Self-Driving Car: ಭಾರತೀಯರು ಅಸಮಾನ್ಯರು... ಬೊಲೆರೋದಲ್ಲಿ ಭವಿಷ್ಯ ಬದಲಿಸುವ ತಂತ್ರಜ್ಞಾನ!

ವಿಶ್ವ ಆಟೋ ಉದ್ಯಮವು ಸ್ವಯಂ ಚಾಲಿತ ಕಾರುಗಳ (self-driving car) ತಂತ್ರಜ್ಞಾನವನ್ನು ಪರಿಚಯಿಸುತ್ತಿದೆ. ಆದ್ರೆ ಈ ಕಾರುಗಳು ತುಂಬಾ ದುಬಾರಿಯಾಗಿರುತ್ತವೆ. ಚಾಲಕನ ನಿಯಂತ್ರಣ ತಪ್ಪಿದರೂ ಈ ಟೆಕ್ನಾಲಜಿ ತಾನಾಗಿಯೇ ಕಾರನ್ನು ನಿಯಂತ್ರಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಇಂತಹ ತಂತ್ರಜ್ಞಾನವನ್ನು ಭಾರತದ ವ್ಯಕ್ತಿಯೊಬ್ಬರು ಯಶಸ್ವಿಯಾಗಿ ಬೊಲೆರೊದಲ್ಲಿ ಅಳವಡಿಸಿ ತೋರಿಸಿದ್ದಾರೆ.

ಪ್ರತಿಷ್ಠಿತ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (IIT)ಯ ಹಳೆಯ ವಿದ್ಯಾರ್ಥಿ ಸಂಜೀವ್ ಶರ್ಮ ಈ ಸಾಧನೆ ಮಾಡಿದ್ದಾರೆ. ಭೋಪಾಲ್‌ ಪ್ರಜೆಯಾಗಿರುವ ಇವರು, ಕಳೆದ ಹತ್ತು ವರ್ಷಗಳಿಂದ ಈ ಸ್ವಯಂ ಚಾಲಿತ ಕಾರುಗಳ ತಂತ್ರಜ್ಞಾನದ ಮೇಲೆ ಕೆಲಸ ಮಾಡುತ್ತಿದ್ದಾರೆ. ಅವರ ಪ್ರಕಾರ 2009 ರಿಂದ ಈ ಸಂಶೋಧನೆಯಲ್ಲಿ ಆಳವಾಗಿ ತೊಡಗಿಸಿಕೊಂಡಿದ್ದಾರೆ.

iit-old-student-successfully-made-self-driving-car-technology

ಈ ಟೆಕ್ನಾಲಜಿ ಹೇಗೆ ಕಲಿತರು?: ಸಂಜೀವ್ ಶರ್ಮಾ ಅವರು, ಇಸ್ರೇಲ್‌ನಲ್ಲಿ ಪೋಸ್ಟ್‌ ಬಿ.ಟೆಕ್ ಮಾಡುವ ಸಮಯದಲ್ಲಿ ಈ ತಂತ್ರಜ್ಞಾನದ ಬಗ್ಗೆ ಅರಿತುಕೊಂಡಿದ್ದರು. ಸವಾಲಿನ ಮತ್ತು ಹೆಚ್ಚಿನ ವೇಗದ ಸಂಚಾರ ಸನ್ನಿವೇಶಗಳ ನಡುವೆ, ಮೊಬೈಲ್ ರೋಬೋಟ್‌ಗಳನ್ನು ನ್ಯಾವಿಗೇಟ್ ಮಾಡಲು ವಿನ್ಯಾಸಗೊಳಿಸಲಾದ ಚಲನೆ ಯೋಜನೆ ನಿರ್ಧಾರ (motion planning decision) ತೆಗೆದುಕೊಳ್ಳುವ ಸಾಫ್ಟ್‌ವೇರ್ ಅಭಿವೃದ್ಧಿಯಲ್ಲಿ ಅವರು ಸಕ್ರಿಯವಾಗಿ ತೊಡಗಿಸಿಕೊಂಡರು.

ಈ ಅನುಭವವು ಅವರಿಗೆ ಸ್ವಾಯತ್ತ ನ್ಯಾವಿಗೇಷನ್ ವ್ಯವಸ್ಥೆ (autonomous navigation systems) ಜಟಿಲತೆಗಳ ಬಗ್ಗೆ ಅಮೂಲ್ಯವಾದ ಒಳನೋಟಗಳನ್ನು ಒದಗಿಸಿತು. ಇದಾದ ಬಳಿಕ 2012 ರಿಂದ 2014 ರವರೆಗೆ ಕೆನಾಡದಲ್ಲಿದ್ದು, ಈ ಟೆಕ್ನಾಲಜಿ ಬಗ್ಗೆ ಇನ್ನೂ ಆಳವಾದ ಜ್ಞಾನ ಪಡೆದು ಭಾರತಕ್ಕೆ ಹಿಂದಿರುಗಿದ್ದಾರೆ. ಇದೀಗ ತಮ್ಮ ಉದ್ಯಮಶೀಲತೆಯ ಪ್ರಯಾಣವನ್ನು ಪ್ರಾರಂಭಿಸಲು ಸಿದ್ಧರಾಗಿದ್ದಾರೆ.

iit-old-student-successfully-made-self-driving-car-technology

ಸದ್ಯ ಸ್ವಾಯತ್ತ ತಂತ್ರಜ್ಞಾನಗಳನ್ನು ಮುನ್ನಡೆಸಲು ಮೀಸಲಿರುವ ತಮ್ಮ ಸ್ಟಾರ್ಟ್‌ಅಪ್ ಅನ್ನು ಸ್ಥಾಪಿಸಿ ಹಲವರಿಗೆ ಮಾದರಿಯಾಗಿದ್ದಾರೆ. ತಮ್ಮ ಈ ಸ್ಟಾರ್ಟ್‌ಅಪ್ ಆಟೋ ಉದ್ಯಮದಲ್ಲಿ ಹೊಸ ಕ್ರಾಂತಿಯುಂಟುಮಾಡುವ ವಿಶ್ವಾಸದಲ್ಲಿದ್ದಾರೆ. 2030 ರ ವೇಳೆಗೆ, ಸ್ವಾಯತ್ತ ವಾಹನ ಮಾರುಕಟ್ಟೆಯು 10 ಟ್ರಿಲಿಯನ್ ಡಾಲರ್ ಉದ್ಯಮವಾಗಿ ಬೆಳೆಯುತ್ತದೆ ಎಂದು ಸಂಜೀವ್ ಶರ್ಮ ಅವರು ಭವಿಷ್ಯ ನುಡಿದಿದ್ದಾರೆ.

ಸಂಜೀವ್ ಶರ್ಮಾ ಅವರು ತಮ್ಮ ಸ್ವಯಂ ಚಾಲಿತ ತಂತ್ರಜ್ಞಾನವನ್ನು ಭೌಗೋಳಿಕ ಗಡಿಗಳನ್ನು ಮೀರಿಸಿ ಜಾಗತಿಕ ಮಾರುಕಟ್ಟೆಗಳನ್ನು ತಲುಪುವಂತೆ ಮಾಡುವ ಉತ್ಸಾಹದಲ್ಲಿದ್ದಾರೆ. ಸಂಜೀವ್ ಶರ್ಮಾ ಅವರ ಈ ತಾಂತ್ರಿಕ ಆವಿಷ್ಕಾರವು ಮುನ್ನಲೆಗೆ ಬಂದಿರುವುದರಿಂದ, ಅವರ ಪ್ರಯಾಣವು ಚಲನಶೀಲತೆಯ ಭವಿಷ್ಯವನ್ನು ರೂಪಿಸುವಲ್ಲಿ ಪರಿಶ್ರಮ, ಜಾಣ್ಮೆ ಮತ್ತು ಅಚಲ ಸಂಕಲ್ಪದ ಪರಿವರ್ತಕ ಶಕ್ತಿಗೆ ಸಾಕ್ಷಿಯಾಗಿದೆ.

iit-old-student-successfully-made-self-driving-car-technology

ಈ ತಂತ್ರಜ್ಞಾನವನ್ನು ವಿಶ್ವದ ಹಲವು ಕಾರು ಕಂಪನಿಗಳು ಈಗಾಗಲೇ ಪರಿಚಯಿಸಿವೆ. ದುಬಾರಿ ಕಾರುಗಳಲ್ಲಿ ಕಾಣಬಹುದಾದ ADAS (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟಂಟ್ ಸಿಸ್ಟಮ್) ಫೀಚರ್‌ನಲ್ಲಿ ಈ ಸ್ವಾಯತ್ತ ಚಾಲನೆ ಕೂಡ ಒಳಗೊಂಡಿರುತ್ತದೆ. ಚಾಲಕನ ಪ್ರಮೇಯವಿಲ್ಲದೆ ಕಾರು ತಾನಾಗಿಯೇ ನಿಯಂತ್ರಣಗೊಳ್ಳುತ್ತದೆ. ಕೇವಲ ಇದೊಂದೆ ಅಲ್ಲದೇ ಹಲವು ಸುರಕ್ಷತಾ ಫೀಚರ್‌ಗಳನ್ನು ADAS ನಲ್ಲಿ ನೀಡಲಾಗುತ್ತದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Tuesday, March 19, 2024, 15:19 [IST]
English summary
Iit old student successfully made self driving car technology
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+