ಬೈಕ್ ಡ್ರೈವ್ ಮಾಡುತ್ತಾ ಬ್ಲೂಟೂತ್ ಬಳಸಿದ್ರೆ 3 ತಿಂಗಳು ಲೈಸೆನ್ಸ್ ರದ್ದು

ರಸ್ತೆಯಲ್ಲಿ ಜನರ ಸುರಕ್ಷತೆಗಾಗಿ ಸಂಚಾರ ನಿಯಮಗಳನ್ನು ನಿರಂತರವಾಗಿ ಸುಧಾರಿಸಲಾಗುತ್ತಿದೆ. ಇತ್ತೀಚೆಗೆ ಎಲ್ಲಾ ರಾಜ್ಯಗಳಲ್ಲಿಯೂ ಕಟ್ಟುನಿಟ್ಟಿನ ಟ್ರಾಫಿಕ್ ನಿಯಮಗಳನ್ನು ಜಾರಿಗೊಳಿಸಲಾಗಿದೆ. ಆದರೆ, ತಿಳಿದೋ ತಿಳಿಯದೆಯೋ ಅನೇಕರು ಕೆಲವು ತಪ್ಪುಗಳನ್ನು ಎಸಗುವುದರಿಂದ ಭಾರೀ ದಂಡ ತೆರಬೇಕಾಗುತ್ತದೆ.

ಬೈಕ್ ಡ್ರೈವ್ ಮಾಡುತ್ತಾ ಬ್ಲೂಟೂತ್ ಬಳಸಿದ್ರೆ 3 ತಿಂಗಳು ಲೈಸೆನ್ಸ್ ರದ್ದು

ಇತ್ತೀಚೆಗೆ ಸಂಚಾರ ನಿಯಮಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿದ್ದು, ಅದರ ಅಡಿಯಲ್ಲಿ ಬೈಕ್ ಚಾಲನೆ ಮಾಡುವಾಗ ಬ್ಲೂಟೂತ್ ಸಾಧನಗಳ ಬಳಕೆಯನ್ನು ನಿಷೇಧಿಸಲಾಗಿದೆ. ಈಗ ದೇಶಾದ್ಯಂತ ಸಂಚಾರ ಪೊಲೀಸರು ಬ್ಲೂಟೂತ್/ಮೊಬೈಲ್ ಸಾಧನಗಳನ್ನು ಬಳಸುವ ಬೈಕ್ ಚಾಲಕರಿಗೆ ದಂಡ ವಿಧಿಸುತ್ತಿದ್ದಾರೆ.

ಬೈಕ್ ಡ್ರೈವ್ ಮಾಡುತ್ತಾ ಬ್ಲೂಟೂತ್ ಬಳಸಿದ್ರೆ 3 ತಿಂಗಳು ಲೈಸೆನ್ಸ್ ರದ್ದು

ನಿಷೇಧವೇಕೆ?

ವಾಸ್ತವವಾಗಿ ಅನೇಕ ಜನರು ಬೈಕ್ ಸವಾರಿ ಮಾಡುವಾಗ ಕರೆಗಳನ್ನು ಸ್ವೀಕರಿಸಲು ಅಥವಾ ಹಾಡುಗಳನ್ನು ಕೇಳಲು ಬ್ಲೂಟೂತ್ ಬಳಸುತ್ತಾರೆ. ಸಂಚಾರ ನಿಯಮಗಳ ಅಡಿಯಲ್ಲಿ ಚಾಲನೆ ಮಾಡುವಾಗ ಯಾವುದೇ ರೀತಿಯ ಮೊಬೈಲ್ ಸಾಧನವನ್ನು ಬಳಸುವುದು ಕಾನೂನುಬಾಹಿರವಾಗಿದೆ. ಈಗ ಬ್ಲೂಟೂತ್‌ನಂತಹ ಹ್ಯಾಂಡ್ಸ್ ಫ್ರೀ ಸಾಧನಗಳನ್ನು ಸಹ ಇದರಲ್ಲಿ ಸೇರಿಸಲಾಗಿದೆ.

ಬೈಕ್ ಡ್ರೈವ್ ಮಾಡುತ್ತಾ ಬ್ಲೂಟೂತ್ ಬಳಸಿದ್ರೆ 3 ತಿಂಗಳು ಲೈಸೆನ್ಸ್ ರದ್ದು

ಬೈಕ್ ಸವಾರಿ ಮಾಡುವಾಗ ಬ್ಲೂಟೂತ್ ಸಾಧನವನ್ನು ಬಳಸುವುದು ರಸ್ತೆಯಲ್ಲಿ ಗೊಂದಲಕ್ಕೆ ಕಾರಣವಾಗಬಹುದು. ಇದು ರಸ್ತೆ ಅಪಘಾತಗಳಿಗೆ ಆಹ್ವಾನ ನೀಡುತ್ತದೆ. ವಾಹನ ಚಲಾಯಿಸುವಾಗ ಮೊಬೈಲ್‌ ಬಳಕೆಯಿಂದ ಆಗುವ ಅಪಘಾತಗಳನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಈಗಾಗಲೇ ಅವುಗಳನ್ನು ನಿಷೇಧಿಸಿತ್ತು.

ಬೈಕ್ ಡ್ರೈವ್ ಮಾಡುತ್ತಾ ಬ್ಲೂಟೂತ್ ಬಳಸಿದ್ರೆ 3 ತಿಂಗಳು ಲೈಸೆನ್ಸ್ ರದ್ದು

ಈಗ ಬ್ಲೂಟೂತ್ ಹೆಡ್‌ಫೋನ್‌ಗಳಂತಹ ಹೊಸ ತಂತ್ರಜ್ಞಾನದ ಆಗಮನದಿಂದ, ಅಪಘಾತಗಳ ಪ್ರಕರಣಗಳು ಮತ್ತೊಮ್ಮೆ ಹೆಚ್ಚಾಗತೊಡಗಿವೆ. ವಾಹನ ಚಾಲನೆ ಮಾಡುತ್ತಾ ಹಾಡುಗಳನ್ನು ಕೇಳುವುದರಿಂದ ಹಿಂದಿನ ಸವಾರರು ಹಾರ್ನ್ ಮಾಡಿದರು ಕೇಳುವುದಿಲ್ಲ. ಅಲ್ಲದೇ ಅಕ್ಕಪಕ್ಕ ಬರು ಸವಾರರ ಬಗ್ಗೆಯೂ ತಿಳಿಯುವುದಿಲ್ಲ. ಹಾಗಾಗಿ ಇದು ಅಪಘಾತಗಳಿಗೆ ಕಾರಣವಾಗುತ್ತದೆ.

ಬೈಕ್ ಡ್ರೈವ್ ಮಾಡುತ್ತಾ ಬ್ಲೂಟೂತ್ ಬಳಸಿದ್ರೆ 3 ತಿಂಗಳು ಲೈಸೆನ್ಸ್ ರದ್ದು

ಲೈಸೆನ್ಸ್ ರದ್ದು

ಬೈಕ್ ಓಡಿಸುವಾಗ ಬ್ಲೂಟೂತ್/ಮೊಬೈಲ್ ಬಳಸಿದರೆ ಸಂಚಾರ ನಿಯಮದ ಪ್ರಕಾರ 1000 ರೂ. ದಂಡ ವಿಧಿಸಲಾಗುವುದು. ನೀವು ಪದೇ ಪದೇ ಈ ನಿಯಮಗಳನ್ನು ಉಲ್ಲಂಘಿಸುತ್ತಿರುವುದು ಕಂಡುಬಂದರೆ, ಸಂಚಾರಿ ಪೊಲೀಸರು ನಿಮ್ಮ ಚಾಲನಾ ಪರವಾನಗಿಯನ್ನು 3 ತಿಂಗಳವರೆಗೆ ರದ್ದುಗೊಳಿಸಬಹುದು.

ಬೈಕ್ ಡ್ರೈವ್ ಮಾಡುತ್ತಾ ಬ್ಲೂಟೂತ್ ಬಳಸಿದ್ರೆ 3 ತಿಂಗಳು ಲೈಸೆನ್ಸ್ ರದ್ದು

ಹೆಲ್ಮೆಟ್ ಸರಿಯಾಗಿ ಧರಿಸದಿದ್ದರೂ ದಂಡವನ್ನೂ ವಿಧಿಸಬಹುದು. ಜನರು ಆಗಾಗ್ಗೆ ಅವಸರದಲ್ಲಿ ಹೆಲ್ಮೆಟ್ ಧರಿಸುತ್ತಾರೆ. ಆದರೆ ಹೆಲ್ಮೆಟ್‌ಗಿರುವ ಲಾಕ್ ಅನ್ನು ಹಾಕುವುದಿಲ್ಲ. ಇದು ತುಂಬಾ ಅಪಾಯಕಾರಿ, ನೀವು ಹೆಲ್ಮೆಟ್ ಹಾಕಿದ್ದರೂ ಪಟ್ಟಿಯನ್ನು ಲಾಕ್ ಮಾಡದಿದ್ದರೆ, ಹೆಲ್ಮೆಟ್ ಯಾವಾಗ ಬೇಕಾದರೂ ನಿಮ್ಮ ತಲೆಯಿಂದ ಹೊರಬರಬಹುದು. ಇದು ನಿಮ್ಮ ಜೀವಕ್ಕೆ ಅಪಾಯವನ್ನು ತಂದೊಡ್ಡಬಹುದು ಮತ್ತು ಇತರರಿಗೂ ಹಾನಿಯಾಗುವ ಸಾಧ್ಯತೆಯಿದೆ.

ಬೈಕ್ ಡ್ರೈವ್ ಮಾಡುತ್ತಾ ಬ್ಲೂಟೂತ್ ಬಳಸಿದ್ರೆ 3 ತಿಂಗಳು ಲೈಸೆನ್ಸ್ ರದ್ದು

ಪ್ರತಿ ವರ್ಷ ಅಪಘಾತಗಳ ಸಂಖ್ಯೆ ಏರಿಕೆ

ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB) ವರದಿಯ ಪ್ರಕಾರ, 2021 ರಲ್ಲಿ ಭಾರತದಲ್ಲಿ 1,55,622 ರಸ್ತೆ ಅಪಘಾತಗಳ ಸಾವುಗಳು ಸಂಭವಿಸಿವೆ, ಇದು 2014 ರಿಂದ ಹೆಚ್ಚುತ್ತಲೇ ಬಂದಿರುವುದಾಗಿ ತಿಳಿದುಬಂದಿದೆ. ಮೃತರಲ್ಲಿ 69,240 ಮಂದಿ ದ್ವಿಚಕ್ರ ವಾಹನ ಚಾಲಕರಾಗಿದ್ದಾರೆ. ಈ ಅಂಕಿಅಂಶಗಳ ಪ್ರಕಾರ ಅಂದಾಜು ಪ್ರತಿದಿನ 426 ಜನರು ಭಾರತದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ.

ಬೈಕ್ ಡ್ರೈವ್ ಮಾಡುತ್ತಾ ಬ್ಲೂಟೂತ್ ಬಳಸಿದ್ರೆ 3 ತಿಂಗಳು ಲೈಸೆನ್ಸ್ ರದ್ದು

ವರದಿಯ ಪ್ರಕಾರ, ಕಳೆದ ವರ್ಷ ದೇಶಾದ್ಯಂತ 4.03 ಲಕ್ಷ ರಸ್ತೆ ಅಪಘಾತಗಳಲ್ಲಿ ಸಾವಿನ ಜೊತೆಗೆ, 3.71 ಲಕ್ಷ ಜನರು ಗಾಯಗೊಂಡಿದ್ದಾರೆ. ಅಂಕಿಅಂಶಗಳ ಪ್ರಕಾರ, 2020 ರಲ್ಲಿ COVID-19 ಲಾಕ್‌ಡೌನ್ ವರ್ಷದಲ್ಲಿ ದೇಶದಲ್ಲಿ 3.54 ಲಕ್ಷ ರಸ್ತೆ ಅಪಘಾತಗಳು ಸಂಭವಿಸಿವೆ. ಇದರಲ್ಲಿ 1.33 ಲಕ್ಷ ಜನರು ಸಾವನ್ನಪ್ಪಿದರೆ, 3.35 ಲಕ್ಷ ಜನರು ಗಾಯಗೊಂಡಿದ್ದಾರೆ.

ಬೈಕ್ ಡ್ರೈವ್ ಮಾಡುತ್ತಾ ಬ್ಲೂಟೂತ್ ಬಳಸಿದ್ರೆ 3 ತಿಂಗಳು ಲೈಸೆನ್ಸ್ ರದ್ದು

ಎನ್‌ಸಿಆರ್‌ಬಿ ತನ್ನ 2021 ರ ವರದಿಯಲ್ಲಿ ಬಸ್‌ಗಳಂತಹ ಸಾರ್ವಜನಿಕ ಸಾರಿಗೆಗಳು ಖಾಸಗಿ ವಾಹನಗಳಿಗಿಂತ ಸುರಕ್ಷಿತವಾಗಿದೆ ಎಂದು ಸೂಚಿಸಿದೆ. ರಸ್ತೆ ಅಪಘಾತಗಳ ಒಟ್ಟು ಸಾವುಗಳಲ್ಲಿ ಶೇ 44.5 ರಷ್ಟು ದ್ವಿಚಕ್ರ ವಾಹನ ಸವಾರರು, ಕಾರುಗಳು ಶೇ 15.1, ಟ್ರಕ್‌ಗಳು ಅಥವಾ ಲಾರಿಗಳು ಶೇ 9.4 ಮತ್ತು ಬಸ್‌ಗಳು ಶೇ3 ರಷ್ಟು ಅಪಘಾತಗಳನ್ನು ದಾಖಲಿಸಿರುವುದಾಗಿ ಡೇಟಾ ತೋರಿಸಿದೆ.

Most Read Articles

Kannada
English summary
If you use Bluetooth while driving a bike your license will be canceled for 3 months
Story first published: Thursday, September 15, 2022, 18:51 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X