bhp ಮತ್ತು 123 Nm ಗರಿಷ್ಠ ಟಾರ್ಕ್ ಅನ್ನು ಹೊರಹಾಕುತ್ತದೆ.

ಈ ನಟರ ಒಂದೊಂದು ಬೈಕ್ ಬೆಲೆ ಕೇಳಿದ್ರೆ ಹುಬ್ಬೇರಿಸುವುದು ಖಚಿತ: ಸಣ್ಣ ಮನೆಯನ್ನೇ ಕಟ್ಟಿಸಬಹುದು

ವಿದ್ಯುತ್ ಜಮ್ವಾಲ್

ಫಿಟ್‌ನೆಸ್ ಹಾಗೂ ಫೈಟ್ಸ್‌ ಮಾಡುವಲ್ಲಿ ತಮ್ಮದೇ ಆದ ವಿಶೇಷ ಸ್ಟೈಲ್ ಹೊಂದಿರುವ ಬಾಲಿವುಡ್ ಫೈಟರ್ ವಿದ್ಯುತ್ ಜಮ್ವಾಲ್ 20 ಲಕ್ಷ ರೂ. (ಎಕ್ಸ್-ಶೋರೂಮ್) ಮೌಲ್ಯದ ಟ್ರಯಂಫ್ ರಾಕೆಟ್ 3 ಸೂಪರ್ ಬೈಕ್ ಅನ್ನು ಹೊಂದಿದ್ದಾರೆ. ಅವರ ಮೈಕಟ್ಟಿಗೆ ಸರಿಹೊಂದುವಂತೆ ಈ ಬೈಕ್‌ ಕೂಡ ಸಖತ್ ಸ್ಟೈಲಿಷ್ ಹಾಗೂ ಪವರ್‌ಫುಲ್ ಆಗಿ ಕಾಣುತ್ತದೆ.

ಈ ನಟರ ಒಂದೊಂದು ಬೈಕ್ ಬೆಲೆ ಕೇಳಿದ್ರೆ ಹುಬ್ಬೇರಿಸುವುದು ಖಚಿತ: ಸಣ್ಣ ಮನೆಯನ್ನೇ ಕಟ್ಟಿಸಬಹುದು

ಈ ಬೈಕಿನಲ್ಲಿ 2,458 ಸಿಸಿ ಎಂಜಿನ್ ಅನ್ನು ನೀಡಲಾಗಿದ್ದು, ಇದು 165 ಬಿಹೆಚ್‍ಪಿ ಪವರ್ ಮತ್ತು 221 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು ಟಾರ್ಕ್-ಅಸಿಸ್ಟ್ ಹೈಡ್ರಾಲಿಕ್ ಕ್ಲಚ್‌ನೊಂದಿಗೆ 6-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ ಜೋಡಿಸಲಾಗಿದೆ.

ಈ ನಟರ ಒಂದೊಂದು ಬೈಕ್ ಬೆಲೆ ಕೇಳಿದ್ರೆ ಹುಬ್ಬೇರಿಸುವುದು ಖಚಿತ: ಸಣ್ಣ ಮನೆಯನ್ನೇ ಕಟ್ಟಿಸಬಹುದು

ಶಾಹಿದ್ ಕಪೂರ್

ಕಳೆದ ವರ್ಷ ಕಬೀರ್ ಸಿಂಗ್ ಸಿನಿಮಾದೊಂದಿಗೆ ಅಭಿಮಾನಿಗಳಿಗೆ ದೊಡ್ಡ ಹಿಟ್ ನೀಡಿದ ಶಾಹಿದ್ ಕಪೂರ್ ಅವರಿಗೆ ಕಾರು, ಬೈಕ್‌ಗಳನ್ನು ಸ್ವತಃ ಅವರೇ ಡ್ರೈವ್ ಮಾಡುವುದೆಂದರೆ ಬಹಳ ಇಷ್ಟ. ಶಾಹಿದ್ ಕಪೂರ್ ಅವರು ತಮ್ಮ ಗ್ಯಾರೇಜ್‌ನಲ್ಲಿ BMW R1250GS ಅಡ್ವೆಂಚರ್ ಬೈಕ್ ಅನ್ನು ಹೊಂದಿದ್ದಾರೆ.

ಈ ನಟರ ಒಂದೊಂದು ಬೈಕ್ ಬೆಲೆ ಕೇಳಿದ್ರೆ ಹುಬ್ಬೇರಿಸುವುದು ಖಚಿತ: ಸಣ್ಣ ಮನೆಯನ್ನೇ ಕಟ್ಟಿಸಬಹುದು

ಬಿಎಂಡಬ್ಲ್ಯು ಆರ್ 1250 ಜಿಎಸ್ ಬೈಕಿನ ಬೆಲೆಯು ಅಂದಾಜು ಎಕ್ಸ್ ಶೋರೂಂ ಪ್ರಕಾರ ರೂ.20 (ಎಕ್ಸ್-ಶೋರೂಮ್) ಲಕ್ಷಗಳಾಗಿರಬಹುದು. ಈ ಆರ್ 1250 ಜಿಎಸ್ ಬಿಎಂಡಬ್ಲ್ಯು ಮೋಟೊರಾಡ್‌ನ ಪ್ರಮುಖ ಅಡ್ವೆಂಚರ್-ಟೂರಿಂಗ್ ಬೈಕ್ ಆಗಿದೆ. ಇದರ ಎಂಜಿನ್ 7,750 ಆರ್‌ಪಿಎಂನಲ್ಲಿ 134 ಬಿಹೆಚ್‌ಪಿ ಪವರ್ ಮತ್ತು 6,250 ಆರ್‌ಪಿಎಂನಲ್ಲಿ 143 ಎನ್ಎಂ ಟಾರ್ಜ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ಅನ್ನು 6-ಸ್ಪೀಡ್ ಗೇರ್‌ಬಾಕ್ಸ್‌ಗೆ ಜೋಡಿಯಾಗಿ ಸ್ಲಿಪ್-ಅಸಿಸ್ಟ್ ಕ್ಲಚ್ ಅನ್ನು ಸ್ಟ್ಯಾಂಡರ್ಡ್ ಆಗಿ ಜೋಡಿಸಲಾಗಿದೆ.

ಈ ನಟರ ಒಂದೊಂದು ಬೈಕ್ ಬೆಲೆ ಕೇಳಿದ್ರೆ ಹುಬ್ಬೇರಿಸುವುದು ಖಚಿತ: ಸಣ್ಣ ಮನೆಯನ್ನೇ ಕಟ್ಟಿಸಬಹುದು

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಬಾಲಿವುಡ್ ನಟರ ಬಳಿಯಿರುವ ದುಬಾರಿ ಬೈಕ್‌ವೊಂದರ ಬೆಲೆಗೆ ಸಣ್ಣ ಮನೆಯೊಂದನ್ನು ಕಟ್ಟಬಹುದು. ಮೇಲಿನ ಎಲ್ಲಾ ನಟರು ಕೂಡ ಕನಿಷ್ಟವೆಂದರೂ ಇಪತ್ತು ಲಕ್ಷ ರೂ. ಮೌಲ್ಯದ ಬೈಕ್‌ಗಳನ್ನು ಹೊಂದಿದ್ದಾರೆ. ಮೇಲಿನ ಈ ನಟರು ಮಾತ್ರವಲ್ಲದೇ ಬಾಲಿವುಡ್‌ನಲ್ಲಿ ಇನ್ನೂ ಹಲವರು ದುಬಾರಿ ಬೈಕ್‌ಗಳನ್ನು ಹೊಂದಿದ್ದಾರೆ. ಈ ಬೈಕ್‌ಗಳ ಕುರಿತು ಮಾಹಿತಿ ಹೊರಬಿದ್ದಿಲ್ಲ. ಮುಂದಿನ ದಿನಗಳಲ್ಲಿ ಮತ್ತಷ್ಟು ಬಾಲಿವುಡ್ ಮಂದಿಯ ಬೈಕ್ ಕಲೆಕ್ಷನ್ ಅನ್ನು ತಿಳಿಸಲಿದ್ದೇವೆ.

Most Read Articles

Kannada
English summary
If you ask the price of each bike of these actors you will surely be shocked you can build a small h
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X