ಅದ್ಭುತ ಡ್ರಾಯಿಂಗ್; ಮಹೀಂದ್ರ ಕಾರುಗಳು ಬದಲಾಗಬೇಕೇ?

Written By:

ಬಹಳ ಹಿಂದಿನಿಂದಲೇ ವಿದೇಶಿ ಕಾರುಗಳಿಗೆ ತುಲನೆ ಮಾಡಿದಾಗ ಸ್ವದೇಶಿ ಕಾರುಗಳ ಗುಣಮಟ್ಟ ಅತ್ಯಂತ ಕಳಪೆ ಮಟ್ಟದಲ್ಲಿದೆಯೆಂಬ ಅಪವಾದ ಕೇಳಿಬರುತ್ತಿದೆ. ಈ ಎಲ್ಲದರ ನಡುವೆಯೂ ಗ್ರಾಹಕರ ಮನ ಗೆಲ್ಲುವ ಪ್ರಯತ್ನದಲ್ಲಿ ಮಹೀಂದ್ರ ಆಂಡ್ ಮಹೀಂದ್ರ ಹಾಗೂ ಟಾಟಾ ಮೋಟಾರ್ಸ್‌ಗಳಂತಹ ಸಂಸ್ಥೆಗಳು ತೊಡಗಿಸಿಕೊಂಡಿವೆ.

ಪ್ರತಿಯೊಬ್ಬರ ಕಲ್ಪನೆಯು ಬೇರೆ ಬೇರೆಯಾಗಿರುತ್ತದೆ. ಆದರೆ ರಸ್ತೆ ಪರಿಸ್ಥಿತಿಗೆ ಅನುಗುಣವಾಗಿ ಯೋಜಿತ ಬಜೆಟ್‌ನಲ್ಲಿ ಉತ್ತಮ ಗುಣಮಟ್ಟದ ವಿನ್ಯಾಸ ಕಂಡುಕೊಳ್ಳಬೇಕಾಗಿರುವುದು ಅಷ್ಟೇ ಮುಖ್ಯವೆನಿಸುತ್ತದೆ. ನಾವಿಲ್ಲಿ ವಿಶೇಷ ಲೇಖನ ಸರಮಾಲೆಯನ್ನು ಆರಂಭಿಸಲಿದ್ದು, ಇದರಲ್ಲಿ ಕಾರು ಸಂಸ್ಥೆಗಳ ಜನಪ್ರಿಯ ಮಾದರಿಗಳ ವಿನ್ಯಾಸದಲ್ಲಿ ಕಂಡುಬಂದಿರುವ ಕುಂದು ಕೊರತೆಗಳ ಬಗ್ಗೆ ವಿವರವಾಗಿ ಚರ್ಚಿಸಲಿದ್ದೇವೆ.

ಇದರ ಮೊದಲ ಭಾಗವೆಂಬಂತೆ ಮಹೀಂದ್ರ ಸಂಸ್ಥೆಗಳ ಐದು ಜನಪ್ರಿಯ ಮಾದರಿಗಳ ದೋಷಗಳನ್ನು ಇಲ್ಲಿ ಪಟ್ಟಿ ಮಾಡಿದ್ದೇವೆ. ಈ ನಿಟ್ಟಿನಲ್ಲಿ ನಮ್ಮ ಹಿರಿಯ ಸಂಪಾದಕರಾಗಿರುವ ಸಂತೋಷ್ ರಾಜ್ ಕುಮಾರ್ ಅವರು ತಮ್ಮ ಪೆನ್ಸಿಲ್ ಮೊನಚುಗೊಳಿಸಿದ್ದು, ಕೆಳಗಿನ ಕೊಟ್ಟಿರುವ ಅದ್ಭುತ ರೇಖಾಚಿತ್ರದ ಎಲ್ಲ ಶ್ರೇಯಸ್ಸಿಗೆ ಅರ್ಹರಾಗಿರುತ್ತಾರೆ.

To Follow DriveSpark On Facebook, Click The Like Button
ಅದ್ಭುತ ಡ್ರಾಯಿಂಗ್; ಮಹೀಂದ್ರ ಕಾರುಗಳು ಬದಲಾಗಬೇಕೇ?

ಇಲ್ಲಿ ಮಹೀಂದ್ರ ಕಾರುಗಳು ಕಳಪೆ ವಿನ್ಯಾಸ ಹೊಂದಿದೆ ಎಂಬುದನ್ನು ಬೊಟ್ಟು ಮಾಡಿ ತೋರಿಸುವುದು ನಮ್ಮ ಕೆಲಸವಲ್ಲ. ಬದಲಾಗಿ ಸ್ವದೇಶಿ ಸಂಸ್ಥೆಗಳ ಮೇಲಿರುವ 'ಫಿಟ್ ಆಂಡ್ ಫಿನಿಶ್' ಅಪವಾದವನ್ನು ನೀಗಿಸುವುದರೊಂದಿಗೆ ಈ ರೀತಿಯ ಬದಲಾವಣೆ ತಂದಿದ್ದರೆ ದೇಶದ ರಸ್ತೆಯಲ್ಲಿ ಓಡಾಡುವ ಇಂತಹ ಕಾರುಗಳು ಇನ್ನಷ್ಟು ಯಶ ಸಾಧಿಸುತ್ತಿತ್ತು ಎಂಬುದರ ಬಗ್ಗೆ ಅರಿವು ಮೂಡಿಸುವುದು ನಮ್ಮ ಪ್ರಯತ್ನವಾಗಿದೆ.

1. ಮಹೀಂದ್ರ ವೆರಿಟೊ ವೈಬ್

1. ಮಹೀಂದ್ರ ವೆರಿಟೊ ವೈಬ್

ಮಹೀಂದ್ರ ಸಂಸ್ಥೆಯ ವಿನೂತನ ಪ್ರಯತ್ನಕ್ಕೆ ಸಿಕ್ಕಿದ ಉತ್ತರವೇ ವೆರಿಟೊ ವೈಬ್. ಅಷ್ಟಕ್ಕೂ ಮಾರುಕಟ್ಟೆಯಲ್ಲಿ ಈ ಕಾಂಪಾಕ್ಟ್ ಸೆಡಾನ್ ಯಶ ಸಾಧಿಸಿತ್ತೇ? ಖಂಡಿತ ಇಲ್ಲ. ನೆಲಕಚ್ಚಿ ಹೋಗಿರುವ ಕಾರುಗಳ ಪೈಕಿ ಇದು ಒಂದಾಗಿದೆ. ಕಾರಿನ ಹಿಂಭಾಗ ನೋಡಿದಾಗಲೇ ಅತ್ಯಂತ ಕಳಪೆ ಮಟ್ಟದ ಕಾರುಗಳಲ್ಲಿ ಇದು ಒಂದಾಗಿದೆ ಎಂಬುದನ್ನು ಕಣ್ಣು ಮುಚ್ಚಿ ಹೇಳಬಹುದು.

ಮಹೀಂದ್ರ ವೆರಿಟೊ ವೈಬ್

ಮಹೀಂದ್ರ ವೆರಿಟೊ ವೈಬ್

ಹಾಗಿದ್ದರೆ ಮಹೀಂದ್ರ ವೆರಿಟೊ ವೈಬ್‌ ವಿನ್ಯಾಸದಲ್ಲಿ ತರಬೇಕಾಗಿರುವ ಪ್ರಮುಖ ಬದಲಾವಣೆಗಳೇನು? ಇದಕ್ಕೆ ನಮ್ಮ ಸಂಪಾದಕರು ತಮ್ಮಕಲೆಗಾರಿಕೆಯಿಂದ ಸುಲಲಿತವಾಗಿ ಉತ್ತರ ಕಂಡುಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಕಾರಿನ ಹಿಂದುಗಡೆ ಎರಡು ಬದಿಗಳಲ್ಲಿ ಉದ್ದವಾದ ಟೈಲ್ ಲ್ಯಾಂಪ್ ಆಳವಡಿಸುವ ಮೂಲಕ ಹೆಚ್ಚಿನ ಸಂಖ್ಯೆಯ ಗ್ರಾಹಕರನ್ನು ಆಕರ್ಷಿಸಬಹುದು ಎಂಬುದು ಮಹೀಂದ್ರ ಅನಿಸಿಕೆಯಾಗಿತ್ತು. ಆದರೆ ಇಲ್ಲಿ ಇದರ ಅಗತ್ಯವೇನಾದರೂ ಇತ್ತೇ? ಇದರ ಬದಲು ಸಾಂಪ್ರಾದಾಯಿಕ ವಿನ್ಯಾಸಿತ ಟೈಲ್ ಲ್ಯಾಂಪ್ ಬಳಕೆ ಮಾಡುತ್ತಿದ್ದರೆ ಹೆಚ್ಚು ಯೋಗ್ಯವೆನಿಸುತ್ತಿತ್ತು. ಇನ್ನು ಆಕ್ರಮಣಕಾರಿಯಾಗಿ ಗೋಚರಿಸಬೇಕೆಂದರೆ 1990ರ ಮಾಜ್ದಾ 323 ಶೈಲಿಯಂತೆ ಸ್ಪಾಯ್ಲರ್ ಜೋಡಣೆ ಮಾಡಬಹುದಿತ್ತು.

2. ಮಹೀಂದ್ರ ಬೊಲೆರೊ

2. ಮಹೀಂದ್ರ ಬೊಲೆರೊ

ಈಗಲೂ ಮಹೀಂದ್ರ ಕಾರುಗಳ ಪೈಕಿ ಅತಿ ಹೆಚ್ಚು ಮಾರಾಟವನ್ನು ಬೊಲೆರೊ ಗಿಟ್ಟಿಸಿಕೊಳ್ಳುತ್ತಿದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ ವಿನ್ಯಾಸವು ಮತ್ತೆ ಇಕ್ಕಟ್ಟಾಗಿ ಗೋಚರಿಸುವಂತೆ ಮಾಡಿದೆ. ನೀವು ನೋಡುತ್ತಿರುವಂತೆಯೇ ಇದು ಮುಂದುಗಡೆ ಐದು ಪಟ್ಟಿಯ ಬಂಪರ್ ಪಡೆದುಕೊಂಡಿದೆ.

ಮಹೀಂದ್ರ ಬೊಲೆರೊ

ಮಹೀಂದ್ರ ಬೊಲೆರೊ

ಇಲ್ಲಿ ಮಹೀಂದ್ರ ಬೊಲೆರೊ ಕಾರನ್ನು ಹೆಚ್ಚು ಸರಳೀಕರಣ ಮಾಡುವ ಪ್ರಯತ್ನವನ್ನು ನಮ್ಮ ಸಂಪಾದಕರು ಮಾಡಿದ್ದಾರೆ. ಇಲ್ಲಿ ಐದು ಪಟ್ಟಿಯ ಬದಲಾಗಿ ಫ್ರಂಟ್ ಗ್ರಿಲ್ ಅನ್ನು ಎರಡು ವಿಭಾಗಗಳಾಗಿ ಸ್ಪಷ್ಟವಾಗಿ ವಿಂಗಡನೆ ಮಾಡಲಾಗಿದೆ. ಇದಕ್ಕೆ ಸ್ಕಿಡ್ ಪ್ಲೇಟ್ ಫಿನಿಶಿಂಗ್ ಟಚ್ ಸಹ ನೀಡಲಾಗಿದೆ. ಅಷ್ಟೇ ಯಾಕೆ ದೊಡ್ಡದಾದ ಐದು ಸ್ಪೋಕ್ ಅಲಾಯ್ ವೀಲ್ ಜೊತೆ ರಾಲಿಯಿಂದ ಸ್ಪೂರ್ತಿ ಪಡೆದ ಮಡ್ ಫ್ಲ್ಯಾಪ್ ಸಹ ಸುತ್ತುವರಿಯಲ್ಪಟ್ಟಿದೆ.

3. ಮಹೀಂದ್ರ ಎಕ್ಸ್‌ಯುವಿ 500

3. ಮಹೀಂದ್ರ ಎಕ್ಸ್‌ಯುವಿ 500

ಮಹೀಂದ್ರದ ಫ್ಲ್ಯಾಗ್‌ಶಿಪ್ ಪ್ರೀಮಿಯಂ ಎಸ್‌ಯುವಿ ಮಾದರಿಯಾಗಿರುವ ಎಕ್ಸ್‌ಯುವಿ 500 ಮುಂಭಾಗದ ವಿನ್ಯಾಸ ಸಹ ತೊಡಕಿಗೆ ಸಿಲುಕಿಸಿದಂತಿದೆ. ಚಿರತೆಯಿಂದ ಸ್ಪೂರ್ತಿ ಪಡೆದ ಈ ಕಾರಿನ ಮುಂಭಾಗದಲ್ಲಿ ಏರ್ ಡ್ಯಾಮ್ ಹಾಗೂ ಗ್ರಿಲ್ ವಿವರಣೆ ಹೆಚ್ಚು ಸಂಕೀರ್ಣತೆಗೆ ಕಾರಣವಾಗಿದೆ.

ಮಹೀಂದ್ರ ಎಕ್ಸ್‌ಯುವಿ 500

ಮಹೀಂದ್ರ ಎಕ್ಸ್‌ಯುವಿ 500

ಇಲ್ಲೂ ಮಹೀಂದ್ರ ಎಕ್ಸ್‌ಯುವಿ 500 ಸರಳೀಕರಣಗೊಳಿಸುವ ಪ್ರಯತ್ನಕ್ಕೆ ನಮ್ಮ ಸಂಪಾದಕರು ಮುಂದಾಗಿದ್ದಾರೆ. ಇಲ್ಲಿ ಕಾರಿನ ಮುಂಭಾಗದಲ್ಲಿ ಸ್ಟಾಂಡರ್ಡ್ ಗ್ರಿಲ್ ಕಲ್ಪಿಸಲಾಗಿದ್ದು, ಜೊತೆಗೆ ಎಲ್‌ಇಡಿ ಡೇಟೈಮ್ ರನ್ನಿಂಗ್ ಲೈಟ್ಸ್ ಹೆಚ್ಚು ಆಕರ್ಷಕಣೆಗೆ ಕಾರಣವಾಗಲಿದೆ. ಇಲ್ಲಿ ಉದ್ದೇಶಪೂರ್ವಕವಾಗಿಯೇ ಹೆಚ್ಚಿನ ಬದಲಾವಣೆಗಳಿಗೆ ಅವಕಾಶ ಮಾಡಿಕೊಡಲಿಲ್ಲ.

4. ಮಹೀಂದ್ರ ವೆರಿಟೊ

4. ಮಹೀಂದ್ರ ವೆರಿಟೊ

ಮಹೀಂದ್ರ ಕಾರುಗಳ ಪೈಕಿ ವೆರಿಟೊ ಮಾದರಿಗೂ ನಿರೀಕ್ಷಿದಷ್ಟು ಮನ್ನಣೆ ದೊರಕಿರಲಿಲ್ಲ. ಇದರ ಮೇಲೂ ಟ್ಯಾಕ್ಸಿ ಕಾರೆಂಬ ಅಪವಾದ ಬಳಿಯಲಾಗಿತ್ತು. ಇಲ್ಲಿ ವಿಸ್ತಾರವಾದ ಹಾಗೂ ಕೋನಿಯ ವಿನ್ಯಾಸಕ್ಕೆ ಅವಕಾಶವಿದೆ ಎಂಬುದನ್ನು ಸಂಸ್ಥೆ ಮರೆಯಬಾರದಿತ್ತು. ಭವಿಷ್ಯದಲ್ಲಾದರೂ ಕಾರನ್ನು ಪರಿಷ್ಕರಣೆ ಮಾಡುವಾಗ ಇದಕ್ಕೆ ಕ್ರೀಡಾ ವಿನ್ಯಾಸ ಕಲ್ಪಿಸಿ ಕೊಡಬಹುದಾಗಿದೆ.

ಮಹೀಂದ್ರ ವೆರಿಟೊ

ಮಹೀಂದ್ರ ವೆರಿಟೊ

ಮೊದಲ ಪ್ರಯತ್ನವೆಂಬಂತೆ ವೆರಿಟೊಗೆ ಪ್ರೊಜೆಕ್ಟರ್ ಹೆಡ್ ಲ್ಯಾಂಪ್ ಆಳವಡಿಸುವ ಪ್ರಯತ್ನ ಮಾಡಲಾಗಿದೆ. ಹಾಗೆಯೇ ಗ್ರಿಲ್ ಹಾಗೂ ಏರ್ ಡ್ಯಾಮ್ ಸ್ಟಾಂಡರ್ಡ್ ಮಾಡಲಾಗಿದೆ. ಲೋವರ್ ಪ್ರೊಫೈಲ್ ಚಕ್ರಗಳಲ್ಲಿ ದೊಡ್ಡದಾದ ಅಲಾಯ್ ವೀಲ್ ನೀವಿಲ್ಲಿ ಗಮನಿಸಬಹುದು. ಅಲ್ಲದೆ ಸಾಧ್ಯವಾದಷ್ಟು ಕಡಿಮೆ ಬದಲಾವಣೆ ತರಲಾಗಿದೆ.

5. ಮಹೀಂದ್ರ ಕ್ವಾಂಟೊ

5. ಮಹೀಂದ್ರ ಕ್ವಾಂಟೊ

'ಟಾಲ್ ಬಾಯ್' ವಿನ್ಯಾಸ ಕಾಯ್ದುಕೊಂಡಿರುವ ಮಹೀಂದ್ರ ಕ್ವಾಂಟೊಗೆ ದೇಶೀಯ ಮಾರುಕಟ್ಟೆಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಹಾಗಿದ್ದರೂ ಇದರಲ್ಲೂ ಕೆಲವೊಂದು ಕುಂದು ಕೊರತೆಗಳನ್ನು ಬೊಟ್ಟು ಮಾಡಬಹುದಾಗಿದೆ. ದೊಡ್ಡದಾದರೂ ಚಪ್ಪಟೆಯಂತಿರುವ ಹಿಂದುಗಡೆ ವಿನ್ಯಾಸ, ಸಣ್ಣ ಚಕ್ರಗಳ ಜೋಡಣೆ ಹಾಗೂ ಹಿಂದುಗಡೆ ಬಹುತೇಕ ಜಾಗವನ್ನು ಇದರ ಸ್ಪೇರ್ ವೀಲ್ ಆಕ್ರಮಿಸಿಕೊಂಡಿರುವುದು ಗ್ರಾಹಕರ ಅವಕೃಪೆಗೆ ಒಳಗಾಗಿತ್ತು.

ಮಹೀಂದ್ರ ಕ್ವಾಂಟೊ

ಮಹೀಂದ್ರ ಕ್ವಾಂಟೊ

ಈ ನಿಟ್ಟಿನಲ್ಲಿ ಚಿಂತನೆ ಮಾಡಿರುವ ನಮ್ಮ ಸಂಪಾದಕರು, ರಿಯರ್ ಫೆಂಡರ್ ಇನ್ನಷ್ಟು ಮೇಲ್ಭಾಗಕ್ಕೆ ಕೊಂಡೊಯ್ದಿದ್ದು ದೊಡ್ಡದಾದ ಚಕ್ರಗಳ ಜೋಡಣೆಗೂ ಹೆಚ್ಚು ಅನುಕೂಲವೆನಿಸಲಿದೆ. ಇನ್ನು ದೊಡ್ಡದಾದ ವಿನ್ಯಾಸವನ್ನು ಕಾಪಾಡುವ ನಿಟ್ಟಿನಲ್ಲಿ ಕಡಿಮೆ ಪರಿಷ್ಕರಣೆ ತರಲಾಗಿದೆ. ಹಾಗೆಯೇ ಹೆಚ್ಚುವರಿ ಚಕ್ರವನ್ನು ಬದಿಗೆ ಸರಿಸಲಾಗಿದೆ.

English summary
The following are some simple ideas that might potentially improve the looks of these products.
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark